ಮನಸ್ಸು, ಆರೋಗ್ಯ
ಕಳೆದ ಎರಡು ಮೂರು ವಾರ ಆರೋಗ್ಯ ಸರಿ ಇಲ್ಲದೆ ಮಲಗಿದ್ದೆ. ಆಫೀಸು, ಕಂಪ್ಯೂಟರು ಎಷ್ಟೋ ವರ್ಷಗಳಲ್ಲಿ ಮೊದಲ ಬಾರಿ ಸಂಪೂರ್ಣವಾಗಿ ದೂರ ದೂರ! ನಿದ್ರೆ ಮಾಡದ ಹೊತ್ತು ಬಹಳಷ್ಟು ಸಮಯ ಕಂಪ್ಯೂಟರ್ ಜೊತೆಗೇ ಇರುತ್ತಿದ್ದ ನನಗೆ ಈ ಲೋಕದ ಸಂಪರ್ಕ ಒಂದಷ್ಟು ದಿನ ಕಡಿದುಬಿದ್ದಿತ್ತು. ನಿತ್ಯದ ಕೆಲಸ ಮನಸ್ಸನ್ನು ಆವರಿಸಿ ಬಿಡುವಿಲ್ಲದಂತಿರುವಾಗ ಹತ್ತಿರವೂ ಸುಳಿಯದ ಆಲೋಚನೆಗಳು ಈ ಸಮಯದಲ್ಲಿ ತಲೆ ಹೊಕ್ಕವು. ಉಸಿರಾಡಲೂ ಕಷ್ಟವಾಗುವ ಸಮಯ ಬೇರೊಂದು ವಿಷಯದ ಕುರಿತು ಆಲೋಚನೆ ಕೂಡ ಮಾಡಲಾಗದು. ಹೀಗಿದ್ದೂ ಕೆಲವು ವಿಷಯಗಳು ಕೊರೆಯುವ ಚಳಿಯಂತೆ ಆವರಿಸಿದಾಗ ಬಿಸಿಲಿಗಾಗಿ, ಬೆಳಕಿಗಾಗಿ ಹುಡುಕುವುದು ಸಹಜ. ಅಥವ ಆಲೋಚನೆಗಳನ್ನು ಬದಿಗಿಡಲು ಮತ್ತೊಮ್ಮೆ ಕೆಲಸದ ಮೊರೆ ಹೋಗುವುದೂ ಆದೀತು, ಆದರೆ ಎಷ್ಟು ಹೊತ್ತು ತಾನೆ ಕೆಲಸವೂ ಮಾಡಲಾದೀತು?
ಹಲವು ದಿನಗಳಿಂದ ಬದಿಗಿಟ್ಟಿರುವ ಎಷ್ಟೋ ಕೆಲಸಗಳೂ ಮತ್ತೆ ಮತ್ತೆ ನೆನಪಾಗುವುದೂ ನಿತ್ಯ ಕೆಲಸದಿಂದ ಸಂಪೂರ್ಣ ಬಿಡುವು ಸಿಕ್ಕಾಗಲೇ. ಎಷ್ಟೆಲ್ಲಾ ಉಂಟು, ಏನೆಲ್ಲ ಮಾಡುವುದಿತ್ತು ಎಂಬುದು ಒಂದರ ಹಿಂದೆ ಒಂದರಂತೆ ನೆನಪಾಗುತ್ತ, ಅದೇ ಸಮಯ ಆನಾರೋಗ್ಯದಿಂದ ಏನೂ ಮಾಡಲಾಗದೆ ತೀರ ಇಕ್ಕಟ್ಟಿಗೆ ಸಿಲುಕಿಕುವುದು ಅಸಹಾಯಕತೆಯ ಪರಮಾವಧಿ, ಹಾಗು ತಲೆಯ ಮೇಲೆ ಹೊಡೆದಂತೆ ನಿಜಸ್ಥಿತಿಯ ಅರಿವು ಮೂಡಿಸುವ ಆ ಘಳಿಗೆ ಮರೆಯಲಾಗದ ಅನುಭವ! ಪ್ರೀತಿಯಿಂದ ನೋಡಿಕೊಳ್ಳುವವರಿದ್ದರೆ ಎಷ್ಟೋ ಭಾರ ಕಡಿಮೆ ಎನಿಸಿದರೂ ನೆನಪುಗಳು ಎಂದಿಗಿಂತಲೂ ಭಾರ. ಮನಸ್ಸನ್ನು ತೊಡಗಿಸಿಕೊಳ್ಳಲು ಏನೂ ಇಲ್ಲದಿದ್ದರೆ ಹೇಗಿದ್ದೀತು? ಎಂಬುದರ ನಿಜವಾದ ಉತ್ತರ ಆಗ ಸಿಕ್ಕೀತು.
Comments
ಉ: ಮನಸ್ಸು, ಆರೋಗ್ಯ
ಉ: ಮನಸ್ಸು, ಆರೋಗ್ಯ
ಉ: ಮನಸ್ಸು, ಆರೋಗ್ಯ
In reply to ಉ: ಮನಸ್ಸು, ಆರೋಗ್ಯ by swara kamath
ಉ: ಮನಸ್ಸು, ಆರೋಗ್ಯ
In reply to ಉ: ಮನಸ್ಸು, ಆರೋಗ್ಯ by makara
ಉ: ಮನಸ್ಸು, ಆರೋಗ್ಯ
In reply to ಉ: ಮನಸ್ಸು, ಆರೋಗ್ಯ by makara
ಉ: ಮನಸ್ಸು, ಆರೋಗ್ಯ
ಉ: ಮನಸ್ಸು, ಆರೋಗ್ಯ
ಉ: ಮನಸ್ಸು, ಆರೋಗ್ಯ