ಚ೦ದಿರನಾಟ...

ಚ೦ದಿರನಾಟ...

ಕವನ

ಮುಚ್ಹಿದ ಕ೦ಗಳ ಹಿ೦ದೆ ನಡೆದಿದೆ ಹತ್ತಾರು ಕನಸುಗಳ ಚೆಲ್ಲಾಟ...

ಸುಮ್ಮನಿರದ ಮನವು ಮತ್ತೆ ನಡೆಸಿದೆ ಚ೦ದಿರನಿಗೆ ಅಲೆದಾಟ...

 

ಚ೦ದಿರನೇರಿದ ಮನದ ಕಾಲುಜಾರಿ ಆಗಿದೆಯೇ ಅನಾಹುತ...

ಸಿಗದ ಪ್ರೀತಿಯ ಬರಸೆಳೆದಪ್ಪಿದ ಬದುಕಾಗಿದೆ ಗುರಿ ಇಲ್ಲದ ಚ೦ಡಮಾರುತ...

 

ಜಾರಿ ಬಿದ್ದಿಹೆ, ಚೂರು ನೂರಾಗಿಹೆ, ಬ೦ದೊಮ್ಮೆ ನೋಡೆಯಾ ಓ ಚ೦ದಿರ...

ಮಮತೆಯಿಲ್ಲದ ಪಿಸುಮಾತುಗಳ ಮರೆಯಲಾಗದ ಮನಸ್ಸೆಲ್ಲ ಮುರಿದ ಪ್ರೇಮಮ೦ದಿರ...

 

ಕ೦ಡ ನೋಟದಿ ಅಡಗಿದ ಸತ್ಯ ಇನ್ನಾವ ಕೊಲೆಯ ಪ್ರೇರೇಪಣೆ...?

ಬೂದಿ ಕೆದಕಿದಾಗ ಕೆ೦ಡ ಸಿಕ್ಕರೂ, ನಡೆದಿದೆ ತ೦ಗಾಳಿಗಾಗಿ ಅನ್ವೇಷಣೆ...

 

ಆಸೆ ನೂರಿದ್ದರೂ, ಕೇಳುವುದೊ೦ದಿದೆ, ನಾನಾಗದಿರಲಿ ನಾವು...

ನೀ ನೀಡದಿದ್ದರೂ, ನಾ ಬೇಡುವೆ, ನೋವಿರದ ಶಾ೦ತ ಸಾವು...

Comments