ಬದನೇಕಾಯಿ ಎಣಗಾಯಿ
ತಯಾರಿಸುವ ವಿಧಾನ
೧. ಬದನೇಕಾಯಿಗಳನ್ನು ೪ ತುಂಡು ಮಾಡಿ
೨.ತವ(deep fry pan)ದಲ್ಲಿ ಎಣ್ಣೆ ಬಿಸಿ ಮಾಡಿ
೩. ಬದನೇಕಾಯಿಯನ್ನು ಎಣ್ಣೆಯಲ್ಲಿ ಬಾಡಿಸಿ
ಬದನೇಕಾಯಿಯನ್ನು ತೆಗೆದು ಪಕ್ಕಕ್ಕಿಡಿ.
೪. ಒಂದು ಕಪ್ ಟೊಮಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ
೫. ಬಾಣಲೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿ ಮಾಡಿ ಉಳಿದ ಈರುಳ್ಳಿಯನ್ನು ಕೆಂಪಗಾಗುವಂತೆ ಹುರಿಯಿರಿ.
೬. ಟೊಮಾಟೊ ಸೇರಿಸಿ.
೭. ಗರಮ್ ಮಸಾಲಾ, ಮೆಣಸಿನ ಪುಡಿ, ಧನಿಯ ಪುಡಿ ಮತ್ತು ಉಪ್ಪು ಸೇರಿಸಿ.
೮. ಮಸಾಲೆ ದಪ್ಪವಾಗುವ ವರೆಗೆ ಬೇಯಿಸಿ
೯. ಹುರಿದ ಬದನೇಕಾಯಿ ಸೇರಿಸಿ ಐದು ನಿಮಿಷ ಬೇಯಿಸಿ
ನಿಮಗೆ ಇಷ್ಟವಾದಲ್ಲಿ ಸ್ವಲ್ಪ ಸಕ್ಕರೆ ಅಥವಾ ನಿಂಬೆ ಸೇರಿಸಿ.
ಚಪಾತಿ ಅಥವಾ ರೊಟ್ಟಿಯ ಜೊತೆ ಬಡಿಸಿ.
3
30
ಬದನೇಕಾಯಿ - ಅರ್ಧ kg
3 ದೊಡ್ಡ ಟೊಮಾಟೊ , ಬೇಯಿಸಿ ಸುಲಿದದ್ದು
3 ಈರುಳ್ಳಿ - ಕತ್ತರಿಸಿದ್ದು
೧ ಟೀ ಸ್ಪೂನ್ ಗರಮ್ ಮಸಲಾ
೧ ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ
೧ ಟೀ ಸ್ಪೂನ್ ಧನಿಯಾ
೧ ಟೀ ಸ್ಪೂನ್ ಜೀರಿಗೆ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ - ೧೦೦ ml