ಅ ಕಪ್ ಓಫ್ ಕಾಫಿ ... ಸಿಪ್ - ೨೨
ಸಿಪ್ - ೨೨
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಅವಿನಾಶ್ ಗೆ ನಾನು ಕೆ.ಟಿ ಕೊಡುತಿದ್ದೆ, ಜನವರಿ ಎರಡನೇ ವಾರ ಆಗುತಿದ್ದಂತೆ ಇಬ್ಬರ ಕೆಲಸ ಮೀರಿಸುವಷ್ಟು ಹೊರೆ ಜೀವನ್ ಮತ್ತು ನನ್ನ ಮೇಲೆ ಬಿದ್ದಿತ್ತು. ಆಕೃತಿಯನ್ನು ನಮ್ಮ ಮೊಡ್ಯುಲ್ ಗೆ ಸೇರಿಸುವ ಕುರಿತು ನಾನು ಜೀವನ್ ನಲ್ಲಿ ಪ್ರಸ್ತಾಪಿಸಿದಾಗ ಅವನು ಆಕೃತಿಗಿಂತ ಅವಿನಾಶ್ ನಮಗೆ ಸೂಕ್ತ ಎಂದು ಹೇಳಿದ್ದ, ನನ್ನ ಒತ್ತಡ ಹೆಚ್ಚಾದಾಗ ಅವನು ಲಕ್ಷ್ಮಿ ಸರ್ ನಲ್ಲಿ ಇಬ್ಬರ ಹೆಸರನ್ನು ನಮ್ಮ ಮೊಡ್ಯುಲ್ ಗೆ ಸೇರಿಸಲು ಮನವಿಯಿಟ್ಟು ಮೇಲ್ ಹಾಕಿದ್ದ ವಾರದ ಹಿಂದೆ. ಆ ಮೇಲ್ ಗೆ ರಿಪ್ಲೈ ಕೊಡುವಂತೆ ಲಕ್ಷಿ ಸರ್ 'ಆಕೃತಿಗೆ ಕೊಟ್ಟ ಆಫರ್ ಅನ್ನು ಹಿಂದೆ ನಿರಾಕರಿಸಿದ್ದಳು, ಈಗ ನಾವು ಅವಿನಾಶ್ ಗೆ ಈ ಆಫರ್ ಕೊಡಲು ನಿಶ್ಚಯಿಸಿದ್ದೇನೆ, ಆಕೃತಿಗೆ ಜಾವ ಬೆಕ್ಕೆನ್ನುತಿದ್ದಳು ಅವಳನ್ನು ಫೆಬ್ ನಿಂದ ಶುರುಆಗುವ ಹೊಸ ಪ್ರಾಜೆಕ್ಟ್ ಗೆ ಅಲ್ಲೋಕೆಟ್ ಮಾಡಿರುತ್ತೇನೆ'. ತನ್ನ ರೂಮ್ಮೇಟ್ ಅನ್ನು ಮೊಡ್ಯುಲ್ ಗೆ ಸೇರಿಸುವಲ್ಲಿ ಜೀವನ್ ಸಫಲನಾಗಿದ್ದ, ಆಕೃತಿ ನನ್ನೊಂದಿಗೆ ಬರಲಿಚ್ಚಿಸಿದರೂ ಬರಳಾದರು.
ಡ್ರೀಮ್ ಟೆಕ್ ಪಿ ೨ ಅಲ್ಲಿನ ತನ್ನ ಆಫೀಸ್ ಅನ್ನು ಜನವರಿ ಮೊದಲವಾರದಿಂದ ಎಂಟನೇ ಅಂತಸ್ತಿಗೆ ಶಿಫ್ಟ್ ಮಾಡಿಕ್ಕೊಂಡಿತ್ತು. ಇಲ್ಲಿ ಎಲ್ಲವು ಶಿಸ್ತುಬದ್ಧ ವಾಗಿತ್ತು ೨೫೦+ ಎಂಪ್ಲೋಯರ್ ಒಂದೇ ಕಡೆಯಲ್ಲಿ ಕುಳ್ಳುವ ವ್ಯವಸ್ತೆ, ದೊಡ್ಡದಾದ ಸೆಮಿನಾರ್ ಹಾಲ್, ನೂರು ಮಂದಿ ಒಟ್ಟಿಗೆ ಕುಳಿತು ಊಟ ಮಾಡಬಹುದಾದ ಕೆಫೆಟೇರಿಯ, ಜಿಮ್, ಟೇಬಲ್ ಟೆನ್ನಿಸ್ ಎಲ್ಲವೂ ಅಲ್ಲಿದ್ದವು. ಮಿಗಿಲಾಗಿ ಚೆನ್ನೈ ಆಫೀಸ್ ನಂತೆ ಇಲ್ಲಿ ಹೊಸ ಕಾಫಿ ಮಷಿನ್ ಬಂದಿದ್ದವು. ೬೦ ಕ್ಯುಬಿಕಲ್ಗಳು, ಪ್ರತಿಯೊಂದರಲ್ಲೂ ೪ ಮಂದಿಗೆ ಕುಳ್ಳ ಬಹುದಾದ ವ್ಯವಸ್ತೆ, ವಿಸ್ತಾರವಾದ ಡೆಸ್ಕ್, ಡ್ರವರ್, ಪ್ರತಿಯೊಬ್ಬನಿಗೂ ಒಂದೊಂದು ಎಕ್ಸ್ಟೆನ್ಶನ್ ನೀಡಲಾಗಿತ್ತು. ೯.X ಶ್ರೇಣಿಯ ಉದ್ಯೋಗಿಗಳಿಗೆ ಸೇಪೆರೆಟ್ ಕಾಬಿನ್ಗಳು, ಅಂತೂ ಮುರುಗುನ್ ಮಾತಿನಂತೆ ಈಗ ಪುಣೆ ಆಫೀಸ್ ಫುಲ್ಲಿ ಫ್ಲೆಜ್ಡ್ ಆಫೀಸ್ ಆಗಿತ್ತು .
ಮೂರು ಜನರ ಮೊಡ್ಯುಲ್ ಒಂದು ಕ್ಯುಬಿಕಲ್ ನಲ್ಲಿ ಶಿಫ್ಟ್ ಗೊಂಡಿದ್ದೆವು, ಮೂರು ಮೂಲೆಯಲ್ಲಿ ಮೂವರು ಕುಳಿತಿದ್ದೆವು ನಾಲ್ಕನೇ ಮೂಲೆ ಬಿಲ್ಡಿಂಗ್ ನ ಪಿಲ್ಲರ್ ಆಕ್ರಮಿಸಿಕ್ಕೊಂಡಿತ್ತು, ಇದರಿಂದ ನಮಗೆ ಎಲ್ಲ ವಿಷಯದಲ್ಲಿ ಸ್ವಾತಂತ್ರ್ಯ ಸಿಕ್ಕಂತಾಯಿತು.ಸಾದಾ ಕಬ್ಬಿಣದ ಚೇರ್ ನಲ್ಲಿ ಕುಳಿತಿದ್ದ ದೇಹ ಈಗ ಗಾಲಿಕುರ್ಚಿಯಲ್ಲಿ ಕುಳಿತು ಗಿರಗಿರ ತಿರುಗುತಿತ್ತು.
ಇಲೆಕ್ಟ್ರೋನಿಕ್ಸ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ ಅವಿನಾಶ್ ಗೆ ಜೀವನ್ ಕಳಿಸಿದ ಡಾಕ್ಯುಮೆಂಟ್ ಅರಗಿಸಿಕೊಳ್ಳುವುದು ಕಬ್ಬಿಣದ ಕಡಲೆಯೇ ಆಗಿತ್ತು, ಮಾಡಿದ ಕೆಲಸವನ್ನು ಟೆಸ್ಟಿಂಗ್ ಗೋಸ್ಕರ ಇವನಲ್ಲಿಗೆ ಕಳುಹಿಸಿ ಟೆಸ್ಟ್ ಮಾಡಲು ಹೇಳಿದರೆ ಏನೂ ಗೊತ್ತಿಲ್ಲದವರಂತೆ ನೂರೊಂದು ಪ್ರಶ್ನೆ ಶುರುಮಾಡುತಿದ್ದ ಇಲ್ಲ ನಿರ್ಲಿಪ್ತ ಮೌನದಲ್ಲಿ ಮುಳುಗಿರುತಿದ್ದ. ಯಾವುದೇ ಅಪ್ಡೇಟ್ ಬಾರದಿದ್ದಾಗ ಒಂದು ಬಾರಿ ಪಿಂಗ್ ಮಾಡಿ ಅವನನ್ನು ಎಬ್ಬಿಸಬೇಕಿತ್ತು.ಮತ್ತೆ ಪ್ರಶ್ನೆಗಳ ಸಾಲುಗಳು ತೇಲಿ ಬರುತಿದ್ದವು. ಒಂದುವಾರದಲ್ಲಿ ಪಿಕ್ಕಪ್ ಮಾಡಿದ ನನಗೆ ಇವನಲ್ಲಿನ ಪ್ರಗತಿ ಕಂಡು ಮರುಗ ಹುಟ್ಟುತ್ತಿತ್ತು. ಇಬ್ಬರೂ ಮೂವರ ಕೆಲಸ ಮುಗಿಸಿ ಅವನಿಗೆ ಪ್ರತಿ ಸಿನಾರಿಯೋ ಅರ್ಥ ಮಾಡಿಸುವಲ್ಲಿ ರಾತ್ರಿಯ ೧೨ ಸಮೀಪಿಸುತ್ತಿತ್ತು.
ಪ್ರೀತಿ ಟ್ರೇನಿಂಗ ಮುಗಿದಾಗಿಂದ ಈ ಆಫೀಸ್ ನ ಇನ್ನೊಂದು ಮೂಲೆಯಲ್ಲಿ ಕುಳಿತಿರುತಿದ್ದಳು, ತನ್ನ ಬಾಚ್ ನ ಎಲ್ಲರೊಂದಿಗೆ ಬೇರೆತಿರುತಿದ್ದಳು ಆದರೆ ಅವಳಲ್ಲಿ ಹಿಂದಿನ ಲವಲವಿಕೆ ಇದ್ದಿರಲಿಲ್ಲ. ಅದರ ಕಾರಣ ತಿಳಿಯುವ ಮನಸ್ಸಾದರೂ ಕೇಳಲು ಧೈರ್ಯ ಬರಲಿಲ್ಲ, ವಿವೇಕ್ ಮತ್ತು ಅವಳ ನಡುವಲ್ಲಿ ಬಿರುಕುಂಟಾಗಿತ್ತು, ಇಬ್ಬರ ನಡುವಿನ ಪ್ರೇಮರಸ ಕಣ್ಣೀರಾಗಿ ಪಸರುತ್ತಿತ್ತು.ಕೆಲವೊಮ್ಮೆ ಅವಳು ನನಗೆ ಹತ್ತಿರವಾಗಿ ಮಾತನಾಡುತಿದ್ದಳು, ಲಾಸ್ಟ್ ಸೆಂ ಬಳಿಕದ ಇಬ್ಬರ ನಡುವಿನ ಗಾಡತೆ ಇನ್ನೂ ಗಟ್ಟಿಗೋಳ್ಳುತಿತ್ತು. ಅವಳಿಗೂ ತಿಳಿದಿತ್ತು ನಾನು ಆಕೃತಿಗೆ ಮೀಸಲಿದ್ದ ನೈವಿದ್ಯ ಅವಳಿಗೆ ನಾನು ಬರಿಯ ಗೆಳೆಯ ಎಂದು; ಆಕೃತಿ ಇರುವಾಗ ನನ್ನಲ್ಲಿ ಹೆಚ್ಚು ಮಾತನ್ನಾಡುತ್ತಿರಲಿಲ್ಲ.
ಅವಿನಾಶ್ ಗೆ ಯಾವುದೋ ಕ್ಲಾಸ್ ಬಗ್ಗೆ ಹೇಳಿ ಕೊಡುತಿದ್ದಂತೆ ಮೂರರ ನಡುವೆ ನಾಲ್ಕನೇ ವ್ಯಕ್ತಿ ಸುಳಿದಂತೆ ಅನುಭವವಾಯಿತು. ತಿರುಗಿ ನೋಡಲು ಪ್ರೀತಿ ಕ್ಯುಬಿಕಲ್ ನಲ್ಲಿದ್ದಳು.ಅವಳಲ್ಲಿ 'ಒಂದು ನಿಮಿಷ' ಎನ್ನುತ್ತಾ, ಅವಿನಾಶ್ ಗೆ ಇನ್ನೊಮ್ಮೆ ಆ ಕ್ಲಾಸ್ ಮೇಲೆ ಕೇಸ್ ಅನಲೈಸ್ ಮಾಡಲು ತಿಳಿಸಿದೆ. ನನ್ನ ಸಿಸ್ಟಮ್ ಗೆ ಬಂದು ಲೋಕ್ ಮಾಡಿ ನನ್ನ ಚೇರ್ ನಿಂದ ಮೇಲೆದ್ದೆ.
"ಬಾ ಪ್ರೀತಿ ಹೊರ ಹೋಗೋಣ" ಎಂದು ಕ್ಯುಬಿಕಲ್ ನಿಂದ ಹೊರ ನಡೆದೆವು.ಹೊರಗಿನ ಬಾಲ್ಕನಿಗೆ ತಲುಪಿದೆವು. ನಾನು "ಅ ಕಪ್ ಆಫ್ ಕಾಫಿ ..?"
"ನನಗೆ ಬೇಡ, ಆದ್ರೆ ನೀನು ಕೆಳ್ತಿದ್ದಿಯಲ್ಲ ಪರವಾಗಿಲ್ಲ ಒನ್ ಬೈ ಟು ಮಾಡೋಣ" ಅಂದಳು ಪ್ರೀತಿ. ಮಾತಿನಲ್ಲಿ ಯಾವುದೇ ಉತ್ಸುಕತೆ ಇರಲಿಲ್ಲ.
ಒಂದು ಕಪ್ಪನ್ನು ಎರಡಕ್ಕೆ ಇಳಿಸಿ ಎರಡು ಮೂರು ಬಿಸ್ಕೆಟ್ ನೊಂದಿಗೆ ಅವಳಿರುವಲ್ಲಿಗೆ ಬಂದೆ.
ಬಾಲ್ಕನಿಯ ಗ್ರಿಲ್ಗಳಿಂದ ಕೆಳಗಿನ ಪಾರ್ಕಿಂಗ್ ಲೋಟ್ ನಲ್ಲಿ ನಿಂತಿದ್ದ ಬೈಕ್ ಲೈನ್ ಗಳನ್ನು ನೋಡುತಿದ್ದ ಅವಳಲ್ಲಿ "ತಕೋ .." ಎಂದು ಕಾಫಿ ಕಪ್ ಅವಳ ಕೈಗಿಟ್ಟೆ. ಮೊದಲ ಹನಿಯನ್ನು ಗುಟುಕಿಸಿ "ತೂ ! ಸಕ್ಕರೇನೆ ಬಿದ್ದಿಲ್ಲ ಸಪ್ಪೆಸಪ್ಪೆ ಇದೆ" ಅಂದಳು.
"ಹೌದು, ಸಪ್ಪೆ ಇದೆ, ಕಾಫಿ ನೂ ನಿನ್ನ ಮಾತುಗಳೂ..."
ಮಾತಿನ ಗೂಡಾರ್ತ ಅರ್ತು ಅವಳು ಮೌನ್ದಲ್ಲಿದ್ದಳು ಕೆಲವು ಕ್ಷಣಗಳವರೆಗೆ; ನಾನು ಅವಳಲ್ಲಿ "ಮಂಗಾ ಏನಾಯ್ತೆ ನಿನ್ನ ಕೋತಿ ಚೇಷ್ಟೆಗೆ...? ಎಲ್ಲಿ ಹೋದಳು ಆ ಕುಚೇಷ್ಟೆ ಆಡುವ ಪ್ರೀತಿ...?"
"ಮಂಗಾ ನೀನೋ, ಗೂಬೆ ನಾನು" ಎಂದು ಒಂದುವರ್ಷ ಹಿಂದಿನ ಕಳ್ಳ ನಗೆ ಬೀರಿದಳು.
"ಹೌದಲ್ಲ ನೀನು ಮಂಗಾ ನಾನು ಗೂಬೆ !!" ಎಂದು ಅವಳನ್ನು ಪ್ರತಿಸ್ಪಂದಿಸಿದೆ.
"ಎಷ್ಟು ಚೆನ್ನಾಗಿತ್ತು ಆಲ್ವಾ ನಮ್ಮಿಬ್ಬ್ಬರ ನಾಮಕರಣದ ಆ ಸಂಜೆ, ಆ ಹಸಿರು, ಆ ಗದ್ದೆ , ನಡುವಲ್ಲಿನ ಮಠ !!! ಮತ್ತೆಂದು ಸಿಗಲಾರದ ಸಂಜೆ"
"ಹಮ್ , ಅದಿರ್ಲಿ ಏನಮ್ಮ ಈಗೀಗ ಪ್ರತಿ ಮಾತಲ್ಲಿ ಸೆಂಟಿ ಅಗ್ತಿದ್ದಿಯಾ ..?"
"ಏನೂ ವೈಭು, ಜೀವನ ತುಂಬಾ ಕಲ್ಸಿ ಬಿಡ್ತು, ಜೊತೆಗೆ ಅಳ್ಸಿ ಬಿಡ್ತು"
"ಪ್ರೀತಿ ಏನಾಯ್ತು ಹೇಳು ಸರಿಯಾಗಿ..ಎಲ್ಲ ಗೊಜಲಾಗಿದೆ"
"ಏನಂತ ಹೇಳ್ಲಿ , ಇಲ್ಲಿ ನನ್ನ ಗೋಜಲನ್ನು ಬಿಡಿಸುವವರು ಯಾರು ಇಲ್ಲಾ, ಮನಸ್ಸು ಬಿಟ್ಟು ಯಾರೊಡನೆ ಹಂಚಬೇಕು ಅನಿಸುತ್ತದೆ"
"ನಾನಿದ್ದೇನಲ್ಲ ಹೇಳೋ ರಾಜ" ಆಕ್ರುತಿಯನು ಮುದ್ದಿಸಿ ಮುದ್ದಿಸಿ 'ರಾಜ' ನನ್ನ ನಾಲಿಗೆಯಲ್ಲಿ ಕುಳಿತಿತ್ತು, ಈಗ ಪ್ರೀತಿ ಜೊತೆಗಿದ್ದಾಗ ಅದೇ ಹೊರಬಂತು.
"'ರಾಜಾ' ಬೇಡ ವೈಭು ಆ ಹೆಸರು, ನಿಮ್ಮಿಬ್ಬರ ನಡುವೆ ನಾನು ಬರಲಾರೆ,ಕೈಗೆ ಸಿಕ್ಕ ಸ್ವರ್ಣಾವಕಾಶ ನಾನಾಗಿಯೇ ತಳ್ಳಿದ್ದೆ , ಅದಕ್ಕೆ ವ್ಯತೆ ಪಡುತಿದ್ದೇನೆ"
"ನೋಡು ನೀನು ಮತ್ತೆ ಗೋಜಲು ಮಾಡುತಿದ್ದಿಯ, ನಿನ್ನ ಮನಸಲ್ಲಿ ಏನಿದೆ ಎಂದು ಹೇಳು"
"ವರ್ಷದ ಹಿಂದೆ ಕೇಳಿದ ಪ್ರಶ್ನೆಯನ್ನು ಇವತ್ತು ಮತ್ತೆ ಕೆಳುತಿದ್ದಿಯಾ, ಅವತ್ತು ನೀನು ಬಯಸಿದ ಉತ್ತರ ಇವತ್ತು ನನಗೆ ಹೇಳುವಾಸೆ, ಆದರೆ ಹೇಳಲಾಗದು"
"ಹೇ ಪ್ರೀತಿ... ಏನ್ ಹೇಳ್ತಾ ಇದ್ದೀಯ"
"ಹೌದು ವೈಭು, ನನಗೊಬ್ಬ ಗೆಳೆಯ ಬೇಕು ಮನಸ್ಸಿನ ವೇದನೆ ಹಂಚಿಕ್ಕೊಳ್ಳಲು, ಅವ ನೀನೆ ಏಕೆ ಆಗಬಾರದು...?"
"ಗೆಳೆಯ ನಾಗಿ ನನ್ನ ಒಪ್ಪಿಗೆ ಇದೆ, ಆದ್ರೆ ..."
"ಗೊತ್ತೋ , ನೀನು ಆಕೃತಿಯ ಸೊತ್ತು ಹೇಳಿ"
"ಮತ್ತೆ ...?"
"ಅದಕ್ಕಾಗಿಯೇ ನಿನ್ನಲ್ಲಿ ನಾನು ಈ ವರೆಗೆ ನನ್ನ ನಿವೇದನೆ ಇಟ್ಟಿರಲಿಲ್ಲ, ಆಕೃತಿ ರಜೆಯಲ್ಲಿರುವುದನ್ನು ಗಮನಿಸಿದೆ ಅದಕ್ಕೆ ನಿನ್ನ ಬಳಿಗೆ ಬಂದೆ, ಅವಳಿದ್ದಾಗ ನೀನು ನನ್ನಲ್ಲಿ ಒಂದು ಅಕ್ಷರವೂ ಮಾತನಾಡುವುದಿಲ್ಲ, ನಿನ್ನಲ್ಲಿ ನನ್ನ ಬಿನ್ನಹ ಹೇಳದೆ ನನಗೆ ಉಳಿವಿಲ್ಲ"
"ಪ್ರೀತಿ ಏತಕ್ಕಾಗಿ ಇಷ್ಟು ವ್ಯತೆ ಪಡುತಿದ್ದಿಯಾ..? ನಿನಗೆ ಇನ್ನೊಂದು ಜೀವ ಕಾಯುತ್ತಿದೆ, ಅದು ಅಲ್ಲಿ ಸಾಯುತ್ತಿದೆ"
"ಯು ಮೀನ್ ವಿವೇಕ್ ..?"
"ಮತ್ಯಾರು ..? ಅವ ನಿನ್ನ ಮೇಲೆ ಜೀವಾನೇ ಇಟ್ಕೊಂಡಿದ್ದಾನೆ.."
"ಎಲ್ಲ ನಿನ್ನ ಭ್ರಮೆ, ಆ ಜೀವಕ್ಕೆ ನನ್ನ ಬಗ್ಗೆ ಕಾಳಜೀನೆ ಇಲ್ಲ"
"ಇಲ್ಲ ಪ್ರೀತಿ, ಹಿ ಇಸ್ ಮಾಡ್ಲಿ ಲವ್ವಿಂಗ್ ಯು"
"ಲವ್ವು ಇಲ್ಲ ಏನೂ ಇಲ್ಲ, ಅವನ ಮಾತಿಗೆ ಮರುಳಾಗಿದ್ದೆ ಅಷ್ಟೇ, ಕೊಲ್ಲೆಜ್ ದಿನದಲ್ಲಿ ಖರ್ಚಿಗೆ ಮತ್ತು ತೋರಿಸಿಕ್ಕೊಳ್ಳಲು ಒಬ್ಬ ಸಂಗಾತಿಯ ಅಗತ್ಯವಿತ್ತು, ನನ್ನ ಬೆನ್ನು ಬಿದ್ದ, ನಾನು ಅವನ ಹಳ್ಳಕ್ಕೆ ಬಿದ್ದೆ, ಹದಿಹರೆಯದ ಅಮಲಿನಲ್ಲಿ ತೇಲುತಿದ್ದ ನನಗೆ ಅವನು ತೋರಿಸಿದ ಲೋಕ ಸುಂದರವಾಗಿ ಕಾಣುತಿತ್ತು, ದಿನ ಕಳೆದಂತೆ ಬಳಿದ ಬಣ್ಣ ರಂಗು ಕಳಕೊಳ್ಳುತ್ತಾ ಹೋಯಿತು.ನಂತರ ಉಳಿದದ್ದು ಅಲ್ಲಿ ಬರಿ ಬಿಳಿಯ ಬಣ್ಣ, ಏಳು ಬಣ್ಣವನ್ನು ತನ್ನಲ್ಲಿ ಅಡಗಿಸಿಟ್ಟ ಬಿಳಿಯ ಬಣ್ಣ !!"
"ಹೇ ಪ್ರೀತಿ ಹಾಗಿಲ್ಲ ಅವನು ನಿನ್ನ ಇನ್ನೂ ಪ್ರೀತಿಸ್ತಾ ಇದ್ದಾನೆ"
"ಅಂದ್ರೆ ಅವನು ನಿನ್ನ ಹತ್ರ ಹೇಳಿದ್ನಾ ಇನ್ನು ಅವನು ನನ್ನ ಧ್ಯಾನ ಮಾಡ್ತಿದ್ದಾನೆ ಹೇಳಿ"
ಒಮ್ಮೆ ಹುಟ್ಟುಹಬ್ಬದ ಸರ್ಪ್ರೈಸ್ ಅವನ ಕೊಡುಗೆ ಎಂದು ಹೇಳೋಣ ಅಂದುಕ್ಕೊಂಡೆ, ನಂತರ ಅವನ ಜೊತೆ ನಾನು ಕಾಂಟಾಕ್ಟ್ ನಲ್ಲಿದ್ದೇನೆ ಎಂದು ತಿಳಿದು ಪ್ರೀತಿ ಎಲ್ಲಿ ನಮ್ಮಿಬ್ಬರ ನಡುವಿನ ಗೆಳೆತನಕ್ಕೆ ತೆರೆ ಎಳೆದು, ಕೊನೆಗೆ ತನ್ನ ಮನಸ್ಸಿನ ಭಾವನೆ ಬೇರೆಯವರೊಡನೆ ಬಿಚ್ಚಿಡಲಾಗದೆ ಚಡಪಡಿಸುವುದನ್ನು ಊಹಿಸಿಕೊಳ್ಳಲಾರದೆ ಮೌನಕ್ಕೆ ಶರಣಾದೆ.
ಅವಳು ಮುಂದುವರಿಸಿದಳು " ಮೊದಲಿಗಿದ್ದ ಪ್ರೀತಿ ದಿನ ಕಳೆದಂತೆ ಕಮ್ಮಿ ಯಾಗುತ್ತ ಹೋಯಿತು, ಆ ಕಾಲ್ ಸೆಂಟರ್ ನಲ್ಲಿ ಕೆಲಸಕ್ಕೆ ಸೇರುವ ವರೆಗೆ ನಮ್ಮಿಬ್ಬರ ಸ್ನೇಹ ಸರಿಯಾಗಿಯೇ ಇತ್ತು, ನಂತರ ಅವನಿಗೆ ಕೆಲಸ ಸಿಕ್ಕದ ಕೋಪ, ನಾನು ಸಂಪಾದಿಸುತ್ತೇನೆ ಎನ್ನುವ ಜಂಬ ಸಂಪಾದಿಸಿದ್ದೇನೆ ಅವನನ್ನು ನೆಗ್ಲೆಕ್ಟ್ ಮಾಡ್ತೇನೆ ಎಂದು ದೂರಲು ಶುರು ಮಾಡಿದ, ನೀನೆ ಹೇಳು ವೈಭು ನೈಟ್ ಶಿಫ್ಟ್ ನಲ್ಲಿ ನಾನು ಕಾಲ್ ಅಟೆಂಡ್ ಮಾಡುವ ಹೊತ್ತಿಗೆ ಇವ ಕರೆ ಮಾಡಿದರೆ ಇವನಿಗೆ ಉತ್ತರ ಕೊಡುವುದಾ, ಸಂಬಳ ಕೊಡುತಿದ್ದ ಆ ಹೆಲ್ಪ್ ಲೈನ್ ಗೆ ಉತ್ತರ ಕೊಡುವುದು...?"
ಅವಳ ಪ್ರಶ್ನೆಗೆ ಉತ್ತರಿಸದಾದೆನು ಅವಳು ಮುಂದುವರಿಸಿದಳು "... ಹಗಲು ಕರೆ ಮಾಡಿದಾಗ ನಾನು ಆ ಕಂಪೆನಿಗೆ ಹೋಗುತ್ತಿದ್ದೇನೆ ಇಲ್ಲಿ ಇಂಟರ್ವ್ಯೂ ಇದೆ ಅಲ್ಲಿ ಜಾಬ್ ಫೇರ್ ಇದೆ ಎಂದು ಸಬೂಬು ಹೇಳ್ತಿದ್ದ, ಮಲಗಿರುವಾಗ ಕರೆ ಮಾಡ್ತಿದ್ದ, ಹಗಲಲ್ಲಿ ಇವನ ಕಿರಿಕಿರಿ ರಾತ್ರಿ ನಿದ್ದೆ ಬಿಟ್ಟ ದೇಹ ಮನಸ್ಸಿಗೆ ಸಾಂತ್ವನ ನೀಡುವುದು ಬಿಟ್ಟು ತನ್ನ ಚುಚ್ಚು ಮಾತಿಂದಲೇ ತಿವಿಯಲು ಶುರು ಮಾಡಿದ, ಅದಕ್ಕಾಗಿಯೇ ನಾನು ಅವನಿಂದ ದೂರ ಇರಲು ಬಯಸಿದ್ದು, ಸದ್ಯಕ್ಕೆ ಡ್ರೀಮ್ ಟೆಕ್ ನನ್ನನ್ನು ಇಲ್ಲಿ ಎಳೆದು ತಂದಿತು, ಇಲ್ಲದಿದ್ದರೆ ಇಷ್ಟು ಹೊತ್ತಿಗೆ ನಾನು ಎಲ್ಲಿರುತ್ತಿದ್ದೆನೋ, ತಿಳಿದಿಲ್ಲ. ಪ್ರೀತಿ ಅಂತೆ ಪ್ರೀತಿ .. ಏನು ಇಲ್ಲ ... ಬರೀ ಆಕರ್ಷಣೆ, ಆಕರ್ಷಣೆ ನಿಂತಾಗ ಬರಿ ಮೌನ !!" ಎನ್ನುತ್ತಾ ಕಣ್ಣಲ್ಲಿ ಇಳಿಯುತಿದ್ದ ಕಂಬನಿ ಒರಸಿದಳು.
ಹೆಂಡತಿ/ ಗರ್ಲ್ ಫ್ರೆಂಡ್ ದುಡಿಯ ಬೇಕು ಎನ್ನುವುದು ಆದುನಿಕ ಯುವಕರ ವಾದ, ಅದೇ ತನ್ನ ಜೊತೆಗಾರ್ತಿ ತನಗಿಂತ ಹೆಚ್ಚು ಸಂಪಾದಿಸಿದರೆ ಈರ್ಷೆ ಪಡುವವರೂ ಅವರೇ !!! ಹೆಣ್ಣು ಗಂಡಿನಷ್ಟೇ ಸಭಲಳು ಅನ್ನುತ್ತಾರೆ ವಿನಃ ಗಂಡಿಗಿಂತ ಶಕ್ತ ಅನ್ನುವ ವಾದ ಯಾರೂ ಮಾಡರು !!!
"ನಿನ್ನ ಪ್ರೊಪೋಸಲ್ ಬಂದಾಗ ಧ್ವನ್ದಲ್ಲಿದ್ದೆ ನಾನು, ಅವನ ಹಾವ ಭಾವಕ್ಕೆ ಮರುಳಾಗಿ ಅವನನ್ನು ಒಪ್ಪಿದೆ, ನಿನ್ನನ್ನು ದೂಡಿದೆ, ಆದಿನ ನಿನ್ನನ್ನೇ ಒಪ್ಪಿದರೆ ಇವತ್ತು ಈ ರೀತಿ ಕದ್ದು ಕಂಬನಿ ಹರಿಸುವ ಅಗತ್ಯ ವಿರಲಿಲ್ಲ, ಐ ಲವ್ ಯು ವೈಭು" ಎನ್ನುತ್ತಾ ನನ್ನ ಕೈ ಹಿಡಿದಳು.ಎಡಗೈಯನ್ನು ಅವಳ ಕೈ ಮೇಲೆ ಇಟ್ಟು ಎರಡು ಕೈಯ ನಡುವೆ ಅವಳ ಕೈಯನ್ನು ಭಂದಿಸಿದೆ. ಸಲ್ಪದರಲ್ಲೇ ಅವಳು ಎಚ್ಚೆತ್ತು "ಬೇಡ ವೈಭು, ಆಕೃತಿ ..." ಎಂದು ತನ್ನ ಕೈಯನ್ನು ಬಿಡಿಸಿಕ್ಕೊಂಡಳು.
"ಪ್ರೀತಿ, ನನಗೂ ನೀನಿಷ್ಟ, ಆಕೃತಿ ಸಿಕ್ಕಿ ನಿನ್ನ ನೆನಪನು ಗುಡಿಸಿ ಒರೆಸಿ ತನ್ನ ರಾಜ್ಯ ಸ್ಥಾಪಿಸಿದಳು, ಈಗ ನಾನವಳಿಗೆ ರಾಜನಾಗಿರಬೇಕು, ಕೆಳೆದ ೪ ತಿಂಗಳಲ್ಲಿ ಇಬ್ಬರ ಅನ್ಯೋನ್ಯತೆ ಗಾಡವಾಗುತ್ತ ಹೋಗಿದೆ, ನಾವಿಬ್ಬರು ಫ್ರೆಂಡ್ ಆಗಿ ಇರೋಣ, ನಿನ್ನ ಮನದ ಭಾವನೆ ನನ್ನಲ್ಲಿ ಹಂಚಲು ನಿನಗೆ ಸಧಾ ಸ್ವಾಗತ ವಿದೆ, ಆದರೆ ನನ್ನ ಪ್ರೀತಿ ಹಂಚು ಹೇಳಿ ಒತ್ತಾಯ ಪಡಿಸದಿರು" ಅಂದೆ.
ಅವಳು ಸುಮ್ಮನಿದ್ದಳು. ನಾನು "ನಿನ್ನ ಮನಸ್ಸಿನ ಸರೋವರದಲ್ಲಿ ತೇಲಾಡಲು ಯಾರಾದರು ನನಗಿಂತ ಒಳ್ಳೆಯ ಗೆಳೆಯ ನಿನಗೆ ಸಿಕ್ಕೆ ಸಿಕ್ಕುತ್ತಾನೆ, ಅಲ್ಲಿ ವರೆಗೆ ನಾನು ನಿನ್ನ ಜೋತೆಗಿರ್ತೇನೆ" ಅಂದೆ.
ಕಳಕ್ಕೊಂಡ ಕಣ್ಣ ಕಾಂತಿ ಮತ್ತೆ ಮೂಡಿತು. ಅವಳು "ಇನ್ನೊಂದು ಕಪ್ ಕಾಫಿ ..?" ಅಂದಳು.
"ಶೂರ್" ಎನ್ನುವಷ್ಟರಲ್ಲಿ 'ಒರುಮಾಲೈ' ರಿಂಗಣಿಸಿತು.
ಕರೆ ಎತ್ತುತಿದ್ದಂತೆ "ಹೇ ಡಂಬು, ನನ್ನ ಮಿಸ್ ಮಾಡ್ಕೋತಾ ಇದ್ದೀಯ...?" ಅಂದಳು ಆಕೃತಿ.
"ಹೌದು, ಯಾವಾಗ ತಲುಪಿದಿ ಚೆನ್ನೈ..?"
"ಜಸ್ಟ್ ಈಗ, ಇನ್ನೂ ಸ್ಟೇಶನ್ ನಲ್ಲಿ ಇದ್ದೇನೆ, ಮನೆಯಿಂದ ಕಾರ್ ಕಳಿಸ್ತಾರೆ ಅಂದ್ರು ಅದಕ್ಕೆ ವೈಟ್ ಮಾಡ್ತಾ ಇದ್ದೇನೆ, ನಡುವಲ್ಲಿ ಅ ಕಪ್ ಆಫ್ ಕಾಫಿ ತಕ್ಕೊಂಡೆ ನಿನ್ನ ನೆನಪಾಯ್ತು, ಕಾಲ್ ಮಾಡ್ದೆ ..."
"ಇಲ್ಲೂ ಅ ಕಪ್ ಆಫ್ ಕಾಫಿ ನೇ.."ಅಂದೆ ಪ್ರೀತಿ ಕೈಯಲ್ಲಿತ್ತ ಕಪ್ ನ ಸಿಪ್ ಹೀರುತ್ತಾ.
ಅವಳು "ಯಾರ್ ಜೊತೆ ...? ಪ್ರೀತಿ...?" ಎಂದು ಸಂಶಯದಿಂದಲೇ ಕೇಳಿದಳು.
ನಾನು "ಹಾ.... ಅ ಕಪ್ ಆಫ್ ಕಾಫಿ, ಒಂದು ಸಿಪ್ ನನ್ನ ಜೀವನ ದೊಂದಿಗೆ , ಮತ್ತೊಂದು ನಿನ್ನ ಪ್ರೀತಿ ಯೊಂದಿಗೆ" ಅಂದೆ ನಗುತ್ತಾ.
ಅಲ್ಲಿ ಅವಳು "ಐ ಲವ್ ಯು ಡಂಬು, ಮಿಸ್ಸಿಂಗ್ ಯು ಬಾಡ್ಲಿ... ಮನೆಯಿಂದ ಕಾಲ್ಮಡ್ಲಿಕ್ಕೆ ಆಗಲ್ಲ, ಬರಿ ಎಸ್ಸೇಮೆಸ್ಸಿಂಗ್" ಅಂದ್ಳು.
"ಮಿಸ್ ಯು ಟೂ ರಾಜ !! ಲವ್ ಯು" ಎನ್ನುವಷ್ಟರಲ್ಲಿ ಅವಳು "ಪಪ್ಪಾ ಬಂದ್ರು , ಬಾಯ್ ಟೆಕ್ ಕೇರ್ ಬಿ ಅವೇರ್ ಆಫ್ ಪ್ರೀತಿ" ಎನ್ನುತ್ತಾ ಕರೆ ಕಟ್ ಮಾಡಿದಳು. ಅವಳು ಚೆನ್ನೈ ತಲುಪಿದ್ದರೂ ಮನಸ್ಸು ಪುನೆಯಲ್ಲಿತ್ತು, ತನ್ನ ಕೆಲಸದಲ್ಲಿ ಮುಳುಗಿದ್ದರೂ ನನ್ನ ಮನಸನ್ನು ಪ್ರೀತಿಯ ಪ್ರೀತಿಯಿಂದ ಕಾವಲು ಕಾಯುತಿದ್ದಳು.
ಮುಂದಿನ ಸಿಪ್
Comments
ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೨
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೨ by mnupadhya
ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೨
In reply to ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೨ by mnupadhya
ಉ: ಅ ಕಪ್ ಓಫ್ ಕಾಫಿ ... ಸಿಪ್ - ೨೨