ನನ್ನ ಮಾಷುಕಾ
ಕವನ
ಕೋಟಿ ಚಂದ್ರರ ತಂಬೆಳಕಿನ ನಗೆಯವಳು ನನ್ನ ಮಾಷುಕಾ
ಪ್ರೇಮ ದೇವತೆಯ ಪ್ರತಿರೂಪವೇ ನನ್ನ ಮಾಷೂಕಾ
ನೀಲ ನಭದ ವಿಸ್ತಾರವನು ತನ್ನ ಕನಸಲ್ಲಿ ಬಂಧಿಸಿದವಳು
ತಾರೆ ಮಿಂಚಿನ ಚಿತ್ತಾರವನು ಚಿತ್ತದಲ್ಲಿ ಹೆಣೆದವಳು ನನ್ನ ಮಾಷೂಕಾ
ನನ್ನ ಕಲ್ಪನೆಯ ಸಾಮ್ರಾಜ್ಯವನು ಹಿಗ್ಗಿಸಿದವಳು
ಹಗಲುಗನಸಿನ ಉನ್ಮಾದತೆಯಲಿ ಕಳೆಯುವಂತೆ ಮಾಡಿದವಳು ನನ್ನ ಮಾಷೂಕ
ಒಂದು ಸಣ್ಣ ಝಲಕಿನಲ್ಲಿಯೇ ಎದೆಬಡಿತ ತೀವ್ರಗೊಳಿಸಿದವಳು
ನನ್ನ ಪ್ರೀತಿಯ ಇನ್ ಕಾರ್ ಮಾಡಿ ಜಗತ್ತನ್ನೇ ಸ್ಥಬ್ಧಗೊಳಿಸಿದವಳು ನನ್ನ ಮಾಷೂಕ
ಕಾತರ ನಿರೀಕ್ಷೆಯಲಿ ಹತಾಷೆಯ ಶೂನ್ಯ ಸೃಸ್ಟಿಸಿದವಳು
ನೆನಪುಗಳ ಉಡುಗೊರೆ ನೀಡಿ ಕೊರಗಾಗಿ ಹೋದವಳು ನನ್ನ ಮಾಷೂಕಾ
ಗುರುಶಿಷ್ಯ ( ರಾಘವೇಂದ್ರ ರಾಮಚಂದ್ರ ಗುಡಿ )
Comments
ಉ: ನನ್ನ ಮಾಷುಕಾ
In reply to ಉ: ನನ್ನ ಮಾಷುಕಾ by mmshaik
ಉ: ನನ್ನ ಮಾಷುಕಾ
ಉ: ನನ್ನ ಮಾಷುಕಾ
In reply to ಉ: ನನ್ನ ಮಾಷುಕಾ by siddhkirti
ಉ: ನನ್ನ ಮಾಷುಕಾ