ಸಾಸಿವೆ-ಸೂತಕ ಇಲ್ಲದ ಮನೆ-ಮೊಬೈಲು ಇಲ್ಲದ ಮನುಷ್ಯ!!-(ಹಾಸ್ಯ ಬರಹ)

ಸಾಸಿವೆ-ಸೂತಕ ಇಲ್ಲದ ಮನೆ-ಮೊಬೈಲು ಇಲ್ಲದ ಮನುಷ್ಯ!!-(ಹಾಸ್ಯ ಬರಹ)

 

ರಾತ್ರಿ ಹೊಟ್ಟೆ ಬಿರ್ಯುವಂತೆ   'ನುಗ್ಗೆ ಕಾಯಿ ಸಾರು' - ಅನ್ನದ  ಊಟ ಮುಗಿಸಿ 'ಹೊಟ್ಟೆ ಭಾರವನ್ನ'ಕೊಂಚ ತಗ್ಗಿಸಲು ಮನೆ ಮುಂದಿನ ರಸ್ತೆಉದ್ದಕ್ಕೂ  ಅಡ್ಡಾಡಿ  ವಾಪಸು ಬಂದು ಗೇಟು ಲಾಕ್ ಮಾಡಿ ಮನೆಯೊಳು ಸೇರಿ ಬಾಗಿಲು ಮುಚ್ಚಿ ನೇರ 'ಶಯನಕೋಣೆಗೆ ನಡೆದೇನಾ'ಏನೇನೋಕನಸು'ಕಾಣುತ್ತ:)

 

ಕೊಂಚ ಹೊತ್ತಿನ ನಂತರ  ಅಡುಗೆ ಕೋಣೆಯಿಂದ ಅಂದಿನ ಮುಸುರೆಯ ಪಾತ್ರೆಗಳನ್ನ ತೊಳೆದು  ಕೈಒರೆಸಿಕೊಳ್ಳುತ್ತಾ  ಒಳ ಬಂದಳು'ಮುದ್ದಿನ ಮಡದಿ'... ಸುಸ್ತಾದಂತೆ ಕಂಡ ಅವಳನ್ನ ನೋಡಿಯೇ 'ಆಶಾಬಲೂನುಥುಸ್ಸ್  ಅನ್ದನ್ಗಾಯುಆದರೂ 'ಕೂಲ್ -ಮಗಾಕೂಲ್'ಅಂತ ಎನ್ನ ಮನ ಸಂತೈಸುತ್ತ ಆಶಾವಾದಿಯಾಗಿ 'ಅವಳಿಗೆ' 'ಪೂಸಿಹೊಡೆಯ ಹೊರಟೆ!

 

ವ್ಯಾಸಲೀನ್ ತೆಗೆದು ಕೊಂಡು , ಅವಳ ಕೈಗೆ ಸವರುತ್ತ ಹೇಳಿದೆ 'ಪಾತ್ರೆಗಳನ್ನ ಉಜ್ಜಿ ಉಜ್ಜಿನಿನ್ನ'ಸುಕೋಮಲಕೈಗಳು ಒರಟಾಗಿವೆ ಕಣೆ!,ಅವಳ ಮುಖಾರವಿಂದ ಅರಳಿದ್ದು , ನನಗೆ 'ಗೆಲುವನ್ನಉಂಟುಮಾಡಿತು,'ಸಕ್ಸೆಸ್ಸ್ ' ಅಂದೇ ನನಗೆ ನಾ:( ಹೌದೂ ಕಣ್ರೀ ಅದ್ಕೆ ನಾ ಒಂದು ನಿರ್ಧಾರಕ್ ಬಂದಿದೀನ್, ' ನಿರ್ಧಾರಎನ್ನುವ ಅವಳು ಉಪಯೋಗಿಸುವ ' ಪದ'  ನನಗೆ ಯಾವತ್ತಿಗೂ 'ಅಪಾಯಕಾರಿಯೇ'!ಮನಏನೋ 'ಕೇಡನ್ನುಶಂಕಿಸಿ 'ಊಹೆಗೆತೊಡಗಿತು!! ಮೊದಲು ಬಂದ 'ಊಹೆನಾಳೆಯಿಂದ ಪಾತ್ರೆಉಜ್ಜುವ ಕೆಲಸ ನಿಮ್ದೆ ಎಂದಿರಬಹುದೇ?

 

ನನ್ನ ಮುಖವನ್ನೇ ನೋಡ್ತಾ 'ಈಗೀಗ ನಿಮಗೆ ನನ್ನ ಮೇಲೆ ಪ್ರೀತಿ  ಕಡಿಮೆ ಆದಂಗಿದೆ'  ಧುತ್ತನೆ ಬಂದ 'ಆಪಾದನೆಗೆಎನೆಳುವುದೋತೋಚದೆ 'ಬ್ಬೆ ಬ್ಬೆ'  ಅಂದೇ:( ಆದರೂ ಸಾವರಿಸಿಕೊಂಡು ಛೆ ಛೆ ಹಾಗೇನಿಲಹಾಗೇನಿಲ್ಲನಾ ನಿನ್ನ ಎಷ್ಟು ಪ್ರೀತಿಸುತ್ತೇನೆ!, ನಿನ್ನ ಬೇಕು ಬೇಡಗಳನ್ನ  ಪೂರೈಸಿರುವೆ ನಿನಗ್ಯಾಕೆಬಂತು  ಸಂಶ್ಯಯ?

ಓಹೋ ಹಾಗೋ?  ನೋಡೋಣ ಈಗಮತ್ತೆ ಮತ್ತೆ  'ನಾಳೆಏನು ವಿಶೇಷವಿದೆಹೇಳಿ ನೋಡೋಣ?

ವಿಶೇಷತೆನಾಳೆಏನುಯೋಚಿಸಿದೆ-ಯೋಚಿಸಿದೆಓಹೋ ಅದಾಗೊತ್ತಾಯ್ತು ಕಣೆ--

   

 

ನಾಳೆ 'ಕರೀನಾ ಕಪೂರ್ಗೆ ಜನ್ಮ ದಿನ ರಾ- ನಲ್ಲಿ 'ಚಮಕ್ ಚಲೋಅಂತ ಭಲೇ ಸೊಗಸಾಗಿ ಡ್ಯಾನ್ಸ್ ಮಾಡಿದಾಳೆ ಎಂದೇ:) ಅಯ್ಯೋ ಅದಲ್ಲಾರಿಅದಲ್ಲವಮತ್ತೇನು?  ಅಹ ನಾಳೆ 'ಮನಮೋಹನ  ಸಿಂಗ್ರವರು  ಪಾಕಿಸ್ತಾನದ  ಅದ್ಯಾಕ್ಚ್ಯ  'ಹೋಳು'  ಬೀಡ ಜರ್ದಾರಿನ  ಮೀಟ್  ಮಾಡಿ ಅಮೋಘ  'ನೂರೊಂದನೆ ' ಸಾರಿ  ಭಯೋತ್ಪಾದಕರನ್ನ ನಮಗೆ ಒಪ್ಪಿಸಿ ಎಂದು ಹೇಳುವವರಿದ್ದಾರೆ:) ತತ್ ಅದಲ್ಲಾರಿ,

ಈಗ ಗೊತ್ತಾಯ್ತು 'ದೂರವಾಗ್ತಿರೋ  ಕುರ್ಚೀನ  ನೋಡ್ತಾ ' ಮತ್ತೊಮ್ಮೆ  ಕೂರುವೇನು  ಹತ್ತಿರ -ಹತ್ತಿರ ಬಾಅಂತ ಯೆಡಿಯೂರಪ್ಪ ಅವ್ರು ಹಾಡೋ,ಮಧ್ಯದಲ್ಲೇ ನನ್ನ ಮಾತು ತುಂಡರಿಸಿನೀವು ಸದಾ ಆಹಾಳು ಟೀ.  ವಿ  ನೋಡ್ತಾ ಬರೀ ' ವಿಷ್ಯಗಳೆನಿಮ್ ತಲೇಲಿ ತುಂಬಿಕೊಂಡಿವೆ ,ಒಮ್ಮೆ 'ಅವರನ್ನೆಲ್ಲ'ಅದನ್ನೆಲ್ಲ ಮರ್ತು , ಮನೇಲಿ ಹೆಂಡ್ತಿ 'ಇದಾಳೆಅನ್ನೋದು ನೆನಪಿರಲಿ!

 

ಅವಳ  ಮಾತಿನ ಬಿರು ಬಣಕ್ಕೆ ಪಿಚ್ ಆಗಿ ನಾ ಎದುರಿಗಿನ ಗೋಡೆ ನೋಡಲು  ಕಾಣಿಸಿದವು ಇಬ್ಬರು'ಮಹಾನುಭಾವರಫೋಟೋಗಳು! 'ಅವ್ರೆನಂಗೆ ಸಧ್ಯ ದಿಕ್ಕುದೇವ್ರೇ ನಾ ನಿಮ್ನೆ ನಮ್ಬಿದೀನ್, 'ನಾಳೆ'ಏನು ವಿಶೇಷವಿದೆಎಂದು ನನ್ನ ' ಮಂಕು ಕವಿದಿರುವ ' ಮನಕೆನಿಮ್ಮ ಹಸ್ತ ಇಟ್ಟು ಹೊಳೆಯುವಂತೆಮಾಡಿ!!

 

ನನ್ನೆದುರಿಗಿನ   ಗೋಡೆ ಮೇಲೆ ಇದ್ದ  'ಇಬ್ಬರು ಮಹಾನುಭಾವರಫೋಟೋಗಳು

.ವಿಘ್ನ ವಿನಾಯಕ್ 'ಗಣೇಶ'

. ಯುದ್ಧದಲ್ಲಿ ನನ್ನ ಬಂದುಗಳನೆ ನಾ ಕೊಲ್ಲಲೋಲ್ಲೇ ಎಂದು ಯುದ್ಧಕ್ಕೆ ಬೆನ್ನು ತೋರಿಸಿದ 'ಪಾರ್ಥ'ಅಕಾ 'ಅರ್ಜುನ' ನಿಗೆ 'ಗೀತೋಪದೇಶ' ಮಾಡಿ ಮತ್ತೆ ಯುದ್ಧಕ್ಕೆ ಅಣಿಗೊಳಿಸಿದ 'ಶ್ರೀ ಕೃಷ್ಣ'.. 

ಅವರು ನನಗೆ 'ಆಶೀರ್ವದಿಸಿದರೋ'  ಇಲ್ಲವೋ ನಾ ಕಾಣೆ-ಅರಿಯೆ:

ಆದರೆ ನನ 'ಮತಿಗ್ಏನೂಹೊಳೆಯಲಿಲ್ಲಕೊನೆಗ್ ನಾನೇ ಸೋತುಲೇ ಇವಳೇ ಈಗೀಗ ನನಗೆ ಆಫೀಸಿನ ಕೆಲಸವಿಪರೀತವಾಗಿದ್ದು , ಬಸ್ಸು ಹಿಡಿದು  ಆಫೀಸಿಗೆ-ಮರಳಿ ಮನೆಗ್ ಬರುವಸ್ಟರಲ್ಲಿ 'ಉಸ್ಸಪ್ಪಅನ್ಸುತ್ತೆ:(ಏನೇನೋ ಆಲೋಚನೆಗಳು,ಹಾಳೂ-ಮೂಳುಹೀಗಾಗಿ ನನಗೆ 'ನಾಳೆಅತ್ಲಾಗಿರ್ಲಿಇವತ್ತಿನ 'ಈಗಿನ'ಬಗ್ಗೆ ಯೋಚಿಸಲೇ  ಸಮಯಸಿಗುತ್ತಿಲ್ಲ!!  ನಾ ಸೋತೆ -ನೀನೆ ಹೇಳು ನಾಳೆ ಏನು ವಿಶೇಷತೆ?

ಹೆಗಲಿನ ಮೇಲೆ ಹಾಕಿದ ನನ್ನ ಕೈಯನ್ನ 'ಹಲ್ಲಿಯೊಂದೋ-ಜಿರಲೆಯೋಮೈ ಮೇಲೆ ಬಿದ್ದಂತೆಗಾಭಾರಿಯಗ್ ಮೈ ಕೊಡವಿ ಬಿಸಕುವಂತೆ ಎತ್ತಿ ಎಸೆದಳು:( ನಾ ಮುಂದೇನು ಅಂತ ನೋಡಲುನಂಗೆಮೊದ್ಲೇ  ಅನುಮಾನ ಇತ್ ! ನೀವು ಬರೀ 'ಬೊಗಳೆಬಿಡೋದೇ ಆಯಿತು,ಬರೀ ಬೂಟಾಟಿಕೆಪ್ರೀತಿ,ನಾಳಿನ 'ವಿಶೇಷತೆ ' ನಿಮಗೆ ಗೊತ್ತಿಲ್ಲ,ಸ್ಸರಿ ನಾನೇ ಹೇಳ್ತೀನ್ ಆಅದ್ರೆ -ಆದ್ರೆ ನೀವು 'ಅದನ್ನ'ನೆನಪು ಇಟ್ಟುಕೊಳ್ಳದತಪ್ಪಿಗೆ  ನಾಳೆಯಿಂದ 'ಒಂದುಕೆಲಸ ಮಾಡಬೇಕು:( 

ಒಹ್ ದೇವ್ರೇ ' ಹಾಳು ಮರೆವುನನಗ್ಯಾಕಪ್ಪ ಕೊಟ್ಟೆಇವಳೋ 'ಅದೇನುಅಂತ ಹೇಳದೆ ಆದರೆ-ಗೀದರೆ ಅಂತ ಯಾವ್ದೋ ಕೆಲಸಬೇರೆ ಮಾಡಬೇಕು ಅಂತವ್ಲೇಏನಾ ಕೆಲಸ?

ಏನಾ ವಿಶೇಷತೆ ನಾಳೆ?  ಹಿಂದೆ ಕೆಲ ಸಂದರ್ಭಗಳಲ್ಲಿ ಆದ ಅನುಭವಗಳಿಂದ ಪಾಠ ಕಲಿತಿದ್ದ ನಾ,ಮೊದಲು  ವಿಶೇಷತೆ  ಏನು ಅಂತಹೇಳುಆಮೇಲೆ ' ಕೆಲಸಅಂದೇ!

ಬಡ್ಕೊಬೇಕು:) ಮದ್ವೇಯಾಗ್ 'ಬರೀ ಒಂದು ವರುಷಅಸ್ಟರಲ್ಲೇ  ನಾ ನಿಮಗೆ 'ನಾಳೆನಮ್ಮ  ಮದುವೆ'ವಾರ್ಷಿಕೋತ್ಸವನೆನಪಿಸಬೇಕು:)ಅಂದ್ಲುಅಯ್ಯೋ!!

 

ಅಯ್ಯೋ ಎನ್ನ ಮತಿಯೇನೀನಗದ್ಯಾವ 'ಗೆದ್ದಲುಹಿಡಿದಿತ್ತುಹ್ಹಿಹಿ ಅಂತಒಹ್ ಅದಾ ಅದು ನಂಗೆಮೊದ್ಲೇ ಗೊತ್ತಿತ್ತು!ನೋಡೋಣ ನಿ ಹೆಂಗ್  ಪ್ರತಿಕ್ರಿಯಿಸುತ್ತೀಯೋ ಅಂತ ಅದ್ಕೆ ಒಂದು 'ಡವ್ಅಸ್ಟೇಎಂದೇ.. ಓಹೋ ನಂಗೆ ಗೊತ್ತಿಲ್ವ ನಿಮ್ಮ ಬಗ್ಗೆ ವರಸೆನಾ ನೋಡದೆ-ಅರೀದೆ ಇರೋದನೀವ್ಸೋತಂಗೆಯಈಗ ನಾ ಹೇಳಿದ್ದು ಮಾಡಿ,ಇನ್ನು 'ವ್ಯರ್ಥವಾದಿಸ್ ಉಪಯೋಗವಿಲ್ಲ,  ಸ್ಸರಿಸ್ಸರಿ'ಮಾರಾಯ್ತಿಹೇಳು ನಿನಗಾಗಿ ' ಚಂದ್ರನನ್ನ ತರಲೆ'! 

 

ನಿನಗಾಗಿ  ನಾ ಏನು ಮಾಡಬೇಕುಎಂದೇ ರೊಮ್ಯಾಂಟಿಕ್ ಮನದಿಂದ :) ನಂಗೆ ಚಂದ್ರ ಲೋಕದಪಾರಿಜಾತ ಬೇಡ , ನಾಳೆ ಹೊರಗಡೆ ಹೋಗಿ , ಮೊಬೈಲು ಇಲ್ಲದವ್ಯಕ್ತಿಯನ್ನ ಹುಡುಕಿ ಅದನ್ನುನಿರೂಪಿಸಿ ಎಂದಳು!! ಒಹ್ ಮೈ ಗಾಡ್ಅಲ್ಲ ಕಣೆ ಈಗೆಗ ೧೫೦ಕ್ಕೆ ಹಳೆ ಫೋನು೫೦೦ಕ್ಕೆ ಹೊಸಫೋನು ಸಿಗುತ್ತವೆ:) ಅಂಥದರಲ್ಲಿ ಈಗ 'ಮೊಬೈಲುಇರದ ಮನುಷ್ಯರು  ನಗರದಲ್ಲಿ ಏನು ದೇಶದಲ್ಲ್ಲಿಏನು ಇಡೀ'ಜಗತ್ತಿನಲ್ಲಿ'  ಹುಡುಕಾಡಿದರೂ ಸಿಗಲ್ಲ!! ಬೇರೆ ಏನಾರ ಹೇಳು ಮಾಡುತೀನಿ ಎಂದೆ

 

ಬೇಡ ಬೇಡ ಅಂದರೂ ನನಗೆ  ಹೊತ್ತಿನಲ್ಲಿ ಹಿಂದೊಮ್ಮೆ 'ಮಹಾತ್ಮ ಬುದ್ಧಹೇಳಿದ ಸಾಸಿವೆ-ಸೂತಕವಿಲ್ಲದ ಮನೆ ಇಲ್ಲ ಎಂಬ ಮಾತುನೆನಪಿಗೆ ಬಂತು..ಛೆ  ಅಧುನಿಕ ಯುಗದಲ್ಲಿ ಮೊಬೈಲುಇಲದೆ ಯಾರಾದರೂ ಇರಲು ಸಾಧ್ಯವೇಅದು ಅಸಂಭವ:) ದೇವ್ರೇ ನೀನೆ ದಿಕ್ಕು ಅಂತಆಯ್ತುಪ್ರಯತ್ನಿಸುತೀನಿ ಎಂದೆ.. ಮಂಚದ ಮೇಲೆ ಬಿದ್ದದ್ದು ಅಸ್ಟೇಬರೀ ಚಿಂತೆಯೇ:) ಎಲ್ಲಿ ಹುಡುಕುವುದುಮೊಬೈಲು ಇಲ್ಲದ ಮನುಶರನ್ನ

 

ಬೆಳಗ್ಗೆ ರಜಾ ದಿನವಾದ್ದರಿಂದ  ತಿಂಡಿ-ಕಾಫೀ ಮುಗಿಸಿ ಮೊಬೈಲು ಇಲ್ಲದ ಮಾನವರನ್ನ ಹುಡುಕಲುಹೊರ ನಡೆದೇಹ್ಹೊಗ್ತಾ ಹೇಳಿದೆ'ಮಡದಿಗೆಹೊರಗೆ ಹೋಗ್ತಿದೀನ್ ಕಣೆಅದೇ  ಕೆಲಸದಮೇಲೆ,ಬಹುಶ ಬರುವುದು 'ಲೇಟಆಗಬಹುದು ಎಂದೆಹೋಗಿ ಬನ್ನಿ 'ವಿಜಯೀಭವಅಂದಳು! ಕೈಬೀಸಿ ನಮ್ಮ ಮನೆಯಿಂದ ಆಚೆ ಬಂದು ಮೊದಲು ನನ್ನ 'ಧಿವ್ಯಧೃಸ್ಟಿ ಗೆ ಬೀಳುವವರಾರು  ಅಂತನೋಡಲು,ದೂರದಲ್ಲಿ ಬೆಳಗಿನಾ ವಾಕು ಮುಗಿಸಿ ಮರಳುತ್ತಿದ್ದ 'ಹಿರಿಯರೊಬ್ಬರುಕಾಣಿಸಿದರುಒಹ್ದೇವ್ರೇ ಮನೆ ಮುಂದೇನೆ ಯಾರೋ ಮೊಬೈಲು ಇಲ್ದೆ ಇರ್ವವರನ್ನ ಕರುಣಿಸಿದೆಯ ನಿನಗೆ ಸಲಾಂಅಂದೇ!,

 

 

 

ಅವರು ಹತ್ತಿರ ಬರುತ್ತಿದ್ದಂತೆ ಅನಿಸಿತು ಎನಗೆ-ಖಂಡಿತ ಇವರ ಹತ್ತಿರಮೊಬೈಲು ಇರಲಿಕಿಲ್ಲಸ್ವಾಮೀನಮಸ್ಕಾರನಿಮ್ಮತ್ರ ಮೊಬೈಲು ಇದೆಯಾ ಅಂದೇಪ್ರಸಂನವದವಾಗಿದ ಅವ್ರ ಮುಖ ಚಹರೆ'ಹರಳೆಣ್ಣೆ'ಕುಡಿದಂತಾಗಿಮುಖ ಗಂಟಿಕ್ಕಿಕೊಂಡುಇದೆಆದರೂ ಕೊಡಲ್ ಅಂದವ್ರೆ ದುರ ದುರನೆ'ದುರ್ದಾನ;' ತೆಗೆದು ಕೊಂಡವರಂತೆಹೋಗಬೇಕೆ:) 

 

 

ತತ್ಮೊದಲ ಪ್ರಯತ್ನಕ್ಕೆ  ವಿಘ್ನವೇಮುಂದೆ  ಹೋಗಲು ಒಬ್ಬ ತರಕಾರಿ ಬಂಡಿ ದೂಡಿಕೊಂಡುಬರುತ್ತಿದ್ದಮನ ಹೇಳಿತು ಅವನ ಹತ್ತಿರ ಖಚಿತವಾಗಲೂ ಮೊಬೈಲು ಇರ್ಲಕ್ಕಿಲ್ಲಅವನಿಗೆ ಅದರಅವಶ್ಯಕತೆ ಇಲ್ಲಏನ್ ಬೋರಣ್ಣ ಹೆಂಗಿದೀಯ -ಹೆಂಗೈತೆ ವ್ಯಾಪಾರ ಅಂದೇ?ನನ್ನನ್ನ ವಿಚಿತ್ರವಾಗ್ನೋಡ್ನನ್ನೆಸ್ರು ಬೋರಣ್ಣ ಅಲ್ಲ ಸೋಮಿಸುಂದ್ರೂ ಅಂತ!! ಯಾಪಾರ ಹೆಂಗೋ ಇದೆ ಅಂದಹೌದುನಿನ್ನ ಹತ್ತಿರ ಮೊಬೈಲು ಇದೆಯಾ ಅಂದೇ(ಮನದಲ್ಲಿ ಇರದಿರಲಪ್ಪ ಎಂಬ ಹರಕೆನಂಗೆ  ಮೊಬೈಲುಅಂದ್ರೆ  ಆಗಿ  ಬರಲ್ಲ  ಸೋಮಿ , ಆದರೂ ---

 

 

ಮಧ್ಯಕ್ಕೆ  ಅವನ  ಮಾತು  ತುಂಡರಿಸಿ , ಅಬ್ಬ ಸಧ್ಯ ಸಿಕ್ಕನಲ್ಲ ಒಬ್ಬ ಮೊಬೈಲು ಇಲ್ಲದ ವ್ಯಕ್ತಿ ಅನ್ತಿರಲು,ಜೇಬಿನ ಹೊಲ ಹೋದ ವನ ಕೈ'ಒಂದುಮೊಬೈಲು ಸಮೇತ ಆಚೆ ಬರಬೇಕೆ ಪಿಚ್ ಆಗಿನೋಡ್ತಿರಲು ಅವನು ಹೇಳಿದನೋಡಿ ಸೋಮಿ ನಂಗೂ ಮೊಬೈಲಿಗೂ ಅಸ್ಟಕ್ಕಸ್ಟೇ ಈಗೀಗ'ಹಾಪ್ಕಾಮ್ಸ್ನೋರು ತರಕಾರಿಯ ರೇಟು 'ಹೆಹ್ಚು -ಕಡಮೆಅಗೊದ್ನ ಮೊಬೈಲ್ಗಿಗೆ  'ಎಸ ಎಂ ಎಸ'ಮಾಡ್ತಾರೆ ಅದ್ಕೆನಾ ಇರ್ಲಿ ಅಂತ ಒಂದು (ಒಂದೆನ ?)ಮಡಗಿದಿನಿ  ಅಂದ:(  ನೆದೂ ವಿಫಲ,

 

ಮುಂದೆ ಹೋಗಲು 'ಚಿಂದಿ ಆಯುವಇಬ್ಬರು ಹುಡುಗರು ಕಾಣಿಸಿದರುಒಬ್ಬ 'ಕೊಳವೆ ಕೊಳವೇರಿಇದ್ಯಾವ್ವ್ದು ಕೊಳವೆಕೊಲವೆರೀಅಂತ ತಲೆ ಕೆರೆದುಕೊಳ್ಳುತ್ತಾ ಹತ್ತಿರ ಹೋದೆ ,ಅವನೋ 'ವಿಚಿತ್ರ'ಡ್ಯಾನ್ಸ್ ಮಾಡುತ್ತಿದ್ದ  'ಹೊಟ್ಟೆನೋವು ಬಂದಂತೆ!! ಇನ್ನೊಬ್ಬ ನೋಡುತ್ತಿದ್ದ  ಇವನಹತ್ತಿರ ಮೊಬೈಲು ಇಲ್ಲ ಅನ್ಸುತ್ತೆ ಅಂತ ಹತ್ತಿರ ಹೋಗಿ ,ನಿನ ಹತ್ತಿರ ಮೊಬೈಲು ಇಲ್ಲ ಅಲ್ಲವೇ?ಅಂದೇ.

ಕಿವಿ ಮುಚ್ಚಿದ್ದ ಕೂದಲಿನ  ಒಳಗೆ ಕೈ ಹಾಕಿ ಕಿವಿಗೆ ಸಿಕ್ಕಿಸಿದ್ದ ಮೊಬೈಲಿನ ವಾಯರ್ ತೆಗೆದು 'ಎನ್ನ'ಅಂದಅಯ್ಯೋ ಅಯ್ಯೋ ಇದೂ ವೇಸ್ಟೂ ಅಂತ ಮುನ್ನಡೆದೆ:( ಆಮೇಲೆ ಎಲ್ಲೆಲ್ಲಿ ಹೋಗಿ ಯಾರನ್ನೇಕೇಳಿದರೂ ಒಬ್ಬರ ಹತ್ತಿರ ಒಂದುಇನ್ನೊಬ್ಬರ ಹತ್ತಿರ ಎರಡುಮತ್ತೊಬ್ಬನ ಹತ್ತಿರಮೂರು ಮೊಬೈಲು,ಒಂದೇ ಹೆಚ್ಚುಎರಡು ಜಾಸ್ತಿಮೂರು ಒವರಯ್ತು ಅನಿಸ್ತು ನಂಗೆ!

ಯಾಕೋ 'ಒಂದು ಸಾರಿ ಉಂಡವನು ಯೋಗಿಎರಡು ಸಾರಿ ತಿಂದವ್ನು ಭೋಗಿ ಮೂರು ಸಾರಿತಿಂದವನು ರೋಗಿನಾಲ್ಕು ಸಾರಿ ತಿಂದವನನ್ನ ಹೊತುಕೊಂಡು ಹೋಗಿ ಎಂಬ ನುಡಿ ನೆನಪಾಯ್ತು!!

 

 

ಆಮೇಲೆ ನಾ ಸಂದರ್ಶಿಸಿದ ಜನರ ಆಧಾರದ ಮೇಲೆ  'ಸಂಶೋಧನೆಮಾಡಿದೆ..

 ಮೊಬೈಲಿನಲಿ ಬರೀ  ಮೆಗ್ ಪಿಕ್ಸೆಲ್  ಕ್ಯಾಮೆರ ಇದೆ ಅದ್ಕೆ  ಮೊಬೈಲು ಖರೀದಿಸಿದೆ ಅದರಲ್ಲಿ  ಮೇಗ ಪಿಕ್ಸೆಲ್ ಇದೆ!

 

ಇದರಲ್ಲಿ ಬರೀ ಎಫ್ ಮ್ ಇದೆಅದರಲ್ಲಿ ಮ್ಯೂಸಿಕ್ ಪ್ಲೇಯರ್ ಇದೆ

ಇದರಲ್ಲಿ ಬರೀ  ಜೀ ಬಿ ಇದೆಅದು ೧೦ ಜೀ ಬಿ ಅದ್ಕೆ

ಇದು ಇನ್ಕಮಿಂಗ್ಅದು ಅವುಟ್ ಗೊಇಂಗ್ - ಅಲ್ರೀ ಎರಡು ಸಿಂ ಇರೋ ಮೊಬೈಲು  ಇದೆ ಅಂದೇರ್ರೀ ಸೋಮಿ ಅದು ನಮಗೂಗೊತ್ತು!! ಆದ್ರೆ ಇಸ್ತ್ ಕಡಮೆ ರೇಟಿಗೆ ಮೊಬೈಲು ಸಿಗ್ತಿವೆಇನ್ನೊಂದೂ ಇರ್ಲಿ ಬಿಡಿ ಎನ್ನೋದೇ:(

 

 

ಒಟ್ಟಿನಲ್ಲಿ ಯಾರೊಬ್ಬರೂ ಮೊಬೈಲು ಇಲ್ಲದಿರುವವರು ಸಿಗಲಿಲ್ಲಮತ್ತು ಮೊಬೈಲು ಇದ್ದು ,ನಂಗೆಸಿಕ್ಕಿದ  ಎಲ್ಲರೂ  -- ಮೊಬೈಲ್ನ ಗುಣ-ವಿಷೆಶತೆಗಳಿಂದಲೂ ಖುಷಿಯಾಗಿರದೆ 'ಇನ್ನೊಂದಕ್ಕಾಗಿ'ತಹತಹಿಸುತ್ತಿದ್ದರು:)

ಇರುವುದೆಲ್ಲವ ಬಿಡದೆಇಲ್ಲದಿದಿರ್ವದರೆಡೆಗೆ  ತುಡಿವುದೇ ಜೀವನ ಅಂತ ಕವಿವರ್ಯರ ಸಾಲುಬದಲಾಯಿಸಿದೆ ,ಆದರೆ ನಾ ಮನೆಗೆ 'ಮೊಬೈಲುಇಲ್ಲದಿರುವವರನ್ನೇ ಹುಡುಕಿ ಕರೆದೊಯ್ದು  ನಾ'ಬಚಾವ್ಆಗಬೇಕಿತ್ತಲ್ಲ!  ಆಗಿಂದ ಹುಡುಕುತ್ತಲೇ ಇರ್ವೆ,ಇನ್ನೂ ಸಿಕ್ಕಿಲ್ಲ!! 

 

ನಿಮ್ಮ ಹತ್ತಿರ ಮೊಬೈಲು ಇಲ್ಲವೆ?

ನಿಮಗೆ ಯಾರದ್ರೂ ಮೊಬೈಲು ಇಲ್ಲದಿರುವವರು ಗೊತ್ತೇ?

ಸಂಪರ್ಕಿಸಿ 

ಮಂಕುದಿಣ್ಣೆ@ಮಂಕುತಿಮ್ಮನದಿಬ್ಬ.ಕಾಂ.

 

 

 

.............................ಜೈ ಮೊಬೈಲಾಯ ನಮಃ:)........................:(    

 

  ಚಿತ್ರ ಮೂಲ: (ಮೊಬೈಲು) http://www.bbc.co.uk/blogs/bbcinternet/2008/01/is_the_future_mobile_in_2008.ಹ್ತ್ಮ್ಲ್

 

ಸಾಸಿವೆ : http://recipes.wikia.com/wiki/Black_mustard_seeds

 

 

 

 

Comments