ಪದಗಳಲಿ ಕೊರೆದ ಚಂದ್ರನ ಚೂರುಗಳು

ಪದಗಳಲಿ ಕೊರೆದ ಚಂದ್ರನ ಚೂರುಗಳು

ಕವನ

 ಭಾನೆಂಬ ಇರುಳೊಡಲಿಗೆ

ಒಂಟಿ ಕಣ್ಣಿನೊಡೆಯ

        *

ಚಂದಿರ ನೀ ಎಶ್ಟೊಂದು 

ಸುಂದರ!

ಭಾನೆಂಬ ಭಾಶೆಯ ಬರಹದಲಿ

ನೀನೇ ಅರದ್ ವಿರಾಮ,

ನೀನೇ ಪೂರಣ ವಿರಾಮ.

       *

ಮುಗಿಲ ತೋಟದಿ

ಮೊಗ್ಗುಗಳವೆಶ್ಟೋ?

ಮಲ್ಲೆಯಾಗಿ

 ಅರಳಿ ನಿಂತಿರುವ ಹೂವದದೊಂದೆ!

          *

ಪದಗಳಲಿ ಚಂದ್ರನ

ಕೊರೆಯಲು ಹೊರಟೆ

ಚಂದ್ರನ ಚೂರುಗಳವು

ರಂಗೋಲಿಯ ಚುಕ್ಕೆಗಳಾಗಿ

ಅರಳಿ ಚೆಲುವು ಬೀರಿದವು

ಅದಕೆ ಪದಗಳವು ಬೆರಗಾಗಿ ನಾಚಿ!

 ನೀರಾದವು.

Comments