ನಾಕೇ ಸಾಕು
ಕವನ
ಅವಳು
ಮರಳಿ
ಬಂದೇ
ಬರುತ್ತಾಳೆಂಬ
ಅಚಲ
ನಂಬಿಕೆಯಿಂದ
ಕಾದು
ಕುಳಿತ,
ಅವಳದೇ
ಹಾಡು-ಮಾತುಗಳನು
ಬಡಬಡಿಸುತ್ತಾ
ಹೋದ,
ಜಗತ್ತನ್ನೇ
ಮರೆತ.
ಊರವರ
ಪಾಲಿಗೆ
ಅವನು
ಹುಚ್ಚ!
++++++++++
ಅವಳ
ನೆನಪಲ್ಲಿ
ಕಂಗಳು
ಕೊಳವಾಗಿ
ಬಂದ
ಕಣ್ಣೀರನ್ನು
ಹೊರಬೀಳಕೊಡದೆ
ಎದೆ ಚಿಪ್ಪಿನಲ್ಲಿ
ಅಡಗಿಸಿಟ್ಟಿದ್ದೇನೆ.
ಮುಂದೊಮ್ಮೆ
ಮುತ್ತಾಗಬಹುದೆಂಬ
ಅಧಮ್ಯ
ಬಯಕೆಯಿಂದ...........
+++++++++++++++
ನಿನ್ನ
ಕಡಲಾಳದ
ಕಂಗಳಲಿ
ನನ್ನ
ಕಾಣಲು ಹೋಗಿ
ಪ್ರತಿ ಬಾರಿ
ಸೋತಿದ್ದೇನೆ
ಎಂದಾಗಲೆಲ್ಲಾ
ನೀನು
ಮುತ್ತಿತ್ತು
ನಕ್ಕು
ಬಿಡುತ್ತಿದ್ದೆ............
++++++++++++++++
ಹತಾಶ
ಪ್ರೇಮದ
ನೆನಪಲ್ಲಿ
ಅವನು
ಬರೆದ
ಗೋಡೆ
ಬರಹಗಳು
ರೂಮನ್ನು
ಸಿಂಗರಿಸಿವೆ.............
Comments
ಉ: ನಾಕೇ ಸಾಕು
In reply to ಉ: ನಾಕೇ ಸಾಕು by kamath_kumble
ಉ: ನಾಕೇ ಸಾಕು
In reply to ಉ: ನಾಕೇ ಸಾಕು by partha1059
ಉ: ನಾಕೇ ಸಾಕು
In reply to ಉ: ನಾಕೇ ಸಾಕು by kamath_kumble
ಉ: ನಾಕೇ ಸಾಕು
ಉ: ನಾಕೇ ಸಾಕು
In reply to ಉ: ನಾಕೇ ಸಾಕು by makara
ಉ: ನಾಕೇ ಸಾಕು