ಅಪಘಾತ-ಕಾರಣ- ಅಗಲ ರಸ್ತೆ
ಚಾರಣ ಎಲ್ಲರಿಗೂ ಗೊತ್ತು.
ಕಾರಣ=?
ಕಾರಣ=ಕಾರಲ್ಲಿ +ಪಯಣ.
ಪೂರ್ವಪದದ ಕೊನೆಯ ಅಕ್ಷರ ಹಾಗೂ ಉತ್ತರಪದದ ಮೊದಲೆರಡು ಅಕ್ಷರಗಳು ಲೋಪವಾಗುವ ಝೆನ್ ಸಂಧಿ ಇದು.
ಇನ್ನೊಂದು ಕಾರಣವೂ ಇದೆ. ಕಾರಿನ+ರಣ=ಕಾರಣ.(ಭಜ್ಜಿ ಸಂಧಿ)
(ರಣ=ಆಸೆ.ತುಳುವಿನಿಂದ ಕನ್ನಡಕ್ಕೆ ಆಮದಾದ ಶಬ್ದ).ಮನೆಯಲ್ಲಿ ರಾಶಿ ಕಾರುಗಳಿದ್ದರೂ ಯಾವುದೇ ಹೊಸ ಕಾರು ಬಂದರೂ, ಕೊಂಡು ಪ್ರದರ್ಶನ ಮಾಡುವುದು.
ಸಿಬ್ಬಂದಿಯನ್ನು ಓಡಿಸಿ, ತಾನೇ ಕಾರನ್ನು ಓಡಿಸಿದಾಗ ಇದೇ "ರಾಹು ಸಂಧಿ"ಯಾಗುವುದು.
’ಋಣ’(loan)ಮಾಡಿ ಕಾರು ತೆಗೆದುಕೊಳ್ಳುವುದು- ’ಕಾಋಣ’. ’ಋ’ ಣ ಕಷ್ಟವಾದವರು ಕಾರಣ ಎನ್ನುತ್ತಾರೆ. ತಪ್ಪಲ್ಲ. ಆದರೆ-
"ರಾಜಕಾರಣಿ" ಪದ ಪ್ರಯೋಗ ತಪ್ಪು.
ಹಿಂದೆ ರಾಜರಂತೆ ಕಾರಲ್ಲಿ ಪಯಣಿಸುತ್ತಿದ್ದವರನ್ನು-ರಾಜಕಾರಣಿ ಎನ್ನುತ್ತಿದ್ದರು. ಆ ಕಾಲಕ್ಕೆ ಅದು ಸರಿ. ಈಗ?
ಕೊನೆಯದಾಗಿ "ಹೇಳಿ ಹೋಗು-ಕಾರಣ"=
ಕಾರಲ್ಲಿ ಹೋಗುವ ಮೊದಲು ಕಾರಿನ ಕನ್ನಡಿ ಇಳಿಸಿ "ನಮಸ್ತೆ, ಶಬ್ಬಖೈರ್" ಹೇಳಿ ಹೋಗುವುದು. :)
ವ್ಯಾ-ಕಾರಣ ಪಾಠ ೨ ಮುಗಿಯಿತು.
ಇನ್ನು "ಅಪಘಾತ-ಕಾರಣ- ಅಗಲ ರಸ್ತೆ" ಬಗ್ಗೆ ನಾಳೆ ಬರೆಯುವೆನು.
-ಗಣೇಶ.
Comments
ಉ: ಅಪಘಾತ-ಕಾರಣ- ಅಗಲ ರಸ್ತೆ
In reply to ಉ: ಅಪಘಾತ-ಕಾರಣ- ಅಗಲ ರಸ್ತೆ by ananthesha nempu
ಉ: ಅಪಘಾತ-ಕಾರಣ- ಅಗಲ ರಸ್ತೆ
ಉ: ಅಪಘಾತ-ಕಾರಣ- ಅಗಲ ರಸ್ತೆ
ಉ: ಬೆಂಗಳೂರಿನ ಟ್ರಾಫಿಕ್ ಪ್ರಾಬ್ಲೆಂ ಇತ್ಯಾದಿ
ಉ: ಅಪಘಾತ-ಕಾರಣ- ಅಗಲ ರಸ್ತೆ
ಉ: ಅಪಘಾತ-ಕಾರಣ- ಅಗಲ ರಸ್ತೆ