ಕನ್ನಡ ಸಿನಿಮ = ಆರಕ್ಷಕ
ಚಿತ್ರ
ಸಿನಿಮಾಹಾಲಿನಲ್ಲಿ ಸಿನಿಮ ನೋಡಿ ವರ್ಷಗಳೆ ಕಳೆದಿದ್ದವು. ಮತ್ತೆ ಕನ್ನಡ ಸಿನಿಮವನ್ನು ಅದು ಮೊದಲದಿನ ಮೊದಲ ಪ್ರದರ್ಶನದಲ್ಲಿಯೆ ನೋಡುವ ಸಂದರ್ಬ ಬಂದಿತು. ಡಬ್ಬಲ್ ರೋಡ್ (ಕೆ.ಹೆಚ್ ರಸ್ತೆ) ಲಾಲ್ ಬಾಗಿನ ಹತ್ತಿರದ ವಿಷನ್ ಥಿಯೇಟರ್ ಗೆ ಬೆಳಗ್ಗೆ ಬೇಟಿ ಕೊಟ್ಟಿದೆ ಮನೆಯವರೆಲ್ಲರ ಜೊತೆ.
ಎಂದಿನ ಉಪೇಂದ್ರರ ಶೈಲಿಯ ಡೈಲಾಗ್ ಸಿನಿಮಾ ಉದ್ದಕ್ಕು ಇದೆ. ಕೊಲೆಗಾರನೊಬ್ಬನ, ಹಾಗು ಅದಕ್ಕೆ ಸಾಕ್ಷಿಯಾಗಿರುವನೊಬ್ಬನನ್ನು ಅರಸಿ ಪ್ರಸಿದ್ದ ಮಾನಸಿಕ ಆಸ್ಪತ್ರೆಗೆ ಬರುವ ನಾಯಕ ಕಡೆಯವರೆಗು ಅಲ್ಲಿಯೆ ಇರುತ್ತಾನೆ, ಅಲ್ಲಿನ ಡಾಕ್ಟರ್ ಮಾತಿನಲ್ಲಿ ಹೇಳುವದಾದರೆ ಅಡ್ಮಿಟ್ ಆಗಿರುತ್ತಾನೆ. ಮೊದಲಲ್ಲೆ ಅನುಮಾನ ಕಾಡುತ್ತದೆ, ಪೋಲಿಸ್ ಅಧಿಕಾರಿ ಉಪೇಂದ್ರನ ನಡುವಳಿಕೆ ಹೆಚ್ಚು ಕಡಿಮೆ ಒಬ್ಬ ಮಾನಸಿಕ ಅಸ್ವಸ್ಥನ ನಡುವಳಿಕೆಯಂತೆ ತೋರುತ್ತದೆ. ಕತೆಗೆ ಪೂರಕವಾಗಿ ನಾಯಕಿ ಅಲ್ಲಿಯೆ ಕೆಲಸಮಾಡುವಾಕೆ ಮತ್ತೊಬ್ಬಳು ಬರಿ ನಾಯಕನ ನೆನಪಲ್ಲಿ ಕಡೆವರೆಗು . ನ್ಯೂಟ್ರಿಷನ್ ಫುಡ್ ಡಾಕ್ಟರ ಹಾಗು ಇತರ ಹುಚ್ಚರದೆ ಹಾಸ್ಯ, ಸಿನಿಮಾ ಉದ್ದಕ್ಕು ಇರುವ ಸಮುದ್ರ ಹಾಗು ಹಸಿರು ಹಿನ್ನಲೆಯ ಚಿತ್ರಣ ಮಾತ್ರ ಚೇತೊಹಾರಿಯಾಗಿದೆ. ಕತೆ ಮಾತ್ರ ಕಡೆಯವರೆಗು ಇದ್ದಲೆ ಇದ್ದು ಕಡೆಯ ಒಂದೆರಡು ರೀಲಿನಲ್ಲಿ ತೆರೆದು ಕೊಳ್ಳುತ್ತದೆ. ಒಬ್ಬ ಉಪೇಂದ್ರ ಪೋಲಿಸ್ ಅಧಿಕಾರಿ ಮತ್ತೊಬ್ಬ ಅಪರಾದಿ, ಅದೆ ಕತೆ ಎನ್ನುವ ನಮ್ಮ ಮನಸಿನ ಊಹೆ ಸುಳ್ಳಾಗಿ ಕೈಕೊಡುತ್ತದೆ.
ಅಣ್ಣಾ ಹಜಾರೆಯವರ ಹೆಸರಿನಿಂದ ಪ್ರಾರಂಬವಾಗುವ ಒಂದು ಹಾಡು ಖುಷಿ ಕೊಡುತ್ತದೆ, ಹೊರಗೆ ಬರುವಾಗ ಪಕ್ಕದಲ್ಲಿ ಯಾರೊ ಮಾತನಾಡುತ್ತಿದ್ದರು. ಇದೆ ಸಿನಿಮಾವನ್ನು ತಮಿಳಿನಲ್ಲಿಯೊ ತೆಲುಗಿನಲ್ಲಿ ತೆಗೆದಿದ್ದರೆ ಬೆಂಗಳೂರಿನಲ್ಲಿ ಸಕ್ಕತ್ ಹಿಟ್ ಆಗೋದು ಅಂತ! ಅದು ಸರಿಯೆ ಅನ್ನಿ.
ಮತ್ತೆ ಕಡೆಯದಾಗಿ ಹೇಳಿಬಿಡುವೆ ನಾನು ಸಿನಿಮಾಗೆ ಹೋಗಲು ಕಾರಣ ಅದರಲ್ಲಿ ಉಪೇಂದ್ರರ ಸಣ್ಣ ವಯಸಿನ ಪಾತ್ರ ಮಾಡಿರುವ ಮಾಸ್ಟರ್ ಸಾಕೇತ್ ಹಾಗು ಮಾಸ್ಟರ್ ಸಾಹಿತ್ ಅವಳಿ ಮಕ್ಕಳು , ನನ್ನ ಬ್ರದರ್ ಇನ್ ಲಾ ಅಂದರೆ ನಮ್ಮ ಶ್ರೀಮತಿಯವರ ತಮ್ಮ ಶೇಖರ್ ಹಾಗು ಸುಮ ಅವರ ಮಕ್ಕಳು. ಅವರನ್ನು ಸಿನಿಮಾದಲ್ಲಿ ನೋಡುವ ಸಂಭ್ರಮಕ್ಕೆ ನಾವೆಲ್ಲ ಹೋಗಿದಿದ್ದು.
Rating
Comments
ಉ: ಕನ್ನಡ ಸಿನಿಮ = ಆರಕ್ಷಕ
In reply to ಉ: ಕನ್ನಡ ಸಿನಿಮ = ಆರಕ್ಷಕ by venkatb83
ಉ: ಕನ್ನಡ ಸಿನಿಮ = ಆರಕ್ಷಕ
ಉ: ಕನ್ನಡ ಸಿನಿಮ = ಆರಕ್ಷಕ
ಉ: ಕನ್ನಡ ಸಿನಿಮ = ಆರಕ್ಷಕ