ಗಜ‌ಲ್

ಗಜ‌ಲ್

ಕವನ

ಈ ಜಗತ್ತಲ್ಲಿ ನಾನೂ ಬದುಕಲಿಲ್ಲ,ನೀನೂ ಬದುಕಲಿಲ್ಲ ಸಾಕಿ


ನಾವು ಬದುಕುವ ಕ್ಷಣಗಳನ್ನೊಬ್ಬರೂ ಕೊಡಲಿಲ್ಲ ಸಾಕಿ.


 


ನಮ್ಮಿಂದ ಕದ್ದೋಯ್ದು ತಮ್ಮ ಮನೆ ಬೆಳಗಿಸಿಕೊಂಡರು


ಎದ್ದು ನಿಲ್ಲಲೂ ಕೊಡದೆ ನಮಗೆ ಊರುಗೋಲೆಳೆದರು ಸಾಕಿ.


 


ಹೀಗಿರುವಾಗ ನಮಗೇನೂ ಬೇಕಿಲ್ಲ ಈ ಜಗತ್ತಿನಿಂದ


ನಮ್ಮ ಪಾಡಿಗೆ ಮುಳುಗಲು ಬಿಟ್ಟರೆ ಸಾಕು ಸಾಕಿ.


 


ಇನ್ನಿಲ್ಲದಂತೆ ಸೋತು ಭ್ರಮೆಯಿಂದೆದ್ದು ಬಂದಿದ್ದೇನೆ


ಹಂಬಲಿಸಿ ಬಂದ ಗಳಿಗೆಗಳಿಗೆ ಬಾಗಿಲನ್ನಾದರು ತೆರೆ ಸಾಕಿ.


 


ನನ್ನ ನಗುವಿನೊಂದಿಗೆಲ್ಲಾ ಬದುಕಿದ್ದರು ನೋಡು


ದು;ಖದ ಈ ಕಡಲೇ ತೋರಿಸಿತು ಜಗತ್ತೇ ಹೀಗೆಂದು ಸಾಕಿ.


 


ಎಲ್ಲಾ ಸುಳು ಈಭೂಮಿ,ಆಕಾಶ,ಹಸಿರು,ಉಸಿರೂ ಸಹ


ನೀ ಬದುಕಿಸಿದ ಈ ಕ್ಷಣವೇ  ಸತ್ಯ-ನಿತ್ಯ-ನೂತನ ಸಾಕಿ.

Comments