ಪರಮಾತ್ಮ ಸ್ವರೂಪ ( ಕವನ )
ಕವನ
ಬೀಸುತಿದೆ ಮುಂಗಾರು ಬಿರುಗಾಳಿಯಂತೆ
ಆಷಾಡದ ಕರಾಳ ಕಡುಗತ್ತಲ ರಾತ್ರಿ
ವ್ಯಾಪಿಸಿದೆ ಅಂಧಕಾರ ಸುತ್ತ ಮುತ್ತ
ಹೊತ್ತಿಸಿದೆ ಮಣ್ಣ ಹಣತೆಯೊಂದನ್ನು
ಬೆಳಗುತಿದೆ ಜ್ಯೋತಿ ಊರ್ಧ್ವಮುಖವಾಗಿ
ಯಾರ ಹುಡುಕಾಟ ಯಾವುದರ ಅನ್ವೇಷ?
ಮಾನವ ಚೇತನ ಜ್ಯೋತಿ ಸ್ವರೂಪ
ತಪ್ತವಾಗಿದೆ ತನು ಅವನಿ ಸಾತತ್ಯದಲಿ
ಅವ್ಯಕ್ತ ಚೇತನ ಪ್ರಾಣ ಊರ್ಧ್ವಮುಖ
ದೀಪದ ಕುಡಿ ಸಂಪೂರ್ಣ ಉರಿಯೆ
ಜೀವನದಿ ಕ್ರಾಂತಿ ಸಂಭವನೀಯ
ಜ್ಯೋತಿಯೆಡೆ ಗಮನ ಎಲ್ಲ ಪರಿವರ್ತನೆ
ಭೂಮಿ ತತ್ವದ ಹಣತೆ ವರುಣ ತತ್ವದ ಎಣ್ಣೆ
ಅಗ್ನಿ ತತ್ವದ ಜ್ಯೋತಿ ಸುತ್ತ ಹರಡಿದೆ ಬೆಳಕು
ಮಣ್ಣಿನಲಿ ಸಾಕ್ಷಾತ್ಕಾರ ಪರಮಾತ್ಮ ಸ್ವರೂಪ
Comments
ಉ: ಪರಮಾತ್ಮ ಸ್ವರೂಪ ( ಕವನ )
In reply to ಉ: ಪರಮಾತ್ಮ ಸ್ವರೂಪ ( ಕವನ ) by venkatb83
ಉ: ಪರಮಾತ್ಮ ಸ್ವರೂಪ ( ಕವನ )
ಉ: ಪರಮಾತ್ಮ ಸ್ವರೂಪ ( ಕವನ )
In reply to ಉ: ಪರಮಾತ್ಮ ಸ್ವರೂಪ ( ಕವನ ) by mmshaik
ಉ: ಪರಮಾತ್ಮ ಸ್ವರೂಪ ( ಕವನ )