ಒಳ್ಳೆಯ ಕಲಾವಿದ ಯಾರು? ಸಂಪದಿಗರ ತಾರ್ಕಿಕ ಬುದ್ಧಿಮತ್ತೆಗೊಂದು ಪರೀಕ್ಷೆ!!

ಒಳ್ಳೆಯ ಕಲಾವಿದ ಯಾರು? ಸಂಪದಿಗರ ತಾರ್ಕಿಕ ಬುದ್ಧಿಮತ್ತೆಗೊಂದು ಪರೀಕ್ಷೆ!!

        ನನ್ನನ್ನು ಚಿಕ್ಕಂದಿನಲ್ಲಿ ಆಲೋಚಿಸುವಂತೆ ಪ್ರೇರಪಿಸಿದ ಈ ಕಥೆ ದೇವರು ಆರ್. ಭಟ್ ಕೊಟ್ಟ ಒಂದು ಚಿತ್ರ ಜ್ಞಾಪಿಸಿತು. ಕೊಂಡಿ ನೋಡಿ: http://sampada.net/image/34800 ಇರಲಿ ಕಥೆ ಹೀಗಿದೆ. ಒಂದು ಚಿತ್ರ ಕಲಾ ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ. ಅದರಲ್ಲಿ ಒಂದಕ್ಕಿಂತ ಒಂದು ಸುಂದರ ಚಿತ್ರಗಳನ್ನು ಕಲಾವಿದರು ಬರೆದು ಒಂದು ಕಡೆ ಪ್ರದರ್ಶನಕ್ಕಿಡುತ್ತಾರೆ. ಅದರಲ್ಲಿ ಒಬ್ಬ ಕಲಾವಿದ ರಚಿಸಿದ ಹೂವಿನ ಚಿತ್ರ ಎಷ್ಟು ನೈಜವಾಗಿರುತ್ತದೆಂದರೆ ಅದನ್ನು ನಿಜವಾದ ಹೂವು ಎಂದುಕೊಂಡು ಒಂದು ಚಿಟ್ಟೆ ಅದರಿಂದ ಮಕರಂದವನ್ನು ಹೀರಲು ಪ್ರಯತ್ನಿಸುತ್ತದೆ. ಅದು ಎಲ್ಲರ ಗಮನ ಸೆಳೆಯುತ್ತದೆ. ಅಷ್ಟರಲ್ಲಿ ಮತ್ತೊಂದು ಚಿತ್ರದಲ್ಲಿ ಬಿಡಿಸಿರುವ ದ್ರಾಕ್ಷಿ ಹಣ್ಣಿನ ಚಿತ್ರ ಎಷ್ಟು ನೈಜವಾಗಿರುತ್ತದೆ ಎಂದರೆ ಅದನ್ನು ಒಂದು ಹಸು ತಿನ್ನಲು ಆ ಪ್ರದರ್ಶನ ಶಾಲೆಯೊಳಗೆ ನುಗ್ಗುತ್ತದೆ. ಅಲ್ಲಿದ್ದವರು ಅದನ್ನು ಓಡಿಸಿದರೆನ್ನಿ. ಹೀಗಿರುವಾಗ ಚಿತ್ರ ಪ್ರದರ್ಶನವನ್ನು ನೋಡುತ್ತಾ ಬಹುಮಾನ ಸಮಿತಿಯ ನಿರ್ಣಾಯಕರು ಮುಂದೆ ಸಾಗುತ್ತಿರುತ್ತಾರೆ. ಅದರಲ್ಲಿ ಒಂದು ಚಿತ್ರದಲ್ಲಿ ಕಲಾವಿದನೋರ್ವ ಬಿಡಿಸಿದ ಕಿಟಕಿ ಪರದೆಯ (Screen) ಚಿತ್ರ ಎಷ್ಟು ಚೆನ್ನಾಗಿರುತ್ತದೆ ಎಂದರೆ ಆ ನಿರ್ಣಾಯಕರಲ್ಲಿ ಒಬ್ಬ ಅದನ್ನು ನೈಜವಾದದ್ದೆಂದು ತಿಳಿದುಕೊಂಡು ಅದನ್ನು ಎಳೆಯಲು ಹೋಗುತ್ತಾನೆ. ಆಗ ಆ ನಿರ್ಣಾಯಕರಲ್ಲೇ ಗೊಂದಲ ಉಂಟಾಗುತ್ತದೆ ಯಾವುದಕ್ಕೆ ಪ್ರಥಮ ಬಹುಮಾನ ಕೊಡಬೇಕೆಂದು. ಕೆಲವರು ಹೂವಿನ ಚಿತ್ರಕ್ಕೆಂದರೆ, ಕೆಲವರು ಹಣ್ಣಿನ ಚಿತ್ರಕ್ಕೆಂದರೆ ಮತ್ತೆ ಕೆಲವರು ಆ ಕಿಟಕಿ ಪರದೆಯ ಚಿತ್ರಕ್ಕೆ ಕೊಡಬೇಕೆಂದು ತಮ್ಮ ತಮ್ಮೊಳಗೆ ಮಂಥನ ನಡೆಸುತ್ತಾರೆ. ನೀವು ಬಹುಮಾನ ಸಮಿತಿಯ ನಿರ್ಣಾಯಕರಾಗಿದ್ದರೆ ಆ ಮೂರರಲ್ಲಿ ಯಾವ ಚಿತ್ರಕ್ಕೆ ಬಹುಮಾನ ಕೊಡುತ್ತಿದ್ದಿರಿ. ತೀರ್ಮಾನವನ್ನು ಸಂಪದಿಗರಿಗೇ ಬಿಡುತ್ತಿದ್ದೇನೆ.
 

Comments