ಅನುಕಂಪದ ಅಲೆ

Submitted by ಗಣೇಶ on Thu, 11/29/2007 - 08:00

ಒಂದು ರಾಜ್ಯದಲ್ಲಿ ಬೋಳೇ ಜನರ ಪಕ್ಷ(ಬೋಜಪ)ವೊಂದಿದೆ.ಅದು ಪ್ರತಿ ಚುನಾವಣೆಗೆ ಒಂದಲ್ಲಾ ಒಂದು 'ಅಲೆ' ನಂಬಿ ಹೋಗುವುದು.ಈ ಸಲ ಗೆಲುವು ನಮ್ಮದೇ ಅಂದು ಬೀಗುವುದು.ಸೋತ ಮೇಲೆ ಮುಂದಿನ ಹೊಸ ಅಲೆಗಾಗಿ ಕಾಯುವುದು ಅದರ ಕೆಲಸ.ಈಸಲ 'ಅನುಕಂಪದ ಅಲೆ' ನಂಬಿ ಓಟು ಕೇಳಲು ಹೊರಟಿದೆ.ವಿರೋಧಿ ಪಕ್ಷವಾದ ಜನತಾ ದಾಳ(ಷರತ್ತು)ದ ನಾಯಕರ ಫೋಟೋ,ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುವುದು ಊರೂರಲ್ಲಿ ಮಾಡುವುದರಿಂದ,'ಅನುಕಂಪದ ಅಲೆ' 'ಬೋಜಪ' ಬಿಟ್ಟು 'ಜ ದಾ ಷ' ಗೆ ಹರಿಯುವುದು ಎಂಬ ಅರಿವಿಲ್ಲ. 'ಫೀನಿಕ್ಸ್ ಹಕ್ಕಿ' ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ.

Comments