ಗಜಲ್
ಹಟತೊಟ್ಟ ಯೋಗಿಯಂತೆ ಕಂಗೊಳಿಸುತ್ತವೆ ಹಸಿರೆಲೆಗಳು
ಸುದೀರ್ಘ ಆಲೋಚನೆಯಲ್ಲಿ ವಿಸ್ತರಿಸಿಕೊೞುತ್ತವೆ ದಿಕ್ಕಿಗೊಂದು ಹಸಿರೆಲೆಗಳು.
ನಿಶ್ಕಲ್ಮಶ ಮುಗ್ದನಗುವಿನ ಕಣ್ಣೋಟಗಳ ಅರಿವಿದೆ.
ಮೊಗ್ಗುಗಳು ಹೂವಾಗಿ ಅರಳಿದಾಗ ಬೀಗುತ್ತವೆ ಹಸಿರೆಲೆಗಳು.
ಮುದ ನೀಡುವ ಚಿಟ್ಟೆಗಳು ಕೊನೆಗೂ ಹಾರಿಹೋಗುತ್ತವೆ
ದಾರ್ಶನಿಕತೆಯ ಈ ಅರಿವಲ್ಲಿ ಹಳದಿಯಾಗುತ್ತವೆ ಹಸಿರೆಲೆಗಳು.
ಬಿಕರಿಯಾಗದಿರಬಹುದು ರೆಪ್ಪೆಯೊಳಗಿನ ಕನಸುಗಳು
ಮಾರುಕಟ್ಟೆಗೆ ಬಂದು ನಿಲ್ಲುವುದಿನ್ನೂ ತಪ್ಪಿಸಿಲ್ಲ ಹಸಿರೆಲೆಗಳು.
ಹುಡುಕುವ ಕಣ್ಣಿಗೆ ಅಪ್ರಬುಧ್ಧ ನಗು ಕಂಡಿದೆ ನಿಜ
ನಿನ್ನ ಚಿಂತನೆಗೆ ನಾನು ನಿಲುಕದಾದಾಗ ನಗುತ್ತವೆ ಹಸಿರೆಲೆಗಳು.
Comments
ಉ: ಗಜಲ್
ಉ: ಗಜಲ್
ಉ: ಗಜಲ್
In reply to ಉ: ಗಜಲ್ by H A Patil
ಉ: ಗಜಲ್