ಸೂಪರ್ ಮೂನ್ ಅಪಾಯಕಾರಿ

ಸೂಪರ್ ಮೂನ್ ಅಪಾಯಕಾರಿ

ನನ್ನ ಬಹುದಿನದ ಕನಸು

ನಾನೂ ಕವಿಯಾಗಬೇಕು

ನನ್ನ ಕವಿತೆ ಕ್ಯಾಸೆಟ್ ಆಗಿ

ಜನ ಕೇಳಿ ಹುಚ್ಚೆದ್ದು ಕುಣಿಯಬೇಕು.

ಪೂರ್ಣ ಚಂದಿರ ಭೂಮಿಗೆ ಅತೀ ಸಮೀಪ

ಇದಕ್ಕಿಂತ ಶುಭಮುಹೂರ್ತ ಬೇರೆ ಬೇಕೆ?

ಚಂದ್ರನಿಗೆ ಇನ್ನೂ ಸಮೀಪವಾಗಲು ಟೆರೇಸ್‌ಗೆ ಹೋದೆ

ಸ್ಫೂರ್ತಿಗೆ ಅರ್ಧಾಂಗಿಯನ್ನು ಜತೆಯಲ್ಲಿ ಕರೆದೆ

ಚೇರ್‌ನಲ್ಲಿ ಎದುರುಬದುರು ನಾನು ನನ್ನಾಕೆ

ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ

ನೆನಪಾಯಿತು..."ಎಲ್ಲೇ ಕನ್ನಡಕ?

ಪೂರ್ತಿ ಹಣ ಕೊಟ್ಟು ತಿಂಗಳಾಯಿತು. ಒಂದು ಗಳಿಗೆ

ಒಂದು ಗಳಿಗೆ ಹೋಗಿ ತರಲು ನಿನಗೇನೇ ಸಂಕಟ?"

ನಾನು ಕುಳಿತ ಚೇರ್ ಸ್ವಲ್ಪ ಅಲುಗಾಡಿತು.

ಪುನಃ ಕವಿತೆ ಮೂಡಿಗೆ ಬಂದೆ

ಪ್ರಾಸ ತನ್ನಿಂದ ತಾನೆ ಬಂತು

ನೀಲಿ ನೈಟಿಯಲಿ ಮೂನ್ ಲೈಟಲಿ ನಿನ್ನ ಬ್ಯೂಟಿ..

ನೈಟಿಯಲ್ರೀ ಸೀರೆ ಅನ್ನೋವಾಗಲೇ

ಪಕ್ಕದ ಮನೆಯಾಕೆ ನೀಲಿ ನೈಟಿಯಲ್ಲೇ

ಅವರ ಟೆರೆಸ್ ಮೇಲೆ ಕಾಣಿಸಬೇಕೆ..

ಚೇರ್ ಜೋರಾಗಿ ಕಂಪಿಸಿತು

ತೆರೆಗಳ ಹೊಡೆತವೇ ಇರಬಹುದು

ನಾನು ಉರುಳುರುಳಿ ಬಿದ್ದಿದ್ದೆ ಅಂಗಳದಲಿ

ಚೇರ್ ಗಿಡ ಪಾತ್ರೆ ಸೈಕಲ್ ಬೈಕ್..

ಎಲ್ಲಾ ನಿಮಿಷದಲಿ ಧ್ವಂಸ

 

ಈ ಮಿನಿ ಸುನಾಮಿಗೆ ಸೂಪರ್ ಮೂನೇ ಕಾರಣ-ಗಣೇಶ.

 

Rating
No votes yet

Comments