ವಾಕ್ ಸಿದ್ಧಿ ಸಾಧಿಸಬೇಕೆ? ಇಲ್ಲಿದೆ ಸಾಧನೋಪಾಯ

ವಾಕ್ ಸಿದ್ಧಿ ಸಾಧಿಸಬೇಕೆ? ಇಲ್ಲಿದೆ ಸಾಧನೋಪಾಯ

 

 

ವಾಕ್ ಸಿದ್ಧಿ ಅಂದರೆ ನಮ್ಮ ಬಾಯಿಂದ ನುಡಿದದ್ದೆಲ್ಲವೂ ನಿಜವೇ ಆಗುವುದು.
 

ಅಷ್ಟಾಂಗ ಯೋಗದಲ್ಲಿ ಒಂದು ಮುಖ್ಯ ಭಾಗವೆಂದರೆ ಸದಾ ಸತ್ಯವನ್ನು ನುಡಿಯುವುದು.

 

ಸ್ವಾಮಿ ರಾಮರು ತಮ್ಮ Lectures on Yoga ಎಂಬ ಅಪರೂಪದ ಪುಸ್ತಕದಲ್ಲಿ ಹೀಗೆಂದಿದ್ದಾರೆ: "ಯಾರು ತಮ್ಮ ಜೀವನ ಪೂರ್ತಿ ಸತ್ಯವನ್ನೇ ಹೇಳುವ ವ್ರತವನ್ನು ಕೈಗೊಳ್ಳುತ್ತಾರೋ ಅಂಥಹ ಸತ್ಯವ್ರತಿಗಳ ಬಾಯಿಂದ ಬಂದದ್ದೆಲ್ಲವೂ ನಿಜವಾಗುವುದು; ಏಕೆಂದರೆ, ಸತ್ಯವ್ರತಿಗಳು  ಸುಳ್ಳನ್ನು ಊಹಿಸಲೂ ಸಾಧ್ಯವಿಲ್ಲ."

 

ಸತ್ಯವ್ರತವನ್ನು ಕೈಗೊಳ್ಳುವುದು ಖಂಡಿತವಾಗಿಯೂ ಸುಲಭಸಾಧ್ಯವಲ್ಲ, ಆದರೆ ಅಂದುಕೊಂಡಷ್ಟು ಅಸಾಧ್ಯವೂ ಅಲ್ಲ.

 

ನಿಮ್ಮ ಜೀವನವನ್ನೇ ಬದಲಾಯಿಸುವಷ್ಟು ಶಕ್ತಿ ಸತ್ಯಮಾರ್ಗದಲ್ಲಿದೆ. 

 

ನೀವೂ ಕೂಡ ಇದನ್ನು ಚಾತುರ್ಮಾಸದಂತ ಅಲ್ಪಾವಧಿಗೆ ಮಾಡಿ ನೋಡಬಹುದು.   

 

ಆದರೆ ಸಣ್ಣದೊಂದು ಎಚ್ಚರಿಕೆ: ಸುಳ್ಳೇ ಇಲ್ಲದ ಜೀವನದಲ್ಲಿ ಸ್ವಾರಸ್ಯವೂ ಬಹುಶಃ ಇರಲಾರದು.

Comments

Submitted by makara Thu, 10/24/2013 - 21:15

ಸುಳ್ಳು ನಮ್ಮಲ್ಲಿಲ್ಲವಯ್ಯಾ, ಸುಳ್ಳೇ ನಮ್ಮನೆ ದೇವರು...ಎಂದು ಪುರಂದರ ದಾಸರೇ ಹಾಡಿಲ್ಲವೇ? ನಾವು ಸತ್ಯವಂತರು ಆದರೆ ನಮ್ಮ ಮನೆದೇವ್ರು ಮಾತ್ರ ಸುಳ್ಳುಗಾರ ಅಲ್ಲವೇ :))--ಶ್ರೀಕರ್‌ಜಿ ಇದು ನಮ್ಮ ಕೊನೆಯ ಲೈನಿನ ಪಂಚಿಗೆ ಪ್ರತಿಪಂಚ್ :))

ಶ್ರೀಧರ್ ಜೀ,

ನಾವು ಸತ್ಯವಂತರಾದರೆ ಈ ಕಾಲಕ್ಕೆ ಹೇಳಿಸಿದವರಲ್ಲ

ಸತ್ಯವಂತರಿಗಿದು ಕಾಲವಲ್ಲ....... ಎಂದು ಅದೇ ಪುರಂದರದಾಸರು ಹಾಡಿದ್ದಾರೆ. :-))))

ರಾಮಾಯಣಕ್ಕಿಂತ ಮಹಾಭಾರತ ಹೆಚ್ಚು ಸ್ವಾರಸ್ಯಕರ ಯಾಕೆಂದರೆ ಇದು ಕಪಟನಾಟಕ ಸೂತ್ರಧಾರಿಯ ಕತೆ.

ಧರ್ಮರಾಜ ಹೇಳಿದ ಸತ್ಯವನ್ನು ಪಾಂಚಜನ್ಯ ಊದಿ ಸತ್ಯದ ಸದ್ದಡಗಿಸಿದ ಕತೆ ಯಾವ ಸಂದೇಶ ಕೊಡುತ್ತದೆ? ಗಂಭೀರ ಪ್ರಶ್ನೆಯ ಉತ್ತರವೇನಾದರೋ ಗೊತ್ತೇ?

ಹಾಗೆಯೇ ಈ ಕಪಟನಾಟಕ ಸೂತ್ರಧಾರೀ ಎಂಬ ಬಿರುದಿನ ಹಿಂದಿನ ಕತೆ ಏನಾದರೂ ಗೊತ್ತೇ?

ಗೊಂದಲ ಪರಿಹರಿಸಲು ಸಾಧ್ಯವೇ?

ಶ್ರೀಕರ್‌ಜಿ ತಮ್ಮ ಮರುಪ್ರತಿಕ್ರಿಯೆಗೆ ಧನ್ಯವಾದಗಳು. ಆ ಕಪಟ ನಾಟಕ ಸೂತ್ರದಾರಿಯ ಕುರಿತಾಗಿ ಇರುವ ವಿವರಗಳಿಗೆ ಈ ಲೇಖನವನ್ನು ಓದಿ. ಇದು ಸ್ವಾಮಿ ಹರ್ಷಾನಂದರು ಕೃಷ್ಣನ ಬಗೆಗೆ ಎದ್ದಿರುವ ಗೊಂದಲಗಳಿಗೆ ಸೂಚಿಸಿರುವ ಪರಿಹಾರಗಳು.
http://sampada.net/blog/%E0%B2%AD%E0%B2%BE%E0%B2%97-%E0%B3%A8-%E0%B2%95%...
ಅಂತಿಮವಾಗಿ ಒಂದು ಮಾತು ಉಲ್ಲೇಖಾರ್ಹವೆನಿಸುತ್ತದೆ. ನಾವು ಸುಳ್ಳು ಹೇಳುತ್ತೇವೆ ಅಥವಾ ನಿಜ ಹೇಳುತ್ತೇವೆ ಎನ್ನುವುದು ಮುಖ್ಯವಲ್ಲ ಆದರೆ ಅದರ ಅಂತಿಮ ಫಲ ಏನಾಗುತ್ತದೆ ಎನ್ನುವುದು ಮುಖ್ಯ. ಧರ್ಮರಾಯ ಸುಳ್ಳು ಹೇಳಿದನೆಂದುಕೊಂಡರೂ ಸಹ ಅದರ ಅಂತಿಮ ಉದ್ದೇಶ ಧರ್ಮಸ್ಥಾಪನೆ ಹಾಗಾಗಿ ಅದು ನ್ಯಾಯಸಮ್ಮತವೇ ಆಗಿದೆ. ಇದು ಒಂದು ವಿಧದಲ್ಲಿ End justifies the means ಎಂದು ಹೇಳಬಹುದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರ್ ಜೀ,

"....... ನಾವು ಸುಳ್ಳು ಹೇಳುತ್ತೇವೆ ಅಥವಾ ನಿಜ ಹೇಳುತ್ತೇವೆ ಎನ್ನುವುದು ಮುಖ್ಯವಲ್ಲ ಆದರೆ ಅದರ ಅಂತಿಮ ಫಲ ಏನಾಗುತ್ತದೆ ಎನ್ನುವುದು ಮುಖ್ಯ. ಧರ್ಮರಾಯ ಸುಳ್ಳು ಹೇಳಿದನೆಂದುಕೊಂಡರೂ ಸಹ ಅದರ ಅಂತಿಮ ಉದ್ದೇಶ ಧರ್ಮಸ್ಥಾಪನೆ ಹಾಗಾಗಿ ಅದು ನ್ಯಾಯಸಮ್ಮತವೇ ಆಗಿದೆ. ಇದು ಒಂದು ವಿಧದಲ್ಲಿ End justifies the means ....."

ನಿಮ್ಮ ಮಾತು ನನಗೆ ನಮ್ಮ ಹತ್ತನೇ ತರಗತಿಯ (?) ಇಂಗ್ಲೀಷ್ ಪಾಠ ಗಾಂಧೀಜಿಯವರ Means and Ends ಅನ್ನು ನೆನಪಿಸಿತು.

ನನಗನ್ನಿಸುವುದು ಧರ್ಮರಾಜನ ಸತ್ಯದ ವ್ರತ ಹೆಚ್ಚು ಮುಖ್ಯ. ಎಂದು --- ಸತ್ಯ ಹೇಳಿದರೆ ಯುದ್ಧದಲ್ಲಿ ಸೋಲು ಖಂಡಿತವೆಂದು ತಿಳಿದಿದ್ದರೂ ಸತ್ಯವನ್ನೇ ಹೇಳಿದ !

ಈ ಬಗ್ಗೆ ಹೆಚ್ಚಿನ ಮಂಥನ ಒಳ್ಳೆಯದೇನೋ !

ಶ್ರೀಕರ್ ಇಲ್ಲಿ ನೀವು ಹೇಳಿರುವ ಪ್ರಸಂಗ ಮಹಾಭಾರತದ ಯುದ್ದದ್ದು. ದ್ರೋಣರನ್ನು ಯುದ್ದದಲ್ಲಿ ನಿಗ್ರಹಿಸಲಾರದೆ ಅವರನ್ನು ಮಣಿಸಲು ಹೂಡಿದ ಒಂದು ತಂತ್ರ. ಅವರ ಮಗ ಅಶ್ವತ್ಥಾಮ ಹತನಾದನೆಂದು ಹೇಳಿದರು ಯುದ್ದ ತೊರೆಯುವರೆಂಬ ಉಪಾಯ. ಆದರೆ ಅವರನ್ನು ನಂಬಿಸಲು ದರ್ಮರಾಯನ ಹತ್ತಿರ ಅಶ್ವತ್ಥಾಮ ಸತ್ತ ಎಂದು ಹೇಳಿಸಲಾಯಿತು. ಆದರೆ ಧರ್ಮರಾಯ ಸುಳ್ಳುಹೇಳಲು ಒಪ್ಪಲಿಲ್ಲ. ಆಗ ಅಶ್ವತ್ಥ್ತಾಮ ಎಂಬ ಆನೆ ಸತ್ತಿದೆಯೆಂದ ಅವನ ಕೈಲಿ ಹೇಳಿಸಿ, ಆನೆ ಶಬ್ದ ದ್ರೋಣನ ಕಿವಿಗೆ ಬೀಳದಂತೆ ಮಾಡಿ ಅವನ ಯುದ್ದದ್ದ ಏಕಾಗ್ರತೆಯನ್ನು ಬಂಗ ಮಾಡಿ ನಂತರ ಅವನನ್ನು ಕೊಲ್ಲಲಾಯಿತು. ವಿಹ್ವಲ ಮನದ ದ್ರೋಣ ಹತನಾದ
ಆದರೆ ಒಂದು ಅನುಮಾನವು ಕಾಡುವುದು ಅಶ್ವತ್ಥಾಮ ಚಿರಂಜೀವಿ ಅದು ದ್ರೋಣನಿಗೂ ತಿಳಿದಿತ್ತು ಅದು ತಿಳಿದಿದ್ದು ಸಹ ಏಕೆ ಈ ಸುದ್ದಿ ನಂಬಿದ ?
-------------------------
ಇರಲಿ ಬಿಡಿ ಕ್ರಿಕೇಟ್ ಆಟದಲ್ಲಿ ಕೆಲವು ಬ್ಯಾಟಿಂಗ್ ಮಾಡಲು ನಿಂತರೆ ಅವರನ್ನು ಔಟ್ ಮಾಡಲು ಸಾದ್ಯವಾಗುವುದೆ ಇಲ್ಲ ಆಗ ಅವರನ್ನು ಪೆವಿಲಿಯನ್ ಗೆ ಕಳಿಸಲು ಎಲ್ಲ ರೀತಿಯ ಪ್ರಯತ್ನಪಡಲಾಗುತ್ತೆ ಅದರಲ್ಲಿ ಒಂದೆ ’ಸ್ಲೆಡ್ಜಿಂಗ್’ . ಅಂದರೆ ಅವನ ಕಾನ್ಸನ್ ಟೇಷನ್ ಬಂಗಗೊಳಿಸಲು ಅವನ ಭಾವನೆ ಕೆರಳಿಸಲಾಗುತ್ತೆ ಅವನಿಗೆ ಅಳು ಅಥವ ಕೋಪ ಬರುವಂತೆ ಮಾಡಲಾಗುತ್ತೆ, ಆಗ ಬ್ಯಾಟ್ಸ್ ಮನ್ ಔಟ ಆಗುತ್ತಾನೆ ಆಸ್ರೇಲಿಯನ್ನರು ಈ ತಂತ್ರ ಬಹಳವೆ ಉಪಯೋಗಿಸುತ್ತಾರೆ...
ನೀವು ಹೇಳಿದ ದ್ರೋಣನ ಮೇಲಿನ ಯುದ್ದದ್ದ ಧರ್ಮರಾಯನ ಸುಳ್ಳು ಹೇಳುವ ತಂತ್ರ ಇದೇ ಅಲ್ಲವೆ?....

ಇನ್ನು ಮುಂದೆ ನೋಡಿ..

ಕರ್ಣ ಅಜೇಯನಾಗಿರುತ್ತಾನೆ ಅವನನ್ನು ಮಣಿಸಲು ಕಷ್ಟ ಆಗ ಅವನ ಸಾರಥಿಯ ಅವನ ನಿಂದೆಗೆ ನಿಲ್ಲುತ್ತಾನೆ ಅವನ ಯುದ್ದದ ಉತ್ಸಾಹವನ್ನು ಕುಂದಿಸುತ್ತಾನೆ ಮುಂದೆ ಅವನು ಅರ್ಜುನನಿಗೆ ಬಲಿಯಾಗುತ್ತಾನೆ
...
ಕಡೆಯಲ್ಲಿ ದುರ್ಯೋಧನ ಯುದ್ದ ಮಾಡಲು ಇಷ್ಟವಿಲ್ಲದೆ ನೀರಿನಲ್ಲಿ ಅಡಗಿ ಕುಳಿತಿರುತ್ತಾನೆ
ಅವನನ್ನು ಹೊರಗೆ ಕರೆಯಲು ಭೀಮ ಸ್ಲೆಡ್ಜಿಂಗ್ ತಂತ್ರವನ್ನೆ ಉಪಯೋಗಿಸುತ್ತಾನೆ...
ಅದು ನೀರೊಳಗಿರ್ದು ಭೆಮರ್ತನ್ ಉರಗಪತಾಕಮ್ ಕಾವ್ಯವೆ ಸೃಷ್ಟಿಯಾಯಿತು....
---------------------
ಅದೆಲ್ಲ ಕತೆಯಾಗಿ ನೋಡುವಾಗ ಕಾಣುವ ಭಾವನೆಗಳು.
ಇನ್ನು ನೀವು ಹೇಳುವ ಗೊಂದಲಗಳಿಗೆ ಉತ್ತರಿಸಬಹುದು... ಅದೊಂದು ದೀರ್ಘ ಬರಹವೆ ಆಗುತ್ತದೆ ವಿವಾದಗಳು ಮೇಲೆ ಏಳುತ್ತವೆ.

ವಂದನೆಗಳು
ಪಾರ್ಥಸಾರಥಿ

@ಪಾರ್ಥ ಸರ್/ಶ್ರೀಕರ್‌ಜಿ
ನೀವು ಹೇಳಿರುವುದು ಸ್ಲಡ್ಜಿಂಗ್ ವಿಧಾನವೇನೋ ಸರಿ. ದ್ರೋಣ ಮತ್ತು ಕರ್ಣರ ಪ್ರಸಂಗಗಳನ್ನು ಸಾಕ್ಷ್ಯ ಸಮೇತ ಸ್ವಾಮಿ ಹರ್ಷಾನಂದರು ಸಮರ್ಥಿಸಿದ್ದಾರೆ. ಅದನ್ನೊಮ್ಮೆ ಓದಿ, ಅದರ ಕೊಂಡಿಯನ್ನು ಹಿಂದಿನ ಪ್ರತಿಕ್ರಿಯೆಯಲ್ಲಿ ಕೊಟ್ಟಿದ್ದೇನೆ.