ಅಳುವುದಾದರೆ ಅತ್ತು ಬಿಡು
ಕವನ
ಅಳುವುದಾದರೆ ಅತ್ತು ಬಿಡು
ಮನದಲ್ಲಿ ನೋವುಗಳ ಬಚ್ಚಿಡಬೇಡ
ಮನಸ್ಸು ಆಕಾಶದಂತೆ
ಕರಿಮೋಡ ಭಾರವಾದ ನೋವುಗಳಂತೆ
ಆಕಾಶವ ಕರಿಮೋಡ ಬಳಸಿದರೆ
ಆಕಾಶವೂ ಅಳುವುದು ಮಳೆಯ ಸುರಿಸಿ
ಮನಸ್ಸು ಆಕಾಶದಂತೆ
ತಿಳಿಯಾಗಿಡು ಮನದ ಭಾರವ ಹೊರಚೆಲ್ಲಿ
ಜಾಗಕೊಡು ಮುಂದೆ ಬರುವ ನೋವುಗಳಿಗೆ
ಮನವ ತಿಳಿಯಾಗಿಟ್ಟು ಸಹಕರಿಸಿ
ಮನಸ್ಸು ಆಕಾಶದಂತೆ
ಆಕಾಶಕ್ಕೆ ಹಾರಬೇಕು ಮನದ ರೆಕ್ಕೆ ಬಿಚ್ಚಿ
ಮನವು ತೇಲಬೇಕು ನೋವುಗಳ ಬದಿಗಿಟ್ಟು
ಮನವು ಭಾರವಾದರೆ ಹಾರುವುದಾದರೂ ಹೇಗೆ? ಯೋಚಿಸು
ಅಳುವುದಾದರೆ ಅತ್ತು ಬಿಡು
ಮಳೆಯೊಡನೆ ಯಾರಿಗೂ ಅನುಮಾನ ಬರುವುದಿಲ್ಲ
ನಿನ್ನ ನೋವು,ಮೋಡ ಎರಡು ಒಂದಾಗಿ ಕಡಲ ಸೇರಲಿ
ಮತ್ತೆ ಮೋಡ,ನೋವು ಕಟ್ಟಬೇಕಲ್ಲ
Comments
ಉ: ಅಳುದಾದರೆ ಅತ್ತು ಬಿಡು
In reply to ಉ: ಅಳುದಾದರೆ ಅತ್ತು ಬಿಡು by mmshaik
ಉ: ಅಳುದಾದರೆ ಅತ್ತು ಬಿಡು
ಉ: ಅಳುದಾದರೆ ಅತ್ತು ಬಿಡು
In reply to ಉ: ಅಳುದಾದರೆ ಅತ್ತು ಬಿಡು by H A Patil
ಉ: ಅಳುದಾದರೆ ಅತ್ತು ಬಿಡು