ಜನಪದ ತೆರನಾದ ಹಾಡುಗಳು - ೧
ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು
ಹೊಂಟ್ಯಾನ ಎನಗಂಡ ಹೊಲದೆಡೆಗೆ |
ಹೊತ್ತು ಮುಳುಗೋ ಮುಂದ ಬಾರಪ್ಪ ನೀ ಮನಿಯೊಳಗ | ಹೆಂಡತಿ ಗಂಡನಿಗೆ|
ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆ ಕಣಮ್ಮಿ
ಆಳು ಕಾಳು ಕಡ್ಡಿಗಳನೆಲ್ಲ ಸಮಱಿಯಲು |
ಹೊತ್ತು ಮುಳುಗುವುದು ನಾ ಏನ ಮಾಡಲಿ ಎನ್ನೊಡತಿ | ಗಂಡ ಹೆಂಡತಿಗೆ|
ಹೊತ್ತು ಮುಳುಗಿದೆ ಮ್ಯಾಲಿ ಗುಂಡಿಗಿ ನಡುಗತಯ್ತಿ
ನೀನಿಲ್ಲದ ಮನಿ ಹೂವಿಲ್ಲದ ಗಿಡದಾಂಗ|
ನಾನು ಸೊರಗಿಹೋಗುವೆ ದಿನವೂ | ಹೆಂಡತಿ ಗಂಡನಿಗೆ|
ಆಡಾಕ ಆಡ್ಮರಿಗಳು, ನೋಡಾಕ ಹೂದೋಟ
ಕೂಡ ಮಾತಾಡಾಕ ನೆರೆಹೊರೆಯವರು|
ಹಂಗ್ಯಾಕ ಹಲುಬುತಿ ನೀ ನನಗಾಗಿ | ಗಂಡ ಹೆಂಡತಿಗೆ|
ಸಂಪದಿಗರೆ,
ಇದನ್ನ ಇನ್ನು ಚೆನ್ನಾಗಿ ಬರೆಯಲು ನನಗೆ ನೆರವು ನೀಡಿ.
Rating
Comments
ಉ: ಜನಪದ ತೆರನಾದ ಹಾಡುಗಳು - ೧
ಉ: ಜನಪದ ತೆರನಾದ ಹಾಡುಗಳು - ೧
In reply to ಉ: ಜನಪದ ತೆರನಾದ ಹಾಡುಗಳು - ೧ by savithru
ಉ: ಜನಪದ ತೆರನಾದ ಹಾಡುಗಳು - ೧
In reply to ಉ: ಜನಪದ ತೆರನಾದ ಹಾಡುಗಳು - ೧ by savithru
ಉ: ಜನಪದ ತೆರನಾದ ಹಾಡುಗಳು - ೧