೩೧-೧೨-೨೦೧೧ : ಟೀ-ವೀ - ಸ್ಟುಡಿಯೋದಲ್ಲಿ ಚರ್ಚೆ-ಮತ್ತು- ನೇರ ಫೋನ್ ಇನ್(ಹಾಸ್ಯ)

೩೧-೧೨-೨೦೧೧ : ಟೀ-ವೀ - ಸ್ಟುಡಿಯೋದಲ್ಲಿ ಚರ್ಚೆ-ಮತ್ತು- ನೇರ ಫೋನ್ ಇನ್(ಹಾಸ್ಯ)

 ಪ್ರಿಯ ವೀಕ್ಚಕರೆ  ನಾ ನಿಮ್ಜೊತೆ ಇದ್ದೀನಿ 'ಬುಡ ಬುಡುಕೆ ದಾಸ್ :)

ನಿಮಗೆಲ್ಲ  ನಮ್ಮ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ನಿಮಗೆಲ್ಲ ಗೊತ್ತು ಇನು ಕೆಲವೇ ಸೆಕೆಂಡುಗಳಲ್ಲಿ  ೨೦೧೧  ಮುಗಿದು '೨೦೧೨' ಕ್ಕೆ ನಾವೆಲ್ಲಾ ಅಡಿ ಇಡುತ್ತಿದ್ದೇವೆ..ನಿಮಗೆಲ್ಲ ಗೊತ್ತು ಅದಾಗಲೇ 'ಮಯನ್'ಕ್ಯಾಲೆಂಡರ್' ಪ್ರಕಾರ ೨೦೧೨ರ ಡಿಸೆಂಬರ್ ೩೧ಕ್ಕೆ  ಅಂದರೆ ಸರಿಯಾಗಿ ಇವತ್ತಿಗೆ ಒಂದು ವರ್ಷದಲ್ಲಿ  ನಾವೆಲ್ಲಾ  ಭೂಮಿಯಿಂದ  'ಶಾಶ್ವತ ಕಣ್ಮರೆ 'ಆಗುವ  ಸಂಭವ ಇದೆ..

 

ಬಗ್ಗೆ ನಾವು ಇಗ ಚರ್ಚೆ ಮಾಡುತ್ತಿದ್ದೇವೆ  ನಾಡಿನ ಹೆಸರಾಂತ ವಿಜ್ಞಾನಿಗಳು, ಸಾಹಿತಿಗಳು, ರಾಜಕಾರಣಿಗಳು, ವಿವಿಧ 'ವಿಪತ್ತು ನಿರ್ವಹಣ' ಇಲಾಖೆ ಅಧಿಕಾರಿಗಳು  ಮತ್ತು  ಖ್ಯಾತ ಜ್ಯೋತಿಶಿಗಳೊಂದಿಗೆ... ಬನ್ನಿ ಒಬ್ಬರೋಬ್ಬ್ರಾಗಿ ಅವರೆಲ್ಲರ  ಸಂಪೂರ್ಣ ಮಾಹಿತಿ ಕೊಡುವ..

 

ಮೊದಲಿಗೆ ನಮ್ಮ  ವಿಜ್ಞಾನ - ತಂತ್ರಜ್ಞಾನ ಸಚಿವರಾದ  ಶ್ರೀ ಮಾನ್  'ಗಮಾರಣ್ಣ ' ಅವರಿಗೆ ನಮ್ಮ ಸ್ಟುಡಿಯೋ ಗೆ  ಹಾರ್ದಿಕ ಸ್ವಾಗತ.. ಇವರು ಪ್ರೊಫ್ಸರ್ -ಹುಚ್ಚಪ್ಪ  ಖ್ಯಾತ ಭೂ ವಿಜ್ಞಾನಿ  ಇವರ ಹಲ ಸಂಶೋಧನೆಗಳು ಇದ್ವರೆಗೂ ಯಾರ ಕಣ್ಣಿಗೂ ಬಿದ್ದಿಲ್ಲ:( ನಿಮಗೆ ಸ್ವಾಗತ ಸಾರ್.

 

ಅವರು- ಡಾ-ಕೈಲಾಸ್   ಖ್ಯಾತ ಮಾನಸಿಕ ತಜ್ಞರು -ವಿದೇಶದಲ್ಲಿ ಓದಿ ಬಹು ಪಾಂಡಿತ್ಯ ಗಳಿಸಿದ ಅವರು ಈಗ ಪ್ರಳಯ ಸಂದರ್ಭದಲ್ಲಿ ಜನ ಹೇಗೆ ವರ್ತಿಸಬೇಕು ಎನ್ನುವ ವಿವರಣೆ ನೀಡಲು ಇಲ್ಲಿಗೆ  ಆಗಮಿಸಿದ್ದಾರೆ ಸ್ವಾಗತ ಸಾರ್..

 

ಇವ್ರು ನಿಮಗೆಲ್ಲ ಗೊತ್ತುಶ್ರೀ ಶ್ರೀ ಶ್ರೀ  'ಬೂದಿನಾಥ ಸ್ವಾಮಿಗಳು' , ಸ್ವಾಮಿಗಳೇ ನಿಮಗೆ 'ಅಡ್ಡ ಬಿದ್ದೆ' ನನ್ನ ಆಶೀರ್ವದಿಸಿ, ನಿಮಗೆ 'ಪೂರ್ಣ ಕುಂಬದ' ಸ್ವಾಗತ.. ತೆರೆ ಮೇಲೆ ಎಲ್ಲ ಬೂದಿಮಾಯವಾಗುತ್ತೆ:(  ಮತ್ತು ಅವರು ಶ್ರೀ 'ಉದಾಸೀನಪ್ಪ'- ವಿಪತ್ತು ನಿರ್ವಹಣ ಸಮಿತಿಯ ಮುಖ್ಯಸ್ತರು, ಹಿಂದೆ ಹಲ ನೆರೆ-ಬರ  ಸಂದರ್ಭದಲ್ಲಿ  ಅವರು 'ಇಲ್ಲಿರದೇ ' ವಿದೇಶಕ್ಕೆ 'ಹೆಚ್ಚ್ಚಿನ ಅಧ್ಯಯನನಿಮಿತ್ತ ಹೋದದ್ದರಿಂದ ಇಲ್ಲಿ 'ಹೆಚ್ಚ್ಚಿನ ಕೆಲಸ' ಮಾಡಿಲ್ಲ ,ಆದರೂ ವಿದೇಶದಲ್ಲಿ  ಕಲಿತು ಬಂದು ಅಧ್ಯಯನ  ಮಾಡಿರ್ವ  ಅವರ ಪಾಂಡಿತ್ಯ ಪ್ರೌಡಿಮೆ ಯನ್ನ ಈಗ ನಮ್ಮ ಮುಂದೆ ತೆರೆದಿಡುತ್ತಾರೆ..

ಇನ್ನುಳಿದಂತೆ ಅವರು 'ಅತ್ಯುಗ್ರಪ್ಪನವರು' ವಿರೋಧ ಪಕ್ಚದ ನಾಯಕರು , ಅಲ್ಲಿರುವವರು  ಅಗ್ನಿ ಶಾಮಕ ಮುಖ್ಯಸ್ಥರಾದ ಶ್ರೀ  'ಜಮದಗ್ನಿ', ಇವರು  ಶ್ರೀ ಮಾನ್ 'ದರ್ಪಣ್ಣರಾಜ್ಯದ ಮುಖ್ಯ ಕಾರ್ಯದರ್ಶಿ. ನಿಮಗೆಲ್ಲರಿಗೂ ನಮ್ಮೆಲ್ಲ ವೀಕ್ಚಕರ ಪರವಾಗಿ ಮತೊಮ್ಮೆ ಸ್ವಾಗತ-ಸುಸ್ವಾಗತ. ಈಗ ನಾವೆಲ್ಲಾ ಇಲ್ಲಿ 'ಯಾಕೆ' ಸೇರಿದ್ದೇವೆ ಅಂತ ನಿಮಗೆ ಗೊತಿರಬೇಕು. ನಾವು ಒಂದು ಘಂಟೆಯ 'ಸೀಮಿತ' ಅವಧಿಯಲ್ಲಿ ಪ್ರಳಯ-೨೦೧೨ ಕುರಿತು ನಮ್ಮ ವೀಕ್ಚಕರಿಂದ ಬರ್ವ

 

ಕರೆಗಳನ್ನ ಸ್ವೀಕರಿಸಿ ಅವರ 'ಸಂದೇಹ' ಪರಿಹಾರ ಮಾಡುತ್ತಾ ಒಂದು ವೇಳೆ 'ಹಾಗೆ' ಆದದ್ದೇ  ಆದರೆ ಏನೆಲ್ಲಾ ಮುಂಜಾಗ್ರತೆ ವಹಿಸಬೇಕು, ಶಾಂತರಾಗಿರಬೇಕು ಎಂದೆಲ್ಲ ನಮ್ಮ ವೀಕ್ಚಕರಿಗೆ ತಿಳಿಸಬೇಕು..

ಮೊದಲಿಗೆ ವಿಷಯವನ್ನು ಕುರಿತ  ಚರ್ಚೆ  ಶ್ರೀ ಶ್ರೀ ಶ್ರೀ ಬೂದಿನಾಥ ಸ್ವಾಮಿಗಳಿಂದ ಶುರು ಮಾಡೋಣ

ಸ್ವಾಮಿಗಳೇ  'ಎಲ್ಲೋ ದೂರದ' ದೇಶದಲಿ 'ಅದ್ಯಾವಗಲೋ' ಬರೆದ ಕ್ಯಾಲೆಂಡರ್ 'ಡಿಸೆಂಬರ್ ೩೧ ೨೦೧೨ ಕ್ಕೆಕೊನೆಯಾಯ್ತು, ಹಾಗಾಗಿ  'ಮಯನ್ನರಿಗೆ' ಮೊದಲೇ ಸೃಸ್ಟಿ ಕರ್ತ  ಬ್ರಹ್ಮ 'ರಹಸ್ಯವಾಗಿ' ಮೀಟ್ ಮಾಡಿ  ಭೂಮಿಯ ಪ್ರಳಯ ಮತ್ತು ಕಣ್ಮರೆ ಕುರಿತು 'ಗುಟ್ಟನ್ನು' ಹೇಳಿದ್ದನೇ? ಅಥವಾ 'ಮಯನ್ನರು' ಕ್ಯಾಲೆನ್ದೆರನ್ನು ಬರೆದು ಡಿಸೆಂಬರ್ ೩೧ ೨೦೧೨ ಕೆ ಬಂದಾಗ  'ಇಂಕು' ಆಗಿ ಹೋಯ್ತೆ? ಅಥವಾ ಇನ್ನೇನಾದರೂ   ಆಯ್ತೆ? ದಯಮಾಡಿ ಬಗ್ಗೆ ನಮಗೆ 'ಸತ್ಯ' ತಿಳ್ಸಿ ಕೊಡಿ.. ಸಂದೇಹ ಪರಿಹಾರ ಮಾಡಿ

 

ಶ್ರೀ-ಶ್ರೀ-ಶ್ರೀ ಅವರು ಒಮ್ಮೆ ಎಲ್ಲ್ಲರತ್ತ ನೋಡಿ  ಕ್ಲೀನ್ ಆಗ್ 'ಶೇವ್' ಮಾಡಿದ್ದ ಅವರ 'ಇಲ್ಲದ' ಗಡ್ಡವನ್ನ 'ಇದೆಯೇನೋ' ಅನ್ನುವ ಹಾಗೆ ಕೆರೆದುಕೊಳ್ಳುತ್ತಾ ಹೇಳಿದರು, ನೋಡಿ ಭಕ್ತರೆ ನೀವಂದುಕೊಂಡ  ಹಾಗೆ ಅವರ ಇಂಕೂ ಮುಗಿಯಲಿಲ್ಲ, ಬ್ರಹ್ಮ ಹೋಗಿ ಅವರಿಗೆ ರಹಸ್ಯವನ್ನೂ ಹೇಳಲಿಲ್ಲ, ಅದನ್ನು  ಬರೆದವನಿಗೆ ಹನ್ನೆರಡು ತಿಂಗಳ-ಮತ್ತು ಅಸ್ಟೊಂದು ವರ್ಷಗಳ ಕ್ಯಾಲೆಂಡರ್ ಬರೆದೂ-ಬರೆದೂ 'ಕೈ' ಸೋತು ಹೋಗಿ ಸುಸ್ತಾಗಿ ನಾಳೆ ಬರೆಯೋಣ ಅಂತ ಮಲಗಿದಾಗ, ಬಿರುಗಾಳಿಯೊಂದು ಬೀಸಿ 'ಅದುಎಲ್ಲೋ ಬಿದ್ದು ಕೊನೆಗೆ ಯಾರದೋ 'ಕೈಯ್ಗೆ' ಸಿಕ್ಕು ಮತ್ತಸ್ಟು ಬದಲಾವಣೆಗೊಳಪಟ್ಟು ಚಿತ್ರ -ವಿಚಿತ್ರ ಥಿಯರಿಗಳು ಹುಟ್ಟಿಕೊಂಡವು..

 

ಇನ್ನು ನಮ್ಮ ದೇಶದ ಕ್ಯಾಲೆಂದರಿಗೂ 'ಅದಕ್ಕೂ' ಯಾವುದೇ ತರಹದ 'ತಳುಕು' ಇಲ್ಲ, ನಮ್ಮ ದೇಶದ ವೇದ-ಪುರಾಣ ಉಪನಿಷತ್ತು-ಭವಿಷ್ಯವಾಣಿಗಳ ಪ್ರಕಾರ ನಮ್ಮ ಭೂಮಿಯ ಕೊನೆ ಆಗಲು 'ಸಾಕಷ್ಟು' ವರ್ಷಗಳಿವೆ.. ನಾ ಹೇಳುತ್ತೇನೆ ' ಪ್ರಳಯ' ಆಗುವುದಿಲ್ಲ, ಒಂದು ವೇಳೆ 'ಆದರೂ' ಅದನ್ನು ತಡೆಯಲು ಪರಿಣಾಮ ಕಡಿಮೆ ಮಾಡಿ ಆಸ್ತಿ-ಪಾಸ್ತಿ-ಜನರ ರಕ್ಷಣೆ ಮಾಡಲು ಶೀಘ್ರವೇ ನಾವು 'ಅಮರ ನಮ್ಮ ಭೂಮಿ ಯಜ್ನವನ್ನ' ಆರಂಭಿಸುತ್ತೇವೆ. ಅದು ಇವತ್ತಿಂದ ೨೦೧೨ ೩೧ ವರೆಗೆ ನಡೆಯುತ್ತೆ, ಅದಕ್ಕೆಲ್ಲ ನೀವು 'ಕೈ' ಜೋಡಿಸಿ, 'ತನು-ಮನ-ಧನ' ಸಮೇತ ಸಹಾಯ   ಮಾಡಿ:

( ಭಯ ಬೇಡ, 'ಸಧ್ಯಕ್ಕೆ' ಬೂದಿಯನ್ನ ಎಲ್ಲರೂ ತೊಗೊಳಿ, ನಿಮಗೆ 'ಭಯವಾದಾಗ', ಇದನ್ನ ನಿಮ್ಮ ಮುಂದೇ ಗಾಳಿಯಲ್ಲಿ 'ಎರಚಿ' ಬಿಡಿ, ಸ್ತುದಿಯೋದಲ್ಲಿದ್ದ ಎಲ್ಲರೂ ಕಾತರರಾಗಿ ನನಗೆ-ನಂಗೆ ಎಂದು ಸ್ವಾಮಿಗಳತ್ತ ಮುಗಿ ಬೇಳಲು ,ಸ್ವಾಮಿಗಳು ಮೆಲ್ಲಗೆ-ಮೆಲ್ಲಗೆ-ಸಾವಧಾನ, ಇಸ್ಟೇ ಅಲ್ಲ, ನಮ್ಮ ಆಶ್ರಮದಲ್ಲಿ 'ಮೂಟೆಗಟ್ಟಲೆ' ಮಂತ್ರಿಸಿದ 'ಬೂದಿ' ಇದೆ 'ಸ್ಟಾಕಿಗೆನು' ಕೊರತೆ ಇಲ್ಲ, ನಾವು ಮುಂದಾಲೋಚನೆ ಮಾಡಿ ಜ್ಜಗತ್ತಿನ ಸಕಲ ಭಕ್ತರಿಗೆ 'ಆಗುವಸ್ಟು' ಬೂದಿಯನ್ನ ತಯಾರಿಸಿ ಮಂತ್ರಿಸಿ ಇಟ್ಟಿದ್ದೇವೆ..ಸಂದರ್ಶಕ,ಎಲ್ಲರಿಗೂ ಬೇಡ್ತ -ಸ್ಸಾರ್ ಸ್ಸಾರ್ ಇದು ನೇರ ಪ್ರಸಾರ ಕಾರ್ಯಕ್ರಮ ನಾವೆಲ್ಲಾ ಇಲ್ಲಿ 'ಶಾಂತರಾಗಿರಬೇಕು, ಪ್ಲೀಜ್-ಪ್ಲೀಜ್

 

ಈಗ ಹೇಳಿ ಸ್ವಾಮಿಗಳೇ- ಬೂದಿ ನಮ್ಮ ಮುಂದೆ ಗಾಳಿಯಲ್ಲಿ 'ಎರಚಿದರೆ' ಖಂಡಿತ ಪ್ರಳಯವೂ ಆಗಲ್ಲ, ಭಯವೂ ಆಗಲ್ಲ ಅಲ್ಲವೇ? ಸಂದರ್ಶಕನ ಜೊತೆ ಅಲ್ಲಿದ್ದವರ ಎಲ್ಲರ 'ಒಕ್ಕೊರಲ' ಪ್ರಶ್ನೆ(ವಿರೋಧ ಪಕ್ಕದ ನಾಯಕನದೂ ಸೇರಿ,ಅವನತ್ತ ಎಲ್ರೂ ಪ್ರಶ್ನಾರ್ಥಕವಾಗಿ ನೋಡಲು,ವಿರೋಧ ಪಕ್ಚದ ನಾಯಕ ಹೇಳ್ತಾರೆನೋಡಿ ನಾ 'ವಿರೋಧಿಸುವುದನ್ನ' ವಿರೋಧಿಸಬೇಕು ಆದರೆ ಇದು 'ಜೀವನ್ಮರಣದ ಪ್ರಶ್ನೆ ಹಾಗಾಗಿ ನಾ ನಿಮ್ಮ ಜೊತೆ 'ಕೈ' ಜೋಡಿಸಿದ್ದೇನೆ:))

 

ಎಲ್ಲರ ಪ್ರಶ್ನೆಗೆ ಒಮ್ಮೆ ಜೋರಾಗಿ ನಕ್ಕ ಸ್ವಾಮಿಗಳು 'ಎಲ್ಲರತ್ತಲೂ ಒಂಥರಾ 'ಅಯ್ಯೋ ಪಾಪ' -ಮಂಕು ದಿಣ್ಣೆಗಲಾ  ಎಂಬಂತೆ ನೋಡಿ, 'ಹುಚ್ಚಪ್ಪಗಳಿರ' ಬೂದಿ ಎರಚಿದರೆ 'ಪ್ರಳಯ' ಆಗುವುದು ನಿಲ್ಲುವುದಿಲ್ಲಎಲ್ಲರೂ ಒಟ್ಟಾಗಿ 'ಉದ್ವೇಗದಿಂದ' ಅರಚುತ್ತಾರೆ, ಮತ್ತೆ ಬೂದಿ ಎರಚಿದರೆ  ಏನಾಗುತ್ತೆ ಸ್ವಾಮೀಜಿ?

 

ಎಲ್ಲರತ್ತ ಒಮ್ಮೆ ನೋಡಿ, ನೋಡಿ ಬೂದಿ ನಿಮ್ಮ ಮುಂದೆ ಗಾಳೀಲಿ 'ಎರಚಿದರೆ' ಏನಾಗುತ್ತೆ? ಅದು ನಿಮ್ಮ ಕಣ್ಣಿಗೆ ಕಾಣುವಸ್ತು ದೂರ ಕಣ್ಣಿಗೆ 'ಬೇರೇನೂ' ಕಾಣಿಸದ ಹಾಗೆ 'ಹರಡಿಕೊಳ್ಳುತ್ತೆ', ಆಗ ಪ್ರಳಯ ಅದರೂ 'ಇನ್ನೇನೂ' ಆದರೂ ನಿಮಗೆ 'ಹತ್ತಿರ' ಬರ್ವವರೆಗೆ ಏನೂ ಕಾಣಲ್ಲ, 'ಗೊತ್ತಾದಾಗ' ಯಾರ್ ಇರಲ್ಲ ನೋಡೋಕೆ:)

 

 

  ಎಲ್ರೂ 'ಪೆಚಾಗ್' ಮುಂದೇನು ಕೇಳಬೇಕು ಎಂಬಂತೆ ಇರಲು, ಸ್ವಾಮಿಗಳು ಅವಸರವಸರವಾಗಿ  ನಾ ಈಗ ತುರ್ತಾಗಿ ಕೇರಳಕ್ಕೆ ಹೋಗಬೇಕಿದೆ ಅಲ್ಲಿ ನನ್ನ 'ಅಮರ ಭೂಮಿ ಯಜ್ಞದ' ಸಿದ್ಧತೆ ಪರಿಶೀಲನೆ ಇದೆ, ನಿಮಗೆ ಇನ್ನೂ ಸಂದೇಹಗಳಿದ್ದರೆ 'ನಂಗೆ ಒಂದು ' ಮೇಲ್' ಮಾಡಿ,ನನ್ನ ಮೇಲ್ ಆಯ ಡಿ , ಮಂಕುದಿಣ್ಣೆ@ಬರೇಬೂದಿ.ಆರ್ಗ್ಇಲ್ಲ ಆಶ್ರಮಕ್ಕೆ ಬನಿ. ಎಲ್ಲರೂ ಒಮ್ಮೆಗೆ  ಬಂದು ಅವರ ಪಾದಕ್ಕೆರಗಿ ಆಶೀರ್ವಾದ ಪಡೆದು  ಕೃತಾರ್ಥರಾದರು..

 

ವೀಕ್ಚಕರೆ ಕೇಳಿದಿರಲ್ಲ -ಸ್ಸಾರೀ ನೋಡಿದಿರಲ್ಲ ಶ್ರೀ ಶ್ರೀ ಶ್ರೀ  ಗಳ ಅಮೃತವಾಣಿ ಭವಿಷ್ಯವನ್ನ: ನಿಮಗೆ ' ಬೂದಿ' ಬೇಕಾಗಿದಲ್ಲಿ ಆಶ್ರಮಕ್ಕೆ ಹೋಗಿ ಖರೀದಿಸಬಹುದು, ಆಶ್ರಮ ವಿಳಾಸ #೪೨೦,ಮಂಕುದಿಣ್ಣೆ,ಇಲ್ಲದೂರು ಪೋಸ್ಟ್, ಯಾವ್ದೋ ಊರ್ ತಾಲೂಕು,ಅದೇ ಜಿಲ್ಲೆ  :), ನಿಮ್ಮದೇ ಅಡ್ದ್ರೆಸ್ಸು ಕೊಟು ಹಣ ಕಳಿಸಿದರೆ 'ನಿಮ್ಮನೆಗೆ' ಮಂತ್ರದ ಬೂದಿ ಕಲಿಸುವ ಅಮೋಘ ಏರ್ಪಾಡೂ ಆಗಿದೆ.. ಈಗ ಸಧ್ಯಕ್ಕೆ 'ಪ್ರಳಯ' ಹೇಗೆ ಆಗುತ್ತೆ ಅಂತ ಒಂದು 'ಹಾಲಿವುಡ್' ಚಿತ್ರದ ತುಣುಕನ್ನ ನೋಡಿ:()

 

ವೀಕ್ಚಕರೆ ಮರಳಿ ನಿಮಗೆ ನಮ್ಮ ಸ್ತಿದಿಯೋಗೆ ಸ್ವಾಗತ ಈಗ ನೋಡಿದಿರಲ್ಲ ಚಿತ್ರದ ತುಣುಕು, ಅದನ್ನು 'ಭಲೇ' ಸೊಗಸಾಗಿ ತೆಗೆದವ್ರೆ, ಛೆ ಛೆ- ರ್ರೀ  ಸಂದರ್ಶಕ ಮಹಾಶಯರೇ ನೀವು 'ವಿಷಯಾಂತರ' ಮಾಡುತ್ತಿರುವಿರಿ ಗಮನ ಇರ್ಲಿ 'ಅತ್ಯುಗ್ರಪ್ಪನವರ' ಎಚ್ಚರಿಕೆ. ಸ್ಸಾರೆ ಸ್ಸಾರ್, ಹಾ ನಾವ್ ಎಲ್ಲಿದ್ವಿ? ಇಲ್ಲೇ ಅಲ್ವೇನ್ರಿ ಇದ್ದದು? ಎಲ್ಲರ ಪ್ರಶ್ನೆ:) ಹಾ ಅದೇ ಪ್ರಳಯದ ಬಗ್ಗೆ ನೀವೆಲ್ಲ ಏನೇನು  ತಯಾರಿ ಮಾಡಿಕೊಂಡು  ,ಒಂದು ವೇಳೆ ಆದರೆ 'ಏನೆಲ್ಲಾ' ತುರ್ತು ಸಹಾಯ ವ್ಯವಸ್ತೆ ಮಾಡಿದೀರಾ ಮತ್ತು 'ಎಷ್ಟು' ಕ್ಸ್ಚಿಪ್ರವಾಗಿ ನೀವು  ಜನರನ್ನ ' ಸಮಯದಲ್ಲಿ' ತಲುಪಬಲ್ಲಿರಿ?

ಇದನ್ನೆಲ್ಲಾ ಒಂದೊಂದು ವಿಭಾಗದವರೂ, ಒಬ್ಬರಾದ ಮೇಲೆ ಒಬ್ಬರಾಗಿ ಹೇಳಿ.. ವೀಕ್ಚಕರೆ ಇಗ ಮೊದಲಿಗೆ ವಿಪತ್ತು ನಿರ್ವಹಣ ಮುಖ್ಯಸ್ತರಿಂದ ವಿವರಣೆ.. ಬನ್ನಿ ಕೇಳೋಣ ಶ್ರೀ ಉದಸೀನಪ್ಪನವರು ತಮ್ಮ ಸಹಾಯಕರಿಗೆ ಹೇಳಿ ಒಂದು ದೊಡ್ಡ ಸೂಟ್ ಕೇಸ್ ತರಿಸಿ ಅದನ್ನು ಓಪನ್ ಮಾಡಿ 'ಒಂದು' ಮಾಡೆಲ್ ತೆಗೆದು ಎಲ್ಲರಿಗೂ ತೋರಿಸುತ್ತ ಹೇಳಿದರು, ನೋಡಿ ಇದು ನಮ್ಮ ದೇಶದ ಸಕಲ ಭೂಬಾಗದ ಮಾಡೆಲ್, ಇಲ್ಲಿ ನದಿಗಳು ಹರಿಯುವ- ವಿಮಾನ ನಿಲ್ದಾಣ-ರೈಲು ಲಿಂಕು, ಕಾಡು-ಬೆಟ್ಟ ಗುಡ್ಡ-ಎಲ್ಲವನ್ನು ಕಾಣಬಹುದು. ಈ ಇಡೀ ಭಾಗದಲ್ಲಿ ಎಲ್ಲಿಯೇ ಯಾವುದೇ ರೀತಿಯ ಅಪಾಯ ಸಂಭವಿಸಿದರೂ 'ಅಯ್ಯಯ' ಹತ್ತಿರದ ರೈಲು ನಿಲ್ದಾಣಗಳಿಂದ ರೈಲುಗಳಲಿ ಸಹಾಯಕ್ಕೆ ನಾವ್ ಹೋಗ್ತೀವಿ, -ರೈಲು ಲಿಂಕು ಕಟ್ತಾದರೆ? 'ಶಿವ ಪೂಜೆಲಿ ಕರಡಿ ಬಿಟ್ಟವರು ಯಾರು? ಅಂತ ನೋಡಲು ಅದು 'ಸಾಹಿತಿ' ಒಬ್ಬರ ಪ್ರಶ್ನೆ:೯

'ಸಾಹಿತಿ' ಪಿಚ್  ಆಗಿ ನಾ ಏನಾರ್ ತಪ್ಪು ಮಾತು ಆಡಿದೆನ ಅಂತ ಯೋಚಿಸ್ತಿರಲು, ಉದಾಸೀನಪ್ಪನವರು, ಸ್ವಲ್ಪ 'ಪಾಸಿಟಿವ್'    ಆಗಿ ಯೋಚನೆ ಮಾಡ್ರೀ:) ಬರೀ 'ಅಪಶಕುನದ' ಮತ್ತೆ ಆಯ್ತು.. ಆದರೂ 'ಒಳ್ಳೆ' ಪ್ರಶ್ನೆ ಮಾರಾಯ್ರೇ, ನೋಡಿ ರೈಲು ಲಿಂಕು ಕಟ್ತಾದರೆ ತಕ್ಷಣವೇ ಹತ್ತಿರದ ವಿಮಾನ ನಿಲ್ದಾಣಗಳಿಂದ ವಿಮಾನಗಳೂ, ಹೆಲಿಕ್ಯಾಪ್ತರ್ ಗಳೂ ಹೊರಡುತ್ತವೆ. ಒಂದು ವೇಳೆ  ವಿಮಾನ ನಿಲ್ದಾಣವೇ ಕುಸಿದು ಹೋದರೆ? 'ಅದ್ಯಾರು' ಅದನ್ನ ಕೇಳಿದವರು ಅಂತ ನೋಡಲಾಗಿ 'ಜ್ಯೋತಿಷಿ' ಒಬ್ಬರ ಪ್ರಶ್ನೆ: ಅಲ್ಲ ಸ್ವಾಮೀ ನೀವು ಖ್ಯಾತ ಜ್ಯೋತಿಒಷಿಗಳು ನಿಮಗೆ ಗೊತ್ತಿಲ್ಲದ್ದೆ  ? ನೋಡಿ ಹಾಗೆ ಆದರೆ ನಾವು 'ಹಾಯಿ ದೋಣಿಗಳಲ್ಲಿ' ನೀರಲ್ಲಿ ತೇಲ್ತಾ ಸಹಾಯಕ್ಕೆ ಹೋಗ್ತೇವೆ.. ವೀಕ್ಚಕರೆ ಕೇಳಿದಿರಲ್ಲ ನಮ್ಮ ವಿಪತ್ತು ನಿರ್ವಹಣ ಮುಖ್ಯಸ್ತರಾದ ಶ್ರೀ ಉದಾಸೀನಪ್ಪನವರ   ಅತ್ಯ್ಪಪಯುಕ್ತ  ಮಾಹಿತಿ, ಉದಾಸೀನಪ್ಪನವರೆ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು. ಈಗ ಒಂದು 'ಸ್ಸಣ್ಣ' ಬ್ರೇಕ್, ನೋಡಿ 'ಭೂಮಿಯ  ಕೊನೆ' ಎನ್ನುವ 'ಕನ್ನಡದ' ಚಲನ ಚಿತ್ರದ ೩ ಡೀ  ಟ್ರೈಲರ್ :) ..

 

ವೀಕ್ಚಕರೆ ಮರಳಿ ನಮ್ಮ ಸ್ಟುಡಿಯೋಗೆ ನಿಮಗೆ ಸ್ವಾಗತ. ಈಗ ನಾಡಿನ ಹೆಸರಾಂತ ಸಾಹಿತಿ 'ಅರುಳುಮರುಳಪ್ಪ' ಅವರಿಗೆ ಈ ಪ್ರಳಯದ ಬಗ್ಗೆ ಕೇಳೋಣ- ಸ್ಸಾರ್  ನೀವೇನು ಹೇಳ್ತೀರಾ ಈ ಪ್ರಳಯದ ಬಗ್ಗೆ?  ನೋಡ್ರೀ ಆ ಪ್ರಳಯ ಅತ್ಲಾಗಿರ್ಲಿ! ಮೊದ್ಲು ಕನ್ನಡಕ್ಕೆ ಏನಾಗಿದೆ? ಯೋಚ್ಸೋಣ , ಸ್ಸಾರ್ ಇದು ಪ್ರಳಯದ ಬಗ್ಗೆಯೇ  ಮಾತಡ್ಬೇಕಾದ ಪ್ರೋಗ್ರಾಮ್ ಅದಕ್ಕಾಗ್ ತಾವ್  'ಅದರ' ಬಗ್ಗೆಯೇ ಮಾತಾಡಿ. ನೋಡಿ ಅದ್ರ ಬಗ್ಗೆ ನಾ ಹೆಚ್ಚಗೆ  ಏನೋ ಹೇಳಲ್ಲ, ಅದು ಆಗದಿದ್ದರೆನೆ  ವಾಸಿ ಅಸ್ಟೇ. ಪ್ರಿಯ ವೀಕ್ಚಕರೆ  ಕೇಳಿದಿರಲ್ಲ ಸಾಹಿತಿಗಳ ಮುತ್ತಂತ ಮಾತಾ? ಈಗ ಅಗ್ನಿ ಶಾಮಕ ಮುಖ್ಯಸ್ತ  ಜಮದಗ್ನಿ ಅವರ  ಹೇಳಿಕೆ.

ಜಮದಗ್ನಿ- ನೋಡಿ ನಾವು  ಸಕಲ ರೀತಿಯಲ್ಲೂ ಇದಕ್ಕೆ ಸಜ್ಜಾಗಿದ್ದೇವೆ. ಯಾವುದೇ ರೀತಿಯ ಪರಿಣಾಮವನ್ನ ಸಮರ್ಥವಾಗಿ ಎದುರಿಸುತ್ತೇವೆ, ಸುಸಜ್ಜಿತವಾದ ಸಲಕರಣೆಗಳನ್ನ ಈಗಾಗಲೇ  ವಿದೇಶದಿಂದ  ಆಮದು ಮಾಡಿಕೊಂಡಿದ್ದೇವೆ..  ಒಟ್ಟಿನಲ್ಲಿ ನಾ ಇಷ್ಟು ಹೇಳಬಲ್ಲೆ   'ಪ್ರಜೆಗಳೇ ಹೆದರಬೇಡಿ ಧೈರ್ಯವಾಗಿರಿ' ನಾವಿದ್ದೇವೆ….

 

 

ವೀಕ್ಚಕರೆ  ಜಮದಗ್ನಿ ಅವರ ಭರವಸೆಯ ಮಾತುಗಳನ್ನ ಕೇಳಿದಿರಲ್ಲ ಈಗ  ಒಂದು ಚಿಕ್ಕ  ವಾಣಿಜ್ಯ ಜಾಹೀರಾತು ಮತ್ತೆ ನಾವ್ 'ಶೀಘ್ರ' ನಿಮ್ಮ ಮುಂದೆ ಬರಲಿದ್ದೇವೆ:)

 

ಜಾಹೀರಾತು : ಜೀವನದಲ್ಲಿ ಶಕ್ತಿ ಸಾಮರ್ಥ್ಯ-ಧೈರ್ಯ ಹೊಂದಲು  ತಿನ್ನಿ  'ಧೈರ್ಯಂ   ಪ್ರಾಶ್' . ಕುಡಿಯಿರಿ 'ಧೈರ್ಯಕಲ್ಪಂ' ..

ಜಾಹೀರಾತು : ಜೀವನ ಭೀಮ ಪಾಲಿಸಿ, ಒಂದು ಪಾಲಿಸಿ ತೆಗೆದುಕೊಳ್ಳಿ ಮತ್ತು ನಿಸ್ಚಿಂತರಾಗಿರಿ , ನಿಮ್ಮ 'ಭವಿಷ್ಯದ' ಬಗ್ಗೆ  ನಾವ್ ಕೇರ್ ತೆಗೆದುಕೊಳ್ಳುತ್ತೇವೆ.

ಜಾಹೀರಾತು ತಲೆ ನೋವೆ? ಮೈ ಕೈ ನೋವೆ?  ಉಪಯೋಗಿಸಿ  'ಜಾದೂ ಬಾಮ್'- ನಿಮ್ಮ ನೋವು  -ಮಾಯಾ. :)

 

ಹಾ ಪ್ರಿಯ ವೀಕ್ಚಕರೆ  ನಿಮ್ಮ ತಾಳ್ಮೆಗೆ ನಮೋ ನಮೋ:) ಈಗ ಮತ್ತೆ ನಾವು ಮರಳಿ ಬಂದಿದ್ದೇವೆ, ಈಗ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನಮಮ್ ಪ್ರಶ್ನೆ - ಸ್ಸಾರ್ ನಿಮ್ಮ ಅಧಿಕಾರಿ ವರ್ಗ ಮತ್ತು ಅದರ ತಯಾರಿ ಹೇಗಿದೆ?

ನೋಡಿ ಪ್ರಳಯ ಆಗುತಿ ಇಲವೋ ಗೊತ್ತಿಲ್ಲ! ಆದರೆ ಒಂದು ವೇಳೆ ಆದರೆ ನಾವು ಅದಕ್ಕಾಗಿ ಈಗಾಗಲೇ ಕೆಲ ತಯಾರಿ ಮಾಡಿಕೊಂಡಿದ್ದು  ಅದನ್ನು 'ಭದ್ರತಾ- ಮತ್ತು ಗೌಪ್ಯತಧೃಸ್ಟಿ ಯಿಂದ ಇಲ್ಲಿ ಹೇಳಲು ಆಗಲ್ಲ. ನಮ್ಮ ಎಲ್ಲ ಇಲಾಖೆಗಳೂ  ನಿಟ್ಟಿನಲ್ಲಿ ಸಕಲ ರೀತಿಯಲ್ಲಿ ಸಜ್ಜಾಗಿವೆ. ಇದಕ್ಕಾಗೆ ಮಾನ್ಯ ಮುಖ್ಯಮಂತ್ರಿಗಳು  'ಪ್ರಳಯ ೨೦೧೨ಎಂಬ ಸ್ಪೆಸಲ್ ಬಜೆಟ್ ಮಂಡಿಸಿ  ಹಣ ಬಿಡುಗಡೆ ಮಾಡಿದ್ದಾರೆ.

 

ಈಗ ವಿರೋಧ ಪಕ್ಚದ ನಾಯಕರಾದ ಶ್ರೀ ಮಹಾನ್ 'ಅತ್ಯುಗ್ರಪ್ಪನವರಿಂದ ಬಗ್ಗೆ ವಿವರಣೆ.

ಅತ್ಯುಗ್ರಪ್ಪ- ನೋಡಿ ಪ್ರಳಯ ಆಗುತ್ತೋ ಇಲ್ಲವೋ ನಾ ಕಾಣೆಆದರೆ ಆಡಳಿತ ಪಕ್ಚದವರು ಪ್ರಳಯ ಪ್ರಳಯ ಅಂತ ಜನರಲ್ಲಿ ಭಯ ಹುಟ್ಟು ಹಾಕಿ, ತನ್ಮೂಲಕ  ಪ್ರಳಯ ಎದುರಿಸಲು ನಾವೆಲ್ಲಾ ಸಜ್ಜಾಗಬೇಕು ಅಂತ ಹೇಳಿ  'ಪ್ರಳಯ-೨೦೧೨ ' ಎಂಬ ಬಜೆಟ್ ಮಂಡಿಸಿ  ಸಾವಿರಾರು ಕೋಟಿ ಬಿಡುಗಡೆ ಮಾಡಿ , ಜನರ ಜೀವ ರಕ್ಷಿಸುವ 'ಜಾಕೆಟು' ಅಂತ   ಯಾವ್ದೋ  ಚೀನಾದಿಂದ  'ಆಮದು' ಮಾಡಿದ  'ಕೀಳು' ಗುಣ ಮಟ್ಟದ  ಜಾಕೆಟು ತರಿಸಿದ್ದಾರೆ:) ಅದೊಂದೇ ಅಲ್ಲ ಎಲ್ಲವನ್ನು  ಕಡಿಮೆ ಗುಣ ಮಟ್ಟದ ವಸ್ತುಗಳು, ಬಗ್ಗೆ ನಾವು 'ಸೀ ಬೀ ಆಯ್' ತನಿಖೆಗೆ ಒತ್ತಾಯಿಸುತ್ತೇವೆ.

ಸಂದರ್ಶಕ: ಸ್ಸಾರ್ ಇದು ನೇರ ಪ್ರಸಾರ ಕಾರ್ಯಕ್ರಮ! ದಯವಿಟ್ಟು ಶಾಂತರಾಗಿ, ಬಿಸ್ಲೇರಿ ನೀರು ಕುಡಿಯಿರಿ:) ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..

 

ಈಗ 'ನೇರ ಫೋನ್  ಇನ್ ' ಪ್ರಜೆಗಳ ಜೊತೆ:ಮೊದಲನೇ ಕರೆ ದೂರದ ಬಳ್ಳಾರಿಯಿಂದ

ಹಲೋ  ಸ್ಸಾರ್ ನಾ  'ಬೀದಿ ಬಸ್ಸ್ಯ' ಮಾತಾಡೋದು!

ಹಾ ಇರಿ ಇರಿ ಮಂತ್ರಿಗಳಿಗೆ ಕೇಳಿ ನಿಮ್ಮ ಪ್ರಶ್ನೆ

 ಹಾ 'ಬೀಡಿ ಬಸ್ಯ'   ಅವ್ರೆ  ನಮಸ್ಕಾರ ಹೇಗಿದೀರಿ? ಎಲ್ಲ ಸೌಖ್ಯವೇಸ್ವಲ್ಪ 'ಬೀಡಿ' ಸೇದೋದು ಕಡಿಮೀ ಮಾಡಿ  ಇಲ್ಲಾಂದರೆ  'ಆಕಾಶ ಸೇರ್ತೀವಿ:)  ಸ್ಸಾರ್ ನಾ ಚೆನ್ದಿವ್ನಿ , ನನ್ನ ಹೆಸರು ಬೀಡಿ ಬಸಯ್ ಅಲ್ಲ ಸಾರ! 'ಬೀದಿ ಬಸ್ಯನಾ ಬೀಡಿ ಸೇಡೋದೇ ಇಲ್ಲ:) ಸಿಗರೆಟ್ ಮಾತ್ರ ಸೇದೋದು:(

ಸ್ಸಾರ್ ಅದೇ ಪ್ರಳಯ ಅಂತವ್ರಲ್ಲ ಅದು ಇಲ್ ಆಗುತ? ಆದ್ರೆ ನಾವ್ ಏನು ಮಾಡಬೇಕು?

ನೋಡಿ ಪ್ರಳಯ 'ಎಲ್ಲಾರ' ಆಗಬಹುದು, ಆಗದೆ ಇರಬಹುದು, ಆದದ್ದೇ ಆದರೆ ನೀವು ಧೈರ್ಯವಾಗಿರಿ, ನಮ್ಮ ಸರಕಾರ ನಿಮ್ಮ ಬಗ್ಗೆ 'ಕಾಳಜಿ' ತೆಗೆದುಕೊಳ್ಳುತ್ತೇ:)  ಸ್ಸಾರ್ ಇಲ್ ನಮ್ ಫ್ರೆಂಡು ಮಾತಾಡ್ತಾರೆ  ಕಟ್.... ಕಟ್ ಕಟ್

 

ಈಗ ಮುಂದಿನ ಕರೆ  ಮಲೆನಾಡಿನ  ಊರಾದ  ಆಗುಂಬೆಯಿಂದ   ಆನಂದ್ ಅವ್ರು

ಸ್ಸಾರ್ ಆನಂದ್ ಅನ್ತಾನಮ್ಮ ಆಗುಂಬೆ -ಮಲೆನಾಡಿಗೆ  ಪ್ರಳಯ ಆದಾಗ ಏನಾರ 'ವಿಶೇಷ ' ವ್ಯವಸ್ತೆ ಮಾಡಿದೀರಾ?

ಆನಂದ್ ಅವ್ರೆ ಯಾಕೆ  ಉದ್ವೇಗಸದಾ ಆನಂದವಗಿರಿ :)  ನೋಡಿ ಮಲೆನಾಡಿಗೆ ಒಂದು ಬಯಲು ನಾಡಿಗೆ ಒಂದು , ಒಂಥರಾ ಒಂದು ಕಣ್ಣಿಗೆ 'ಸುಣ್ಣ 'ಇನ್ನೊಂದು ಕಣ್ಣಿಗೆ 'ಬೆಣ್ಣೆಅಂತ ನಾವ್ ಮಾಡೋಲ್ಲ, ಎಲ್ಲರಿಗೂ  'ಒಂದೇ ' ನ್ಯಾಯ, ನಾವು ನಿಮ್ಮ ಬಗ್ಗೆಯೂ ಕಾಳಜಿ ತೆಗೆದುಕೊಳ್ಳುತ್ತೇವೆ, ಸ್ಸಾರ್ ಅಲ್ಲ ಅದು. ಕಟ್ ಕಟ್ಕಟ್

ಈಗ  ಗುಲಬರ್ಗಾದಿಂದ  ಒಂದು ಕರೆ, ಸ್ಸಾರ್ ನಾ  'ಬಂಡೆಪ್ಪನಮೂರ್ನಾಗ ಬರೀ 'ಬಿಸಿಲೆಇರ್ತೈತ್ರಿ

ಮಂತ್ರಿ: ನೋಡಿ ಬಂಡೆಪ್ಪ ಅವ್ರೆ ನಾವು 'ಪ್ರಳಯದ' ಬಗ್ಗೆ ಮಾತಾಡುತ್ತಿದ್ದೇವೆ, ನಿಮ್ಮೂರ 'ಬಿಸಿಲ' ಬಗೆ ಯಾವತ್ತಾರ ಮಾತಾಡೋಣ; ಕಟ್ ಕಟ್

 

ಇಲ್ಲಿಗೆ ನೇರ ಫೋನ್ ಇನ್ ಮುಗಿಯಿತು.

 

 

 

ಪ್ರಿಯ ವೀಕ್ಚಕರೆ ನೀವೇ ನೋಡಿದಿರಲ್ಲ, ಕೇಳಿದಿರಲ್ಲ, ಒಟ್ಟಿನಲ್ಲಿ ಪ್ರಳಯ ಆಗುತ್ತೋ ಇಲ್ಲವೋ ಅಂತ ಯಾರು ನಿಖರವಾಗಿ ಹೇಳಿಲ್ಲ, ಹಾಗೆಯೇ ಆಗದೆ ಎನುವುದು ಸಹಾ ಯಾರ್ಗೂ ಗೊತ್ತಿಲ್ಲ:) ಆದರೆ  ಆದದ್ದೇ ಆದರೆ  ನಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ ಅಂದಿದ್ದಾರೆ. ಹೀಗಾಗಿ ನೀವೆಲ್ಲ 'ನಿಶ್ಚಿಂತೆಯಿಂದಹಾಯಾಗಿ ಇರಿ... ನಮ್ಮ ಸಂದರ್ಶನದಲ್ಲಿ ಬಾಗವಹಿಸಿ  ವಿಪುಲ ಮಾಹಿತಿ ನೀಡಿ ಪ್ರಜೆಗಳ ಬಗ್ಗೆ ಕಾಳಜಿ ತೋರಿದ ಎಲ್ಲರ್ಗೂ ನಮ್ಮ ವಂದನೆಗಳು..

 

ಮುಂದಿನ ಕಾರ್ಯಕ್ರಮ  'ಹೀಗೂ ಉಂಟೆ?' ಮರೆಯದೆ ನೋಡಿ.. ನಮ್ಮ ಚಾನೆಲ್ಲನ್ನು 'ನೋಡುತ್ತಲೇ' ಇರಿ............ ಶುಭವಾಗಲಿ......

 

 

 

ಗಮನಿಸಿ:

 

ಈಗ ಎಲ್ಲೆಲ್ಲೂ  ಬರೀ 'ಪ್ರಳಯದ್ದೆ' ಸುದ್ಧಿ:) ತಿಂಗಳ 'ಕೊನೆಯಲ್ಲಿ' ಅದೂ ಹೊಸ ವರ್ಷ 'ಶುರು' ಆದ ಕೂಡಲೇ  ಎಲ್ಲ 'ಮುದ್ರಣ-ಶ್ರವಣ-ದ್ರ್ಸುಷ್ಯ' ಮಾಧ್ಯಮದಲ್ಲೂ ಕುರಿತೇ ಚರ್ಚೆ೨೦೧೨ ಮುಗಿದು ೨೦೧೩ ಬರೋವರ್ಗೆ ಬರೀ ಪ್ರಳಯದ್ದೆ ಮಾತು-ಕಥೆ ಬರಹಕ್ಕೂ ಅದೇ ಸ್ಪೂರ್ತಿ.

 

 

 

ಚಿತ್ರ ಮೂಲ:  http://www.hi5sms.in/happy-year-2012-hi5sms-in.php

Comments