ಪರೀಕ್ಷೆ ತಯಾರಿ.. -ಗಣೇಶ

ಪರೀಕ್ಷೆ ತಯಾರಿ.. -ಗಣೇಶ

‘ಪರೀಕ್ಷೆ ಸಮಯ. ಉಳಿದೆಲ್ಲಾ ವಿಷಯ ಬಿಟ್ಟು ಓದಿನ ಕಡೆ ಗಮನವಿರಬೇಕು. ...’ ಕಳೆದ ವರ್ಷ ಇದೇ ತಿಂಗಳ ಶುರುವಿಗೆ ಮಕ್ಕಳಿಗೆ ಬುದ್ಧಿ ಹೇಳಿ ಕೆಲಸಕ್ಕೆ ಹೋದೆ. ಸಂಜೆ ಬರುವಾಗ ಮಕ್ಕಳು ಪುಸ್ತಕ ಬಿಡಿಸಿಟ್ಟು ಕೂತಿದ್ದರು. ಆದರೆ.. ನೋಟ ಮಾತ್ರ ಟಿ.ವಿ.ಯೊಳಗೆ. ಬೇರೆ ದಾರಿಯಿಲ್ಲದೇ ಮನೆಯಾಕೆಯನ್ನು ಒಪ್ಪಿಸಿ ಕೇಬಲ್ ಕನೆಕ್ಷನ್ ತೆಗೆಸಿದೆ.


ಮಾರನೇದಿನ ಸಂಜೆ ಬರುವಾಗ ಮಕ್ಕಳು ಕೋಣೆಯಲ್ಲಿ ಓದುತ್ತಾ ಇದ್ದರು.. ವೀಕ್, ಫಿಲ್ಮ್ ಫೇರ್! ನನಗೆ ಟೈಮ್ ಪಾಸ್‌ಗೆ ಓದಲೆಂದು ತಂದಿಟ್ಟಿದ್ದರೆ, ಅವರು ಓದಿ ಟೈಮ್ ವೇಸ್ಟ್ ಮಾಡುತ್ತಿದ್ದರು. ಅಂದಿನಿಂದ ಮ್ಯಾಗಜಿನ್‌ಗಳು ಬಂದ್.


೩ನೇ ದಿನ ಮಕ್ಕಳು ಓದಿನಲ್ಲಿ ಮಗ್ನ. ನನಗೆ ರೇಡಿಯೊ, ಟಿ.ವಿ., ಪತ್ರಿಕೆಗಳಿಲ್ಲದೇ ಸಮಯ ಕಳೆಯುವುದೇ ಕಷ್ಟವಾಯಿತು. ಹೆಂಡತಿಗೆ ಸಹಾಯ ಮಾಡಲು ಅಡುಗೆ ಮನೆಗೆ ಹೊಕ್ಕೆ. ಅದಕ್ಕಿಂತ ವೇಗವಾಗಿ ಹೊರಬರಬೇಕಾಯಿತು. ಪುಣ್ಯಕ್ಕೆ ಮಿಕ್ಸಿ ಶಬ್ದ ಜೋರಾಗಿತ್ತು. :)


ಮೆಲ್ಲ ಕಂಪ್ಯೂಟರ್ ಆನ್ ಮಾಡಿ, ಶಬ್ದ ಮ್ಯೂಟ್ ಮಾಡಿ, ಗೇಮ್ ಆಡಿದೆ. ‘ಯೆಲ್ಲೋವನ್ನು ಶೂಟ್ ಮಾಡಿ ಅಪ್ಪ. ತ್ರೀ ಹಂಡ್ರೆಡ್ ಪಾಯಿಂಟ್ಸ್ ಸಿಗುತ್ತದೆ.’ ಬೆನ್ನ ಹಿಂದೆ ಮಕ್ಕಳು+ಸಲಹೆ ರೆಡಿ. ಕಂಪ್ಯೂಟರ್‌ನಿಂದ ಎಲ್ಲಾ ಗೇಮ್ಸ್ ತೆಗೆದೆ. ನಾಲ್ಕನೇ ದಿನ ಇಂಟರ್‌ನೆಟ್‌ನೊಳಗೆ ನುಗ್ಗಿದೆ. ಮಕ್ಕಳು ನೆಟ್ ಹೊರಗಿಂದ ಇಣುಕಿದರು .


ಬೇರೆ ದಾರಿ ಕಾಣದೇ ಕನ್ನಡಕ್ಕೆ ಮೊರೆ ಹೋದೆ. ‘ಕನ್ನಡಾ ಆ..’ಎಂದು ಕಂಪ್ಯೂಟರ್ ಬಳಿ ಬರುವುದು ನಿಲ್ಲಿಸಿದರು.

Rating
No votes yet

Comments