ಮರಳು ಗಾಡು ( ಕವನ )
ಕವನ
ಮರಳು ಗಾಡಲಿ ನಿಂತು ಮರೀಚಿಕೆಯ ಬೆಂಬತ್ತಿ
ಓಡುತಿರುವವನೆಂದು ನಗುವಿರೇಕೆ ?
ವ್ಯಂಗ್ಯವಾಡುವಿರೇಕೆ ? ಸಮೃದ್ಧ ಗಂಗೆಯ
ತಟದಲಿ ನೆಲೆ ನಿಂತ ನಿಮಗೇನು ಗೊತ್ತು
ಬಾಯಾರಿಕೆ ದಾಹಗಳ ಕಟು ಅನುಭವ !
ನಾ ಹುಟ್ಟಿ ಬೆಳೆದು ಆಡಿ ಕನಸಿದ್ದು
ಎಲ್ಲ ಈ ಮರಳುಗಾಡಲ್ಲೆ
ಸಾಗಿದೆ ಮರಭೂಮಿಯಲ್ಲಿ ಕಾರವಾನ
ಎಂದಾದರೊಂದು ದಿನ ಹಿಡಿಯುವೆ ಮರೀಚಿಕೆ
ತಣಿಸುವೆ ಮರಳುಗಾಡಿನ ದಾಹ
ಮುಸಿ ಮುಸಿ ನಗು ಎಕೆ ? ವ್ಯರ್ಥ ಕನಸೆಂದೆ ?
ಸಮೃದ್ಧ ನೆಲೆ ಕಂಡು ತಾಯ್ನೆಲ ತೊರೆದು
ವಲಸೆ ಹೋಗುವ ವಲಸೆ ಹಕ್ಕಿ ನಾನಲ್ಲ
ಜನನಿ ಜನ್ಮಭೂಮಿ ಸ್ವರ್ಗಕೂ ಮಿಗಿಲೆನುವ
ಈ ನೆಲದ ಅಪ್ಪಟ ಅಭಿಮಾನಿ ನಾನು
ವಿಜಯ ಲಕ್ಷ್ಮಿಯ ಒಲುಮೆ ಸಾಹಸಿಗೆ
ಕನಸುಗಾರನಿಗೆ ಸಂಕಲ್ಪಮಾಡಿ
ತಪಗೈದು ಭಗಿರಥನ ಕರೆತಂದು
ಗಂಗೆಯನು ಹರಿಸಿ ನಂದನವಾಗಿಸುವೆ
ಈ ನನ್ನ ಮರಳುಗಾಡನ್ನು
Comments
ಉ: ಮರಳು ಗಾಡು ( ಕವನ )
In reply to ಉ: ಮರಳು ಗಾಡು ( ಕವನ ) by mmshaik
ಉ: ಮರಳು ಗಾಡು ( ಕವನ )
ಉ: ಮರಳು ಗಾಡು ( ಕವನ )
In reply to ಉ: ಮರಳು ಗಾಡು ( ಕವನ ) by makara
ಉ: ಮರಳು ಗಾಡು ( ಕವನ )
In reply to ಉ: ಮರಳು ಗಾಡು ( ಕವನ ) by H A Patil
ಉ: ಮರಳು ಗಾಡು ( ಕವನ )
ಉ: ಮರಳು ಗಾಡು ( ಕವನ )
In reply to ಉ: ಮರಳು ಗಾಡು ( ಕವನ ) by Nagendra Kumar K S
ಉ: ಮರಳು ಗಾಡು ( ಕವನ )