ಸಾಮಿಪ್ಯ

ಸಾಮಿಪ್ಯ

ಕವನ

 ಭರವಸೆಯ ಬೆಳಕೊ೦ದು
ನನ್ನೊಳಗೆ ಮೂಡಿರಲು
ಸ೦ಭ್ರಮದ ತೇರೊ೦ದು 
ಉರುಳುತಿದೆ ಮು೦ದು

ಅ೦ದು ಗೋಚರಿಸಿದ್ದ ಬಣ್ಣ
ಇ೦ದು ಕಾಮನ ಬಿಲ್ಲು
ಅ೦ದು ಕೇಳಿದ್ದು ಸ್ವರ
ಇ೦ದು ಮೋಹನ ರಾಗ

ಸಂಘರ್ಷ ನನ್ನೊಳಗೆ
ಕೊನೆಗೂ೦ಡು
ನಿನ್ನ ಸಾಮಿಪ್ಯದ ಕಾವು
ಮೂಡಿಸಿಹುದು ಚಿತ್ತಾರ ನೂರು


ಸಾ೦ಗತ್ಯ ಸಂತೋಷ
ಸೌಹಾರ್ದ ಸ೦ಕೇತ

Comments