ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨


ಬೆಂಗಳೂರಿಗೆ ಬಂದು , ಯಾರೋ 'ಆಗಂತುಕನ' ಕೈಗೆ ತಗುಲಕಿಕೊಂಡು, ಇದ್ದ ಕಾಸು ಎಲ್ಲ 'ಹುಂಡಿಗೆ' ಹೋದಾಗ ಆ ಗಾರ್ಡು ಬಂದು, ಇವನ 'ಕರುಣಾಜನಕ' ಕಥೆ ಕೇಳಿ ಹೋಟೆಲಿಗೆ ಕರೆದೊಯ್ದು ಕೆಲ್ಸಕ್ಕೆಸೇರಿಸಿದ್ದ..
ಸರಿ ಮಧ್ಯ ರಾತ್ರಿ ವರಗೆ ಹಿಟ್ಟು ರುಬ್ಬೋದು, ಮೈ ಕೈ ಎಲ್ಲ ಸುಸ್ತಾಗಿ , ಶಿವನೆ ಅಂತ ಮಲ್ಕೊನ್ದ್ರೆ ಬೆಳ್ ಬೆಳಗ್ಗೆ ೪-೩೦ ಗೆ ಮತ್ತೆ ಹೋಟೆಲ್ ಓನರ್ ಬಂದು 'ಕಿವಿ ಹಿಂಡಿ' ಎಬ್ಬಿಸೋರು!! ಎಳ್ರೋ ಹಳೆ ಬೆವರ್ಸಿಗಳ :) ಏನ್ ಚಿಂತೆ ಇಲ್ದಂಗೆ ಬಿದ್ಕಂತವೆ ಹಂಗೆ ಬಿಟ್ರೆ..
ತತ್!! ಮಲ್ಕಳಾದೆ ಮಧ್ಯ ರಾತ್ರಿ, ಇಷ್ಟು ಬೇಗ ಬೆಳ್ಗೆ ಆಯ್ತಾ? ಪುಟ್ಟ ನ ಗೊಣಗಾಟ...
ಆಮೇಲೆ ತರಾತುರಿಲಿ ಹಲ್ಲುಜ್ಜಿ ,ಮಕ ತೊಳ್ದು,
ವಸಿ ಕಾಫೀ ಕುಡಿದರೆ ಮೈ ಎಲ್ಲ ಮಿಂಚಿನ ರಕ್ತ ಸಂಚಾರ,ಉತ್ಸಾಹ!!
ಅಸ್ಟೆಲ್ಲ ತಾಪತ್ರಯ -ತೊಂದ್ರೆ -ಹೀಗಳಿಕೆ-ಮೂದಲಿಕೆ ಮಧ್ಯೆಯೇ ಅವನಿಗೆ ತನ್ನ 'ಕನಸು' ನನಸು ಮಾಡಿಕೊಳ್ಳಲು ಸಮಯ ಹೊಂದಿಸಿಕೊಂಡು
ಅದಾಗಲೇ ಎಲ್ಲೆಡೆ ಓಡಾಡಿ 'ಚಿತ್ರ ತರಭೇತಿ' ಶಾಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆಗಾಗ ಅಲ್ಲಲಿ ಚಿತ್ರೀಕರಣ ನಡೆಯುತ್ತಿದ್ದ 'ಸ್ಟುಡಿಯೋ ಗಳಿಗೆ' ಹೋಗಿ ಚಿತ್ರೀಕರಣ ನೋಡಿ ತಾನೂ ಮುಂದೊಮೆ ಇದೆ ಸ್ಟುಡಿಯೋ ದಲ್ಲಿ ಖ್ಯಾತ ನಟರ ನಿರ್ದೇಶನ ಮಾಡುವೆ -ಎಂದೆಲ್ಲ 'ಹಗಲು ಗನಸು'ಕಾಣ್ತಿದ್ದ..
ಆದರೆ ಅದು ಬರೀ ಹಗಲು ಗನಸು ಆಗಿರದೆ ಅದನ್ನು 'ಕಾರ್ಯಗತ' ಮಾಡಿ 'ನನಸಾಗಿಸುವ'ನಿಟ್ಟಿನಲ್ಲಿ ಬೇಜಾನ್ ಪ್ರಯತ್ನ ನಡೆಸಿದ್ದ ಪುಟ್ಟ..
ಹೋಟೆಲಿನಲ್ಲಿ ತಿಂಡಿಗೆ 'ಆರ್ಡರ್' ಮಾಡಿ ಕುಳಿತ ಗ್ರಾಹಕರಿಗೆ ಥಳ -ಥಳ ಹೊಳೆವ ಪ್ಲೇಟ್ ಗಳಲ್ಲಿ ತರವ 'ತಿಂಡಿಯಲ್ಲಿ' ಅದು ಗ್ರಾಹಕರಿಗೆ 'ತಲುಪವ' ಮೊದಲು ಅದ್ರಲ್ಲಿ 'ನೊಣ- ಜಿರಳೆ' -ಬಿದ್ರ್ವದು ಅದನ್ನು 'ಎತ್ತಿಹಾಕಿ' ಅದ್ನೇ, ಗ್ರಾಹಕರಿಗೆ ಒಯ್ದು ಕೊಡ್ವ, ಮಾಣಿಗಳು
ಅದನ್ನು 'ಚಪ್ಪರಿಸುವ' ಗ್ರಾಹಕರ ಕಂಡಾಗ -ಪುಟ್ಟನಿಗೆ ನಗೆ ಬರ್ತಿತ್ತು...
ಅಲ್ಲಿ ಇರವ ತನ್ ಸಹ ಕೆಲಸಗಾರರಿಗೆ, ತಾ 'ಸಿನೆಮ ನಿರ್ದೇಶಕ ' ಆಗುವ ಬಗ್ಗೆ ಹೇಳಿದಾಗ ಹಲವರು'ಕಿಸಕ್ಕನೆ' ನಕ್ಕು, ಲೋ ಮಗಾ ಮೊದ್ಲು ಆ 'ಹಿಟ್ಟು' ಎತ್ತೋ ಆಮೇಲೆ ನಿರ್ದೇಶಕ್ ಆಗ್ವಿಯಂತೆ!!
ಪುಟ್ಟ ಈ ತರಹದ ಮೂದಲಿಕೆ -ಚೇಡಿಸುವಿಕೆ ಎಲ್ಲ ಚಿಕ್ಕಂದಿಂದ ಬಲ್ಲ ,ಅದ್ಕೆ ಸುಮ್ನೆ ಒಂದು 'ನಗೆ' ನಕ್ಕ್ಕುಸುಮ್ಮನಾಗ್ತಿದ್ದ..ಮಕ್ಳ ಮುಂದೆ ನೀವೇ ನೋಡ್ತಿರ 'ಈ ಪುಟ್ಟ' ಅದು ಹೆಂಗೆ 'ಟಾಪ್ ನಿರ್ದೇಶಕ' ಆಗತಾನೆ ಅನ್ತ, ಆಮೇಲೆ ನೀವೇ ಬತ್ತ್ತೀರ ನನ್ ಹತ್ರ 'ಹೀರೋ' ಮಾಡು, 'ವಿಲನ್' ಮಾಡು ಅಂತ!!
ಪ್ರತಿ ತಿಂಗಳ ಸಂಬಳ ಎಲ್ಲ ಕೂಡಿಸಿ ,ತನ್ನ ತರಭೆತಿಗೆ ಆಗುವಸ್ಟು ಕಾಸು ಆದ ಮೇಲೆ ಒಂದು ದಿನದ ರಜೆ ತೆಗೆದುಕೊಂಡು
ಆ ಚಿತ್ರ ರಂಗದ ತರಬೇತಿ ಶಾಲೆ ಅಡ್ದ್ರೆಸ್ಸು ಹುಡುಕಾಡಿ ಅಲ್ಲಿಗೆ ಹೋಗಿ ನೋಡಿದಾಗ ಧನ್ಗಾದ, ಅಲ್ಲಿ ಅದಾಗಲೇ ನೂರಾರು ಜನ ನಾ -ತಾ ಅಂತ ಮುಗಿ ಬಿದ್ದಿದ್ದರು ಕೋರ್ಸಿಗೆ ಸೇರಲು!! ಆದರೂ ಯುದ್ಧಕ್ಕೆನಿಂತಾಗ ಸೈನ್ಯ-ಸೈನಿಕರ ಲೆಕ್ಕಾಚಾರ ಮಾಡೊದ?
ಅವರೂ ಇರ್ಲಿ ನಾನೂ ಇರ್ವೆ,
ನೋಡೋಣ ಅಂತ ಲೈನಿಗೆ ನಿಂತು ಅಪ್ಪ್ಲಿಕೆಶನ್ ಖರೀದ್ಸಿ ಅರ್ಜಿ ಹಾಕಿಯೇ ಬಿಟ್ಟ..
ಆಮೇಲೆ ಸಂದರ್ಶನಕ್ಕೆ ಕರೆದು ಏನೆಲ್ಲಾ ಪ್ರಶ್ನೆ ಕೇಳಿದಾಗ ಚಾಲುಕಾಗಿ- ತರ್ಕಬದ್ದ ಉತ್ತರ ಕೊಟ್ಟು ಸಂದರ್ಶಕರ ಪ್ರಶ್ನೆಗಳಲ್ಲಿ 'ಪಾಸಾಗಿ' ಸ್ಥಾನ ಗಿಟ್ಟಿಸಿ ,ಚಿತ್ರ ತರಭೇತಿಗೆ ಸೇರಿದ್ದಾಯ್ತು, ಮೊದಲ ದಿನವೇ ರಾಜೇಂದ್ರ ಸಿಂಗು, ರೇಣುಕ ಶರ್ಮ, ಭಗವಾನು,ಮತ್ತು ಹಂಸ ಲೇಖ ಅವರೂ ಬಂದು ಹೊಸ ಬ್ಯಾಚಿನ ಹುಡುಗ -ಹುಡುಗಿಯರಿಗೆ ಚಿತ್ರ ರಂಗದ ಬಗ್ಗೆ ವಿಸ್ತೃತ ಮಾಹಿತಿ ಕೊಟ್ಟು ಅದೊಂದು ,ಸಮುದ್ರ -ಎಷ್ಟು ಶ್ರಮಪಡಬೇಕು, ಯೆಶಸ್ಸಿನ ದಾರಿ ಏನು?
ತಾವೆಲ್ಲ ಅದೆಸ್ಟು ಕಷ್ಟ ಪಟ್ಟು ಹೆಂಗೆ ಮುಂದೆ ಬಂದಿದ್ದು, ಒಂದು ಚಿತ್ರದ ಯೆಶಸ್ಸು ನೂರು ಜನ ಸ್ನೇಹಿತರನು, ೧೦೦ ಜನ ಶತ್ರುಗಳನ್ನು ಹುಟ್ಟು ಹಾಕುತ್ತೆ, ಇಲ್ಲಿ 'ಗೆದ್ದವನ' ಕಾಲು ಹಿಡಿಯುವವರು, 'ಸೋತವನ' ಕಾಲು ಎಳೆದು 'ಬೀಳಿಸುವವರು' ಎತ್ತಿ ಕುರಿಸುವವರು, ಚಾಡಿ ಹೇಳಿ ಮನಸ್ತಾಪ ಮಾಡುವವರು, ಎಲ್ರೂ ಇದ್ದಾರೆ, ಇದು ಮಹಾ ಸಾಗರ, ಕಲಿಯೋಕೆ ಸಾಕಷ್ಟು ಇದೆ, ನಿಮಗೆಲ್ಲ ಶುಭವಾಗಲಿ ಎಂದು ಎಲ್ಲರಿಗೂ ಹೇಳಿ ಕೈ -ಕುಲುಕಿ ಶುಭ ಹಾರೈಸಿ ಹೋದರು..
'ಪುಟ್ಟ' ನಿಗೆ ಮೊದಲ ದಿನವೇ ಚಿತ್ರ ರಂಗದ 'ಖ್ಯಾತರ' ಜೊತೆ ಬೇಟಿ..
ಖ್ಯಾತ' ನಿರ್ದೇಶಕರೊಬ್ಬರು ಕ್ಯಾಂಪಸ್ ಇಂಟರ್ವೂನಲ್ ಇವನ ಬುದ್ಧಿಮತ್ತೆ ಮತ್ತೆ ಯೋಚನಾ ಲಹರಿ ಶೈಲಿ ಮೆಚ್ಚಿ ತನ್ ಸಹಾಯಕ ನಿರ್ದೇಶಕ ಆಗಿ ಮಾಡಿದರು... ಅವರ ಕೈ ಕೆಳಗೆ ನಿರ್ದೇಶಕ ಅಂತ ಸೇರಿ ತೆಗೆದ ಆ ಚಿತ್ರ 'ಶುಭವಾಗಲಿ'...ಭರ್ಜರಿಯಾಗಿ ಓಡಿ ಗಲ್ಲ ಪೆಟ್ಟಿಗೆ ಲೂಟಿ ಮಾಡಿ ಪುಟ್ಟ ಮತ್ತು ತ0ಡದ ಎಲ್ಲರಿಗೂ ಶುಭವನ್ನೇ ತಂತು..
'ಶ್ರಧ್ಹೆ -ತಾಳ್ಮೆ- ಕಲಿಯುವ ಆಸಕ್ತಿ ಎಲ್ಲವೂ ಒಗ್ಗೂಡಿ ೧ ವರ್ಷದ ಕೋರ್ಸು ಮುಗ್ಸಿ 'ಅತ್ಯುತ್ತಮ' ಶ್ರೇಣಿಯಲ್ಲಿ ಪಾಸಾದ. ನೋಡಲು ತಕ್ಕ ಮಟ್ಟಿಗೆ 'ಪಸಂದಾಗಿದ್ದ' ಪುಟ್ಟನಿಗೆ ನೀ 'ಅಭಿನಯಕ್ಕೆ' ಸೇರಬಹುದಲ್ಲ, ಅದ್ಯಾಕೆ 'ನಿರ್ದೇಶಕನೇ' ಆಗಬೇಕು ಅಂದಾಗ, ಸ್ಸಾರ್, ನನನ್ ಕನಸು ಗುರಿ -ಆಶೆ ಎಲ್ಲವೂ ನಿರ್ದೇಶಕ್ ಆಗೋದೆಯ, ಅಭಿನಯ ನನ 'ಹವ್ಯಾಸ' ಮಾಡಿಕೊಂಡದ್ದು ಆದರೆ -ನಿರ್ದೇಶಕ ಆಗೋದು ನನ್ 'ಗುರಿ' ಎಂದು ಸ್ಥಾನ ಗಿಟ್ಟಿಸಿದ್ದ.
ಆಮೇಲೆ ನಿರ್ಣಯ, ಭವಿಷ್ಯ, ತಂತ್ರ ಅಂತೆಲ್ಲ ಕೆಲ ಚಿತ್ರಗಳನ್ ತೆಗೆದು ಅವು ಎಲ್ಲ ತಕ್ಕಮಟ್ಟಿಗೆ ಹಿಟ್ ಆಗಿ ಈಗೀಗ ಆ ಖ್ಯಾತ ನಿರ್ದೇಶಕರು 'ಪುಟ್ಟನಿಗೆ' ಅವಲಂಬಿತರಾಗಿ ಅವನಿಗೆಲ್ಲ ಜವಾಬ್ಧಾರಿ ವಹಸಿ ತಾವೋ 'ಆರಾಮಾಗಿ' ಕುಳಿತು, ಮೇಲ್ವಿಚಾರಣೆ ಮಾಡುತ್ತಿದ್ದರು
ಆದರೆ ತೆರೆಯ ಮೇಲೆ ಮಾತ್ರ 'ಖ್ಯಾತ ನಿರ್ದೇಶಕ' ಅಂತ ನಿರ್ದೇಶನ ಎಂದಿರೋ ಹೆಸರಲ್ಲಿ 'ಸದಾ'ಅವರದೇ ಹೆಸರು, ನಮ್ಮ 'ಪುಟ್ಟನ' ಹೆಸರು ಇನ್ನೂ 'ಸಹಾಯಕ ನಿರ್ದೇಶಕನ' ಲೆವೆಲ್ಲಿಗೆ ಇತ್ತು!
ಅದೊಂದು ದಿನ ಚಿತ್ರ ಪೂರ್ಭಾವಿ ಪ್ರದರ್ಶನದ ವೇಳೆ 'ಪುಟ್ಟನ ನ ಕೆಲಸದ ರೀತಿ ನೀತಿ-ತಾಳ್ಮೆ,ಚತುರತೆ -ಶ್ರದ್ಧೆ ಎಲವೂ ಕಂಡಿದ್ದ ಕನ್ನಡ ನಿರ್ಮಾಪಕರೊಬ್ಬರು ಇವ್ನು ನಾ ಏನರೆ ಸಿನೆಮ ಮಾಡಿದರೆ ಅದ್ಕೆ ಸೆಟ್ ಆಗ್ತಾನೆ, ಒಳ್ಳೆ ಕೆಲಸಗಾರ ಅನ್ಸುತ್ತೆ, ಒಂದಪ ಕೇಳಿಯೇ ಬಿಡ್ವ ಅನ್ಕೊಂಡು ಏಯ್ -ಇಲ್ಲಿ ಬಾರಯ್ಯ -ಏನು ನಿನ್ನ ಹೆಸರು?
ಯಾರ ಅಸ್ಸಿಸ್ತೆಂಟು?
ನಮ್ ಪಿಕ್ಚರ್ ಮಾಡೀಯೇ? ಅಂದ್ರು.
ಪುಟ್ಟ- ಆ ಶಾಕ್ ನಿಂದ ಚೇತರಿಸಿ ಕೊಂಡು, ನಮಸ್ಕಾರ ಸ್ಸಾರ್, ನಾ 'ಅವ್ರ ' ಅಸ್ಸಿಸ್ತೆಂಟು, ಓಹೋ ಗೊತ್ತಾಯ್ತು ಕಣಯ್ಯಾ , ಅದಾಗಲೇ ಕೆಲ 'ಯೂನಿಟ್ಟಿನ' ಹುಡುಗರು ನಿನ್ ಬಗ್ಗೆ ಮಾತಾಡೋದು ಕೇಳಿದೀನಿ ಒಳ್ಳೆ 'ಕೆಲಸಗಾರ' ಅಂತೆ , ನನಗೋ 'ಅಂತವ್ರೆ ' ಬೇಕು ,
ಏನರ ಕಥೆ -ಗಿತೆ ಮಡಗಿದಿಯೋ ??
ಇದ್ರೆ ಹೇಳು ಒಂದು ಚಿತ್ರ ಮಾಡಿ ಬಿಡುವ ಅಂದಾಗ ನಮ್ 'ಪುಟ್ಟ ' ಗೆ ಆಕಾಶ ಜಸ್ಟ್ ೩ ಗೇಣು ಅಸ್ಟೇ :)
ಆಹ್!! ಯಾಕಿಲ್ಲ ಸ್ಸಾರ್? ಖಂಡಿತವಾಗಲೂ ಬೇಜಾನ್ ಕಥೆಗಳನ ಬರ್ದಿದೀನ್, ಆದ್ರೆ ನಾ ಈಗ ಈ ಚಿತ್ರ ನಿರ್ದೇಶಕರ ಕೈ ಕೆಳಗಡೆ 'ಸಹಾಯಕ ನಿರ್ದೇಶಕ' ಅಸ್ಟೇ,ಅವ್ರ 'ಮಾರ್ಗದರ್ಶನದಲ್ಲೇ' ಆ ಎಲ್ಲ ಹಿಟ್ ಚಿತ್ರಗಳು ಬಂದದ್ದು, ಈಗ ನಾ ಒಬ್ನೇ ನಿಮ್ಮ ಚಿತ್ರ ನಿರ್ಮಾಣದ ಜವಬ್ಧರಿ ಹೆಂಗೆ ಹೊರ್ಲಿ? ಮೊದ್ಲು ನಮ್ 'ಗುರು' ತಾವ ಮಾತಾಡಿ, ಅವ್ರು 'ಹೂ' ಅಂದ್ರೆ, ಕಥೆ ಕೇಳಿ ಚಿತ್ರೀಕರಣ ಶುರು ಮಾಡೇ ಬಿಡ್ವ ಎಂದ ಪುಟ್ಟ..
ಸ್ಸರಿ- ನಾ 'ಅವ್ರ' ಹತ್ತಿರವೇ ಮಾತಡುತಿನ್, ನೀ ಬರೆದ ಎಲ್ಲ ಕಥೆಗಳನ್ ನಾಳೆ ಬೆಳಗ್ಗೆ ಹೋಟೆಲ್ 'ಗ್ರಾಂಡ್ ಅಶೋಕ್' ನಲ್ಲಿ ರೂಂ ನಂಬರ್ ೯ ಕ್ಕೆ ಬಂದು ನಂಗೆ ಹೇಳು, ಕಥೆ 'ಓಕೆ' ಆದ್ರೆ ಒಂದು ವಾರದಲ್ಲೇ ಚಿತ್ರೀಕರಣ ಶುರು ಮಾಡೇ ಬಿಡ್ವ, ನೀ ಏನು ಚಿಂತೆ ಮಾಡಬೇಡ ನಿಮ್ಮ ಗುರುಗಳನ್ನ ನಾ ಒಪ್ಪಿಸ್ವೆ ಅಂದ್ರು ನಿರ್ಮಾಪಕರು, ನಾ ಈಗ ಹೊರಡುವೆ ನಿಮ್ಮ ಗುರುಗಳ ಹತ್ತಿರ ನಾ ಆಮೇಲೆ ಮಾತಾಡುವೆ , ಅವ್ನ ಬೆನ್ನು ತಟ್ಟಿ ಹೊರಟು ಹೋದ ನಿರ್ಮಾಪಕರನ್ನೇ ನೋಡ್ತಾ ಪುಟ್ಟ, ಜೀವನದಲ್ಲಿ ಮೊದಲ ಸಾರಿ ತನಗೆ ಎ ತರಹದ ಚಾನ್ಸ್ ಬಂದಿದೆ, ಹೆಂಗೋ ನಮ್ ಗುರುಗಳು ಹೂ ಅಂದ್ಬಿಟ್ರೆ, ಒಂದು ಒಳ್ಳೆ ಚಿತ್ರ ಮಾಡಿ ನೋಡೇ ಬಿಡುವ...
ನಿರ್ದೇಶಕರು ಪುಟ್ಟನನ್ನ ಕರಡು, ಅದೇನೋ ಆ ನಿರ್ಮಾಪಕರು ನಿನ್ನ ಭಲೇ ಆಸಕ್ತಿಯಿಂದ ಏನೇನೋ ಕೆಲ್ದಂಗಿತ್ತು? ಗುರುಗಳೇ, ಏನಿಲ್ಲ, ನನ್ನ ಕೆಲಸ ಅವ್ರಿಗ್ ಹಿಡಿಸಿದೆ, ಅದ್ಕೆ ಒಳ್ಳೆ ಕಥೆಗಲಿದ್ರೆ ಹೇಳು, ಒಂದು ಚಿತ್ರವನ್ನ ಮೇಡ್ ಬಿಡುವ ಅಂದ್ರು, ಅದ್ಕೆ ನಾ ನಮ್ ಗುರುಗಳನ್ನ ಕೇಳಿ, ಮುಂದುವರೆಯುವೆ ಎಂದೇ...
ಆ ಖ್ಯಾತ ನಿರ್ದೇಶಕರಿಗೆ 'ಕಣ್ಣು ತುಂಬಿ' ಬಂತು, ಅಲ್ಲ ಒಂದೋ ಎರಡು ದಿನ ನಮ್ ಜೊತೆ ಕೆಲಸ ಕಲ್ತು ,ಆಮೇಲೆ 'ತಾವೇ 'ನಿರ್ದೇಶಕರಾಗಿ, 'ತಮಗೂ' ಹೇಳದೆ ಮುಹೂರ್ತ ಮಾಡೋ ಅದೆಸ್ಟೋ ಜನ್ರನ್ ನೋಡಿದ್ದ ನನಗೆ ಈ 'ಪುಟ್ಟ' ,ಗುರು ಬಗೆಗಿನ ಭಕ್ತಿಯನ್ನ ಕಂಡು ಹೃದಯ ತುಂಬಿ ಬಂತು...
ಪುಟ್ಟ ಇದೆ ನಿನಗೆ 'ಸರಿಯಾದ' ಸಮಯ, ನೀ ಅವ್ರ ಆ ಚಿತ್ರ ನಿರ್ದೇಶನ ಮಾಡು,
ಗುರುಗಳೇ ನಾ ಇನ್ನೂ ಎಸ್ಟೋ ಕಲಿಯಲಿಕ್ಕ್ಕಿದೆ ಅಲ್ದೆ ಅವರೋ ಖ್ಯಾತ ನಿರ್ಮಾಪಕರು, ಅವ್ರು ತೆಗೆದ ಯಾವೊಂದು ಚಿತ್ರವೂ ಹಿಟ್ ,
ಅಲ್ದೆ ನಾ ಪ್ರಥಮ ನಿರ್ದೇಶನವನ್ ಏಕಾಂಗಿ ಆಗಿ ಮಾಡುವಸ್ಟು 'ಪ್ರಬುದ್ಧನೂ' ಆಗಿಲ ಎನ್ನಲು,
ಲೋ ಪುಟ್ಟ ನೀ ಯಾಕೋ ಏಕಾಂಗಿ, ನಾ ನಿನ್ನ ಬೆನ್ನ ಹಿಂದೆ ಇರ್ವೆ, ನೀ ಮುನ್ನುಗ್ಗು, ನಾ ನಿನಗೆ ಎಲವೂ ಹೇಳಿ ಕೊಡ್ವೆ ಎನ್ನಲು, ಆಗಲೇ ನಿರ್ಮಾಪಕರು ಕೊಟ್ಟ ನಂಬರಿಗೆ ಫೋನಾಯಿಸಿ, ಮಾತಾಡಿ ಅವ್ರ ಹೊಸ ಚಿತ್ರಕ್ಕೆ ನಿರ್ದೇಶಕ ಅಂತ 'ಬುಕ್ 'ಆಗಿ, ಬೆಳಗ್ಗೆ ಅಶೋಕ ಹೋಟೆಲ್ ಗೆ ಹೋಗಲು ರೆಡಿ ಆದ ಪುಟ್ಟ...
ಬೆರಾತ್ರಿ ಎಲ್ಲ ನಿದ್ದೆ ಬರದೆ, ಬೆಳಗ್ಗೆ ಗಂಟ ಎದು ಕೂತು, ತಾ ಬರೆದ ಕಥೆಯಲ್ಲಿ ಅಲ್ಪ-ಸ್ವಲ್ಪ ಬದಲಾವಣೆ ಮಾಡುತ್ತಾ, ಅದ್ಯಾವಾಗ ನಿದ್ದೆ ಹತ್ತಿತ್ತೋ ಗೊತ್ತಿಲ್ಲ.. ಬೆಳಗ್ಗೆ ಮೊಬೈಲ್ ಅಲಾರ್ಮ್ ಅರಚಿದಾಗ ಎದ್ದು, ಹಲ್ಲುಜ್ಜಿ, ಸ್ನಾನ ಮಾಡಿ, ಟಿಫಿನ್ ತಿಂದು ಲಗುಬಗೆಯಿಂದ ಓಡಿದ ರಸ್ತೆಗೆ..
ದಾರೀಲಿ ಬಂದ ಆಟೋ ಒಂದನ್ ಹತ್ತಿ ಹೋಟೆಲ್ ಅಶೋಕ್ ಅಂದ..
ಆಟೋದವನಿಗೆ ಕಾಸು ಕೊಟ್ಟು, ತಾ ತಂದಿದ್ದ ಕಥೆಗಳ ಫೈಲನ್ನ ಕೈಲಿ ಹಿಡಿದು ದಪುಗಾಲಿದುತ್ತ ಹೋದ ರೆಸೆಪ್ಚನ್ ಹತ್ತಿರ, ಅಲ್ಲಿ ಹೋಗಿ ಆ ನಿರ್ಮಾಪಕರ ಹೆಸರು ಹೇಳಿ ಅವ್ರ ರೂಂ ಕಡೆ ಹೊರಟ..
ಅದಾಗಲೇ ಎದ್ದು ತಮ್ಮ ಬೆಳಗಿನ ಉಪಹಾರ ಮುಗ್ಸಿ ಕುಳಿತಿದ್ದ ನಿರ್ಮಾಪಕರು,
ಬನ್ನಿ ಬನ್ನಿ ಕುಳಿತುಕೊಳ್ಳಿ, ತಿಂಡಿ ತಿನ್ತೀರಾ ಕಾಫೀ ಕುಡಿತೀರಾ ಎನ್ನಲು,
ಅದಾಯ್ತು ಸ್ಸಾರ್, ಈಗ ನಾ ಕಥೆ ಹೇಳಲೇ ಅಂದ..
ಮುಂದಿನ ಭಾಗದಲ್ಲಿ ,
ಪುಟ್ಟನ - ಪ್ರಥಮ ನಿರ್ದೇಶನದ ಚಿತ್ರದ
ಆ ವಿಭಿನ್ನ -ವಿಶಿಷ್ಟ 'ಕಥೆ' ಏನು? , ........
ಆ ಚಿತ್ರಕ್ಕೆ 'ಹೀರೋ' ಯಾರು?
ನಾಯಕಿ- ಖಳ ನಾಯಕ ಯಾರು?
ಎಲ್ಲೆಲಿ ಶೂಟಿಂಗು?
ಎಷ್ಟು ಬಜೆಟ್ಟು?
ಚಿತ್ರ ಮೂಲ :
೧ http://www.shutterstock.com/pic-19349869/stock-vector-man-shooting-film-vector-silhouette-isolated-over-white-background
೨ . http://id.88db.com/Photo-Multimedia/Audio-Video/ad-133657/en/
Comments
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by partha1059
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by makara
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by partha1059
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by venkatb83
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by venkatb83
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by prasannakulkarni
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by venkatb83
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by venkatb83
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by ಗಣೇಶ
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨ by pkumar
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೨