ಸುಳ್ಳೇ ನಮ್ಮಯ ದೇವರು

ಸುಳ್ಳೇ ನಮ್ಮಯ ದೇವರು

ಎಲ್ಲೋ ಅರ್ಜೆಂಟ್ ಹೊರಟಿದ್ದೆ. ಫಿನಾಯಿಲ್ ಮಾರುವವಳು ಕದ ತಟ್ಟಿದಳು. ಗಂಡಸಾಗಿದ್ದರೆ 'ಬೇಡ,ಹೋಗಪ್ಪಾ'ಎಂದು ಅಟ್ಟಬಹುದಿತ್ತು. ಹೆಣ್ಣು ನೋಡಿ,ಪಾಪ,ದೊಡ್ಡ ಬ್ಯಾಗು ಹೊತ್ತುಕೊಂಡು ಬರುತ್ತಾಳೆ. ತೆಗೆದುಕೊಂಡರೆ ಹೆಂಡತಿಯ ಬೈಗಳು ಕೇಳಬೇಕು. ಆಗ ನೆರವಿಗೆ ಬರುವುದು 'ಸುಳ್ಳು'. "ಫಿನಾಯಿಲ್ ನಮಗೆ ಹಾಸ್ಪಿಟಲ್ನಿಂದ ಫ್ರೀ ಸಿಗುತ್ತದೆ."ಯಾವ ಹಾಸ್ಪಿಟಲ್ ಎಂದು ಆಕೆಯೂ ಕೇಳಲಿಲ್ಲ,ನನಗೂ ಗೊತ್ತಿಲ್ಲ.


-ಸುಳ್ಳೇ ನಮ್ಮಯ ದೇವರು.


ಫೋನ್ ನಲ್ಲಿ ಹೆಚ್ಚಾಗಿ ತೊಂದರೆ ಕೊಡುವವರು 'ನಿಮಗೆ ಬಹುಮಾನ ಬಂದಿದೆ,ಇಂಥಲ್ಲಿಗೆ ಬಂದು ಪಡಕೊಳ್ಳಿ...'ಬೇಡವೆಂದರೂ ಪಟ್ಟು ಬಿಡರು."ನಾನು ಬಂದರೆ ನಿಮಗೇ ತೊಂದರೆ.ನಾನು ಕ್ರೈಂ ಬ್ರಾಂಚ್ ಯಸ್.ಐ." ಎಂದಾಗ ಟಪ್ ಎಂದು ಫೋನ್ ಇಡುವರು.


-ಸುಳ್ಳೇ ನಮ್ಮಯ ದೇವರು.


ಕೆಲಸ ಮುಗಿಸಿ ಸುಸ್ತಾಗಿ ಬಸ್ಸಲ್ಲಿ ಕುಳಿತಿರುತ್ತೀರಿ. ಪಕ್ಕದಲ್ಲಿ ಕುಳಿತಿರುವಾತ ದೇಶಾವರಿ ನಗೆ ಬೀರಿದ ಎಂದರೆ ರಸ್ತೆಯುದ್ದಕ್ಕೂ ಕೊರೆಯುತ್ತಾನೆ ಎಂದೇ ಲೆಕ್ಕ.'ಅಬ್ಬಾ,ಎಂಥಾ ಸೆಖೆ.ತಾವು ಏನು ಕೆಲಸ ಮಾಡುತ್ತೀರಿ"ಎಂದ ಕೂಡಲೆ "ತಮ್ಮ ಪರಿಚಯವಾದುದು ಒಳ್ಳೆಯದಾಯಿತು.ನಾನು ಎಲ್.ಐ.ಸಿ.ಏಜೆಂಟ್ ಎನ್ನಿ.ಮತ್ತೆ ನಿಮ್ಮ ಬಳಿ ಮಾತನಾಡಿದರೆ ನೋಡಿ.


-ಸುಳ್ಳೇ ನಮ್ಮಯ ದೇವರು.


ಅದೇ ನಿಮ್ಮ ಆಫೀಸಿಗೆ ಗಂಟು ಮುಖವನ್ನು ಹಾಕಿಕೊಂಡು ಬರದೇ,ನಗು ಮುಖ,ಕಂಕುಳಲ್ಲಿ ಬ್ಯಾಗಿದೆ, ಅಂದರೆ ಬಂದವ ೧೦೦% ಎಲ್.ಐ.ಸಿ.ಏಜೆಂಟ್. ಆತ ಮಾತನಾಡುವ ಮೊದಲೇ ನಿಮ್ಮ ಅತ್ತಿಗೆ ಎಲ್.ಐ.ಸಿ.ಏಜೆಂಟ್ ಆಗಿರುವುದನ್ನು ಹೇಳಿ.


-ಸುಳ್ಳೇ ನಮ್ಮಯ ದೇವರು.


ಹೆಚ್ಚಿನ ಹೆಂಗಸರು ತಿಂಗಳಿಗೆ ಎರಡು ಮೂರು ಸಾರಿಯಾದರೂ ಮುಟ್ಟಾಗುವರು.'ಅಯ್ಯೋ,ಬರಬಹುದಿತ್ತು ಕಣ್ರೀ.ನನಗೆ ಅದೇ ದಿನ ಡೇಟ್ ಕಣ್ರೀ...'ಏನು ಮಾಡುವುದು?


-ಸುಳ್ಳೇ ಅವರ ದೇವರು.


ಒಂದು ದಿನ ಒಂದು ಮಾಲ್ ನ ಹೊರಗೆ ರಸ್ತೆಯಲ್ಲಿ ಕಾರು ನಿಲ್ಲಿಸಿ ಕಾಯುತ್ತಿದ್ದೆ. ಹೆಂಡತಿ ಮಕ್ಕಳು ಒಳಗೆ ಹೋಗಿದ್ದರು. ನಾನು ಅನಗತ್ಯ ಐಟಮ್ ಗಳನ್ನೇ ಪರ್ಚೇಸ್ ಮಾಡುವುದೆಂದು, ಮಾಲ್ ಗಳಿಗೆ ನನಗೆ 'ನೋ ಎಂಟ್ರಿ'. ೮-೧೦ ಜನರ ಗುಂಪೊಂದು ಬಂತು ದೇಣಿಗೆಗೆ. "ನಾನು ಡ್ರೈವರ್ ಸರ್. ಓನರ್ ಒಳಗಿದ್ದಾರೆ.೨ ಗಂಟೆಯಾಯಿತು.ಟೀ ಕುಡಿಯಲೂ ದುಡ್ಡಿಲ್ಲಾ.."


-ಸುಳ್ಳೇ ನಮ್ಮಯ ದೇವರು.


ಆಪತ್ತು ದೊಡ್ಡದೇ ಇರಲಿ,ಸಣ್ಣದೇ ಇರಲಿ. ಆಪತ್ಕಾಲದಲ್ಲಿ ರಕ್ಷಿಸುವಾತ ಆ ಪರಮಾತ್ಮ. ಆಪತ್ಕಾಲದಲ್ಲಿ ರಕ್ಷಿಸುವ 'ಸುಳ್ಳೂ' ದೇವರು. ನೀವು ಸಹ ದಿನದಲ್ಲಿ ಅನೇಕ ಸಾರಿ ಸುಳ್ಳು ಹೇಳಿಲ್ಲ ಎಂದು 'ಕುಮಾರನ'ಮೇಲೆ ಆಣೆಯಿಟ್ಟು ಹೇಳಿ ನೋಡೋಣ. ಏನು ಯೋಚಿಸುತ್ತಿದ್ದೀರಿ. ಒಪ್ಪಿಕೊಳ್ಳಿ- -"ಸುಳ್ಳೇ ನಮ್ಮಯ ದೇವರು."

Rating
No votes yet

Comments