ಗಜಲ್

ಗಜಲ್

ಕವನ

ಚಳಿಯನು ಕೊಂದವನೆ ಸಖ ಎಲ್ಲಿರುವೆ?

ಬಿಸಿಯನು ತಂದವನೆ ಸಖ ಎಲ್ಲಿರುವೆ?

 

ಕನಸಲಿ ಬಂದವನೆ, ಕಣ್ಮನ ಸೆಳೆದವನೆ

ನಿದ್ದೆಯ ಸಿಹಿಯಾಗಿ ಕೊದವನೆ ಸಖ ಎಲ್ಲಿರುವೆ?

 

ಬಯೆಕಗಳ ಹೂವ ಹಾರದಿ ಬಿಗಿದವನೆ

ಕಾಮನೆಯ ಬಿಲ್ಲ ತೆರದಿ ಕಾಮನೆಯ ಮೂಡಿಸಿದವನೆ ಸಖ ಎಲ್ಲಿರುವೆ?

 

ತಂಗಾಳಿಯ ತೀಡಿ ಮನಕೆ ತಂಪೆರದವನೆ

ವಿರಹದ ಹಾಡಾಗಿ ಗುನು ಗುನಿಗಿ ನಿಂದವನೆ ಸಖ ಎಲ್ಲಿರುವೆ?

 

ನನ್ನೀ ನಾಚಿಕೆಯ ನಿರಿಗೆ ಬಿಡಿಸಿ ಮರುಳು ಮಾಡಿ

ಮುಖದೆಲೆಯಲಿ ಇಬ್ಬನಿ ಹನಿ ಮೂಡಿಸಿ ಮರೆಯಾದವನೆ ಸಖ ಎಲ್ಲಿರುವೆ?...

                               

Comments