ರಾಹುಕಾಲ ನೆನಪಿಟ್ಟುಕೊಳ್ಳುವುದು ಹೇಗೆ - ಒಂದು ಸರಳ ಸೂತ್ರ

ರಾಹುಕಾಲ ನೆನಪಿಟ್ಟುಕೊಳ್ಳುವುದು ಹೇಗೆ - ಒಂದು ಸರಳ ಸೂತ್ರ

         Mother Saw Father Wearing Thurto Tueto on Sunday. ಇದರಲ್ಲಿ ಏನು ವಿಶೇಷ ಅಂದಿರಾ. ಇದರಲ್ಲೇ ನಮ್ಮ ಭಾರತೀಯರಿಗೆ ಬೇಕಾಗುವ ಮಹತ್ವದ ಸಂಗತಿ ಅಡಗಿದೆ. ಅರೆರೇ! ಇದೇನಿದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಎತ್ತಣೆತ್ತಿಂದ ಸಂಭಂದ ಅಂದ್ರಾ ಅಥವಾ ಎಲ್ಲಮ್ಮಂಗೂ ಮುಲ್ಲಾಸಾಬುಂಗೂ ಏನು ಸಂಭಂದ ಅಂದಿರಾ. ಸ್ವಾಮಿ, ಅದು ಯಾವುದೂ ಅಲ್ಲದೆ ಕಿರಿಸ್ತಾನ್ರ ಇಂಗ್ಲೀಷಿಗೂ ನಮ್ಮ ರಾಮಾಚಾರಿಗಳಿಗೂ ಇರೋ ಸಂಭಂದ ಇದ್ರಲ್ಲಿ ಐತೆ. ನೀವು ರಾಹು ಕಾಲವನ್ನು ನೋಡಬೇಕೆಂದರೆ ಇನ್ನು ಮುಂದೆ ಕ್ಯಾಲೆಂಡರ್ ಅಥವಾ ಪಂಚಾಂಗವನ್ನ ನೋಡೋ ಅವಶ್ಯಕತೆಯಿಲ್ಲ. ಮೇಲಿನ ಸರಳ ವಾಕ್ಯ (ತುಸು ಕಷ್ಟ ಅನ್ಕೊಳಿ) ನೆನಪಿಟ್ಟುಕೊಂಡರೆ ಸಾಕು. ಅದೇನಪ ಅಂತಂದ್ರೆ ಮೇಲಿನ ವಾಕ್ಯವನ್ನು ಉರು ಹೊಡೆದಾದ ನಂತರ ಈ ವಿಷಯ ಅಂದ್ರೆ ಅದರಲ್ಲಿರುವ Mother Saw Father Wearing Thurto Tueto on Sunday ಅನ್ನು ಕ್ರಮಬದ್ಧವಾಗಿ Monday, Saturday, Friday, Wednesday, Thursday, Tuesday & Sunday ಅಂತ ಮಾಡಿಕೊಳ್ಳಿ. ಮತ್ತು ಸೋಮವಾರ (Monday) ೭.೩೦ ರಿಂದ ೯.೦೦ಕ್ಕೆ ರಾಹು ಕಾಲ ಇರುತ್ತೆ ಅನ್ನೋದನ್ನ ನೆನಪಿನಲ್ಲಿಡಿ. ಇನ್ನು ಆ ವಾಕ್ಯದಲ್ಲಿರುವ Saw ಪ್ರಕಾರ Saturday ೯.೦೦ ರಿಂದ ೧೦.೩೦ಕ್ಕೆ ರಾಹುಕಾಲ ಇರುತ್ತೆ. ಹಾಗೆಯೇ Father (Friday)ಯ ದಿವಸ ೧೦.೩೦ ರಿಂದ ೧೨.೦೦ರವರೆಗೆ;  Wearing (Wednesday) ೧೨.೩೦ರಿಂದ ೧.೩೦ರವರೆಗೆ, Thurto (Thursday) ೧.೩೦ ರಿಂದ ೩.೦೦ರವರೆಗೆ; Tueto (Thursday) ೩.೦೦ ರಿಂದ ೪.೩೦ರವರೆಗೆ ಮತ್ತು Sunday ೪.೩೦ರಿಂದ ೬.೦೦ರವರೆಗೆ ರಾಹುಕಾಲವಿರುತ್ತದೆ. ರಾಹುಕಾಲ ಪ್ರತಿನಿತ್ಯ ೧.೩೦ ಘಂಟೆ ಇರುತ್ತದೆನ್ನುವುದನ್ನು ಗಮನದಲ್ಲಿಟ್ಟರೆ ಸಾಕು.
===========================================================================================
(ವಿ.ಸೂ. : ಇದನ್ನು ತೆಲುಗು ಎಫ್.ಎಮ್. ೯೮.೩ ರೇಡಿಯೋ ಮಿರ್ಚಿ, ಹೈದರಾಬಾದಿನಲ್ಲಿ ವೀಕ್ಷಕರೊಬ್ಬರು ಹಂಚಿಕೊಂಡ ವಿಷಯ)

 

Rating
No votes yet

Comments