ಹೀಗೊಂದು ಕವಿತೆ..!!!

ಹೀಗೊಂದು ಕವಿತೆ..!!!

ಕವನ

                 o my love.......!

  ಕತ್ತಿಯ ಅಲುಗಿನ ಹರಿತದಲ್ಲಿ....

ಹರಿದ ಬಟ್ಟೆಗೆ ಹೊಲಿಗೆ ಹಾಕುವ ಸೂಜಿಯಲ್ಲಿ....

ಆತ್ಮದ ಸೌಂದರ್ಯದಲ್ಲಿ ನಿನ್ನ ಹುಡುಕುತ್ತಿರುವೆ...!!


ಗೊತ್ತಿದೆ........,

ಕುಣಿಯುವ ಹುಡಿಗಿಯರ ಮುಖದ ಮೇಲಿನ ಆ ನಗು.....

ತುತ್ತಿಗಾಗಿ ಪ್ರತಿ ಓಣಿಗೂ ಅಲೆಯುತ್ತಿರುವ ಆ ಮಗು....

ಕೊನೆಗುಟುಕಿಗಾಗಿ ಹಂಬಲಿಸುತ್ತಿರುವ ಆ ಹನಿ......

ಕುಡಿಯನ್ನುಳಿಸಲು ರೋಧಿಸುತ್ತಿರುವ ಆ ತಾಯಿ....

ಪ್ರತಿಯೊಬ್ಬರ ಕಣ್ಣೀರ ಆ ನೋವು.......ನೀನೆ!!!

ನೀನಾಗದೆ ಬೇರೆ ಯಾರಾಗಲು ಸಾಧ್ಯ......o my love......!!     


 ಮರದ ಹಸಿರು,ಆಕಾಶದ ನೀಲಿ,

ಬೆಳ್ದಿಂಗಳೆಂಬ ಮಧು,

ಈ ಭೂಮಿಯ ಜೀವಸೆಲೆ ನೀನೆ....!!


ಕೊನೆಗೂ ನಿನ್ನ ಕಂಡಿದ್ದು..........

ಇಥಿಯೋಪಿಯಾದ ಮಗುವಿನ ಕಣ್ಣಲ್ಲಿ.......

ಶಾಂತಿಯಿಂದ ನಡೆದು ಹೋಗುತ್ತಿರುವ ಅವನ ಹೆಜ್ಜೆಗಳಲ್ಲಿ......

ನವಿಲಿನ ಗರಿಗಳಲ್ಲಿ,ಕೋಗಿಲೆಯ ಕಂಠದಲ್ಲಿ.......

ದುಡಿಯುವ ಕಯ್ ಗಳಲ್ಲಿ,ರೆಯ್ತನ ಬೆವರಲ್ಲಿ.....

ಸತ್ತು ಸ್ವರ್ಗಕ್ಕೆ ಆಸೆ ಪಡಲು ಬದುಕದೆ.....

ಬದುಕಿ ..ನಗಲು ಇಸ್ಟ್ ಪಡುತ್ತಿರುವ...

ಕೆಂಪು ದೀಪದ ಬೆಳಕಲ್ಲಿ.....o my love.....!!!!

 

Comments