ಭೂತ, ಭವಿಷ್ಯದ ಚಿಂತೆ (ಶ್ರೀನರಸಿಂಹ 22)

ಭೂತ, ಭವಿಷ್ಯದ ಚಿಂತೆ (ಶ್ರೀನರಸಿಂಹ 22)

ಕಳೆದು ಹೋಗಿಹ ಕಾಲವನು ಕುರಿತು ಚಿಂತಿಸದಿರು
ಕೈ ಮೀರಿ ಹೋಗಿರುವುದದ ನೆನೆದು ಮರುಗದಿರು
ಭವಿಷ್ಯದ ಚಿಂತೆಯಲಿ ಕಾಲವ ಕಳೆವುದದು ತರವಲ್ಲ
ಮುಂದೆ ನಡೆಯುವುದು ಏನೆಂಬುದರರಿವು ನಮಗಿಲ್ಲ
 
ಕಳೆಯುತಿಹುದಾಯುಷ್ಯ ದಿನಗಳೆಂಬುದು ಕಳೆದಂತೆ
ವ್ಯರ್ಥದಲಿ ಕಳೆಯದಿರು ಬಾಳ,ಮಾಡುತಲಿ ಚಿಂತೆ
ಮೋಹ, ಬಯಕೆಗಳೆ ಕಾರಣವು ಎಲ್ಲ ಚಿಂತೆಗಳಿಗೆ
ಸಿಲುಕಿಸದಂತಿರಿಸಬೇಕಿದೆ ಮನವ ಇವುಗಳ ಸುಳಿಗೆ
 
ನಡೆದ,ನಡೆಯುತಿಹ,ನಡೆಯುವುದೆಲ್ಲವೂ ಅವನ ಇಚ್ಛೆಗನುಸಾರ
ಎಲ್ಲರನು ಸಲಹುತಿಹ ಶ್ರೀನರಸಿಂಹ ಆಗಿಹನು ಈ ಜಗಕೆ ಆಧಾರ

 

Rating
No votes yet

Comments