ಚಾಣಕ್ಯನ ಸೂಕ್ತಿಗಳು

ಚಾಣಕ್ಯನ ಸೂಕ್ತಿಗಳು

ಮಿಂಚಂಚೆಯಲ್ಲಿ ಸುಳಿದಾಡಿದ ಚಾಣಕ್ಯನ ಸುಪ್ರಸಿದ್ಧ ಸೂಕ್ತಿಗಳು ಕನ್ನಡ ಅನುವಾದ

v      ಬೇರೆಯವರು ಎಸಗುವ ತಪ್ಪುಗಳಿಂದ ಕಲಿಯಬೇಕು. ನೀವೇ ಅವೆಲ್ಲವನ್ನೂ ಮಾಡಿ ಕಲಿಯುವಷ್ಟು ಕಾಲಾವಕಾಶ ನಿಮಗಿಲ್ಲ.”

v     ಮನುಷ್ಯನು ಅತೀವವಾದ ಪ್ರಾಮಾಣಿಕತೆಯಿಂದಿರಬಾರದು ನೇರವಾದ ಮರಗಳನ್ನು ಮೊದಲು ಕತ್ತರಿಸುವಂತೆ ಪ್ರಾಮಾಣಿಕರನ್ನು ಮೊದಲು ಸುಲಿಗೆ ಮಾಡುತ್ತಾರೆ.

v    ಒಂದು ಪಕ್ಷ ಹಾವು ವಿಷರಹಿತವಾಗಿದ್ದರೂ ಅತ್ಯಂತ ಅಪಾಯಕಾರಿಯಂತೆಯೇ ವರ್ತಿಸಬೇಕು.

v      ಪ್ರತಿಯೊಬ್ಬರ ಸ್ನೇಹದ ಹಿಂದೆಯೂ ಸ್ವಾರ್ಥದ ಲವಲೇಶವಿದ್ದೇ ಇರುತ್ತದೆ. ಸ್ವಾರ್ಥರಹಿತ ಸ್ನೇಹವಿರುವುದಿಲ್ಲವೆಂಬುದು ಪರಮಸತ್ಯ.

v    ಯಾವುದೇ ಕಾರ್ಯವನ್ನು ಆರಂಭಿಸುವ ಮೊದಲು ನಿನ್ನನ್ನು ನೀನು ಪ್ರಶ್ನಿಸಿಕೊ. ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದೇನೆ? ಇದರ ಫಲಿತಾಂಶವೇನಾಗ ಬಹುದು? ನಾನು ಯಶಸ್ವಿಯಾಗ ಬಲ್ಲೆನೇ? ಆಳವಾಗಿ ಆಲೋಚಿಸಿ, ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರದೊರೆತರೆ ಮಾತ್ರ ಕಾ ರ್ಯೋನ್ಮುಖನಾಗು

v    ಭಯ ಹತ್ತಿರ ಸುಳಿದೊಡನೆಯೇ ಆಕ್ರಮಣಮಾಡಿ ನಾಶಗೊಳಿಸಿ.” <http://www.forwardedemails.com/%20http:/www.anxiety-phobia.com/>

v     ಜಗತ್ತಿನ ಅತ್ಯಂತ ಪ್ರಬಲವಾದ ಶಕ್ತಿಯೆಂದರೆ  ತಾರುಣ್ಯ ಮತ್ತು ಹೆಣ್ಣಿನ ಸೌಂದ ರ್ಯ.

v      ಯಾವುದೇ ಕೆಲಸವನ್ನು ಆರಂಭಿಸಿದ ಮೇಲೆ ಸೋಲಿಗಾಗಿ ಹೆದರದಿರಿ, ಅದರಿಂದ ಹಿಂದೆಸರಿಯ ಬೇಡಿ, ಪ್ರಾಮಾಣಿಕವಾಗಿ ಕೆಲಸಮಾಡುವವರೇ ಅತ್ಯಂತ ಸುಖಿಗಳು.

v      ಹೂವಿನ ಸುಗಂಧ ಗಾಳಿ ಬೀಸುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ. ಆದರೆ ಮನುಷ್ಯನ ಒಳ್ಳೆಯತನ ಎಲ್ಲಾ ದಿಕ್ಕುಗಳಿಗೂ ಹರಡುತ್ತದೆ.

v    ದೇವರು ವಿಗ್ರಹಗಳಲ್ಲಿಲ್ಲ, ನಿಮ್ಮ ಅನುಭವವೇ ನಿಮ್ಮ ದೇವರು. ನಿಮ್ಮ ಆತ್ಮವೇ ದೇವಾಲಯ.

v    ಮನುಷ್ಯ ಉತ್ತಮನೆನಿಸುವುದು ತನ್ನ ಕಾರ್ಯದಿಂದಲೇ ವಿನಃ ಹುಟ್ಟಿನಿಂದಲ್ಲ.

v      ನಿಮ್ಮ ಅಂತಸ್ತಿಗಿಂತ ಮೇಲಿನವರ ಅಥವಾ ಕೆಳಗಿನವರೊಂದಿಗೆ ಸ್ನೇಹವನ್ನು ಮಾಡ ಬೇಡಿ ಆ ರೀತಿಯ ಸ್ನೇಹಿತರು ಎಂದೂ ಸಂತೋಷವನ್ನುಂಟುಮಾಡರು.<http://www.forwardedemails.com/%20http:/www.bloggerkhushi.com/> "

v      ನಿಮ್ಮ ಮಕ್ಕಳನ್ನು 5 ವರ್ಷದವರೆಗೆ ಪ್ರೀತಿಯಿಂದ ನೋಡಿಕೊಳ್ಳಿ, ಮುಂದಿವ 5 ವರ್ಷ ಅಂಕೆಯಲ್ಲಿಡಿ, ಹದಿನಾರರ ಹರಯಕ್ಕೆ ಕಾಲಿಟ್ಟೊಡನೆಯೇ ಸ್ನೇಹಿತನಂತೆ ಕಾಣಿರಿ. ಬೆಳೆದ ಮಕ್ಕಳು ನಿಮ್ಮ ಉತ್ತಮ ಸ್ನೇಹಿತರು.

v    ಮೂರ್ಖರಿಗೆ ಪುಸ್ತಕವು ಎಷ್ಟು ಉಪಯೋಗವೋ ಅಂಧರಿಗೆ ಕನ್ನಡಿಯೂ ಅಷ್ಟೇ ಉಪಯೋಗ.

v      ಶಿಕ್ಷಣವು ಅತ್ಯುತ್ತಮ ಗೆಳೆಯ. ಸುಶಿಕ್ಷಿತನು ಎಲ್ಲೆಡೆಯೂ ಗೌರವಾನ್ವಿತನಾಗುತ್ತಾನೆ. ಶಿಕ್ಷಣವು ತಾರುಣ್ಯದ ಚೆಲುವನ್ನು ಮೀರಿಸುತ್ತದೆ.

 

**********

Rating
No votes yet

Comments