೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ವರ್ಷ ೨೦೧೧ ಮುಗಿಯುತ್ತ ಬಂದಿತು ಅನ್ನುವುದು ಸಂಪದದಲ್ಲಿ ಕಂಡ ಮುಂಜುನಾಥರ 'ಅಸ್ತಮಿಸುತಿಹುದು ವರ್ಷವೊಂದು' ಕವನ ನೆನಪಿಸಿತು. ಇಷ್ಟು ಬೇಗ ಮುಗಿದು ಹೋಯಿತೆ ವರ್ಷ. ಪ್ರಳಯವಾಗುತ್ತದೆ ಎಂದು ದೇಶ ವಿದೇಶಿ ಭವಿಷ್ಯಕಾರರೆಲ್ಲ ನುಡಿಯುತ್ತಿರುವ ೨೦೧೨ ನೆ ವರ್ಷದ ಹೊಸ್ತಿಲಲ್ಲಿ ನಾವಾಗಲೆ ಬಂದು ನಿಂತಾಯಿತೆ ಅಂತ ಆಶ್ಚರ್ಯ. ಈ ಎಲ್ಲ ಆಗು ಹೋಗುಗಳ ನಡುವೆ ಕಳೆದು ಹೋಗುತ್ತಿರುವ ೨೦೧೧ನೆ ವರ್ಷ ಸಂಪದ ನಡೆದು ಬಂದ ದಾರಿಯನ್ನು ಒಮ್ಮೆ ನೆನಪಿಸಿ ಕೊಂಡರೆ ಎಲ್ಲ ಸಂಪದಿಗರಿಗು ಸಂತಸ ಎನಿಸಿತು. ಬನ್ನಿ ಒಂದು back track ಹೋಗಿ ಬರೋಣ. ಸಂಪದದ ಕೆಲವು ಹೆಜ್ಜೆಯ ಮೇಲೆ ನಾವು ಹೆಜ್ಜೆಯಿಟ್ಟು ನಡೆದರೆ ಅದೊಂದು ಆಟ...
೩೧ ಡಿಸೆಂಬರ ಮದ್ಯ(ಧ್ಯ) ರಾತ್ರಿಯ ನಂತರ ಸರಿಯಾಗಿ ೧೨:೧೯ ಗಂಟೆಗೆ ಎಲ್ಲರು ಬೆಳಗ್ಗೆ ಏಳುವದಕ್ಕೆ ಮುಂಚೆಯೆ ಹೊಸ ವರ್ಷದ (೨೦೧೧) ಶುಭ ಕೋರಿರುವವರು ವೆಂಕಟೇಶ್ ಕುಂಬ್ಳೆ ! . 'ಅರ್ದರಾತ್ರಿಯ' ಈ ಗಣೇಶರು ಏನು ಮಾಡುತ್ತಿದ್ದರು ಕುತೂಹಲ!!. 'ಸಾ ಗೂ ಮರ್ ನಿಂಗ್, ಹ್ಯಪ್ ಮ್ಯ್ ಯಾರ್ ನಿಮಗೆ ' ಈ ಇಂಗ್ಲೀಶ್ ನಲ್ಲಿ ಶುಭ ಹಾರೈಕೆ ಮದ್ವೇಶ್ ರವರಿಗೆ ಹೇಳಿದವರು ಅವರ ಆಫೀಸಿನ ಸ್ವೀಪರ್. ಅಂದೆ ಮೂರುವರ್ಷ ಮುಗಿಸಿದ 'ಕೆಂಡ ಸಂಪಿಗೆ' ಗೆ ಸುಪ್ರೀತರಿಂದ ಹಾರೈಕೆ. ಕಾಲದ ಕನ್ನಡಿಯಲ್ಲಿ ನಡೆದಾಡುವ ದೇವರ ದರ್ಶನ ನಾವಡರರಿಂದ. 'ಕನಸಿನ ಹುಡುಗಿ' ಅಂತ ಇರುವ ಪದ್ಯ ತೆಗೆದು ನೋಡಿದರೆ ಜಯಂತ್, ಮದುವೆ ಮುಂಚಿನ ಕವನ ಭಾವಪೂರ್ಣ. ಎಲ್ಲ ಬುರುಡೆ ಬಿಡುತ್ತಿರುವಾಗ ಹಂಸಾನಂದಿಯವರ ವಿಶೇಷ ಲೇಖನ 'ಬುರುಡೆ ಇಲ್ಲದ ವೀಣೆ'. ಆಸುರವರು 'ದೇವರ ಹುಂಡಿಗಳನ್ನೆಲ್ಲ ಬಡವರಿಗೆ ಹಂಚಿಬಿಡಿ' ಎಂಬ ಕವನ ಬರೆದಾಗ ಅನಂತ ಪದ್ಮನಾಭನ ಆಸ್ತಿಯಿನ್ನು ಪತ್ತೆಯಾಗಿರಲಿಲ್ಲ !. ನನಗೆ ಅತಿ ಖುಶಿ ಕೊಟ್ಟ ನನ್ನ ಕತೆ 'ಲೌಕಿಕ ಅಲೌಕಿಕ' ಬರೆದಿದ್ದು ಆಗ. ಸಿಡಿಲವಾಣಿಯ ವಿವೇಕಾನಂದರನ್ನು ಕುರಿತ ಹರೀಶ್ ಆತ್ರೇಯರ ಕವನ 'ಗುರುವಾಣಿ..' . ರೂಪರವರು 'ಮೂರ್ತಿ ಪೂಜೆ ಬೇಕೆ ಬೇಡವೆ' ಎಂದು ಒಂದುಸಾಲಿನ ಬರಹಕ್ಕೆ ಸಂಪದಿಗರು ಉತ್ಸಾಹಿತರಾಗಿ ಪುಟ ಪುಟ ಅಭಿಪ್ರಾಯ ಬರೆದಿದ್ದಾರೆ. ಹಾಗೆಯೆ ಸಂಕ್ರಾತಿಯ ಸಂಭ್ರಮ ಎಲ್ಲರಿಗು. ಬ್ಲಾಗ್ ಸಾಹಿತ್ಯ ಚಮತ್ಕಾರವಷ್ಟೆ ಎನ್ನುವ ಸಾಹಿತ್ಯ ವಲಯದ ಟೀಕೆಯನ್ನು ಸುಪ್ರೀತರು ಮುಂದಿಟ್ಟಾಗೆ ಅದಕ್ಕೆ ಬಂದ ಪ್ರತಿಕ್ರಿಯೆ ಹಾಗು ಪ್ರತಿದ್ವನಿಯ ಬರಹಗಳೂ ಅನೇಕ. ಹಾಗೆಯೆ ಮಕರ ಜ್ಯೋತಿ ಮಾನವ ನಿರ್ಮಿತ ಎನ್ನುವ ವಾದ ವಿವಾದ ಹಾಗೆಯೆ ಇಂಚರ ಬರೆದ 'ಪಂಚ ಕನ್ಯೆಯರ ಬಗೆಗಿನ' ಬರಹ ಸೃಷ್ಟಿಸಿದ ಸಂಚಲನ ಎಲ್ಲ ಮನ ಸೆಳೆಯುತ್ತದೆ. ನಾಡಿಗರ 'ದೆಹಲಿ ಕರ್ನಾಟಕ ಸಂಘ' ದ ಆಕರ್ಷಕ ಚಿತ್ರ ಗಮನ ಸೆಳೆಯಿತು. ನಮ್ಮ ದೇಶಕ್ಕು 'inner line permit' ಬೇಕು ಎನ್ನುವ ಮಹಂತೇಶ ಚಿಂತನೆ ಸಹ ಗಮನಿಸ ಬೇಕು. ಈ ಅರ್ದ ರಾತ್ರಿ ಗಣೇಶರ ಮನೆ ಮೇಲೆ 'ಚೀನಿ ದಾಳಿ' ಏಕೆ ನಡೆಯಿತು ಅಂತ ನೋಡಿದರೆ ಬೇರೆಯೆ ಲೇಖನ'. ಜನವರಿ ೨೪ ರಂದು ಭೀಮಸೇನ ಜೋಶಿಯವರು ಇನ್ನಿಲ್ಲ ಎಂದು ಆಸುರವರು ತಿಳಿಸಿದಾಗ , ತಿಂಗಳು ಮುಗಿಯಿತು ಅನ್ನುವಾಗಲೆ ಕಾಣಿಸಿತು. ಸೂರ್ಯಾಸ್ತ ನಂತರ ಕಾಣುವ ಶುಕ್ರನ ಬಗ್ಗೆ ವಿವರ ಅನಂತಕೄಷ್ಣರಿಂದ .
ಫೆಬ್ರುವರಿ ಚಳಿ ಮುಗಿಯುವ ಮಾಸ, ಹಾಗೆ ಅನಾದಿಯಿಂದ ಬಂದ ಪ್ರಶ್ನೆಯ ಪುನರುಚ್ಚಾರ ಹರೀಶರಿಂದ "ಹುಡುಗಿಯರೆ ನೀವೇಕೆ ಹೀಗೆ" ವಾಣಿ ಶೆಟ್ಟಿಯವರಿಂದ ಅಷ್ಟೆ ದೊಡ್ಡ ಪ್ರತಿಕ್ರಿಯೆ ಹಾಗೆ ಅನುಮಾನ 'ಪೂರ್ವಗ್ರಹ ಪೀಡಿತನೆಂದರೆ ಯಾರು" ಸಾಕಷ್ಟು ವಾಗ್ವಾದ. ಸಾಹಿತ್ಯ ಸಂಜೆಯಲ್ಲಿ 'ನನಗೆ ಸನ್ಮಾನ' ನೀವು ಬಂದರೆ ನನಗೆ 'ಸಮ್ಮಾನ' ಎನ್ನುವವರು ನಾ.ಸೋಮೇಶ್ವರರು, ಕನ್ನಡದ ನುಡಿಜಾತ್ರೆ ೪ರಂದು ಬೆಂಗಳೂರಿನಲ್ಲಿ. ರಘುರವರಿಗೆ ಕೋಪ ಜನರ , ರಾಜಕಾರಣಿಗಳು ನಿಜಮನದಿಂದ ಬಾಗವಹಿಸುತ್ತಿಲ್ಲ ಎಂದು. ಭ್ರಷ್ಟಾಚಾರದ ಅರೋಪ ಹೊತ್ತ 2-G ವೀರ ರಾಜ ಜೈಲಿಗೆ ೪ ರಂದು. ಅಮೇರಿಕದಲ್ಲಿ ಹಿಮಪಾತ ವೆಂಕಟೇಶರಿಂದ ಆಕರ್ಷಕ ಚಿತ್ರಗಳು. ಹಾಗೆಯೆ ರಾಜಕಾರಣಿ ಎಂ,ಪಿ. ಪ್ರಕಾಶ ನಿರ್ಗಮನ. 'ಪಂಪ ಭಾರತದಲ್ಲಿ ಸೂರ್ಯಾಸ್ತ' ವರ್ಷ ಪೂರ ಹರಿಯುತ್ತ ಬಂದ ಸತ್ಯನಾರಯಣರ ಕುವೆಂಪು ಪಾರಾಯಣದ ಬಾಗ. ಹಾಗೆ ಗಾದೆಗೊಂದು ಗುದ್ದು ಕೊಡುತ್ತ ನಡೆದ ಅನಿಲ್ ಕುಮಾರ್. 'ಈಜಿಪ್ಟ್ ನ ಕ್ರಾಂತಿ' ಸಂಪದಿಗ ಬರಹಗಾರರನ್ನು ಸಾಕಷ್ಟು ಕಾಡಿತು. ಮಲೆನಾಡಿನ ಅವನತಿಯ ಬಗ್ಗೆ ಪರಿಸರ ಕಾಳಜಿ ಲೇಖನ ಕೆ.ಜಿ.ಶ್ರೀಧರರಿಂದ. ಅಸುಮನಕ್ಕೆ ಮೂರರ ಸಂಭ್ರಮ ಸಂಪದಿಗರು ಹಂಚಿಕೊಂಡರು. ಸಂದರ್ಶನಗಳ ಸ್ಲೈಡ್ ಸಾಹಿತಗಳ ನೇರ ಸಂದರ್ಶನ ಸಂಪದದಲ್ಲಿ. ೨೩ ರಂದು ಸಂಪದಿಗ ಜಯಂತರ ವಿವಾಹ ಸಂಪದಿಗರ ಹಾಜರಿ.
ಮಾರ್ಚಿ ೨ ಶಿವರಾತ್ರಿ ಆ ಬಗ್ಗೆ ಸಾಕಷ್ಟು ಬರಹ ಕಾಣಿಸಿತು ಸಂಪದದಲ್ಲಿ, 'ಎಲ್ಲಕ್ಕು ಒಡೆಯನಾದರು ತಿರಿದು ತಿನ್ನುವುದು ತಪ್ಪಲಿಲ್ಲ ಶಿವನಿಗೆ' ಎಂದರು ಹಂಸಾನಂದಿ. ಹಾಗೆ ಪ್ರಶಸ್ತಿಯವರ 'ನೋಡ ಬನ್ನಿ ನಂ ಶಿವಮೊಗ್ಗ' ಹಿತನೀಡಿದ ಕವನ. ಪ್ರಸನ್ನರವರ 'ಬೇರುಗಳ ಮೂಲಕ್ಕೆ' ಸಹ ನಮ್ಮನ್ನು ಹಿಡಿದಿಡುತ್ತದೆ. 'ವಿಕಲ ಚೇತನ' ಪದದ ಬಗ್ಗೆ ಜಿಜ್ಞಾಸೆ ಪ್ರಭುರವರಿಗೆ. ಯಮನೇಕೊ ಈ ಬಬ್ಬಾವಲಿಯಲ್ಲಿ.. ಉತ್ತಮ ಚಮತ್ಕಾರಿಕ ಸಂಸ್ಕೃತ ಪದ್ಯ ನಾಗರತ್ನರು ಸಂಗ್ರಹಿಸಿದ್ದಾರೆ. ಮಾರ್ಚ ೬ ರಂದು ವಾಕ್ಪಥದ ಪ್ರಥಮ ಹೆಜ್ಜೆಯ ಗುರುತು ಗೋಪಿನಾಥರ ವರದಿ. ಮಂಜುಳ ದೇವಿಯವರ ಕಾವ್ಯಗಳಲ್ಲಿ 'ಪದಚಮತ್ಕಾರ' ದಲ್ಲಿ ವಿಷ್ಣುವಿನ ಸ್ತೋತ್ರವನ್ನು ವರ್ಣಿಸಿ ಪ್ರತಿಪದದ ಮೊದಲ ಅಕ್ಷರ ಬಿಟ್ಟರೆ ಅದು ಶಿವ ಸ್ತೋತ್ರವಾಗುವದೆಂದು ಸಂಸ್ಕೃತ ಶ್ಲೋಕವನ್ನು ತಿಳಿಸಿದ್ದಾರೆ. ಕೋಮಲ್ 'ಪುಸ್ತಕಬಿಡುಗಡೆ' ಮಾಡಿದ್ದಾರೆ ವಿಶ್ವಕನ್ನಡ ಮೇಳದಲ್ಲಿ ಅಂತ ಓದಿದರೆ ಅದೊಂದು ಹಾಸ್ಯಬರಹ. ಮಾನವ ಮಾಡುವ ತಪ್ಪು ಅವನ ಕುಲವನ್ನೆ ನಾಶಗೊಳಿಸುವುದು ಖಚಿತ ಮತ್ತೆ 'ಜಪಾನ್ ನಲ್ಲಿ ಸಂಬವಿಸಿದ ಪ್ರಕೃತಿ ವಿಕೋಪದ' ಬಗ್ಗೆ ಎಲ್ಲರ ಪರಿತಾಪ. ಸಾಲು ಸಾಲು ವರ್ಣಚಿತ್ರಗಳು ನಾಡಿಗರಿಂದ ಶಿವಗಂಗೆ, ಚಿಕ್ಕುರ ಮಲೆನಾಡ ದರ್ಶನ ಎಲ್ಲವು ಮನಸೆಳೆಯುವಂತಹುದೆ. ಸದಾನಂದರು ಮಕ್ಕಳಿಗಾಗಿ ಸದಾ ಕವನ ಬರೆಯುತ್ತಲೆ ಇದ್ದಾರೆ ವರ್ಷದುದ್ದಕ್ಕು. ಮತ್ತು ಮಾರ್ಚಿನಲ್ಲಿ ದಾಖಲಾದ ೪೩೨ ಬರಹ ವರ್ಷದಲ್ಲಿಯೆ ಹೆಚ್ಚು.
ಯುಗಾದಿಯ ಸ್ವಾಗತದ ಕವನಗಳು ಬರಹಗಳು ಏಪ್ರಿಲ್ ನ ಮೊದಲ ವಾರ ತುಂಬಿತ್ತು. ನಮ್ಮನೆಲ್ಲ ಏಪ್ರಿಲ್ ಫೂಲ್ ಮಾಡಲು ಗಣೇಶರು 'ಭಟ್ಟರಿಂದ ಹೊಸಪತ್ರಿಕೆ' ಎಂದು ಹಾಕಿದ್ದರು. ೨ ರಂದು ಪ್ರಸನ್ನ ಶಂಕರಪುರ ಹುಟ್ಟಿದದಿನ ಆಚರಣೆ .'ದೇವರನ್ನು ಅವನ ಪಾಡಿಗೆ ಬಿಡೋಣ' ಎನ್ನುತ್ತ ನಾಗರಾಜರ ವಿಚಾರಪೂರಿತ ಲೇಖನ. 'ನಾವು ಮಂಡಿ ಊರಲಾಗದು' ಎಂದು ಅಬ್ಬರಿಸುವ ಆಸುರವರ ನಡುವೆ ಎಲ್ಲರ ವಿಶ್ವಕ್ರಿಕೆಟ್ ಗೆದ್ದ ಉನ್ಮಾದ ಇವೆಲ್ಲ ಸಂಪದಿಗರಿಗಾಗಿ. 'ಹೋಗಿದ್ದು ಎಲ್ಲಿಗೆ' ಕಾಯರವರ ಮರೆಯಲಾರದ ಕವನ. ಅಣ್ಣ ಹಜಾರೆಯವರ ಭ್ರಷ್ಟಚಾರದೊಂದಿಗಿನ ಮುಖಾಮುಖಿಯ ಬಗ್ಗೆ ಆಚಾರ್ಯರು , ಹಾಲಾಡಿಯವರ ಲೇಖನಗಳು. ಅಣ್ಣ ಬಗ್ಗೆ ಹಲವು ಕವನ ಲೇಖನಗಳು. ಮತ್ತೆ ೧೨ ರಂದು ರಾಮನವಮಿಯ ಶುಭ ಹಾರೈಕೆ ಜಯಂತರಿಂದ. ಮಲೆನಾಡಿನ ಮಾಲೆ ಕಟ್ಟುವದರಲ್ಲಿ ಪ್ರವೀಣ ಶಶಿದರರಿಂದ 'ಬಕುಳ' ಎಂಬ ಪುಷ್ಪದ ಬಗ್ಗೆ ಲೇಖನ. ಹಾಗೆಯೆ 'ಮುಂಗುರಳ ಮೆರವಣಿಗೆ' ಆಸುರವರ ರಸಿಕ ಕವನ. ೧೩ರಂದು 'ಜಲಿಯನ್ ವಾಲಬಾಗ್ ' ಹತ್ಯೆಯ ನೆನಪು ಜಯಂತರಿಗೆ. ಮಂಜುನಾಥರಿಂದ ಅಫ್ಘಾನಿಸ್ಥಾನದ ವಾಸದ ನೆನಪು. ಬಾಬ ಅಂಬೇಡ್ಕರ್ ರವರ ನೆನಪು. ಕನ್ನಡ ಚಿತ್ರದಲ್ಲಿ ಡಬಿಂಗ್ ಬೇಕೆ ಬೇಡವೆ ಎನ್ನುವ ವಾಗ್ವಾದ, ರಶ್ಮಿಪೈ ರವರ 'ಎಂಡೊ ನಿಷೇದಿಸಿ' ಎಂಬ ಪವಾರರಿಗೆ ಬಹಿರಂಗ ಪತ್ರ. ಈ ಎಲ್ಲ ನಡುವೆ ೨೪ ರಂದು 'ಸತ್ಯ ಸಾಯಿ' ನಮ್ಮನ್ನೆಲ್ಲ ತೊರೆದರೆಂದು ಸತ್ಯ ಚರಣರ ವಿಷಾದ. ನಂತರ ಪುಟ್ಟಪರ್ತಿ ವಿವಾದಗಳ ಗೂಡಾಯಿತು. ಕೃ.ಸೇ. ಯವರ 'ದಿಪ್ಯಾಕ್' ಡಾಕ್ಯುಮೆಂಟರಿ ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದ ಬಗ್ಗೆ ಸುಪ್ರೀತರಿಂದ ಲೇಖನ. ವಾಣಿಯವರಿಗೆ ಹಳೆಯ 'ಮಾಯಾಬಜಾರ್ 'ಸಿನಿಮಾದ ನೆನಪು. ಶ್ರೀದರರಿಂದ ಹಾಸನದಲ್ಲಿ ನಡೆದ ವಯಲಿನ ಕಛೇರಿಯ ಬರಹ. ಅಂದ ಹಾಗೆ ಸಾಲು ಸಾಲು ಕವನ ಬರೆಯುತ್ತಿದ್ದ ಸಿದ್ದಕೀರ್ತಿ ನೀವು ಎಲ್ಲಿ ಹೋದಿರಿ.
'ಚಿನ್ನ ನಿನಗೇಕೆ ಚಿನ್ನ' ಸರಸ್ವತಿಯವರಿಂದ ಅಕ್ಷಯ ತದಿಗೆ ಕನಕ ಪುರಾಣ. ಮೇ ೨ರಂದು ಪಾಕಿನಲ್ಲಿ ಅಡಗಿದ್ದ 'ಒಸಮಾಬಿನ್ ಲಾಡನ್' ಹತನಾದ ಸುದ್ದಿ. ರಾಕ್ಷಸ ಸಂಹಾರ !! ಅಂದೆ ಸುಮಾನಾಡಿಗರಿಂದ ಚಾಮುಂಡಿಬೆಟ್ಟದ ಸುಂದರ ವರ್ಣಚಿತ್ರ.. ವಾಣಿಶೆಟ್ಟಿಯವರಿಂದ 'ಹಾವುಪುರಾಣ' . ಏಪ್ರಿಲ್ ಮೇನಲ್ಲಿ ವಿವಿದ ಶೀರ್ಷಿಕೆಗಳಲ್ಲಿ ಸಾಲು ಸಾಲು ನಗೆಬರಹಗಳು ಬಂದವು. ಆಸುರಿಂದ ಮಾತು ಮೌನದ ಬಗ್ಗೆ ಸಾಕಷ್ಟು ಕವನಗಳು. ನಂದೀಶ್ 'ಯಾವುದೀ ಚಕ್ಕುಲಿ' ಅಂತ ಕೇಳಿದ್ದಾರಲ್ಲ ಎಂದು ನೋಡಿದರೆ ಒನಕೆ ಬಂಡಿ ಎಂದು ಕರೆಯುವ ಸಪ್ತಪದಿಯ ಚಿತ್ರ. ಹಾಗೆಯೆ ೬ ರಂದು 'ಮಹಾತ್ಮ ಹಾಗು ಪ್ರೇತಾತ್ಮ' ಎಂಬ ಕವನ , ಎಲ್ಲಿಯ ಲಾಡನ್ ಎಲ್ಲಿಯ ಗಾಂದಿ. ಗುರುರಾಜರು ಬರೆದ 'ಫೇಸ್ ಬುಕ್ ' ಹೊಸರೀತಿಯದೊಂದು ಕತೆ. ಪ್ರಸನ್ನರಿಂದ 'ಸರ್ವಜ್ಞ ಹಾಗು ಅವನ ವಚನಗಳಲ್ಲಿನ ಒಗಟು' ಉತ್ತಮ ಲೇಖನ. ನನ್ನಿ ಸುನಿಲರ 'ಕನ್ನಡದಲ್ಲಿ ಟವೆಲ್ ಗೆ ಏನಂತಾರೆ' ಪದೆ ಪದೆ ಪ್ರತಿಕ್ರಿಯೆಗಳಲ್ಲಿ ಕಾಣಿಸುತ್ತಿದ್ದ ಲೇಖನ. 'ಮದುವೆಗೆ ಏನು ಅಡಿಗೆ ಮಾಡಿಸೋಣ' ಶ್ರೀನಾಥರ ಹಾಸ್ಯ ಲೇಖನ, ಹಾಗೆ ಶ್ರೀನಾಥ್ ಮತ್ತು ಮಹೇಶ್ ರವರ ಹುಟ್ಟು ಹಬ್ಬದ ಆಚರಣೆ. ಸದಾ ರಾಜಕೀಯ ವಿಶ್ಲೇಷಣ ಬರಹ ಬರೆಯುವ ಅಬ್ದುಲ್ ರವರಿಂದ ಚಿಂತಾನ ಪೂರ್ಣ ಬರಹ 'ಕಣ್ಣಿಗೆ ಕಣ್ಣು..' ಸರಿಯೆ. ಪೋಷ್ಟ್ ಮ್ಯಾನ್ ಅಂಕಲ್ ಬಗ್ಗೆ ಆಚಾರ್ಯರಿಮ್ದ ಬರಹ (ನನ್ನೂರು ಮತ್ತು ನಾಸ್ಟಾಲ್ಜಿಯ). ಪ್ರಳಯವಂತೆ ... ೨೧ ಕ್ಕಂತೆ... ಮತ್ತೆ ಅಬ್ದುಲ್ ರವರಿಂದ ಬರಹ ನಾವೀಗ ಅದೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ರಾಹುಲನಿಗೆ ಬೇರೆ ಗ್ರಹದ ಹೆಣ್ಣು ಕೇಳಿ ಹೊರಟಿದ್ದಾರೆ ಆಸು , ತಮ್ಮ ವ್ಯಂಗ್ಯ ಕವನ ' ಆಭೂಮಿಯಿಂದ ಬರಲೊಂದು ಸೊಸೆ' ಯಲ್ಲಿ. ಸೀಲಾಕ್ಯಾಂತ್ ಎಂಬ ಅದ್ಬುತ ಮೀನಿನ ಬಗ್ಗೆ ಬಾಲಕೃಷ್ಣರಿಂದ ಲೇಖನ.ಸುಧಾಕರ ಚತುರ್ವೇದಿಯವರ ವಿಚಾರದಾರೆ ನಾಗರಾಜರಿಂದ. ಅನಂತ ಎಂಬ.. ಒಬ್ಬ ಗೆಳೆಯನ ನೆನಪು ಏಕೊ ಮನದಲ್ಲಿ ನಿಲ್ಲುವ ಬರಹ. ನಂದೀಶರ 'ಸರ್ಪಮಿಲನ' ಉತ್ತಮ ಚಿತ್ರ.
ಅನಂತ ಪದ್ಮನಾಭರಿ೦ದ ರಾಮದೇವ ಹಾಗು ಅಣ್ಣರವರ ಹೋರಾಟದ ಹೊಸ ವ್ಯಾಖ್ಯೆ. ರಮೇಶ್ ಬಾಬುರವರಿಂದ 'ಹಂಸ ಹಾಡುವ ಹೊತ್ತು' ಉತ್ತಮ ಕಾದಂಬರಿಯ ನಿರೂಪಣೆ, ಆಮೇಲೆ ಎಲ್ಲಿ ಹೋದರೊ ಡಾಕ್ಟರ್ ತಿಳಿಯಲಿಲ್ಲ. ಬಾಷ ವಿದ್ವಾನ ಲಿಂಗದೇವರ ನಿಧನ. ಕಾಡಾನೆಯೊಂದು ಮೈಸೂರಿಗೆ ನುಗ್ಗಿ ವ್ಯಕ್ತಿಯನ್ನು ಕೊಂದು ನಾಡೆಲ್ಲ ಸುದ್ದಿ ಮಾಡಿತ್ತು ಶಶಿದರರ ಲೇಖನ, ಮತ್ತು ಚಿತ್ರ ಸಂತೆಯ ನೆನಪು. ಕಲಾವಿದ ಎಮ್ ಎಫ್ ಹುಸೇನ್ ನಿಧನ ಜಯಂತರಿಂದ ಕಹಿಯಾದ ವರದಿ. ಸುದೀರ್ಘ ಸೂರ್ಯಗ್ರಹಣದ ಅನುಭವ. ನನ ಪೀರ್ ಗ್ರೂಪ್ ನೌಕರಿ ಮಾಡುವ ಗೃಹಿಣಿಯೊಬ್ಬಳ ಅನುಭವ- ವಿನುತಾ. ಚೇತನರ 'ಹೂವಿನೆಲೆಯ ಹಂತಕ ... ' ಅಪರೂಪದ ನಿರೂಪಣೆ. ಇವು ಜೂನನಲ್ಲಿ ಕಾಣಿಸಿದ ಇಣುಕು ನೋಟ.
ಹರೀಶರ ಹುಟ್ಟುಹಬ್ಬ ಜುಲೈ ೨ ರಂದು. 'ಕೆಸುವಿನ ಎಲೆಯ' ಅಪರೂಪದ ಚಿತ್ರ ರಮೇಶರಿಂದ. ಹಾಗೆಯೆ ನಂದೀಶರ 'ನೇರಳೆ ಹಣ್ಣಿನ ಕಾಲ' ನೋಡಿದರೆ ತಿನ್ನುವ ಆಸೆಯಾಗುತ್ತೆ. ನನ್ನ ಕವನದ ಸಂಕಲನದ ಆನಂದ- ಸಿದ್ದಿಕೀರ್ತಿಯವರ ಕವನ ಸಂಕಲನದ ಬಿಡುಗಡೆ. ಪ್ರಶಸ್ತಿ ಬೆಂಗಳೂರಿನಲ್ಲಿ ಬಸ್ ತಪ್ಪಿಸಿಕೊಂಡರಂತೆ-ಬರಹ. ಹಂಸಾನಂದಿಯವರ 'ಹಂಸನಾದ' ಪುಸ್ತಕ ಬಿಡುಗಡೆ-ಸಾರಂಗ ಮೀಡಿಯ ಸಹಯೋಗ ೧೬ ರಂದು. ಉಪವಾಸ ಶುದ್ದಿಕರಣ ಮಾರ್ಗವೆ? ಕುಂದಾಪುರ ನಾಗೇಶರಿಂದ ಚಿಂತನೆ. ೧೩ ರಂದು ಮತ್ತೆ ಮುಂಬೈನಲ್ಲಿ ಉಗ್ರರ ಅಟ್ಟಹಾಸ ೧೭ ಮಂದಿ ಮರಣ ಜಯಂತರ ವರದಿ ಸಪ್ತಗಿರಿಯವರ ಲೇಖನ . 'ಹಾರುವ ಬೇರು', ಹಾಗು 'ಅಷಾಡದ ಅಚ್ಚರಿಯ' ಲೇಖನಗಳು. ನಾಗರಾಜರ ಅದ್ಬುತ ಚಿಂತನೆಗಳ ಮೂಡಉವಾಚಕ್ಕೆ '೧೦೦' ರ ಸಂಭ್ರಮ. ೧೫ ರಂದು ನಾವಡರಿಗೆ ಹೆಣ್ಣು ಮಗುವಿನ ಅಪ್ಪನಾಗುವ ಯೋಗ.೧೬ರಂದು ಆಸುರವರ ಜನ್ಮ ದಿನ. ಪವಿತ್ರ ಶೇಟ್ಟಿಯವರಿಂದ ಕಾಡುವ ಮೌನದ ಕವಿತೆ. 'ಓರ್ವ ಸನ್ಯಾಸಿನಿ ಹಾಗು ಪ್ರಿಯಕರ' ವೆಂಕಟೇಶರಿಂದ ಚಿಂತನಾ ಪೂರ್ಣ ಬರಹ. ೨೧ ರಂದು ಮಂಜುನಾಥರ ಹುಟ್ಟುಹಬ್ಬದ ಆಚರಣೆ. ದೇವರು ಭಟ್ಟರ ಶತಮಾನದ ನಡೆ - ಗಡಿಯಾರದ ಆಕರ್ಷಕ ಚಿತ್ರ. ಪ್ರಮೋದ್ ರಿಂದ 'ಮೈಕ್ಸೋಮೆಟಾಸಿಸ್' ಬಗೆಗಿನ ವೈದ್ಯವಿಜ್ಞಾನದ ಲೇಖನ. ನಾಡಿಗರಿಂದ 'ಅನ್ಲೈನ್ ಮಾಧ್ಯಮ'ದ ಬಗೆಗಿನ ವಿಷ್ಲೇಷಾಣಾತ್ಮಕ ಲೇಖನ. 'ಭಾವಕ್ಕು ಅಭಿವ್ಯಕ್ತಿಗು ಸಂಬಂಧ ಬೇಡವೆ' ಆಸುರವರ ಪ್ರಶ್ನೆ. 'ಆಮೇಲೆ ಏನಾಯ್ತು' ಅಂದರೆ ಬೇಡ ಬಿಡಿ ಶ್ರಿನಾಥರ ಲೇಖನ ನೋಡಿ. ಪಾಕಿಸ್ತಾನದ ಯಾರ್ಕರ್ ಅಬ್ದುಲರ ರಾಜಕೀಯ ಬರಹ. ಮತ್ತೆ ರಾಮಮೋಹನರ ಸರಣಿ 'ಸೊಸೆ ಸೌಭಾಗ್ಯಳ' ಕಥೆ ಮುಕ್ತಾಯ.
ಆಗಷ್ಟನಲ್ಲಿಯೂ ಸಾಕಷ್ಟು ಆಕರ್ಷಣೆಗಳು 'ಕಷಿಕೇಫ್ಳ' ಆಚಾರ್ಯರ ಸುಂದರ ಹೂವಿನ ಚಿತ್ರ. ''ಶ್ರಾವಣ' ದ ಬಗೆಗಿನ ಲೇಖನಗಳು ಸಿಂಗಪುರದ ವಾಣಿಯವರಿಂದ ಮತ್ತು ಅದಕ್ಕೆ ಪೂರಕ 'ಅಕ್ಕನ ಪೂಜೆ' ಚಿತ್ರಗಳು ಕುಂಬ್ಳೆಯವರಿಂದ. ಮಳೆಬಂದರೇನು ಬಾ ಮಾಡೋಣ ಮೋಡಗಳ ಮೇಲೆ ಸವಾರಿ ಸಖಿ ಎನ್ನುವ ಆಸುರವರ ಕವನ. 'ಮೇರಿಲಯನ್ = ಎಕ್ಸ್ ವರ್ಣರಂತು'ವಿನ ಬಗ್ಗೆ ಪ್ರಾರಂಬವಾದ ಶಿವರಾಮರ ಲೇಖನ ಒಂದೆ ಕಂತಿಗೆ ನಿಂತು ಹೋಯಿತು. ಅರುಂದತಿ ದರ್ಶನದ ಬಗೆಗಿನ ಬರಹಗಳು. ಮುಂಬೈನಲ್ಲಿ ನಡೆದ ಕನ್ನಡ ಸಂಸೃತಿ ಉತ್ಸವದ ವರದಿ ವೆಂಕಟೇಶರಿಂದ. 'ಗುರು ರಾಘವೇಂದ್ರ'ರ ಆರಾದನೆಯ ಬಗೆಗಿನ ಬರಹ ಹಾಗು ಕಥೆಗಳು. ರದ್ದಾದ ಅನಿಲ ಕನೆಕ್ಷನ್ ಗಳ ಆತಂಕದ ಕವನ ಬರಹಗಳು.ನಾಗರ ಪಂಚಮಿಯ ಬಗೆಗಿನ ಕಳಕಳಿಯ ಲೇಖನಗಳು ಕವಿ ನಾಗರಾಜರಿಂದ. ಸೋಮಶೇಖರಯ್ಯನವರ ಮನೆಯಲ್ಲಿ ಅರಳಿದ ಬ್ರಹ್ಮಕಮಲದ ಸೊಗಸು ಚಿತ್ರಗಳು. ಸೋಂದಾಗೆ ಹೋಗಿಬಂದ ಜಯಂತರ ವರದಿ.'ಇಸ್ರೇಲಿನ ಬೆಕ್ಕಿನಮರಿ'ಯ ಚಿತ್ರ ಸುಮಾನಾಡಿಗರಿಂದ. ಬೂಟ್ ಪಾಲಿಶ್ ಹುಡುಗ ಮತ್ತು ಸ್ವತಂತ್ರ , ಸ್ವತಂತ್ರೋಸ್ತವದ ಹಿನ್ನಲೆಯ ಬರಹ. ವರಮಹಾಲಕ್ಷ್ಮಿ ಹಬ್ಬದ ವೈಭವ. ನಡುವೆ ಮಂಜುನಾಥರಿಂದ ಸ್ವಾನುಭವದ ಲೇಖನಮಾಲೆ- ಜೈಲಿನಲ್ಲಿ ತೆಲಗಿಯ ದರ್ಶನ. ಅಣ್ಣ ಹಜಾರೆಯವರ ಬಗಿಗಿನ ಲೇಖನಗಳು. ಜೊತೆಗೆ ಗಣೇಶರ ಲೇಖನಮಾಲೆ 'ಚಲೊ ಮಲ್ಲೇಶ್ವರ' ಪ್ರಾರಂಬ. ಕಾಯರ 'ಕಾಲು ಬಂದ ಕವಿತೆ'ಯ ಪಯಣ . ಪ್ರಭುರವರಿಮ್ದ 'ಮುಖೇಶ್' ರ ಬಗೆಗಿನ ಅಪೂರ್ವ ಲೇಖನ. ಲೈಫು ಇಷ್ಟೇನೆ ಚಿತ್ರದ ಹಾಡು ಬರಹಗಳು. ಮಾಸಂತ್ಯಕ್ಕೆ ಗಣೇಶ ಗೌರಿ ಸಂಭ್ರಮ. ಜೊತೆಗೆ ಸೇರಿಸಿಕೊಳ್ಳಿ ಹೊಸ ಸದಸ್ಯ ಸತೀಶರಿಮ್ದ ಶ್ರೀನರಸಿಂಹ ಶೀರ್ಷೆಕೆಯಲ್ಲಿ ವೇದಾಂತ ವೈರಾಗ್ಯದ ವಚನಗಳು.ಇವೆಲ್ಲ ನಮ್ಮನ್ನು ಸೆಳೆದವು.
ಸೆಪ್ಟೆಂಬರ್ ಮೊದಲಲ್ಲಿ ಅರಸಿಕೆರೆಯ ಗಣೇಶನ ಚಿತ್ರ ಆಕರ್ಷಕವೆನಿಸಿತು ಹಾಕಿದವರು ಶ್ರೀರಾಮಜಮದಗ್ನಿ. ಶಿಕ್ಷಕ ದಿನಾಚರಣೆಯ ಬಗೆಗಿನ ಲೇಖನಗಳು, ಮತ್ತು ಅಂದೆ ಶಿಕ್ಷಕರು ಆಚರಿಸಿದ ಕಪ್ಪು ದಿನ ಸರಿಯೆ ಎಂಬ ಪ್ರಶ್ನೆ. . ಯುವಕರೆ ನಾಡಿಗಾಗಿ ಹುತಾತ್ಮರಾಗೋಣ ಕವಿತೆಯ ಕರೆ ಆಸುರಿಂದ. ದೇಶದ ಬಗ್ಗೆ ಸದಾ ಕಾಳಜಿ ವ್ಯಕ್ತಪಡಿಸುವ ದಿವಾಕರರಿಂದ ಬರಹ 'ರಾಜಕಾರಣಿಗಳಿಂದ ದೇಶಕ್ಕೆಂದು ಮುಕ್ತಿ' . ಉಗ್ರರಿಂದ ದೆಹಲಿ ಕೋರ್ಟ್ ಮೇಲೆ ದಾಳಿ ಸಪ್ತಗಿರಿಯವರ ವರದಿ. 'ಮುಂಬೈ ಎಂಬ ನಿತ್ಯ ಸುಂದರಿ'ಯ ವರ್ಣಚಿತ್ರಗಳು ಮಂಜುರವರಿಂದ. ಸಂಪದದಲ್ಲಿ ನೇರ ಟೈಪ್ ಮಾಡುವ ಸೌಲಬ್ಯ ಸೆಪ್ಟೆಂಬರ್ ೭ ರಿಂದ. ಅಧಾರ್ ಕಾರ್ಡಿನ ಬಗೆಗಿನ ವಿವಾದಗಳು. ಸಿ.ಇ.ಟಿ ಬಗೆಗಿನ ಅನುಭವ ಬರಹ. ನಡುವೆ ನವೀನರಿಗೆ ಡೌಟು 'ಗಣೇಶ ಲೆಫ್ಟ ರೈಟಾ?' .ಚಿತ್ರ ನಟ ದರ್ಶನನಿಗೆ ಜೈಲು ದರ್ಶನದ ಯೋಗ. ಸುಮಂಗಲಾರವರಿಂದ 'ಮಂಗನ ಬಾಷೆಯ' ಬಗೆಗಿನ ಲೇಖನ. ನಂತರ ಈ ಹುಬ್ಬಳಿ ಹುಡುಗಿ ಎಲ್ಲಿ ಹೋದರೊ ತಿಳಿಯಲಿಲ್ಲ. ಶೀಲಾಯನಾಯಕರಿಮ್ದ ಜನಾರ್ದನ ರೆಡ್ಡಿಯವರು ಜೈಲಿಗೋದ ಬಗೆಗಿನ ರಾಜಕೀಯ ಕಳಕಳಿಯ ಲೇಖನ. ಲೈಫಿ ಇಷ್ಟೇನೆ ಚಿತ್ರದ ಬಗೆಗೆ ಸಾಕಷ್ಟು ಪುಟಗಳು ತುಂಬಿದವು. ಎಲ್ಲರ ತಲೆ ಕೆಡಿಸಿದ 'ಅಣ್ಣಗೇರಿಯ ಬುರುಡೆ'ಯ ನಾಟಿಯ ಕತೆ. ನಡುವೆ ಕನ್ನಡಗರಿಗೆ ಸಂಭ್ರಮ ಕಂಬಾರರಿಗೆ 'ಜ್ಞಾನಪೀಠ' ದ ಪುರಸ್ಕಾರ.ಶಶಿಧರರ ಮುಕಂದೂರು ಸ್ವಾಮಿಗಳ ಬಗೆಗಿನ ಲೇಖನ, ಯೇಗ್ದಾಗೆಲ್ಲ ಐತೆ ಪುಸ್ತಕ ಪರಿಚಯ. ೨೧ರಂದು ವೆಂಕಟೇಶ್ ಕುಂಬ್ಳೆಯವರ ಜನ್ಮದಿನ. 'ದೇಶಕ್ಕೆ ಸತ್ಪಜೆಯಾಗುವೆನೆ" ಮಾನು ಎಂಬ ಯುವಕನೊಬ್ಬನ ಸ್ವಗತ ನಿಜಕ್ಕು ನಾವು ಮಾಡಬೇಕು ಸ್ವಾಗತ. ನಡುವೆ ನಿದಿ ಸಿಕ್ಕ ಅನಂತ ಪಧ್ಮನಾಭನನ್ನು ಕನ್ನಡದ ಬಡ ದೇವತೆಗಳಿಗೆ ಹೋಲಿಸುವ ಶ್ರೀಧರ ಬಂಡ್ರಿ. ನವರಾತ್ರಿಯ ವೈಭವದ ದೇವಿಯನ್ನು ಶಾಮಲರವರು ವರ್ಣಿಸುವಾಗ ಅಲ್ಲೊಂದು ದ್ವನಿ.. ಕತ್ತಲಲ್ಲಿ ಕರಡಿಗೆ ಜಾಮೂನಿ ತಿನ್ಸೋಕಾಗಲ್ಲವಲ್ಲ.
ಒಂದು ದಿನ ಜೀವನ ನಡೆಸೋಕೆ ೩೨ ರೂ ಸಾಕು ಎಂದ ಸರ್ಕಾರದ ವರದಿಗೆ ಹಾರಿಬಿದ್ದವರು ಶಶಿದರ ಹಾಗು ರವಿ. 'ಕರಿಮಲೆಯ ಕಗ್ಗತಲಲ್ಲಿ'- ಚೇತನ್ ರವರ ಕಥೆ. ಮತ್ತು ತಿಂಗಳ ಪೂರ್ತಿ 'ಪರಮಾತ್ಮ' ಸಿನಿಮಾ ಗುಂಗು ಸಂಪದವನ್ನು ಬಿಡಲಿಲ್ಲ.ಆಪೆಲ್ ಕಂಪನಿಯ ಸ್ಟೀವ್ ನಿದನದ ಬಗ್ಗೆ ಹೊರನಾಡಿನಿಂದ ಅಬ್ದುಲ್ ರವರು ಬರೆದ ಲೇಖನ. ಸಂಪದ ಬಳಗದಿಂದ ಹೆಚ್ ಎಸ್ ವಿ ರರವ ಸಂದರ್ಶನದ ಪ್ಯಾಡ್ ಕಾಸ್ಟ್. ೧೩ ರಂದು ಪ್ರಕಟ. ಯಡಿಯೂರಪ್ಪನವರ ಜೈಲುವಾಸದ ಯೋಗ ಪಾಪ ಕಟ್ಟಾಗೊಂದು ಜೊತೆ. 'ಆಶ್ಚರ್ಯವಾಗುತ್ತೆ' ಪ್ರಸನ್ನರ ಕವನದಲ್ಲಿ ಪದಗಳ ಬಳುಕು. ಕನ್ನಡ ನೆಲದ ದೌರ್ಬ್ಯಾಗ್ಯ 'ಇಂಗ್ಲೀಶ್ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಿ' ಲೇಖನ. ಹೈದರಾಬಾದಿನ ಕನ್ನಡಿಗರು ಶ್ರೀದರರ ಕವನ ಆದರೆ ಬೆಂಗಳೂರಿನ ತುಂಬ ಅವರೆ. ನಾಗರಾಜರಿಂದ ಕೆಳದಿ ವಂಶಸ್ಥರ ಪರಿಚಯ. ಸರಕಾರಕ್ಕೆ ಮುಳ್ಳಾಗುತ್ತಿರುವ 'ಮಾಹಿತಿ ಹಕ್ಕನ್ನು ದುರ್ಬಲಗೊಳಿಸುವ' ಪ್ರಯತ್ನ ಅಡ್ಡೂರು ಕೃಷ್ಣರ ಸಮಯೋಚಿತ ಲೇಖನ.ರಾಜಲಕ್ಷ್ಮಿಯವರು ನೋಡಿ ನಮಗೆ ಈ ತಿಂಗಳು ಮನೆಮದ್ದು ಅಂತ ಅಮೃತಬಳ್ಳಿಯ ಮಹತ್ವ ತಿಳಿಸಿದ್ದಾರೆ. ಹಾಗೆ ಗಣೇಶರು 'ಸದಾಶಿವನಗರದ ಪಾರ್ಕಿನಲ್ಲಿ' ಸುತ್ತಾಡುತ್ತಿದ್ದಾರೆ. ಬೆಂಗಳೂರಿಗೆ ೨೦ರಂದು ಮೆಟ್ರೋ ತನ್ನ ಸೇವೆ ಆರಂಬಿಸಿತು ಮೊದಲ ಪಯಣದ ಸುಖದ ಅನುಭವ ರವಿಯಿಂದ. ನಡುವೆ ದೀಪಾವಳಿಯ ಸಂಬ್ರಮ . ಚಿತ್ರನಟ ಶಮ್ಮಿಯ ನೆನಪು. ರಶ್ಮಿಪೈ ರಿಂದ ಶರ್ಮಿಳಾ ಎಂಬಕೆಯ ಹೋರಾಟದ ಕತೆ 'ಈ ಹೆಣ್ಮಗಳ ಹೋರಾಟಕ್ಕೆ ಕೊನೆ ಎಂದು'. ನಮ್ಮ ಹೆಜ್ಜೆಯ ಶಕ್ತಿ ವಿದ್ಯುತ್ ಆಗಬಹುದೆ ಆಶೋಕ್ ಕುಮಾರರ ಲೇಖನ. ಕ್ಯಾನ್ಸರ್ ವಿರುದ್ದ ಹೋರಾಡುತ್ತಿರುವ ಎಳೆಯ ಜೀವವೊಂದರ ಕತೆ ವಿಷ್ಟುಪ್ರಿಯರಿಮ್ದ 'ಮೃತ್ಯು ವೀಣೆಯಲ್ಲಿ ಬಾಳ ಶ್ರುತಿ'. ೩೦ ರಂದು ಬಸವನಗುಡಿಯ ಪುಸ್ತಕ ಪರಿಷೆ. ಮತ್ತು ವಿಶ್ವದಲ್ಲಿ ೭೦೦ ನೆ ಕೋಟಿಯ ಮಗಿವಿನ ಜನನ ಇದು ಅಕ್ಟೋಬರ್ ನಲ್ಲಿ ಸಂಪದದ ಮೆಲುಕು.
ಕನ್ನಡ ರಾಜ್ಯೋತ್ಸವದೊಂದಿಗೆ ನವೆಂಬರನ ಸಂಪದ ಪಯಣ ಪ್ರಾರಂಬ. ೪ ರಂದು ಗೋಪಾಲ್ ಮಾ ರ ಹುಟ್ಟುಹಬ್ಬ. ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಚಿಂತನೆ ಷಣ್ಮುಗ, ರಮೇಶ್ ರಾಜ್ ರವರಿಂದ. ಪಯಣ ಮುಗಿಸಿದ ಬೂಪೇನ ಹಜಾರಿಕ ಬಗ್ಗೆ ಹನುಮಂತ ಪಾಟಿಲರ ಲೇಖನ. ಬೆಂಗಳೂರಿನಲ್ಲಿ 'ಸ್ಲಟ್ ವಾಕ' ಅಗತ್ಯವೆ ಪ್ರಸ್ತುತದ ಬಗ್ಗೆ ಚಿಂತನೆ ರಶ್ಮಿಪೈ ರಿಂದ.ಶಂಕರ್ ನಾಗ್ ಸ್ಮರಣೆ. ಮಹಿಳಾದಿನದ ವಿಶೇಶ ಬರಹಗಳು. ಕತೆಗಾರ 'ಮನು' ನಿದನದ ಬಗ್ಗೆ ಮಿಶ್ರಕೋಟಿಯವರಿಂದ ವರದಿ, ಚಿಕ್ಕ ವಯಸಿನಿಂದಲು ನಾನು ಇಷ್ಟಬಿದ್ದು ಓದುತ್ತಿದ ಕತೆಗಳ ಲೇಖಕ ಅವರು. 'ಇವರೇನು ಮಾಡುತ್ತಿದ್ದಾರೆ ತಿಳಿಸಬಲ್ಲಿರ?..' ಸುಮಾನಾಡಿಗರು ಹಾಕಿದ ಚಿತ್ರ ಸಾಕಷ್ಟು ಕುತೂಹಲ ಉತ್ತರಗಳಿಗೆ ಕಾರಣವಾಯಿತು. ಹರೀಶ ಅತ್ರೇಯರ ಹುಟ್ಟುಹಬ್ಬ(೨೩). ಅಹಾ ತಡೆಯಿರಿ ಶರದ್ ಪವಾರರಿಗೆ ಕಪಾಳಮೋಕ್ಷ ಸಂಪದಿಗರಿಗೆ ಸಾಕಷ್ಟು ಖುಷಿ ಕೊಟ್ಟ ಸಂದರ್ಭ. ಸರಕಾರದ ರ್ರಿಟೈಲ್ ಮರ್ಕೆಟಿಂಗ್ ನೀತಿ ಬದಲಾವಣೆ ಘೋಷಣೆ ಹೊರದೇಶದವರಿಗೆ ಮಣೆ- ಸದ್ಯಕ್ಕಂತು ಲೋಕಸಬೆಯಲ್ಲದು ತಡೆಯಲ್ಪಟ್ಟಿದೆ. ತಿಂಗಳ ಕಡೆಯಲ್ಲಿ 'ಮಡೆ ಮಡೆ ಸ್ನಾನ'ದ ವಿವಾದ ಸಾಕಷ್ಟು ಬಿಸಿಏರಿದ ಚರ್ಚೆ. ಕನ್ನಡಕ್ಕೆ 'ಸರಸ್ವತಿ ಸನ್ಮಾನ' ಬೈರಪ್ಪನವರಿಂದ, ಈ ವರ್ಷ ಕನ್ನಡಕ್ಕೆ ಡಬ್ಬಲ್ ಧಮಾಕ - ( ಇಂಗ್ಲೀಷ್- ಹಿಂದಿ ಒಟ್ಟಿಗೆ ಇರುವ ಪದ ಬೆಂಗಳೂರಿನಲ್ಲಿಂದು ಅಪ್ಯಾಯಮಾನ). ಮಂಜುನಾಥರ ಆತ್ಮ ಕತೆ ಅವರ ತಾಯಿಯ ಸಾವು ಎಲ್ಲರಲ್ಲು ಮರುಕ ಹುಟ್ಟಿಸಿದ ಸಂದರ್ಬ. ನವೆಂಬರ ಮುಕ್ತಾಯ.
ಪುಳಿಯೋಗರೆ ರುಚಿಯೊ ಬಿಸಿಬೇಳೆಬಾತೊ ಎನ್ನುವ ಹಂಸಾನಂದಿಯವರ ವಿವಾದ ಸಂಪದದಲ್ಲಿ ಸಾಕಷ್ಟು ಪುಳುಯೋಗರೆ ಕಂಪನ್ನು ಹರಡಿತು. ನಡುವೆ ಇದ್ದಕಿದ್ದಂತೆ ಬಂದು ಬಿದ್ದ 'ಕೊಲವೆರಿ ಡಿ' ಯ ಕನ್ನಡ ರೂಪ ಕೊಳಗೇರಿರಿ...ಸೀಮಾಶುಲ್ಕ ಕಛೇರಿಯಲ್ಲಿ ಕನ್ನಡ ಕಲರವ ಗೋಪಾಲ ಕೃಷ್ಣರ ವರದಿ ಮಂಗಳೂರಿನಿಂದ. ೪ ರಂದು ಮರೆಯಾದ ದೇವಾನಂದನ ಬಗ್ಗೆ ಪಾಟಿಲರು ಬರೆದ ಬರಹ. ನಾವಡರ '...ಇಲ್ಲ ಬುದ್ದನಾಗುವ ಇಚ್ಚೆ' ಯಂತಹ ಕವನ. ಡರ್ಟಿ ಸಿನಮಾದ ವಿಷ್ಲೇಶಣೆ ಇಂಚರರಿಂದ. 'ಕವನ ನಂದು ಅಲ್ಲ ನಿಂದು ಅಲ್ಲ ಕನ್ನಡದ್ದು' ರಾಘವೇಂದ್ರ ಗುಡಿಯವರ ಲೇಖನ , ಗಂಗಾವತಿಯ ಸಮ್ಮೇಳನದ ಹಿನ್ನಲೆಯಲ್ಲಿ ಪ್ರಸ್ತುತ. ದೆಹಲಿಗೆ ನೂರು ವರ್ಷವಂತೆ ಪ್ರೇಮಶೇಕರರ ಇತಿಹಾಸ ಕೆದಕುವ ಬರಹ. ಸಂಪದಿಗ ಮಂಜುರವರ ಮಗಳು ಗೌತಮಿಗೆ 'ಸಾವಿತ್ರಿ' ದಾರವಾಹಿಯ ನಟನೆಯ ಹಿನ್ನಲೆಯಲ್ಲಿ ಪ್ರಶಸ್ತಿ 'ಕನ್ನಡ ಕಲಾಶ್ರೇಷ್ಟ' - ಸಂಪದಿಗರೆಲ್ಲರ ತುಂಬು ಹಾರೈಕೆ. ಅಂತರ್ಜಾಲ ಮಾಧ್ಯಮಗಳ ಮೇಲೆ ನಿಯಂತ್ರಣದ ಸುದ್ದಿಗಳು. ಕೇಂದ್ರಸಾಹಿತ್ಯ ಅಕಾಡಮಿಯಿಂದ ಕನ್ನಡದ ಗೋಪಾಲಕೃಷ್ಣ ಪೈ, ರಾಮಚಂದ್ರಗುಹ, ರೋಡ್ರಿಗಸ್ ರವರಿಗೆ ಪ್ರಶಸ್ತಿ, ಕನ್ನಡಕ್ಕೆ ಡಬ್ಬಲ್ ಪ್ರಶಸಿ ಎಂದೆ ಮೇಲೆ ಈಗ ತಿದ್ದಿಕೊಳ್ಳೂವೆ ತ್ರಿಬ್ಬಲ್ ಪ್ರಶಸ್ತಿಯ ಮಳೆ. ಕಳೆದು ಹೋಗುತ್ತಿರುವ ವರ್ಷದ ಮೆಲುಕು ಇವೆಲ್ಲ ಡಿಸೆಂಬರ ೨೦೧೧ ನ ವಿಶೇಷಗಳು ಸಂಪದದಲ್ಲಿ.
ಗೆಳೆಯರೆ ವರ್ಷಪೂರ್ತಿಯ ಪೂರ ೫೦೦೦ ಲೇಖನಗಳ ಸಾರವನ್ನು, ೫೦೦೦ ಕ್ಕು ಮಿಕ್ಕಿದ ಲೇಖಕರ ಬರಹಗಳನ್ನು ಒಂದೆ ಲೇಖನದಲ್ಲಿ ಹಿಡಿಯುವುದು ಅಸಾದ್ಯ. ಪ್ರತಿ ತಿಂಗಳ ಲೇಖನಗಳನ್ನು ತಿರುವುತ್ತ ಹೊರಟಂತೆ ನನಗೆ ಅದೊಂದು ಬೇರೆಯೆ ಲೋಕವನ್ನು ಸೃಷ್ಟಿಸಿತು. ಅದೆಷ್ಜು ಬರಹಗಳು ಅದೆಷ್ಟು ಬರಹಗಾರರು. ಸಂಪದದ ಹಿರಿಯ ಸದಸ್ಯರು ನದಿಯ ಹರಿವೆಗೆ ಎರಡು ದಡಗಳಂತೆ ಇದ್ದರೆ, ಸದಾ ಸಕ್ರಿಯರಾಗಿ ಕೆಲವರು ತುಂಬಿ ಹರಿಯುತ್ತಾರೆ, ಹೊಸದಾಗಿ ಸೇರಿ ಅಬ್ಬರಿಸಿ ಅಲೆಗಳುಂಟು ಮಾಡುವ ಕಿರಿಯ ಸದಸ್ಯರು ಹಾಗೆ ಬೇಗನೆ ಮರೆಯಾಗಿ ಬಿಡುವುದು ಚೋದ್ಯವೆ, ಅದನ್ನು ನೋಡುವಾಗಲೆ ಮತ್ತೊಂದು ಹೊಸ ಅಲೆ ಕಾಣುತ್ತದೆ... ಇದೊಂದು... ಸಂಪದ.. ಸತತ ಹರಿಯುವ ಜೀವನದಿ..
ಮತ್ತೆ ಮತ್ತೆ ನೋಡುತ್ತ ಹೋದ ಹಾಗೆ ಮನದಲ್ಲಿ ನಿಲ್ಲುವ ನೂರಾರು ಬರಹಗಳು, ಹತ್ತಾರು ಹೊಸ / ಹಳೆಯ ಸದಸ್ಯರ ಹೆಸರುಗಳು ಮನದಲ್ಲಿ ನವಿರಾದ ಭಾವನೆಗಳನ್ನು ಕೆದಕುತ್ತವೆ. ಎಷ್ಟೋ ಚರ್ಚೆಗಳು ವಿವಾದಗಳು ಕೋಪತಾಪಗಳು ನಡುವೆ ನಗು ಸಂತಸ ಸಂಭ್ರಮ ಎಲ್ಲವನ್ನು ಅನುಭವಿಸಿ ಕಳೆದ ೨೦೧೧ ವರ್ಷ ನಮ್ಮ ಕಣ್ಣೆದುರು ಹಿಂದೆ ಸರಿಯುತ್ತಿದೆ. ಹೊಸವರ್ಷ ೨೦೧೨ ನಮ್ಮ ಎದುರೆ ಇದೆ..
ನಾವು ಹೊಸ ವರ್ಷದ ಹೊಸ್ತಿಲಲ್ಲಿ ನಿಂತಿರುವ ಈ ಸಮಯ ಎಲ್ಲರಿಗು ಶುಭ ತರಲೆಂದು ಹಾರೈಸುತ್ತ .. ಹೊಸ ವರ್ಷ ನಿಮ್ಮೆಲ್ಲರಿಗು ಶುಭತರಲೆಂದು ಮನದಲ್ಲಿ ನೆನೆಯುತ್ತ....ಹೊಸವರ್ಷ ಹಿರಿಯ ಹಳೆಯ ಸದಸ್ಯರು ಸಕ್ರೀಯರಾಗಲಿ ಎಂದು ಕಾಯುತ್ತ ಹಾಗೆ ಹೊಸ ಹೊಸ ಸದಸ್ಯರು ಸಂಪದವೆಂಬ ಜೀವನದಿಯನ್ನು ಸೇರಿ ಎಲ್ಲರು ಒಟ್ಟುಗೂಡಿ ಕನ್ನಡ ಡಿಂಡಿಮದ ಈ ಸತತ ಯಾತ್ರೆಯನ್ನು ಮುಂದುವರೆಸಲಿ ಎಂದು ಆಶಿಸುತ್ತ..
ನಿಮ್ಮವ
ಪಾರ್ಥಸಾರಥಿ
Comments
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by makara
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by Shreekar
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by makara
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by venkatb83
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by ಗಣೇಶ
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by venkatb83
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by H A Patil
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by manju787
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by kamath_kumble
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by Chikku123
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by sathishnasa
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by kavinagaraj
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by swara kamath
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by shivaram_shastri
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by Jayanth Ramachar
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by Prakash.B
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು
In reply to ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು by bhalle
ಉ: ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು