ಸೋತು ಗೆದ್ದ ಕಥೆ
ಕವನ
ಸೋತು ಗೆದ್ದ ಕಥೆ
ಯಾಕೋ ಕದನ ಮೂರನೆಯ
ಮಹಾಯುದ್ಧವೇ ಅನ್ನಿಸಿ ಬಿಟ್ಟಿತು
ಕಾರಣವಂತು ನೆನಪೇ
ಇಲ್ಲ ಈಗ ಬಿಡಿ
ಆದರೆ ಅರುತ್ತಾರು ಕೂಡಾ
ಬದಲಾಯ್ತು ಮುವತ್ತಾರಾಗಿ
ಬೆಳಿಗ್ಗೆ ಎಂದಿನಂತೆ
ಮೌನ ಗೌರಿದೇ ತಿಂಡಿ ಕಾಫಿ
ನನಗೂ ಮನಸ್ಸಿತ್ತಾದರೂ
ಇಷ್ಟು ಬಿಗುಮಾನ ಇರದಿದ್ದರೆ ಹೇಗೆ
ಪತಿ ದೇವನಾಗಿ
ಸರಿ ಮಾತಿಲ್ಲ ಕಥೆಯಿಲ್ಲ
ಪತ್ರ ಉ ಹುಂ ಇಲ್ಲ
ಹಿಂದಿನ ಕಾಲ ಕೆಟ್ಟು ಹೋಯ್ತಾ ..?
ಆದರೂ ಯಾವುದರಲ್ಲೂ ಮನಸ್ಸಿಲ್ಲ
ದಪ್ತರಿನಲ್ಲಿ ಒಂದಕ್ಕೊಂದು
ಕೆಲಸದಲ್ಲಿ ಮರೆತಿದ್ದೆ ಎಲ್ಲಾ
ಯಾಕೋ ಮದ್ಯಾಹ್ನ ಒಮ್ಮೆ
ಕರವಾಣಿ ಎತ್ತಿ ನೋಡಿದೆ
ಆರು ಮಿಸ್ಕಾಲ್
ಎರಡು ಕ್ಲೈಂಟು ದು ಮೂರು
ಮತ್ತೊಂದು ಧರ್ಮ ಪತ್ನಿದು
ಕಾಲ್ ಮಾಡಿದ್ಯಾ ಕೇಳಿದೆ
ಗೆದ್ದ ಗತ್ತಿನಲ್ಲಿ
ಕಿಲ ಕಿಲನಕ್ಕ ಶಬ್ದ ಆ ಕಡೆ
ಯಾಕೆ ನಗು ಡೇಟ್ ನೋಡಿ ಕೊಳ್ಳಿ
ನೋಡಿದೆ ತುಥ್ ಮೊನ್ನೆದು
ನೆನಪಾಯ್ತು ನನ್ನ ಮೊಬಾಯಿಲ್
ಸಿಗಲಿಲ್ಲ ಅಂತ ನಾನೇ ಮಿಸ್ ಕಾಲ್ ಕೊಟ್ಟಿದ್ದು
ಮತ್ತೊಮ್ಮೆ ಅದೇ ನಿರಮ್ಮಳ ನಗು
ಆದರು ಗೆದ್ದದ್ದು ನಾನೇ
ತಾನೇ
Comments
ಉ: ಸೋತು ಗೆದ್ದ ಕಥೆ
In reply to ಉ: ಸೋತು ಗೆದ್ದ ಕಥೆ by rohith p vitla
ಉ: ಸೋತು ಗೆದ್ದ ಕಥೆ
ಉ: ಸೋತು ಗೆದ್ದ ಕಥೆ
In reply to ಉ: ಸೋತು ಗೆದ್ದ ಕಥೆ by makara
ಉ: ಸೋತು ಗೆದ್ದ ಕಥೆ
ಉ: ಸೋತು ಗೆದ್ದ ಕಥೆ
In reply to ಉ: ಸೋತು ಗೆದ್ದ ಕಥೆ by santhosh_87
ಉ: ಸೋತು ಗೆದ್ದ ಕಥೆ
ಉ: ಸೋತು ಗೆದ್ದ ಕಥೆ
In reply to ಉ: ಸೋತು ಗೆದ್ದ ಕಥೆ by venkatb83
ಉ: ಸೋತು ಗೆದ್ದ ಕಥೆ