ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
ಬೆಳಗ್ಗೆ ಬೆಳಗ್ಗೆಯೆ ಮೊಬೈಲ್ ರಿಂಗ್ ಆಯ್ತು. 'ಹಲೊ' ಎಂದರೆ 'ನಾನು ಗಣೇಶ' ಎಂದರು ಆ ತುದಿಯಿಂದ. ನನಗೊ ಸ್ವಲ್ಪ ಕನ್ ಫ್ಯೂಶನ್
'ಯಾವ ಗಣೇಶ' ಅಂತ ಕೇಳಿದರೆ
'ನಾನ್ರಿ ಸಂಪದ, ಮಲ್ಲೇಶ್ವರ ಚಲೊ ' ಎಂದರು. ನನಗೆ ದಿಗ್ಗನೆ ಜ್ಞಾನೋಧಯವಾಗಿತ್ತು
'ಏನ್ಸಾರ್ ನೀವು , ನನಗೆ ತುಂಬಾ ಖುಶಿ ಯಾಗ್ತೆದೆ' ಅಂದೆ ನಗುತ್ತ , ಆದರೆ ಆ ಕಡೆಯಿಂದ ಸಪ್ಪೆ ದ್ವನಿ
'ಖುಷಿ ಎಲ್ರಿ ಬಂತು, ಎಲ್ಲ ಉಲ್ಟಾ ಹೊಡಿತಿದೆ, ಸಂಜೆ ಸಿಗ್ಬೇಕಲ್ಲ ಎಲಾರ್ಗು ಹೇಳ್ತಿದ್ದೀನಿ' ಅಂದರು.
ನನಗೆ ಆಶ್ಚರ್ಯ , ಇದ್ದಕಿದ್ದಂತೆ ಎನು ತುರ್ತು, ಯಾಕೆ ? ಎಲ್ಲರು ಅಂದರೆ ಯಾರು ?
"ಏನ್ಸಾರ್ ವಿಷಯ, ಯಾರಿಗೆ ಹೇಳಿದ್ದೀರಿ? ಎಲ್ಲಿ ಸೇರಬೇಕು? ಏಕೆ ?" ಅಂತ ಎಲ್ಲ ಪ್ರಶ್ನೆಗಳನ್ನು ಮಹಾಭಾರತ ಟಿ.ವಿ. ಸಿರೀಯಲ್ ನಲ್ಲಿ ಅರ್ಜುನ ಬಾಣ ಬಿಡುವಂತೆ , ಒಂದರ ಹಿಂದೆ ಒಂದು ಬಿಟ್ಟೆ
"ಏನಿಲ್ಲ ಆತ್ರಾಡಿ ಸುರೇಶ್, ಅರ್ಜೆಂಟ್ ಮೈಲ್ ಕಳಿಸಿದ್ದಾರೆ, ನಾವೆಲ್ಲ ಸಂಜೆ, ಅದೆಲ್ಲೊ ಬಸವನಗುಡಿ ಹತ್ತಿರ ಪುಳಿಯೋಗರೆ ಪಾಯಿಂಟ್ ಹತ್ರ ಬರಬೇಕಂತೆ, ಎನೋ ಪ್ರಾಬ್ಲಂ ನೀವು ಸ್ವಲ್ಪ ಮುಂಚೆ ಬನ್ನಿ ನಾನು ಕಾಯ್ತಿರೇನೆ" ಅಂದರು.
ಸರಿ ಅಲ್ಲಿ ಹೋದರೆ ಅವರೆ ಸಿಗ್ತಾರೆ, ಅಷ್ಟಕ್ಕು ಅಲ್ಲಿ ಅವರನ್ನು ಗುರುತು ಹಿಡಿಯುವದೇನು ಸುಲುಭ ಎಂದು , ಸುಮ್ಮನಾದೆ.
ನಾಲಕ್ಕು ಗಂಟೆಯ ಹೊತ್ತಿಗೆ ಪುಳೀಯೋಗರೆ ಪಾಯಿಂಟ್ ಗೆ ಹೊರಟೆ, ಅದನ್ನು ತಲುಪುವ ಮೊದಲೆ ಹಿಂದಿದ್ದ ದೇವಾಲಯದ ಮುಂದೆ , 'ಟೂ ಬೈ ಒನ್ ' ಆಸಾಮಿ ಒಬ್ಬರು ನಿಂತಿದ್ದರು,
ಅವರೆ ಇರಬಹುದು ಗಣೇಶ ಎನ್ನುತ್ತ ಪಕ್ಕದಲ್ಲಿ ಹೋಗಿ, ಸುಮ್ಮನೆ 'ನಾನ್ ಸಾರ್ ಪಾರ್ಥಸಾರಥಿ ಏಕೆ ಕಾಲ್ ಮಾಡಿದ್ದು' ಎಂದೆ
ಏಕೊ ತುಂಬಾ ಆತಂಕದಲ್ಲಿದ್ದರು, ಪ್ರಥಮ ಬಾರಿ ನೋಡುತ್ತಿದ್ದರು ಅದನ್ನು ನೆನೆಸದೆ
"ನೋಡಿ ಪಾರ್ಥವ್ರೆ ಒಂದು ಪ್ರಾಬ್ಲಮ್ ಆಗಿದೆ, ನಮ್ಮ ಮಲ್ಲೇಶ್ವರ ಚಲೋ ಗೆ 'ಚಲೋ' ಎಂದು ಹಸಿರು ಬಾವುಟ ತೋರಿದ್ದ, ಆಸು ರವರು ಗರಂ ಆಗಿಬಿಟ್ಟಿದ್ದಾರೆ,
ನನಗೆ ಫೋನ್ ಮಾಡಿ ಏನಾಯ್ತು ಚಲೋ ಮಲ್ಲೇಶ್ವರ್ ಅಂದ್ರು ನಾನು, ಆಯ್ತಲ್ಲ ಆಸುರವರೆ, 'ಗಂಗಮ್ಮ ದೇವಸ್ತ್ಜಾನ ಮಲ್ಲೇಶ್ವರ ಮೈದಾನ ತೋರಿಸಿದೆನಲ್ಲ ಎಂದೆ, ಅವರು
"ಏನ್ರಿ ಯಾವುದೊ ಒಂದು ರಸ್ತೆಗೆ ಟಾರ್ ಹಾಕಿಸಿ, ಏರಿಯ ಪೂರ್ತಿ ಹಾಕಿಸಿದೆ ಅಂತ ತೋರೊ ನಗರ ಪಾಲಿಕೆ ತರ ನೀವು ಮಾಡಿದ್ರೆ ಹೆಂಗ್ರಿ , ಜನರ ಹಣಕ್ಕೆ ಮೋಸ ಮಾಡ್ತಾರೇನ್ರಿ" ಅಂತ ದಬಾಯಿಸಿದರು ಎಂದರು.
ನನಗೆ ಆಶ್ಚರ್ಯ , ಅಲ್ಲ ನಾವು ಮಲ್ಲೇಶ್ವರ ನೋಡೋಕ್ಕು ಸಾರ್ವಜನಿಕ ಹಣಕ್ಕು ಎಲ್ಲಿಯ ಸಂಬಂಧ, ಎಲ್ಲಿಂದ ಎಲ್ಲಿಗೆ ಅದಕ್ಕೆ ಕೇಳಿದೆ
"ಅಲ್ಲ ಸಾರ್ ಗಣೇಶ್, ನಮಗೂ ಸಾರ್ವಜನಿಕ ಹಣಕ್ಕು ಎಲ್ಲಿಯ ಸಂಬಂಧ ' ಎಂದೆ.
"ಅದೆ ಆಗಿರೋದು ಎಡವಟ್ಟು, ಯಾರೊ ನೋಡಿ 'ಕೈ' ಕೊಟ್ಟಿದ್ದಾರೆ, ಮಲ್ಲೇಶ್ವರ ದರ್ಶನದ ಕಾರ್ಯಕ್ರಮ, ಅಂತ ಹೇಳಿ, ನಗರ ಸಭೆಯಲ್ಲಿ ಬಿಲ್ಲು ಮಾಡಿಸಿ, ೩೦ ಲಕ್ಷ ತೆಗೆದಿದ್ದಾರೆ, ಅದಕ್ಕೆ ನನ್ನ ಅಧ್ಯಕ್ಷ ಅಂತ ತೋರಿಸಿದ್ದಾರಂತೆ ಅದೆ ಬಂದಿದೆ ನನ್ನ ಕುತ್ತಿಗೆಗೆ, ನಮಗೆ ಚಲೋ ಅಂದ ತಪ್ಪಿಗೆ ಆಸುರವರ ಹೆಸರು ಇದೆಯಂತೆ, ಅವರು ಕೆಂಡವಾಗಿದ್ದಾರೆ" ಎಂದರು ಸಪ್ಪೆಯಾಗಿ,
ನನಗಂತು ಆಶ್ಚರ್ಯ, ಇದೆಲ್ಲಿಯ ಗ್ರಹಚಾರ, ಯಾರೊ ಈ " ಅಂಡಾಂಡ ಭ್ರಹ್ಮರ " ಮೂಲಕ್ಕೆ ತಂದಿದ್ದಾರಲ್ಲ ಎಂದು.
ಆದರು ಕುತೂಹಲ, 'ಅದು ಸರಿ ಯಾರಂತೆ , ಈ ರೀತಿ ಮಾಡಿರೋದು, ನಿಮ್ಮ ಹೆಸರು ತೋರಿಸಿ ನಗರ ಪಾಲಿಕೆಗೆ "ಮೂರು ನಾಮ" ಹಾಕಿರೋದು' ಅಂತ ಕೇಳಿದೆ
ಅವರು ದ್ವನಿ ತಗ್ಗಿತು, ' ನೋಡಿ ಪಾರ್ಥಸಾರಥಿಯವರೆ ನನಗೆ ನಂಬಲಿಕ್ಕೆ ಸಾದ್ಯವಿಲ್ಲ, ಅದ್ಯಾರೊ ಸಪ್ತಗಿರಿ ರೆಡ್ಡಿ ಎನ್ನುವರಂತೆ ಅವರ ಹೆಸರಿನಲ್ಲಿ ಎಲ್ಲ ಟೆಂಡರ್ ಆಗಿರೋದು ' ಎಂದರು
ನನಗೆ ಶಾಕ್ ಆಗಿತ್ತು,
'ಅಂದರೆ ನಮ್ಮ ಸಪ್ತಗಿರಿ ಯವರು ಇರಬಹುದು ಅಂತೀರ ಅಂದೆ,
ಗಣೇಶರು 'ಅದೆ ನೋಡಿ ನನಗೆ ಅರ್ಥವಾಗ್ತಿಲ್ಲ, ಸಪ್ತಗಿರಿ ಮತ್ತು ಸಪ್ತಗಿರಿರೆಡ್ಡಿ ಇಬ್ಬರು ಒಬ್ಬರೇನ ಬೇರೇನ ಅದನ್ನು ಆಸುರವರೆ ಹತ್ರ ಕೇಳಬೇಕು ಅವರ ಹತ್ತಿರ ಎಲ್ಲ ದಾಖಲೆ ಇದೆಯಂತೆ' ಎಂದರು.
ಈಗ ನನಗೆ ಗಣೇಶರ ಸಂಕಟ ಅರ್ಥವಾಗಿತ್ತು. ಅವರ ಮುಖ ನೋಡಿದರೆ 'ಛೇ ಪಾಪ' ಅನ್ನುವಂತಿತ್ತು.
'ಸರಿ ಪುಳಿಯೋಗರೆ ಪಾಯಿಂಟ್ ಗೆ ಹೋಗೋಣ ನಡೆಯಿರಿ, ಅಲ್ಲೆ ಎಲ್ಲ ಸಿಗಬಹುದು ಅಂದೆ,
'ಎಲ್ಲರು ಎಲ್ಲಿದ್ದಾರೆ ಅಂತ ತಿಳಿಯುತ್ತಿಲ್ಲ' ಎಂದರು, ನಾನು ಯಾರಾರಿಗೆ ಹೇಳಿದ್ದೀರಿ ಎಂದೆ
"ನಿಮಗೆ, ರಾಮಮೋಹನ, ಚಿಕ್ಕು, ಮಂಜು, ಜಯಂತ್ ಎಲ್ಲರಿಗು ಹೇಳಿದ್ದೀನಿ ಹೇಗಪ್ಪ ಈಗ ಎಲ್ಲರನ್ನು ಹುಡುಕೋದು, ಮಲ್ಲೇಶ್ವರ ಚಲೊ ಪೂರ ಎಲ್ಲರನ್ನು ಹುಡೊಕೋದೆ ಆಯಿತು, ಈಗ ಇಲ್ಲಿ ಬಂದರು ಇದೆ ನನಗಂತ ಸಾಕಾಯಿತು, ಈಗ ಆಸುರವರನ್ನು ಮಾತನಾಡಿಸುವುದು ಹೇಗೆ " ಎಂದರು,
ಅಷ್ಟರಲ್ಲಿ ಹಿಂದಿನಿಂದ ಜಯಂತ್ ದೇವಾಲಯದ ಮೆಟ್ಟಿಲು ಇಳಿದು ಬರುತ್ತಿದ್ದರು ನನ್ನನ್ನು ಕೂಗಿ ' ಪಾರ್ಥ ಆವ್ರೆ ಸಕ್ಕತ್ ಟೆಂಪಲ್ ಸಾರ್, ತುಂಬಾ ಹಳೇದು ಅನ್ನಿಸುತ್ತೆ, ನವಗ್ರಹ ದೇವರಂತು ಬೊಂಬಾಟ್,' ಎಂದರು,
ಆದರೆ ಅವರ ಸ್ವರೂಪ ಬದಲಾಗಿತ್ತು, ಪಂಚೆ, ಎಲ್ಲ ತೆಗೆದು ಪುಜಾರಿ ತರವಿರದೆ ಮಾಡ್ರನ್ ಆಗಿ ಅಪ್ಟೂಡೇಟ್ ಆಗಿದ್ದರು.
'ಹಲೋ ಜಯಂತ್ ನೀವು ಯಾವಾಗ ಬಂದ್ರಿ , ಮತ್ತೆ ಯಾರಾರು ಇದ್ದಾರೆ' ಅಂದೆ
'ಓ ಆಗ್ಲೆ ಚಿಕ್ಕು ಬಂದ್ರು ಕ್ಯಾಮರ ಹಿಡಿದು, ಗೇಟಿನ ಹತ್ತಿರ ನಿಂತಿದ್ದರು, ಮಂಜುರವರನ್ನು ನೋಡ್ದೆ ಅವರು C.D. ಜೊತೆ ಇದ್ರು, ರಾಮ ಮೋಹನ ಅವರ ಕಾರಲ್ಲಿ ಇಳಿತಾ ಇದ್ದಿದ್ದ ನೋಡ್ದೆ, ಮತ್ತಾರೊ ಕರಿ ಕೋಟೆನಲ್ಲಿ ಬಂದ್ರು ಶ್ರೀಧರರವರೇನೊ ಎಂದೆಲ್ಲ ಹೇಳುತ್ತಿದ್ದರು, ಮತ್ತೆ ಗೋಪಾಲ್ ಅವರ ಮಂಜನ ಜೊತೆ ಬಂದಿದ್ದರು " ಎಂದರು . ಅಲ್ಲಿಗೆ ಸಾಕಷ್ಟೆ ಜನ ಸೇರುವ ಲೆಕ್ಕವಿತ್ತು,
ಚಿತ್ರಗಳು
--------------------------------------------------------------------------
* ಜಯಂತ್
*ಚಿಕ್ಕು ಕ್ಯಾಮರ ಜೊತೆ
*ಮಂಜು ಅವರ CD ಜೊತೆ
*ಗೋಪಾಲ್
*ರಾಮ ಮೋಹನರು ಪಾರ್ಕ್ ಮಾಡಿರುವ ಗಾಳಿಯಲ್ಲಿ ಹಾರುವ ಕಾರು
*ಸಪ್ತಗಿರಿ
*ಗಣೇಶರ ಚಿತ್ರಗಳು
*ಹೋಟೇಲಿನಲ್ಲಿ ಪಾರ್ಟಿ
-----------------------------------------------------------------------------
ಸರಿ ಯಾರ್ಯಾರು ಎಲ್ಲಿದ್ದಾರೆ ನೋಡೋಣ ಅಂದ್ಕೋಡ್ವಿ, ದೇವಾಲಯದ ಮುಂದಿನ ರಸ್ತೆಯಲ್ಲಿ ನಡೆಯುತ್ತ ಹೊರಟವಿ, ರಸ್ತೆಯ ಕೊನೆಯಲ್ಲಿ ಮಂಜು ನಿಂತಿದ್ದರು, ಜೊತೆಯಲ್ಲಿ ಅವರ CD ನಮಗೆ ಆಶ್ಚರ್ಯ ಮಂಜುರವರು ಬರಿ ರೀಲ್ ಸುತ್ತುತ್ತಾರೆ ಅಂತ ಅಂದ್ಕೊಂಡ್ರೆ ನಿಜವಾಗು ಮಲ್ಯು ಜೊತೆ ಹರಟುತ್ತ ಇದ್ದರು. ಗೋಪಾಲ್ ಮೆಟ್ಟಲಿನ ಮೇಲೆ ಕುಳಿತ್ತಿದ್ದರು ತರ್ಲೆ ಮಂಜನ ಜೊತೆ, ಮಂಜ ಅಂದ್ರೆ ಯಾರೊ ಅಂದ್ಕೊಂಡ್ರೆ ಅವರ ಮಗನೆ ಅಂತ ಜಯಂತ್ ಹೇಳೀದ್ರು, ರಸ್ತೆಯ ಕೊನೆಗೆ ಬರುವಾಗ ಆಶ್ಚರ್ಯ ಕಾದಿತ್ತು, ತಲೆ ಎತ್ತಿ ನೋಡಿದರೆ ಪಾರ್ಕಿನ ಒಳಗೆ ಮರದ ಕೆಳಗೆ ಕಾರೊಂದು ನಿಂತಿತ್ತು, ಅಲ್ಲ ಅಲ್ಲ ಗಾಳಿಯಲ್ಲಿ ತೇಲಾಡುವ ರೀತಿ ನಿಂತಿತ್ತು, ನನಗೆ ಆಶ್ಚರ್ಯ ಅಲ್ಲಿಗೆ ಮಲ್ಲೇಶ್ವರ ಎಪಿಸೋಡ್ ನಲ್ಲಿ ಗಣೇಶರು ಬಿಡ್ತಾ ಇದ್ದಿದ್ದು ರೀಲ್ ಅಲ್ಲ ನಿಜವಾದ ಕತೆ ಇರಬಹುದೆ ಅಂತ ಅನ್ನಿಸ್ತು. ಮಂಜುನಾಥರು ನೀವು ಹೋಗ್ತಾ ಇರಿ ನಾನು CD ಬೀಳ್ಕೊಟ್ಟು ಬರ್ತೀನಿ ಅಂದರು
ಅದಕ್ಕೆ ನಾನು ಇದೇನು ಮಂಜುನಾಥರೆ , ಇಷ್ಟು ದೂರ ಬಂದಿದ್ದಾರೆ ಅವರನ್ನು ಕರೆದು ತನ್ನಿ ಅಂದೆ
ಅದಕ್ಕವರು ಒಂದು ಕೆಟ್ಟ ಲುಕ್ ಕೊಟ್ಟು ' ರೀ ಅವರ ಸ್ಟೇಟಸ್ ಏನು ಗೊತ್ತಾ ನಿಮಗೆ, ಇಂತ ಹೊಟೆಲ್ ಒಳಗೆಲ್ಲ ಅವರು ಬರಲ್ಲ ' ಅಂದರು.
ಮನದಲ್ಲಿ ಒಟ್ಟಿನಲ್ಲಿ ಕಿಂಗ್ ಫಿಷರ್ ಮುಚ್ಚಿದ್ರು ಈ ವಯ್ಯಂದು ಏನೊ ಕಡೆಮೆ ಆಗ್ಲಿಲ್ಲ ಅಂದುಕೊಂಡು ಹೊರಟ್ವಿ.
ಪುಳಿಯೋಗರೆ ಪಾಯಿಂಟ್ ಹತ್ತಿರ ಬರುವಾಗಲೆ ಎಲ್ಲರಿಗು ಭಯ , ಅಂತ ಭಾರಿಮುತ್ತುವಿಗೆ ಕೇರ್ ಮಾಡದೆ ಇದ್ದ ಗಣೇಶರು ಏಕೊ ಆಸುರವರಿಗೆ ಹೆದರಿಬಿಟ್ಟಿದ್ರು
"ಏಕೆ ಸಾರ್ ಆಸುರವರಿಗೆ ಅಷ್ಟೊಂದು ಹೆದರುತ್ತೀರಿ, ಅಷ್ಟಕ್ಕು ನೀವೇನು ಯಾವ ದುಡ್ಡು ತಿಂದಿಲ್ಲವಲ್ಲ, ಯಾರೊ ಅ ಸಪ್ತಗಿರಿರೆಡ್ಡಿ ತಾನೆ, ನಮ್ಮ ಸಂತೋಶ್ ಹೆಗ್ಡೆಯವರಿಗೆ ಕಾಲ್ ಮಾಡೋಣ , ಸಾರ್ ಹೀಗಿಗಾಗಿದೆ ಏನು ಮಾಡೋಣ ಅಂತ ಕೇಳೋಣಬಿಡಿ" ಅಂದೆ. ಅದಕ್ಕೆ ಗಣೇಶರು
"ಹಾಗಲ್ಲ ಪಾರ್ಥರೆ ಯಾರ ಹತ್ತಿರವಾದರು ಮಾತನಾಡಬಹುದು ಆದರೆ ಈ ನೀತಿ ನಿಯತ್ತು ಅಂತ ಇರ್ತಾರಲ್ಲ ಅವರ ಹತ್ತಿರ ಮಾತಾಡೋದೆ ಕಷ್ಟ, ಅಲ್ಲದೆ ಆಸುರವರಿಗೆ ನನ್ನ ಮೇಲೆ ಅನುಮಾನ ಬಂದುಬಿಟ್ಟಿದೆ, ಅಲ್ಲದೆ ಮಿಲಿಟರಿ ಶಿಸ್ತಿನ ಮನುಷ್ಯ, ಹೇಗೆ ಹೇಳೋದು, ಏನು ಸಮಾದಾನ ಮಾಡೋದು, ನಾಳೆ ವರ್ಷದ ಮೊದಲ ದಿನವೆ ಪೇಪರಿನಲ್ಲಿ ಬರುತ್ತೆ 'ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ" ಅಂತ ಕೆಳಗೆ ನನ್ನ ಫೋಟೊವನ್ನು ಅವರು ಒತ್ತಿಬಿಟ್ರೆ , ಇಷ್ಟು ವರ್ಷದಿಂದ ಸಂಪದದಲ್ಲಿ ನನ್ನಮುಖ ತೋರಿಸದೆ ಸತಾಯಿಸಿದ್ದೀನಿ, ನಾಳೆ ಕರ್ನಾಟಕವೆಲ್ಲ ನನ್ನ ಮುಖ ನೋಡುತ್ತಾರಲ್ಲ " ಅಂತ ಅಳು ಮುಖ ಮಾಡಿದರು. ರಾಮ ಮೋಹನ ಸಮಾದಾನ ಮಾಡಿದರು
"ಹಾಗೆಲ್ಲ ಏನು ಆಗಲ್ಲ ಬಿಡಿ ಸಾರ್ ನಾವೆಲ್ಲ ಇಲ್ಲವ ನಿಮ್ಮ ಜೊತೆ" ಎಂದು. ಗಣೇಶರು ಮೈಮರೆತಿದ್ದಾರೆ ಇದೆ ಸಮಯ ಪೋಟೊ ತೆಗೆಯಲು ಎಂದು ಚಿಕ್ಕು ಒಳ್ಳೆಯ ಲೊಕೇಶನ್ ಲೈಟ್, ಹಾಗು ಯಾಂಗಲ್ ಗಾಗಿ ಕಾಯುತ್ತಿದ್ದರು.
ಬಾಗಿಲಲ್ಲಿ ಆಸು ಭಯಂಕರ ಗಂಭೀರ ಮುಖದಲ್ಲಿ ನಿಂತಿದ್ದರು, ಗಣೇಶರಿಗೆ ದೈರ್ಯ ಹೇಳಿದ್ದ ನನಗು ಭಯ ಪ್ರಾರಂಬ , ಹೇಗೆ ಈ ಸಂದರ್ಭದಿಂದ ಪಾರಾಗೋದು, ಯಾರಿರಬಹುದು ಈ ಸಪ್ತಗಿರಿ ಎಂದು.
ಆಸುರವರು , ನಮ್ಮನ್ನೆಲ್ಲ ನೋಡುತ್ತಾ, ಗಣೇಶರು ಏನೊ ಹೇಳಲು ಹೋದರೆ, "ಬಾಗಿಲಲ್ಲಿ ಎಲ್ಲ ಬೇಡ ಸೀದ ಒಳಗೆ ಬನ್ನಿ ಮಾತನಾಡೋಣ ಎನ್ನುತ್ತ ಒಳ ಹೊರಟರು.
ಎಲ್ಲರು ಒಳಗೆ ಹೊರಟೆವು. ಒಳಗೆ ಹೋಗಿ ನೋಡಿದರೆ, ನಮಗಿಂತ ಮುಂಚಿತವಾಗಿ , ಬೇರೆ ಯಾರಾರೋ ಬಂದು ಸೆಟ್ಲೆ ಆಗಿಬಿಟ್ಟಿದ್ದಾರೆ ಯಾರು ಅಂತೀರ,
ಬೆಳ್ಳಾಲ ಗೋಪಿನಾಥರಾಯರು, ಸತ್ಯಚರಣ, ಪ್ರಭು, ಹರೀಶ್ ಸಪ್ತಗಿರಿ ಮತ್ತು ಯಾರಾರೊ ಒಳಗೆ ಹೋಗುವಾಲೆ ಎಲ್ಲರು ಕೂಗಿದರು
"ಗಣೇಶರೆ ಹೊಸವರ್ಷದ ಶುಭಾಷಯ , ಎಲ್ಲರಿಗು ಶುಭಾಷಯ" ಅಂತ , ಆಸುರವರು ಜೋರಾಗಿ ನಗುತ್ತಿದ್ದರು, ನಾನಂತು ಕಕ್ಕಾವಿಕ್ಕಿ
"ಇದೇನು ಸಾರ್ ತಮಾಶಿ, ಯಾವುದೊ ವಿಚಾರಣೆ, ೩೦ ಲಕ್ಷ ಗುಳುಂ ಅಂತ ಗಣೇಶರು ಕರೆದರು ಇಲ್ಲಿ ನೋಡಿದರೆ ಬೇರೆ ವಾತವರಣ" ಎಂದೆ
"ಇನ್ನೇನ್ರಿ ಮಾಡೋದು ಈ ಗಣೇಶರು ಏನು ಮಾಡಿದ್ರು ಹೊರಗೆ ಬರಲ್ಲ, ಅವರನ್ನು ಕರೆಸೋದು ಹೇಗೆ ಅಂತ ಸಮಸ್ಯೆಯಾಗಿ ಹೋಗಿತ್ತು, ಅದಕ್ಕೆ ನಾನೆ ಕುಳಿತು ಪ್ಲಾನ್ ಮಾಡಿ ಅವರಿಗೆ ಒಂದು ಸುಳ್ಳು ಹೇಳಿ ಪೋನ್ ಮಾಡಿದೆ, ಪಾಪ ಮನುಷ್ಯ ನಡುಗಿ ಹೋದರು, ನೋಡೋಕೆ ಬಾರಿ ಆಸಾಮಿ, ಆದರೆ ಸತ್ಯ, ಪ್ರಾಮಾಣಿಕತೆಗೆ ಎಷ್ಟು ಹೆದರಿ ನಡುಗುತ್ತಾರಿ,, 'ಪಾಪಭೀರು" ಎಂದರೆ ಇವರೆ ನೋಡಿ" ಎಂದರು.
"ಅವರ ಮಾತಿನಲ್ಲಿದ್ದ 'ಭೀರು' ಪದ ಕಿವಿಗೆ ಬಿದ್ದೋಡನೆ, ಮಂಜುನಾಥರು "ಒಂದು ನಿಮಿಷ ನನ್ನ CD ಇದ್ದಾನೊ ಹೊರಟನೊ ನೋಡಿ ಬರ್ತೀನಿ ಅಂತ ಪುನಃ ಹೊರಹೊರಟರು
ಗಣೇಶರಿಗೆ ಏನು ತೋಚಿತೊ, ಒಂದು ನಿಮಿಶ ಬಂದೆ ಅಂತ ಕೈಲಿದ್ದ ಬ್ಯಾಗ್ ಸಮೇತ ಅಲ್ಲಿದ್ದ ವಾಶ್ ರೂಮಿನ್ನತ ಓಡಿದರು, ಎಲ್ಲರಿಗು ನಗು, ಗಣೇಶರು ಸಕ್ಕತ್ ಹೆದರಿದ್ದಾರೆ ಅದಕ್ಕೆ ವಾಶ್ ರೂಮಿನತ್ತ
ಓಡಿದರು, ಎಂದು . ಎಲ್ಲರು ನಗುತ್ತ ಮಾತನಾಡುವಾಗಲೆ ಗಣೇಶರು ಹೊರಬಂದರು, ನೋಡುವಾಗ ಗೆಟಪ್ ಪೂರ ಚೇಂಜ್, ಇದ್ದಕ್ಕಿದ್ದಂತೆ ನೋಡಲು, ನಿಜವಾಗಿ 'ಅಂಡಾಂಡಭ್ರಹ್ಮರಂತೆ' ಕಾಣುತ್ತಿದ್ದರು. ಅಷ್ಟುಬೇಗ ಅವರ ರೂಪ ಹೇಗೆ ಬದಲಾಯಿಸಿದರೊ ತಿಳಿಯಲಿಲ್ಲ.
ಹೊರಗೆ ಬಂದು ಗಣೇಶರು
"ಈ ಚಿಕ್ಕು ನನ್ನ ಒರಿಜಿನಲ್ ಪೋಟೊ ತೆಗೆದು ಬಿಡ್ತಾನೆ ಅದಕ್ಕೆ ಚೇಂಜ್ ' ಅಂದರು
ಎಲ್ಲರು ಸೇರಿ ಚೆನ್ನಾಗಿ ಎಂಜಾಯ್ ಮಾಡಿದೆವು, ಹೊಟೆಲನಲ್ಲಿ ಮಿಕ್ಕಿದ್ದ ಪುಳಿಯೋಗರೆ, ಅಂಬೊಡೆಗಳೆಲ್ಲ ಮುಗಿದವು, ಸರಿ ಹೊಸವರ್ಷದ ಹಿಂದಿನದಿನ ಚೆನ್ನಾಗಿ ಆಯ್ತು ಅಂತ ಎಲ್ಲರಿಗು ಸಂತಸ. ಗಣೇಶರ ಕೃಪೆಯಿಂದ ತಾನು ಮಾಡಿದ್ದ ಪುಳಿಯೋಗರೆ ಅಂಬೊಡೆಗಳೆಲ್ಲ ಕರ್ಚಾದವಲ್ಲ ಎಂದು ಹೊಟೆಲ್ ನವನಿಗೆ ಸಂತಸ, ಇಲ್ಲದಿದ್ದಲ್ಲಿ, ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮಕ್ಕೆ ಎನೆಲ್ಲ ಸಿಗುವಾಗ ಅವನ ಪುಳಿಯೋಗರಗೆ ಗಿರಾಕಿಯಾದರು ಯಾರು ಸಿಗಬೇಕು.
ಒಬ್ಬರಿಗೊಬ್ಬರು ವಿಶ್ ಮಾಡುತ್ತ ಸಂಜೆಯಾದಂತೆ ಎಲ್ಲರು ಅಲ್ಲಿಂದ ಹೊರಟೆವು. ಗಣೇಶರನ್ನು ಆಸುರವರು ಯಾಮಾರಿಸಿ ಕರೆಸಿದ್ದಕ್ಕೆ ಎಲ್ಲರಿಗು ಖುಶ್ , ಸಿಕ್ಕಿದ್ದ ಕೆಲವು ಫೋಟೊವನ್ನು ಹಾಕಿದ್ದೇನೆ
ನೋಡಿ
ಎಲ್ಲರಿಗು ಹೊಸವರ್ಷದ ಶುಭಾಷಯಗಳು
----------------------------------------------------------------
ಹೊಸವರ್ಷದ ಖುಷಿಗೋಸ್ಕರ ಕೆಲವು ಚಿತ್ರಗಳನ್ನು ಹಾಕಿದ್ದೇನೆ ,ಯಾರು ಅನ್ತ್ಯಥಾ ಭಾವಿಸಬಾರದು. ಚಿತ್ರದಲ್ಲಿರುವವರು ಎಲ್ಲರ ಒಪ್ಪಿಗೆ ಇದೆ ಅಂದುಕೊಂಡಿದ್ದೇನೆ. ಚಿತ್ರಗಳನ್ನು internet ಹಾಗು ಬ್ಲಾಗ್ ಗಳಿಂದ ತೆಗೆದಿರುವುದು. ಮತ್ತು ಇದರಲ್ಲಿರುವದೆಲ್ಲ 'ಸುಳ್ಳು' ನೀವು ಅಂದುಕೊಂಡರೆ ಇದೊಂದು ಹಾಸ್ಯಬರಹ
-ಪಾರ್ಥಸಾರಥಿ
Comments
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by ಗಣೇಶ
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by venkatb83
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by partha1059

In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by sathishnasa
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by manju787
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by manju787
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by venkatb83
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by manju787
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by makara

In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by Jayanth Ramachar
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by kavinagaraj
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by manju787
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by partha1059
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by kavinagaraj
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
In reply to ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ by gopaljsr
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ
ಉ: ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ