365 ದಿನಗಳು
ಮುನ್ನೂರರವತ್ತೈದು ದಿನಗಳು
ಒಂದು ವರ್ಷ
(ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!)
ಎಂಬತ್ತು+ ಬ್ಲಾಗ್ ಬರಹಗಳು
ಕೈಬೆರಳೆಣಿಕೆಯ ಲೇಖನಗಳು
ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು
ಭಾಗವಹಿಸಿದ ಹತ್ತಾರು ಚರ್ಚೆಗಳು
ತಿಳಿದ ಹೊಸ ವಿಷಯಗಳು ಹಲವಾರು
ಅದರಲ್ಲರಗಿಸಿಕೊಂಡವು ನಾಕಾರು
ಹೊಸ ಗೆಳೆಯರು ಒಂದಷ್ಟು!
ಸಿಕ್ಕಿದ ಸಂತಸ - ಎಣೆ ಇರದಷ್ಟು!
ಈ ಸಂತಸ ತಂದ ಸಂಪದಕ್ಕೆ ನಾನು ಇನ್ನೇನು ತಾನೇ ಹೇಳಲಿ?
ಬಹುಶ: ಈ ನನ್ನ ಮೊದಲ ಬ್ಲಾಗು ಒಂದು ವರ್ಷ ಬಾಳಿದ್ದು ನನ್ನ ಪುಣ್ಯದ ಫಲ ವೇ ಇರಬೇಕು!
ಸಂಪದದ ಹಿಂದಿರುವ ಹರಿಪ್ರಸಾದ್ ನಾಡಿಗರಿಗೂ, ಅವರ ತಂಡಕ್ಕೂ, ಮತ್ತೆ ಈ ತಾಣ ಇಷ್ಟು ಕಳೆಕಳೆಯಾಗಿರಲು ಕಾರಣರಾದ ಇಲ್ಲಿ ಭಾಗವಹಿಸುತ್ತಿರುವ ಸಂಪದಿಗರೆಲ್ಲರಿಗೂ ನನ್ನ ನೂರು ನಮನಗಳು!
-ಹಂಸಾನಂದಿ
(ನನ್ನ (mostly) ಇಂಗ್ಲಿಷ್ ಬ್ಲಾಗ್
ಅಲ್ಲಿದೆ ನಮ್ಮ ಮನೆ:- http://neelanjana.wordpress.com/ )
Rating
Comments
ಉ: 365 ದಿನಗಳು
ಉ: 365 ದಿನಗಳು
ಉ: 365 ದಿನಗಳು
ಉ: 365 ದಿನಗಳು
ಉ: 365 ದಿನಗಳು