ನೀವ್ ಏನ್ ಹೇಳ್ತೀರ ? ನಿಮ್ಮ ಮೊಬೈಲ್ಗೆ ಸಿಗ್ನಲ್ ಕ್ಯಾಚ್ ಅಗಿದ್ಯಾ???

ನೀವ್ ಏನ್ ಹೇಳ್ತೀರ ? ನಿಮ್ಮ ಮೊಬೈಲ್ಗೆ ಸಿಗ್ನಲ್ ಕ್ಯಾಚ್ ಅಗಿದ್ಯಾ???

ನೀವ್ ಏನ್ ಹೇಳ್ತೀರ ? ನಿಮ್ಮ ಮೊಬೈಲ್ಗೆ ಸಿಗ್ನಲ್ ಕ್ಯಾಚ್ ಅಗಿದ್ಯಾ???

 



ಬೆಳಗ್ಗೆ ಕಾರ್ಯಸ್ಥಳಕ್ಕೆ ಬಂದು ಕೂತರೆ ಆಯ್ತು ಕೆಲವೊಮ್ಮೆ ಹೊರಗಿನ ಪ್ರಪಂಚದ ಸಂಭಂಧವೆ ಹೋಗಿಬಿಡುತ್ತೆ ಏರ್ಕೋಲ್ದ್ ರೂಮಿನ ಟ್ಯೂಬ್ಲೈಟ್ ಬೆಳಕಿನಲ್ಲಿ ಕುಳಿತ್ತಿದ್ದರೆ ಹೊರಗೆ ಹಗಲೊ ರಾತ್ರಿಯೊ, ಮಳೆಯೊ ಬಿಸಿಲೊ ತಿಳಿಯುವದಿಲ್ಲ. ಸ್ವಲ್ಪ ಬಿಸಿಲು ನೋಡಬೇಕೆಂದು ಕಳೆದವಾರ ಮಧ್ಯಾನ ಹೊರಬಂದೆವು ನಾನು ನನ್ನ ಕಲೀಗ್ ಒಬ್ಬರು.ಜಯನಗರದ ೯ ಒಂಬತ್ತನೇ ಮುಖ್ಯರಸ್ತೆಯಲ್ಲಿ ನಿಂತಿದ್ದಾಗ ಗಲಾಟೆ ಮಾಡುತ್ತ ಒಂದು ವಾಹನ ನಮ್ಮ ಮುಂದೆ ಹೋಯಿತು. ಅದರ ಮೇಲಿದ್ದ ಬರಹ MOBILE SALOON' . ಇದೇನು ಬಂತು ಬೆಂಗಳೂರಿಗೆ ಇನ್ನೇನು ಬರುತ್ತೊ ಅಂತ ನಾವಿಬ್ಬರು ನಡೆಸಿದ ಸಂಭಾಷಣೆಯ ಕಲ್ಪನೆಯ ರೂಪವೆ ಮುಂದಿನ ಪ್ರಸಂಗ


ಕಾಲ ಇಪ್ಪತ್ತು ವರುಷ ಮುಂದೆ ಸ್ಥಳ ಇದೇ ಬೆಂಗಳೂರು....


ಭಾರತ ಜನಸಂಖ್ಯೆ ಮಿತಿಮೀರಿತ್ತು ಆದರು ಉತ್ತರಪ್ರದೇಶ ಹಾಗು ಬಿಹಾರಕ್ಕೆ ಯಾವ ಯೋಚನೆಯು ಇರಲಿಲ್ಲ ಅಲ್ಲಿ ಹುಟ್ಟಿದ ಹುಟ್ಟುತ್ತಿದ ಜನರನ್ನು ಬೆಂಗಳೂರಿಗೆ ಕಳಿಸಿ ನೆಮ್ಮದಿಯಾಗಿದ್ದರು. ಬೆಂಗಳೂರು ಮಿತಿಮೀರಿದ ಜನಸಂಖ್ಯೆಯಿಂದ ತತ್ತರಿಸುತ್ತಿತ್ತು. ಹಾಗು ಇಲ್ಲಿನ ಪ್ರತಿ ಚದುರ ಜಾಗದ ಬೆಲೆ ಊಹೆಗೂ ನಿಲುಕದಷ್ಟು ಮೇಲೆ ಹೋಗಿ ಇಲ್ಲಿ ಯಾರು ಮನೆ ಕಟ್ಟಲು ಸಾದ್ಯವಿಲ್ಲ ಎನ್ನುವ ಪರಿಸ್ಥಿಥಿ. ಹಾಗಿರುವಾಗ ಒಬ್ಬನಿಗೆ ಹೊಳೆದಿತ್ತು , ಅಲ್ಲ ಪ್ರತಿ ಚದುರವು ಇಷ್ಟೊಂದು ಬೆಲೆಇರುವಾಗ ಮನೆಯಲ್ಲಿ ಬಾತ್ ರೂಮ್ , ಲೆಟ್ರೀನ್ ಅಂತ ಜಾಗವೇಕೆ ದಂಡ , ಅದೇ ಜಾಗದಲ್ಲಿ ಇನ್ನೊಂದು ರೂಮು ಅಗುತ್ತೆ ಅಂತ ಯೋಚಿಸಿದ. ಆಗ ಅವನು ತಂದ ಪದ್ದತ್ತಿಯೆ ಈ ಮೊಬೈಲ್ ಬಾತ್ಮತ್ತು ಮೊಬೈಲ್ ಲೆಟ್ರೀನ್’. ಯಾರೇ ಆಗಲಿ ಈ ನಂಬರಿಗೆ ಫೋನ್ ಮಾಡಿ ಇಲ್ಲ sms' ಮಾಡಿ , ಎರಡು ನಿಮಿಷದಲ್ಲಿ ನಿಮ್ಮ ಮನೆ ಮುಂದೆ ಮೊಬೈಲ್ ಲೆಟ್ರೀನ್ ರೆಡಿ , ಅದರಲ್ಲಿ ಮೊಬೈಲ್ ಬಿಲ್ ರೀತಿಯೆ ನಿಮಿಷಕಿಷ್ಟು ಅಂತ ಬಿಲ್. ನಿಮ್ಮ ಮುಂದೆಯೆ ಕಾಣಿಸುವ ಮೀಟರ್, ತುಂಬ ಪ್ರಸಿದ್ದವಾಯಿತು. ಬೆಂಗಳುರಿನಲ್ಲಿ ಎಲ್ಲಿ ನೋಡಿದರು ಮೊಬೈಲ್ ಲೆಟ್ರೀನ್ ದೆ ಓಡಾಟ. ಬಹುತೇಕ ಯಾರ ಮನೆಯಲ್ಲು ಬಾತ್ ರೂಮ್ ನ ಅನೂಕೂಲವಿಲ್ಲ.


ಹಾಗಿರುವಾಗ ಪಾಪ ನಮ್ಮ ಸಿದ್ದಲಿಂಗನಿಗೆ ಒಮ್ಮೆ ಪಾಪ ಏನು ತಿಂದಿದ್ದನೊ ಲೂಸ್ ಮೋಷನ್ ಪ್ರಾರಂಬವಾಯಿತು. ಆದರೆ ಅವನ ಕರ್ಮ ಅವತ್ತು ಯಾವ ಮೊಬೈಲ್ ಸಿಗುತ್ತಿಲ್ಲ NET WORK DOWN. ಎದುರಿಗೆ ಸಿಕ್ಕ ಎಲ್ಲರಿಗು ಕೇಳುತ್ತಿದ್ದಾನೆ ನಿಮಗೆ ಸಿಗ್ನಲ್ ಕ್ಯಾಚ್ ಅಗ್ತಿದ್ಯಾ?


 


 


 

Rating
No votes yet

Comments