ಬ್ರಾಹ್ಮಣರ ಮನೆಯ ಮಹಾಭಾರತ

Submitted by Maheshwar Mathad on Sat, 12/24/2011 - 20:06

ನಾನು ಮೊದಲ ಬಾರಿ ಬ್ರಾಹ್ಮಣರ ಚಾಲಾಕಿತನದ ಬಗ್ಗೆ ತಿಳಿದುಕೊಂಡದ್ದು, Ancient Indian History ಯಲ್ಲಿ 'ನಾನಾ ಫಡ್ನವೀಸ' ನ ಬಗ್ಗೆ ಓದಿದ ನಂತರ. ಮರಾಠರ ಕಾಲದಲ್ಲಿ ಅತೀ ಬ್ರಬಾವಿತ ಮಂತ್ರಿಯಾಗಿ ಹೆಸರು ಮಾಡಿದವನು. ನಾನಾ ಒಬ್ಬ ಚಿತ್ಪಾವನ ಬ್ರಾಹ್ಮಣ ಮನೆತನದಿದಂದ ಬಂದವನು. ಆದ್ಯಾಕೋ ಗೊತ್ತಿಲ್ಲ ಅಂದು ನಮ್ಮ history lecture ಇವನ ಬಗ್ಗೆ ತುಂಬಾ ಒತ್ತಿ ಒತ್ತಿ ಹೇಳಿದಾಗ ನಾನಾನ ಮೇಲೆ ಹಾಗೂ ಬ್ರಾಹ್ಮಣರ ಮೇಲೆ ವಿಷೇಶ ಅಭಿಮಾನ ಹತ್ತಿಕೊಂಡಿತ್ತು.

According to mythology,the Brahmin community started from Brahma creation, husband of Brahmani the supreme Hindu Goddess of knowledge and education in ancient Indian mythology and adopted in their religion (Vedic religion of early Hinduism, now often referred to by Hindus as Sanatana Dharma.

ಆದರೆ ಇತ್ತೀಚಿನ ದಿನಗಳಲ್ಲಿ ಮೂಲ ಬ್ರಾಹ್ಮಣರನ್ನು ಗುರುತಿಸುವುದೇ ಕಷ್ಟವಾಗಿದೆ. ಜಾತಿಯಿಂದ ಬ್ರಾಹ್ಮಣರಾಗಿ ವೃತ್ತಿಯಿಂದ ಇಂಜಿನಿಯರುಗಳೋ, ಡಾಕ್ಟರುಗಳೋ, ಲಾಯರುಗಳೋ ಆಗಿರುವ ಅನೇಕರಲ್ಲಿ ಬ್ರಾಹ್ಮಣ್ಯದ ಆಚರಣೆಯಿಲ್ಲ, ಬ್ರಹ್ಮಜ್ಞಾನದ ಹಂಬಲವಾಗಲೀ ಅದನ್ನು ಕೈಗೂಡಿಸಿಕೊಳ್ಳಲು ಬೇಕಾದ ಸಿದ್ಧತೆಯಾಗಲೀ ಇಲ್ಲ. ತಾವೇ ಸ್ವತಃ ದಿಕ್ಕುಗಾಣದೇ ಇರುವ ತಂದೆತಾಯಿಗಳು ತಮ್ಮ ಮಕ್ಕಳಿಗೆ ಏನುತಾನೇ ದೀಕ್ಷೆ ಕೊಡಲು ಸಾಧ್ಯ? ಹುಟ್ಟಿನಿಂದ ಬ್ರಾಹ್ಮಣನಾಗಿರದೇ, ಆಚರಣೆಯಿಂದ ಬ್ರಾಹ್ಮಣರಾದ ಉದಾಹರಣೆಗಳನ್ನು ಕೆದಕುತ್ತಾ ಹೋದರೆ ಅಲ್ಲೊಬ್ಬ ಸತ್ಯಕಾಮ, ಇಲ್ಲೊಬ್ಬ ನಚಿಕೇತ, ಅಲ್ಲೊಬ್ಬ ವಾಲ್ಮೀಕಿ, ಇಲ್ಲೊಬ್ಬ ವಿಶ್ವಾಮಿತ್ರ, ಅಲ್ಲೊಬ್ಬ ಕಬೀರ, ಇಲ್ಲೊಬ್ಬ ಕನಕ, ಹೀಗೆ ದೊರಕುತ್ತವೆ.

ನಂತರದ ದಿನಗಳಲ್ಲಿ ಕೂಡ ಬ್ರಾಹ್ಮಣರ ಬಗ್ಗೆ ಅದೇನೋ ಒಲವು ಶುರುವಾಗಿದ್ದು. ನಿಜ ಹೇಳುವುದಾದರೆ ಚಿಕ್ಕಂದಿನಿಂದ ನಿಜ, ಅವರ ಮಡಿ, ಉಡಿ, ಜೀವನಶೈಲಿ ಹಾಗೂ ಅವರು ಕನ್ನಡವನ್ನು ಬೆಣ್ಣೆಯೊಂದಿಗೆ ಬೆರೆಸಿ ಮಾತನಾಡುವ ರೀತಿ ಎಂಥವರನ್ನೂ ಸೆಳೆಯುತ್ತದೆ. ಹೋಗ್ತದ... ಬರ್ತದ... ಬ್ರಾಹ್ಮಣರು ತುಂಬ ಬೆಳ್ಳಗೆ ಹಾಗೂ ಬಹು ಚಂದ! ಅಂದಿನ ದಿನಗಳಲ್ಲಿ ಸುಧಾ, ತರಂಗ, ರಾಗಸಂಗಮ, ಕರ್ಮವೀರ ಓದುವ ಗೀಳು ತುಂಬಾ ಇತ್ತು ನನಗೆ. ಸುಧಾದ ದೀಪಾವಳಿ ವಿಷೇಶಾಂಕಗಳಲ್ಲಿ ತುಂಬ ಕಥೆಗಳಿರುತ್ತಿದ್ದವು. ಬ್ರಾಹ್ಮಣರು ಗಂಡಸರು ಮೂಲತಃ ತುಂಬ ಶೂಷ್ಕ್ಮ ಸ್ವಭಾವದರು, ಗಲಾಟೆಯವರಲ್ಲ. ಅವರ ಜೀವನ ಶೈಲಿಯೂ ಹಾಗೇ, ಅವರಾಯಿತು ಅವರ ಕೆಲಸವಾಯಿತು ಅಂದುಕೊಂಡು ಇರುವವರು. ಇಂದಿಗೂ ಸಹ ಬ್ರಾಹ್ಮಣನೆಂದರೆ ನನ್ನ ತಲೆಯಲ್ಲಿ ಬರುವ ಚಿತ್ರಣ, ಪಂಜೆ, ಜನಿವಾರ, ಹಣೆಯ ಮೇಲೊಂದು ನಾಮ ಹಾಗೂ ಬೋಳುತಲೆಯ ಹಿಂದೊಂದು ಜುಟ್ಟು. ಅವರು ಭೋಜನ ಪ್ರೀಯರು, ದೊಡ್ಡ ಹೊಟ್ಟೆ, ಅನ್ನದಷ್ಟೇ ತುಪ್ಪ, ಎಡಗೈ ನೆಲಕ್ಕೆ ಊರಿ, ಹೊಟ್ಟೆಯ ಭಾರವನ್ನು balance ಮಾಡಿ ಊಟಕ್ಕೆ ಕುಳಿತರೆ ಅಷ್ಟೇ - ಅನ್ನದಾತೋ ಸುಖೀಭವ ಅನ್ನುವವರೆಗೂ ಏಳುವುದಿಲ್ಲ. ಆವರು ತುಂಬ ಚಾಣಾಕ್ಷರು, ಸಿಪ್ಪೆ ಸುಲಿಯದೇ ಬಾಳೆ ಹಣ್ಣು ತಿನ್ನುವ ಕಲೆ ಕೇವಲ ಬ್ರಾಹ್ಮಣರಿಗೆ ಗೊತ್ತು. ಮೂಲತಃ ತುಂಬ ಒಳ್ಳೆಯವರು ಆದರೆ ಮನಸ್ಸು ಮಾಡಿದರೆ ಎಂತಹ ಕಠೋರ ಮನಸ್ಸಿನವರಾಗಿಬಿಡುತ್ತಾರೆಂದರೆ, ಅಂದುಕೊಂಡದ್ದನ್ನು ಮಾಡುವವರೆಗೂ ಬಿಡುವುದಿಲ್ಲ. ಹಟಕ್ಕೆ ಇನ್ನೊಂದು ಪದವೇ ಅವರು. ಒಬ್ಬ ಬ್ರಾಹ್ಮಣ ಒಮ್ಮೆ ಮುಖ ತಿರುಗಿಸಿದರೆ ಮತ್ತೆ ಮುಖ ಕೊಡುವುದು ತುಂಬ ಅಪರೂಪ.

ಇದನ್ನು ಇಲ್ಲಿಯೇ ನಿಲ್ಲಸುತ್ತೇನೆ, ನಾನು ಬರೆಯಬೇಕಾಗಿರುವುದು ಇದಲ್ಲ. ಮೊನ್ನೆ ಊರಿಗೆ ಹೋದಾಗ ನನ್ನ ಆಪ್ತ ಸ್ನೇಹಿತನೊಬ್ಬ ತನ್ನ ಮನೆಯಿಂದ 2 ಚೀಲ ಅಕ್ಕಿ, ಒಂದು ಚೀಲ ಮಂಡಕ್ಕಿಯನ್ನು ಕಾರಿನಲ್ಲ ಹಾಕಿಕೊಂಡು ಬರುವಂತೇ ಹೇಳಿದ. ಆದ್ದರಿಂದಲೇ ನಾನು ಅವನ ಮನೆಗೆ ಹೋಗಿದ್ದು. ಅದೊಂದು ಹಳೆಯ ಅಗ್ರಹಾರ, ತುಂಬ ವಿಷಾಲವಾದ ಜಾಗಕ್ಕೆ ಸುತ್ತ compound ಹಾಕಿದ್ದ ವಾಡೆ. ನಾನು ಕಾರನ್ನು ಹೊರಗಡೆ ನಿಲ್ಲಿಸಿ ಅವನ ಮನೆಯ ಅಂಕಣದಲ್ಲಿ ಹಾಯ್ದು ಕಟ್ಟೆಗೆ ಬಂದೆ. ಆಹಾ! ಅದೆಲ್ಲಿಂತ ಬಂತೋ ಗೊತ್ತಿಲ್ಲ ಬ್ರಾಹ್ಮಣ ಸುವಾಸನೆ, ಒಂದು ಕ್ಷಣ ಮನಕೆ ಮಹದಾನಂದವಾಯಿತು.

ಹಳೆಯ ಬ್ರಾಹ್ಮಣರ ಮನೆಗಳಲ್ಲಿ, ಒಂದು ಹದವಾದ ವಾಸನೆಯಿರುತ್ತದೆ. ಅದನ್ನು ವಿಸ್ತರಿಸಿ ಹೇಳಲಾಗುವುದಿಲ್ಲ. ಆದರೆ ಬ್ರಾಹ್ಮಣರ ಮನೆಯ ಆ ಸುವಾಸನೆ ನನಗೆ ತುಂಬ ಇಷ್ಟ!

ನಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಆಗ ಇದ್ದುದು ಎರಡೇ ಎರಡು ಬ್ರಾಹ್ಮಣರ ಮನೆ. ಅಂದಿನ ಕಾಲದಲ್ಲಿ ಇಡೀ ಹಳ್ಳಿಯಲ್ಲಿ ನೌಕರಿಗೆ ಹೋಗುತ್ತಿದ್ದುದು ಒಬ್ಬರೇ ಒಬ್ಬರು ಅದೂ ಬ್ರಾಹ್ಮಣರು. ಅಂದಿನ ಕಾಲಕ್ಕೆ, ಇಡೀ ಊರಿಗೆ ಇದ್ದುದು ಒಂದೇ black n white portable TV ಅದೂ ಕೇವಲ ಬ್ರಾಹ್ಮಣರ ಮನೆಯಲ್ಲಿ ಮಾತ್ರ. ಬರುತ್ತಿದ್ದುದು ಕೇವಲ ದೂರದರ್ಶನ ಮಾತ್ರ. ಊರಿನ ಒಂದು ಬ್ರಾಹ್ಮಣರ ಮನೆಗೂ ನನ್ನ ಅಜ್ಜಿಗೂ ತುಂಬ ನಂಟು, ನಾವು ಸಹ ಸ್ವಲ್ಪ ಮಡಿಯ ಜನವಾದ್ದರಿಂದ ನಮ್ಮ ಮನೆಯೊಂದಿಗೆ ನಡತೆ ಇಟ್ಟುಕೊಂಡಿದ್ದರು. ಅವರದೇ ಕಂಪೌಡಿನಲಿ ಎರಡು ಮನೆ, 4 ಆಕಳು, ಹಾಗೂ ಒಂದು ಬಾವಿ. ಬಹುಶಃ ಅಂದಿ ಕಾಲಕ್ಕೆ ಅವರ ಹಿತ್ತಲಲ್ಲಿ ಬಿಟ್ಟು ಊರಿನ ಯಾವುದೇ ಭಾಗದಲ್ಲಿ ಕೂಡ ಪಾಯಿಖಾನೆ ಇದ್ದಿಲ್ಲ. ಅವರ ಮನೆಯೆಂದರೆ ನನಗೆ ಅದೊಂದು ರೀತಿಯ ಕೌತುಕತೆ. ನನ್ನ ದಿನಚರಿಯಲ್ಲಿ, ಪ್ರತಿದಿನ ಶಾಲೆಯ ನಂತರ ಮದ್ಯಾಹ್ನ ಬ್ರಾಹ್ಮಣರ ಮನೆಗೆ ಹೋಗಿ ಮಜ್ಜಿಗೆ ತರುವುದು ನನ್ನ ಕೆಲಸ. ಆ ದೊಡ್ಡ ಅಗ್ರಹಾರದ ಮುಂದಿನ ಬಾಲಿಲಲ್ಲಿ ನಿಂತು ಕೂಗಿದರೆ ಅವರು ಬರುವುದು 10 ನಿಮಿಷದ ನಂತರವೇ, ಅಲ್ಲಿಯವರೆಗೆ ಅವರ ಕೆಂಪು ಹೊಸ್ತಿಲಮೇಲಿನ ಬಿಳಿ ರಂಗೋಲಿಯನ್ನೂ, ಮನೆ ಮುಂದಿನ ಬಾವಿಯನ್ನೂ ನೋಡುತ್ತ ಅವರದೇ ಮನೆಯ ಆ ಸುವಾಸನೆಯನ್ನು ಅಸ್ವಾದಿಸುತ್ತಿದ್ದೆ. ಮನೆಯಲ್ಲಿ ಇದ್ದುದು ನಾಲ್ಕೇ ಜನ, ಬೆಳಗಾದರೆ ಮೂರು ಗಂಡಸರೂ ಹೊರಗಡೆ ಹೋದರೆ ಮನೆಯಲ್ಲಿ ಉಳಿಯುತ್ತುದುದು ನಡುವಯಸ್ಸಿನ ಭಾನುಪ್ರೀಯ ರವರು ಮಾತ್ರ. 10 ನಿಮಿಷದ ನಂತರ ಬಾಗಿಲು ತೆರೆದು, ಒಳಗಡೆ ಕರೆದು, ಮಜ್ಜಿಗೆ ಕೊಡುತ್ತಿದ್ದರು.

ಜವಾರಿ ಆಕಳನ್ನು ಬಿಟ್ಟು, ಮೊದಲ ಬಾರಿ ಊರಿಗೆ ಜೆರ್ಸಿ ಆಕಳಳನ್ನು ತಂದವರು ಆವರೇ ಮೊದಲಿಗರು. May sound yukk, but ನಾನು ಮೂರನೇ ಕ್ಲಾಸ್ ಗೆ ಬರುವತನಕ tv ನೋಡಿದ್ದೇ ಇಲ್ಲ! ಅದರ ಬಗ್ಗೆ ಕೇಳಿದ್ದೆ ಆದರೆ ಎಂದೂ ನೋಡಿರಲಿಲ್ಲ. ನನ್ನ ಬಾಲ್ಯವೇ ಬಹು interesting ಅದರ ಬಗ್ಗೆ ಯಾವತ್ತಾದರೂ ಬರೆಯುವೆ. ಬಾಲ್ಯದಲ್ಲಿ ಕಂಡಿದ್ದೇ ಎರಡು ಹಳ್ಳಿಗಳನ್ನ, ನನ್ನೂರು ಹಾಗೂ ಅಜ್ಜಿಯ ಊರು, ನನ್ನೂರಿನಲ್ಲಿ ಅಂದಿನ ಕಾಲಕ್ಕೆ ಇಡೀ ಊರಿನಲ್ಲಿ ಒಂದೂ tv ಇರಲಿಲ್ಲ. ಅಜ್ಜಯ ಊರಲ್ಲಿ ಮೊದಲ ಬಾರಿ ಟಿವಿ ತಂದವರು ಇದೇ ಬ್ರಾಹ್ಮಣರ ಮನೆಯಲ್ಲಿ. ಇದ್ದ ಒಂದೇ ಟೀವಿಯನ್ನು ಊರ ಜನ ನೋಡುತ್ತಿದ್ದುದು. ಅವರ ಮನೆಗೆ ಹೋಗಿ ಟಿವಿ ನೋಡುವುದೆಂದರೆ ಸುಲಭದ ಮಾತಲ್ಲ. ಎಲ್ಲರಿಗೂ ಅಲ್ಲಿ ಪ್ರವೇಶವಿರಲಿಲ್ಲ. ಕೇವಲ ದೊಡ್ಡಮನುಷ್ಯರು ಹಾಗೂ ಬೇಕಾದವರಿಗೆ ಮಾತ್ರ.

ಅವರ ಮನೆ ಸದಾ ಬಿಕೋ ಎನ್ನುತ್ತಿತ್ತು, ಗದ್ದಲವಿರಲಿಲ್ಲ, ಆಗಾಗ ಅವರ ಹಸು ಕೊಗೋದನ್ನು ಬಿಟ್ಟು ಬೇರೆ ಶಬ್ದವೇ ಕೇಳುತ್ತಿರಲಿಲ್ಲ. ಹೊರಗಿನ ಹಜಾರದಲ್ಲಿ ಒಂದು ಆರಾಮ ಖುರ್ಚಿ ಹಾಗೂ ಒಂದು ಮಂಚ, ರಾವಪ್ಪ (ರಾವ್) ಯಾವಾಗಲೂ ಮಂಚದ ಮೇಲೆ, ಊಟಕ್ಕೆ ಹೊರೆತು ಎಂದೂ ಒಳಗಡೆ ಹೋಗುತ್ತಿರಲಿಲ್ಲ. ಒಂದು ಪಟ್ಟಾ ಪಟ್ಟಿ ಪೈಜಾಮ ಹಾಗೂ ಬಿಳಿ ಬನಿಯನ್ ರಾವಪ್ಪನವರ ಯುನಿಫಾರ್ಮ್. ಧಡೂತಿ ದೇಹ, ಅವರು ಮಾತನಾಡುತ್ತಿದ್ದುದೇ ಕಡಿಮೆ ಆದರೆ ಹೂಂಸು ಬಿಡುವುದು ಮಾತ್ರ ಜೋರಾಗಿಯೆ. ಮಂಚದ ಮೇಲೆ ಕೂತು, ಬಲಗಡೆ ಕೈ ನೆಲಕ್ಕೆ ಊರಿ, ಎಡಗಡೆ ಕಾಲನ್ನು ಸ್ವಲ್ಪ ಮೇಲೆತ್ತಿ ಪಿರ್... ಎಂದು ಹೂಂಸು ಬಿಟ್ಟು, ಆಆಆಹ್ ಎನ್ನುತ್ತಿದ್ದ ರೀತಿ ತುಂಬ ಮಜ. ಇದರಿಂದ ರಾವಪ್ಪನವರಿಗೆ ಎಷ್ಟು ಹಿತವಾಗುತ್ತಿತ್ತೋ ಗೊತ್ತಿಲ್ಲ ಆದರೆ ನೋಡುವವರಿಗೆ ಮಾತ್ರ ತುಂಬ ಹಿತವಾಗುತ್ತಿತ್ತು. ತಾವೇ ಹೂಂಸು ಬಿಟ್ಟಂತೆ ಆನಂದ ಪಡುತ್ತಿದ್ದರೆ ಇನ್ನು ಕೆಲವರು ನಮಗ್ಯಾಕಪ್ಪಾ ಇಷ್ಟು ದೊಡ್ಡ ಹೂಂಸು ಬರುವುದಿಲ್ಲವೆಂದು ಕೊರಗಿಕೊಳ್ಳುತ್ತಿದ್ದರು. ಸುತ್ತ ಹತ್ತು ಜನರಿದ್ದರೂ ರಾವಪ್ಪನವರು ಮುಜುಗರವಿಲ್ಲದೇ, ಸಾರ್ವಜನಿಕವಾಗಿ ಹೂಂಸು ಬಿಟ್ಟರೆ ಯಾರು ಪಿಟ್ ಎನ್ನುತ್ತಿರಲಿಲ್ಲ. ಅವರು ಹೂಂಸು ಬಿಡುವ ಮುನ್ಸೂಚನೆ ಕಂಡರೆ, ಗೊಜ ಗೊಜ ಮಾತನಾಡುತ್ತಿದ್ದರೆಲ್ಲ ಸುಮ್ಮನಾಗಿ, ಹೂಂಸು ಕೇಳಿದ ನಂತರ ಮತ್ತೆ ಮಾತು ಶುರುಮಾಡಿತ್ತಿದ್ದರು. ಅಷ್ಟೊಂದು seriousness ಇತ್ತು ಹೂಂಸಲ್ಲಿ.

ಅಜ್ಜ ತುಂಬ ಒಳ್ಳೆಯ ಚಿತ್ರಕಾರ. ಕಲೆಯನ್ನು ಕಲಿತವನಲ್ಲ ಆದರೆ ಅದರೊಂದಿಗೆ ಬೆಳೆದವನು. ಚಿಕ್ಕದಿನಿಂದ ಓದುವುದರ ಬಗ್ಗೆ ಆಸಕ್ತಿ ಮೂಡಿಸಿದವನೇ ಅಜ್ಜ. ಅಜ್ಜ ಎಂದೂ ಬಿಸಿಲ್ಲಿ ಬೇಸಾಯ ಮಾಡಲಿಲ್ಲ. ಆದರೆ ಜೀವನೋಪಾಯಕ್ಕೆ ಕಲೆಯನ್ನೇ ಮೈಗೂಡಿಸಿಕೊಂಡಿದ್ದ. ಅದೊಂದು unique profession, ದಾವಣಗೆರೆಯ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ರೈತರ ಎತ್ತುಗಳ sketch ಮಾಡಿಕೊಂಡು ಬಂದು, ಮನೆಯಲ್ಲಿ ಆ ಎತ್ತುಗಳ paiting ಮಾಡಿ, ಅದಕ್ಕೊಂದು frame ಹಾಕಿ 120 ರೂಪಾಯಿ ಛಾರ್ಜ ಮಾಡುತ್ತಿದ್ದ. ಅದರಲ್ಲಿ 'Art by - ರುದ್ರಯ್ಯ ಅಜ್ಜಯ್ಯ ಕಾರಿಕಂಟಿ, ದುಮ್ಮಿಹಾಳ' ಎಂದು ಬರೆಯುತ್ತಿದ್ದ. ಇಂದಿಗೂ ಕೂಡ ಸಾವಿರಾರು ಮನೆಗಳಲ್ಲಿ ಅಜ್ಜ ಬರೆದ ಚಿತ್ರಗಳು ಗೋಡೆಯ ಮೇಲೆ ಕಾಣಸಿಗುತ್ತವೆ. ನಾನು ಹುಟ್ಟುವ ಮೊದಲಿನ ಕಾಲದಲ್ಲಿ ಫೋಟೋ ಎಂದರೆ ಜನಕ್ಕೆ ಕನಸಾಗಿತ್ತು. ಒಂದು ಫೋಟೋ ತೆಗೆಸಬೇಕಾದರೆ ದೂರದ ಪಟ್ಟಣಕ್ಕೆ ಹೋಗಬೇಕಿತ್ತು ಅಂದಿನ ಕಾಲದಲ್ಲಿ ಅಜ್ಜ 2 ಎಕರೆ ಹೊಲ ಮಾರಿ ಒಂದು Roll Camera ತಂದಿದ್ದ, ಅಷ್ಟೊಂದು ಅದಭಿರುಚಿಯ ಮನುಷ್ಯ. ಮನೆಯಲ್ಲಿ ಅವನದೇ ಒಂದು ರೂಂ ಇತ್ತು. ಅದು ನನಗೆ ಒಂಥರಾ encyclopedia. ಅಲ್ಲಿ ಎಲ್ಲವೂ ಇತ್ತು. drawing sheets, brushes, paints, books, tools everything. ನಾನೂ ಕೂಡ ಅಜ್ಜನೊಂದಿಗೆ ಕುಳಿತು, ಬೀಡಿಯ ಘಾಟು ವಾಸನೆ ಕುಡಿಯುತ್ತ ಚಿತ್ರ ಬರೆಯುತ್ತದ್ದೆ. ಅಜ್ಜ ಚಿತ್ರ ಬರೆಯಲು ಕುಳಿತರೆ ಹಚ್ಚಿದ 8 ನಂಬರ್ ಬೀಡಿ ಆರುತ್ತಿರಲಿಲ್ಲ. ಒಂದು ಕಟ್ಟು ಬೀಡಿ 75 ಪೈಸೆ, ಒಂದು ಅನೀಲ್ ಬೆಂಕಿಪೊಟ್ಟಣ 20 ಪೈಸೆ ಉಳಿದ 5 ಪೈಸೆಯಲ್ಲಿ ನನಗೆ 3 ಪೆಪ್ಪರ್ ಮೆಂಟ್ ಬರುತ್ತಿದ್ದವು. ನಂತರ ಬೆಂಕಿಪೊಟ್ಟಣ 25 ಪೈಸೆಯಾಗಿ ನನಗೆ ಏನೂ ಉಳಿಯುತ್ತಿರಲಿಲ್ಲ.

ಅದೊಂದು ದಿನ, ರವಿವಾರ ನಾನಿನ್ನು ಚಿಕ್ಕವನು ಅಜ್ಜನ ಮನೆಯಲ್ಲಿ ಇದ್ದೆ. ಅಕ್ಕ ಎಲ್ಲಿಯೋ ಹೊರಟಿದ್ದಳು 'ಎಲ್ಲಗೆ?' ಎಂದೆ, 'ಮಾಭಾರತ ನೋಡಾಕ, ನೀನು ಬಾ' ಎಂದಳು. ಸರಿ ಹೊರಟೆ, ಅಂದು ಜೀವನದ ಪ್ರಥಮ ದಿನ tv ನೋಡಲು ಹೋಗುತ್ತದ್ದೆ, ಅದೇ ಬ್ರಾಹ್ಮಣರ ಮನೆಗೆ. ನಮ್ಮ ಓಣಿಯನ್ನು ದಾಟಿ, ಅಗ್ರಹಾರದ ಮುಂದೆ ನಿಂತಾಗ ನಮಗೆ ನಿರಾಶೆಯಾಯಿತು. ಅಗ್ರಹಾರದ ಪ್ರವೇಶವೇ ಮುಚ್ಚಿತ್ತು, ಆದರೆ ಹೊರಗೆ ತುಂಬ ಹುಡುಗರು, ಅಗ್ರಹಾರದ ಒಳಗೆ ಪ್ರವೇಶ ಸಿಗದೇ, ಇತ್ತ ಮನೆಗೂ ಹೋಗದೇ ಸುಮ್ಮನೇ ತಿರುಗುತ್ತಿದ್ದರು. ಇನ್ನು ನಮಗೆ ಒಳಗೆ ಹೋಗುವುದೂ ದೂರದ ಮಾತು. ನಾನೂ, ಅಕ್ಕ ಹೇಪೇ ಮುಖ ಮಾಡಿಕೊಂಡು ಮನೆಗೆ ಬಂದೆವು ಆದರೆ ನನಗೆ ತುಂಬ ದುಃಖ ಉಕ್ಕಿಬಂದು ಅಜ್ಜನ ರೂಂ ಗೆ ಹೋಗಿ ಅಳಲು ಶುರು ಮಾಡಿದೆ, ಅಜ್ಜ ತುಂಬ ಸಮಾಧಾನದ ಮನುಷ್ಯ, ಯಾವತ್ತೂ ಯಾರಿಗೂ ಕೋಪ ತೋರಿಸುತ್ತಿರಲಿಲ್ಲ. ನಾನು ಅಳುತ್ತಿದ್ದುದನ್ನು ಕೇಳಿದ

'ಏನಾತಲೇ?'

'ಮತ... ನಾ ಟಿವೀ ನೊಡಬಕೂ, ಬ್ರಾಹ್ಮರ ಮನ್ಯಾಗ ಬಿಡ್ವಲ್ರು'

'ಅದನ್ನೇನ್ ನೋಡ್ತಿದ್ದಿಯಪಾ, ತಗಾ ಒಂದ್ drawing ಬರಿ, ಟಿವಿ ಗೀವಿ ಏನೂ ಬ್ಯಾಡಾ'

ಆದರೆ ನಾನು ಒಪ್ಪಲಿಲ್ಲ, ಹಟ ಶುರುಮಾಡಿದೆ. ಕೊನೆಗೆ ಅಜ್ಜ, ಅಜ್ಜಿಯನ್ನು ಕರೆದು. ನನ್ನನ್ನೂ ಅಕ್ಕನನ್ನೂ ಬ್ರಾಹ್ಮಣರ ಮನೆಗೆ ಕರೆದುಕೊಂಡು ಹೋಗುವಂತೇ ಹೇಳಿದ. ಅಜ್ಜಿ, ಅಗ್ರಹಾರದ ಹಿಂದಿನ ಬಾಗಿಲಿನಿಂದ ನಮ್ಮನ್ನು ಒಳಗೆ ಕರೆದುಕೊಂಡು ಹೋಗಿ ಒಂದು ಮೂಲೆಯಲ್ಲಿ ಕೂರಿಸಿದಳು.