ಆಸೆ
ಕವನ
ಮತ್ತೊಮ್ಮೆ ನನ್ನ ನೆನಪುಗಳು
ನಿಜ ವಸ್ತುಗಳಾಗುವ ಆಸೆ
ಚಿಕ್ಕವರಿದ್ದಾಗ ಆಡಿದ
ಉಸುಕಿನಲಿ ಗೂಡು ಕಟ್ಟುವ ಆಸೆ
ಬಣ್ಣ ಬಣ್ಣದ ಚಿಟ್ಟೆಯಾಗಿ
ಫ್ರಾಕ್ಕು ತೊಟ್ಟು ಓಡುವ ಆಸೆ
ನನ್ನ ಗೆಳತಿ ಸವಿಯ
ಗಲ್ಲವ ಚಿವುಟಿ ನಗುವ ಆಸೆ
ಊಟಕ್ಕೆಂದು ಕೈ ತೊಳೆದರೆ
ಅಮ್ಮನ ಸೆರಗಿಗೆ ಒರೆಸುವ ಆಸೆ
ಸಂಬಂಧಿಕರ ಮನೆಗೆ ಹೋದರೂ
ಅಪ್ಪನ ತೊಡೆ ಮೇಲೆ ಕೂಡುವ ಆಸೆ
ಕದ್ದು ಮುಚ್ಚಿ ನಾ ಮೊದಲೂ ಬಡಿದರೂ
ಅಣ್ಣ ಬಡಿದನೆಂದು ಸುಮ್ಮನೆ ಅಳುವ ಆಸೆ
ಕುಡಿಯದ ಹಾಲಿಗೆ ಬೈಯ್ಯುವರೆಂದು
ಸುಮ್ಮನೆ ಕಣ್ಣ್ಮುಚ್ಚಿ ಮಲಗುವ ಆಸೆ
ಗಿಡ್ಡಿ ಗಿಡ್ಡಿ ಅನ್ನುವರೆಂದು
ಹಗ್ಗವ ಆಡಿ ಸೈಕಲ್ ತುಳಿದು ಉದ್ದಾಗುವ ಆಸೆ
ಕನ್ನಡಿ ಮುಂದೆ ಸುಮ್ಮನೆ ನಕ್ಕು
ಚೆಂದ ಇದ್ದೀಯಾ ಎಂದು ಹೊಗಳುವ ಆಸೆ
ಎಲ್ಲರೂ ಹೇಳಿದ ಔಷದ ಬಳಸಿ
ಪದೇ ಪದೇ ಕೂದಲನು ಜಗ್ಗಿ ನೋಡುವಾಸೆ
ಕನಸಲಿ ಕಂದ ಅರಮನೆಯ
ರಾಜಕುಮಾರಿ ನಾನೆಂದು ನೆನೆಸಿ ನಗುವ ಆಸೆ
ಮುದುಡಿ ಮಲಗುವ ನನ್ನ ಚಟಕೆ
ಅಮ್ಮನಿಂದ ಬಯಿಸಿಕೊಳ್ಳುವಾಸೆ
ಗೊರಕೆ ಹೊಡೆಯುವ ಅಪ್ಪನ ಹೊಟ್ಟೆಗೆ
ಗಣಪತಿ ಗಣಪತಿ ಅನ್ನುವ ಆಸೆ
ಬೈಯ್ಯುವ ಅಮ್ಮನಿಗೆ ಅಪ್ಪನಿಂದ ಹೆದರಿಸಿ
ಜಾಣಳೆಂದು ಹೊಗಳಿಕೊಳ್ಳುವ ಆಸೆ
ಗೆಳತಿಯರೊಡನೆ ಗುಳ್ಳವನ ತಂದು
ಚಿಕಮಿರಿ ಚೆನ್ನಕ್ಕನ ಹಾಡಾಡುವ ಆಸೆ
ಒಂದೋ ಎರಡೋ ನನ್ನ ಆಸೆ
ಆಸೆಗಳನ್ನು ಬದಿಯಿಟ್ಟು ನೋಡಬೇಕಿದೆ
ಜೀವನದಲಿ ಕಳೆದು ಹೋದ ಕ್ಷಣಗಳ
ಆಸೆ ಮನಕೆ ಹುಟ್ಟುತ್ತಿದೆ..
ಬನ್ನಿ ಆಶಿಸೋಣ ಎಲ್ಲರ ಆಸೆಗಳು
ನಿರಾಶೆಯಾಗದಿರಲಿ
ಅವರವರ ಆಶೆಗಳು ಅವರಿಗೆ ದೊರೆಯಲಿ ...
Comments
ಉ: ಆಸೆ
In reply to ಉ: ಆಸೆ by H A Patil
ಉ: ಆಸೆ
In reply to ಉ: ಆಸೆ by siddhkirti
ಉ: ಆಸೆ
In reply to ಉ: ಆಸೆ by H A Patil
ಉ: ಆಸೆ
ಉ: ಆಸೆ
In reply to ಉ: ಆಸೆ by glany001
ಉ: ಆಸೆ
ಉ: ಆಸೆ
In reply to ಉ: ಆಸೆ by padma.A
ಉ: ಆಸೆ