ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
ಎರಡನೇ ದಿನದಿಂದ ಕೆಲಸ ಶುರುವಾಯಿತು. ಎಲ್ಲ ಕಡೆ ಒಂದು ವಾರ ಅಥವಾ ಎರಡು ವಾರ ಆದಮೇಲೆ "Honeymoon Days Over " ಎಂದರೆ ನನಗೆ ಒಂದೇ ದಿನಕ್ಕೆ ಆ ವಾಕ್ಯವನ್ನು ಹೇಳಿದ್ದರು. ಸಿಕ್ಕಾಪಟ್ಟೆ ಕೆಲಸ. ಊಟಕ್ಕೆ ಕೇವಲ ಅರ್ಧ ಗಂಟೆ, ಕಾಫಿ ಗೆ ಹೋದರೆ ಬರೀ ಐದು ನಿಮಿಷ ಪುರುಸೊತ್ತೇ ಇರದ ಹಾಗಾಯಿತು. ಈ ಕೆಲಸದ ನಡುವೆ ಪ್ರಜ್ಞಾ ಮರೆತೇ ಹೋಗುತ್ತಿದ್ದಳು, ಆದರೆ ಅಷ್ಟು ಸುಲಭವಾಗಿ ಮರೆಯಲು ಆಗುತ್ತದೆಯೇ. ಕಂಪನಿ ಯ ಹೆಸರಲ್ಲೇ ಅವಳು ಇದ್ದದ್ದರಿಂದ ಪದೇ ಪದೇ ಕಾಡುತ್ತಿತ್ತು. ಇಂಟ್ರಾನೆಟ್ ನಲ್ಲಿ ಅವಳ ಬಗ್ಗೆ ಮಾಹಿತಿ ನೋಡಿದಾಗ ಒಂದು ಕ್ಷಣ ನಾನೆಲ್ಲೋ ಅವಳಿಗೆ ಹತ್ತಿರವಾಗುತ್ತಿದ್ದೇನೆ ಅನಿಸಿತು, ಮರುಕ್ಷಣದಲ್ಲೇ ಇದು ಕೈಗೆಟುಕದ ದ್ರಾಕ್ಷಿ ಎನಿಸಿತು. ಮೊದಲನೆಯದಕ್ಕೆ ಕಾರಣ ಅವಳು ಇದ್ದಿದ್ದು ನಾನು ವಾಸಿಸುತ್ತಿದ್ದದ್ದು ಚಾಮರಾಜಪೇಟೆಯಲ್ಲಿ ಆದರೆ ಅವಳದು ಶಂಕರಪುರಂ ಎಂದಿತ್ತು. ಮನೆಗೆ ಹತ್ತಿರ ಎಂದು ಖುಷಿ ಆದರೆ ಅವಳ ಹುಟ್ಟಿದ ವರ್ಷ ೧೯೮೬ ಎಂದಿತ್ತು. ನನ್ನದು ೧೯೮೭. ಬೆಂಕಿಯ ಮೇಲಿಟ್ಟ ಮಂಜುಗಡ್ಡೆಯ ಹಾಗೆ ಆಯಿತು ನನಗೆ. ನಾನು ಇದುವರೆಗೂ ಸುಮಾರು ಹುಡುಗಿಯರನ್ನು ನೋಡಿದ್ದೆ, ಇಷ್ಟ ಪಟ್ಟಿದ್ದೆ. ಆದರೆ ಎಂದೂ ಯಾವ ಹುಡುಗಿಯನ್ನು ಬಾಳ ಸಂಗಾತಿಯಾಗಿ ಮಾಡಿಕೊಳ್ಳಬೇಕು ಎಂದು ನೆನೆಸಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಪ್ರಜ್ಞಾಳನ್ನು ನೋಡಿದಾಗ ಆ ಆಸೆಯ ಬೀಜ ಮೊಳಕೆಯೊಡೆದಿತ್ತು. ಆದರೆ ಆ ಆಸೆ ಚಿಗುರೊಡೆಯುವ ಮುನ್ನವೇ ಕಮರಿ ಹೋಯಿತು. tiಆದರೂ ಅವಳನ್ನು ನೋಡಿದಾಗಲೆಲ್ಲ ಮನಸಿನಲ್ಲಿ ಯಾರೋ ಕೈ ಹಾಕಿ ಕಲಸಿದಂತಾಗುತ್ತಿತ್ತು.
ಕೆಲಸಕ್ಕೆ ಸೇರಿ ಒಂದು ತಿಂಗಳಾಗಿ ಮೊದಲನೆಯ ಸಂಬಳ ಕೈಗೆ ಬಂದಿತ್ತು. ಸಂಬಳದ ಒಂದು ವಾರ ಮುಂಚಿನಿಂದಲೇ ಮೊದಲ ಸಂಬಳ ಪಾರ್ಟಿ ಎಲ್ಲಿ ಮಾಡಬೇಕು ಎಂದು ನನ್ನ ಬಿಟ್ಟು ನನ್ನ ಸಹೋದ್ಯೋಗಿಗಳೇ ನಿರ್ಧರಿಸಿಬಿಟ್ಟಿದ್ದರು. ಅದರಂತೆ ಸಂಬಳದ ದಿನ ಸಂಜೆ ಪಾರ್ಟಿಗೆ ಹೋಗಿ ೩೦೦೦ ಖರ್ಚು ಮಾಡಿ ಎಲ್ಲರನ್ನೂ ತೃಪ್ತಿಗೊಳಿಸಿ ಮನೆಗೆ ಬಂದೆ. ಮನೆಗೆ ಬಂದು ಊಟ ಮಾಡುತ್ತಿದ್ದಾಗ ಅಮ್ಮ ಬಂದು ಲೋ ಊಟ ಆದ ಮೇಲೆ ಅಲ್ಲಿ ಟಿ.ವಿ ಮೇಲೆ ಒಂದು ಜಾತಕ ಇಟ್ಟಿದ್ದೀನಿ ಅದರಲ್ಲೇ ಫೋಟೋ ಕೂಡ ಇದೆ ಒಂದು ಸಲ ನೋಡೋ ಎಂದರು. ಯಾರದಮ್ಮ, ಏನಕ್ಕೆ ಎಂದೆ ಅದಕ್ಕೆ ನಮ್ಮಮ್ಮ ಯಾರದು ಎಂದರೆ ಹುಡುಗಿದು ಯಾಕೆ ಅಂದರೆ ನಿಮ್ಮಪ್ಪಂಗೆ ನನ್ನ ಕಟ್ಕೊಂಡು ಸಾಕಾಗಿದ್ಯಂತೆ ಅದಕ್ಕೆ ಇನ್ನೊಂದು ಮದುವೆ ಮಾಡ್ಕೊತಾರಂತೆ ಎಂದು ನಮ್ಮಪ್ಪನ್ನ ನೋಡಿದರು. ನಮ್ಮಪ್ಪ ಲೇ ಯಾಕೆ ಇಲ್ದೆ ಇರೋ ಆಸೆ ಎಲ್ಲ ತೋರಿಸ್ತ್ಯ ಎಂದರು. ನಾನು ಅಮ್ಮ ಸುಮ್ನೆ ತಮಾಷೆ ಬೇಡ ಏನು ಅಂತ ಹೇಳಮ್ಮ. ಲೋ ನಿಂಗೆ ಮದುವೆ ಮಾಡೋಣ ಅಂತ ಇದೀವಿ. ಅದಕ್ಕೆ ಬ್ರೋಕರ್ ಗೆ ಹೇಳಿದ್ದೆ ಯಾವುದಾದರೂ ಒಳ್ಳೆ ಸಂಬಂಧ ಇದ್ದಾರೆ ತೋರಿಸಿ ಎಂದು. ಅದಕ್ಕೆ ತಂದು ಕೊಟ್ಟಿದ್ದಾರೆ ನೀನು ಒಂದು ಸಲ ನೋಡಿ ಹೇಳಿದರೆ ಮುಂದುವರಿಯಬಹುದು. ಅಮ್ಮ ಇನ್ನು ಈಗಷ್ಟೇ ಕೆಲಸಕ್ಕೆ ಸೇರಿದ್ದೇನೆ. ಮೊದಲು ನಾನು ಸೆಟಲ್ ಆಗಬೇಕು. ನನಗೆ ಒಂದು ವರ್ಷ ಟೈಮ್ ಬೇಕು ಅಲ್ಲಿಯವರೆಗೂ ಇದೆಲ್ಲ ಬೇಡ ಎಂದೆ. ಅದಕ್ಕೆ ಅಪ್ಪ ಕೂಡ ಅಮ್ಮನ ಕುರಿತು ನಾನು ಏನು ಹೇಳಿದೆ ನಿನಗೆ ಈಗಷ್ಟೇ ಕೆಲಸಕ್ಕೆ ಸೇರಿದ್ದಾನೆ ಬೇಡ ಎಂದು ಹೇಳಲಿಲ್ಲವ. ಅವನು ಮೊದಲು ಒಂದು ನೆಲೆ ನಿಲ್ಲಲಿ ಆಮೇಲೆ ನೋಡೋಣ ಎಂದರು. ಅದಕ್ಕೆ ಅಮ್ಮ ರೀ ಮೊದಲೇ ಹುಡುಗೀರು ಸಿಗೋದು ಕಷ್ಟ ಆಗಿದೆ ಅದೂ ಅಲ್ಲದೆ ಮಾತೆತ್ತಿದರೆ ಸ್ವಂತ ಮನೆ ಬೇಕು, ಹುಡುಗ BE , MCA , MBA ಓದಿರಬೇಕು ತಿಂಗಳಿಗೆ ೪೦-೫೦ ಸಾವಿರ ದುಡೀಬೇಕು ಅಂತಿದಾರೆ. ಏನೋ ನನ್ನ ಗೆಳತಿ ಮಗಳು ನಮ್ಮ ಯೋಗ್ಯತೆಗೆ ತಕ್ಕ ಸಂಬಂಧ ನೋಡೋಣ ಅಂದುಕೊಂಡೆ. ನೀವುಂಟು ನಿಮ್ಮ ಮಗ ಉಂಟು ಏನಾದರೂ ಮಾಡಿಕೊಳ್ಳಿ ಎಂದು ಅಡಿಗೆ ಮನೆ ಸೇರಿಕೊಂಡರು.
ಮುಂದಿನ ಆರು ತಿಂಗಳಲ್ಲಿ ಕೆಲಸದಲ್ಲಿ ಎಷ್ಟು ಮುಳುಗಿ ಹೋದೆನೆಂದರೆ ಕೆಲಸ ಮುಗಿಸಿ ಮನೆಗೆ ಬರುವ ಹೊತ್ತಿಗೆ ರಾತ್ರಿ ಆಗುತ್ತಿತ್ತು. ಮತ್ತೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೊರಡುವುದು. ಒಮ್ಮೊಮ್ಮೆ Night out ಸಹ ಮಾಡುತ್ತಿದ್ದೆ, Weekend ನಲ್ಲೂ ಕೆಲಸ ಮಾಡುತ್ತಿದ್ದೆ. ವೈಯಕ್ತಿಕ ಜೀವನದ ಬಗ್ಗೆ ಜಾಸ್ತಿ ಯೋಚಿಸುವಷ್ಟು ಸಮಯ ಇರಲಿಲ್ಲ. ಆರು ತಿಂಗಳ ನಂತರ probation Period ಮುಗಿದು permanent ಆಯಿತು. ಒಂದು ದಿನ ನನ್ನ ಮ್ಯಾನೇಜರ್ ತನ್ನ ಕ್ಯಾಬಿನ್ ಗೆ ಕರೆದು ನೋಡಿ ನೀವು ನಿಮ್ಮ probation period ಯಶಸ್ವಿಯಾಗಿ ಮುಗಿಸಿದ್ದೀರಿ. ಇಂದಿನಿಂದ ನೀವು Permanent employee , ಜೊತೆಯಲ್ಲಿ ನಿಮ್ಮ ಸಂಬಳ ಜಾಸ್ತಿ ಆಗಿದೆ. Congrats ಹಾಗೆಯೇ ನಿಮ್ಮ ಪ್ರಾಜೆಕ್ಟ್ ಸಹ ಚೇಂಜ್ ಆಗಿದೆ. ನಾಳೆ ಇಂದ ನೀವು ಮಿಸ್. ಶೀಲ ಅವರಿಗೆ ರಿಪೋರ್ಟ್ ಮಾಡಿಕೊಳ್ಳ ಬೇಕು. ನಾನು official ಆಗಿ ಮೇಲ್ ಕಳಿಸುತ್ತೇನೆ. ಎಂದರು. ನಾನು ಸರ್ ಎಲ್ಲ ಸರಿ ಆದರೆ ಈ ಪ್ರಾಜೆಕ್ಟ್ ಚೇಂಜ್ ಯಾತಕ್ಕೆ ಎಂದೆ. ಅದಕ್ಕೆ ಅವರು ಶೀಲ ಅವರಿಗೆ ಹೊಸದೊಂದು ಪ್ರಾಜೆಕ್ಟ್ ಬಂದಿದೆ. ಅದಕ್ಕೆ ಒಬ್ಬರು ಸಪೋರ್ಟ್ ಬೇಕಂತೆ. ಅದಕ್ಕೆ ನಿಮ್ಮನ್ನು ಅಲ್ಲಿಗೆ ಹಾಕುತ್ತಿದ್ದೇನೆ ಎಂದರು. ಸರಿ ಸರ್ ಯಾವ ಮಹಡಿಯಲ್ಲಿ ಅವರು ಇರುವುದು ಎಂದೆ. ನಾಲ್ಕನೇ ಮಹಡಿ ಎಂದರು. ತಕ್ಷಣ ನನಗೆ ಪ್ರಜ್ಞಾ ನೆನಪಿಗೆ ಬಂದಳು. ಅವಳದು ನಾಲ್ಕನೇ ಮಹಡಿ. ಅವಳು ಅದೇ ಪ್ರಾಜೆಕ್ಟ್ ಗೆ ಕೆಲಸ ಮಾಡುತ್ತಿದ್ದಾಳ ಎಂಬ ಕುತೂಹಲ ಶುರುವಾಯಿತು.
ಮಾರನೆ ದಿನ ನಾಲ್ಕನೇ ಮಹಡಿಗೆ ಹೋಗಿ ಶೀಲಳ ಕೊಠಡಿಗೆ ಹೋದೆ. ಉಭಯ ಕುಶಲೋಪರಿಯ ನಂತರ ಶೀಲ ತನ್ನ ಟೀಮ್ ಅನ್ನು ತನ್ನ ಕ್ಯಾಬಿನ್ ಗೆ ಕರೆದಳು. ಆದರೆ ಅಲ್ಲೆಲ್ಲೂ ಪ್ರಜ್ಞಾ ಕಾಣಲಿಲ್ಲ. ಬಹುಶಃ ದೇವರು ನನ್ನ ಹಣೆ ಬರಹದಲ್ಲಿ ಅವಳ ಹೆಸರು ಬರೆದಿಲ್ಲವೇನೋ ಎಂದುಕೊಂಡು ಸುಮ್ಮನಾದೆ. ಟೀಮ್ ಗೆ ನನ್ನ ಪರಿಚಯ ಮಾಡಿಕೊಟ್ಟ ನಂತರ ನನ್ನ ಕೆಲಸ ಶುರು ಮಾಡಲು ಕುಳಿತೆ. ಸ್ವಲ್ಪ ಹೊತ್ತಿನ ನಂತರ ನನ್ನ ಸಹೋದ್ಯೋಗಿ ಬಂದು ಶೀಲ ಕರೀತಾ ಇದಾಳೆ ನೋಡು ಎಂದ. ಎದ್ದು ಕ್ಯಾಬಿನ್ ಗೆ ಹೊರಟೆ. ಕ್ಯಾಬಿನ್ ನಲ್ಲಿ ಶೀಲ ಯಾರ ಜೊತೆಯೂ ಮಾತಾಡುತ್ತ ನಿಂತಿದ್ದಳು. ನಾನು ಬಾಗಿಲು ತಟ್ಟಿ ಒಳಗೆ ಹೋದೆ. ಒಳಗಡೆ ಪ್ರಜ್ಞಾ ನಿಂತಿದ್ದಾಳೆ. ನನಗೆ ಮತ್ತದೇ ವಿದ್ಯುತ್ ಸಂಚಾರ ಉಂಟಾಯಿತು ಮೈಯಲ್ಲಿ. ನೋಡಿ ಪ್ರಜ್ಞಾ ಇವರು ಹೊಸದಾಗಿ ನಮ್ಮ ಟೀಮ್ ಗೆ ಸೇರಿದ್ದಾರೆ. ನೋಡಿ ಇವರೇ ಪ್ರಜ್ಞಾ ನಿಮ್ಮ ಟೀಂ ಲೀಡ್. ನಿಮಗೆ ಏನೇ ತೊಂದರೆ ಗಳು, ಅಥವಾ ಮಾಹಿತಿ ಬೇಕಿದ್ದರೆ ಅವರನ್ನು ಸಂಪರ್ಕಿಸಿ ಎಂದು ಹೇಳಿ ತನ್ನ ಲ್ಯಾಪ್ ಟಾಪ್ ನಲ್ಲಿ ಮುಳುಗಿ ಹೋದಳು.
ನಾವಿಬ್ಬರೂ ಆಚೆ ಬಂದು ಪ್ರಾಜೆಕ್ಟ್ ಬಗ್ಗೆ ಸ್ವಲ್ಪ ಹೊತ್ತು ಮಾತಾಡಿ ನಮ್ಮ ನಮ್ಮ ಕ್ಯುಬಿಕಲ್ ಬಳಿ ಬಂದೆವು. ಹಳೆಯ ಪ್ರಾಜೆಕ್ಟ್ ಸಹೋದ್ಯೋಗಿ ಒಬ್ಬ ಕರೆ ಮಾಡಿ ಲೋ ಮಗನೆ ಅಂತೂ ಚಾನ್ಸ್ ಹೊಡೆದೆ. ಸೂಪರ್ ಮ್ಯಾನೇಜರ್, ಸೂಪರ್ ಟೀಂ ಲೀಡ್ ಹಬ್ಬ ಮಾಡು ಎಂದ. ನಾನು ಸುಮ್ಮನೆ ನಕ್ಕು ಕೆಲಸದಲ್ಲಿ ಮಗ್ನನಾದೆ. ಹೊಸ ಪ್ರಾಜೆಕ್ಟ್ ಆದ್ದರಿಂದ ಪ್ರತಿಯೊಂದಕ್ಕೂ ಪ್ರಜ್ಞಾಳ ಬಳಿ ಹೋಗುತ್ತಿದ್ದೆ. ಪ್ರತಿಯೊಂದನ್ನು ವಿವರವಾಗಿ ಹೇಳಿಕೊಡುತ್ತಿದ್ದಳು. ಉಳಿದ ಸಹೋದ್ಯೋಗಿಗಳು (ಗಂಡಸರು) ಅವಳ ಬಳಿ ಮಾತಾಡಲು ಹೋದರೆ ನನಗೆ ಮೈಯೆಲ್ಲಾ ಉರಿದು ಹೋಗುತ್ತಿತ್ತು. ಪ್ರತಿ ಬಾರಿ ಅವಳ ಫೋನ್ ರಿಂಗ್ ಆದಾಗಲೂ, ಮೆಸೇಜ್ ಬಂದಾಗಲೂ ಯಾರು ಮಾಡಿರಬಹುದು, ಅವಳ ಬಾಯ್ ಫ್ರೆಂಡ್ ಇರಬಹುದ, ಅಥವಾ ಅವಳಿಗೆ ನಿಶ್ಚಿತಾರ್ಥ ಆಗಿರುವ ಅವಳ ಭಾವಿ ಪತಿಯ, ಅಸಲಿಗೆ ಅವಳಿಗೆ ನಿಶ್ಚಿತಾರ್ಥ ಆಗಿದೆಯ ಹೀಗೆ ನೂರಾರು ಯೋಚನೆಗಳು ಹರಿದಾಡುತ್ತಿದ್ದವು. ಮರುಕ್ಷಣದಲ್ಲೇ ಅಯ್ಯೋ ನಾನ್ಯಾಕೆ ಅವಳ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿದ್ದೇನೆ ಅವಳು ನನಗಿಂತ ಒಂದು ವರ್ಷ ದೊಡ್ಡವಳು, ಅದೂ ಅಲ್ಲದೆ ಅವಳದು ಯಾವ ಜಾತಿಯೋ ಗೊತ್ತಿಲ್ಲ, ನಮ್ಮದು ಬ್ರಾಹ್ಮಣ ಕುಟುಂಬ, ಅಮ್ಮ ಬಹಳ ಕಟ್ಟು ನಿಟ್ಟು, ಅಪ್ಪಿ ತಪ್ಪಿ ಬೇರೆ ಜಾತಿಯವರ ಜೊತೆ ಮದುವೆಗೆ ಖಂಡಿತ ಒಪ್ಪಿಕೊಳ್ಳುವುದಿಲ್ಲ. ಇಷ್ಟೆಲ್ಲಾ ತೊಂದರೆಗಳು ಇರಬೇಕಾದರೆ ನಾನ್ಯಾಕೆ ಒದ್ದಾಡಬೇಕು ಎನಿಸುತ್ತಿತ್ತು. ಆದರೂ ಯಾಕೆ ಒಮ್ಮೆ ಪ್ರಯತ್ನಿಸಬಾರದು ಎಂದು ಸಹ ಅನಿಸುತ್ತಿತ್ತು.
ನಿಧಾನವಾಗಿ ಸಹೋದ್ಯೋಗಿಗಳ ಜೊತೆ ಸ್ನೇಹ ಬೆಳೆಸಿಕೊಂಡು ಪ್ರಜ್ಞಾಳ ಬಗ್ಗೆ ವಿವರ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಆಗಲೇ ನಮ್ಮ ಟೀಮ್ ನಲ್ಲೆ ಇಬ್ಬರು ಪ್ರಜ್ಞಾಳ ಪ್ರೀತಿಗೆ ಪ್ರಯತ್ನಿಸಿ ವಿಫಲಗೊಂಡಿದ್ದರು. ಅವರ ಮಾಹಿತಿ ಪ್ರಕಾರ ಪ್ರಜ್ಞಾಳಿಗೆ ಯಾರೊಡನೆಯೂ ಪ್ರೇಮವಿರಲಿಲ್ಲ. ಪ್ರಜ್ಞಾಳಿಗೆ ಈ ವಿಷಯದಲ್ಲೂ ಆಸಕ್ತಿಯೂ ಇರಲಿಲ್ಲ. ಅವಳು ಅವರ ಅಪ್ಪ ಅಮ್ಮ ಯಾರನ್ನು ತೋರಿಸುತ್ತಾರೋ ಅವರನ್ನೇ ಮದುವೆ ಆಗುತ್ತಾಳೆ ಎಂದು ತಿಳಿಸಿದರು. ಮತ್ತೊಮ್ಮೆ ನನ್ನ ಆಸೆ ಮುರಿದು ಬಿತ್ತು. ಇನ್ನು ಅವಳ ಬಗ್ಗೆ ಯೋಚಿಸುವುದು ಬಿಡುವುದು ಒಳ್ಳೆಯದು ಎಂದು ನಿರ್ಧರಿಸಿ ನನ್ನ ಪಾಡಿಗೆ ನಾನು ಕೆಲಸದಲ್ಲಿ ನಿರತನಾದೆ.
ಮು೦ದುವರಿಯುವುದು.....
Comments
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
In reply to ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2 by Chikku123
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
In reply to ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2 by Shreekar
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
In reply to ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2 by Chikku123
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
In reply to ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2 by venkatb83
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
In reply to ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2 by Jayanth Ramachar
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
In reply to ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2 by ಗಣೇಶ
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
In reply to ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2 by venkatb83
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2
In reply to ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2 by ಗಣೇಶ
ಉ: ಕಥೆ : ಒ೦ದು ಐ.ಟಿ ಪ್ರೇಮಕಥೆ ಭಾಗ 2