ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು

ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು

 1) ಯಳವತ್ತಿ ಟ್ವೀಟ್:- (ಪ್ರಥಮ ಬಾರಿಗೆ ಹಿಂದಿಯಲ್ಲಿ)

PYaar ka mathlab jaanthe nahin hum..
sirf, aapka intejaar karna hi pYaar maanthe hain..

Hum aapka intezaar karenge thab thak,
jab aap milne thak, yaa hum marne thak...


 
2) ಯಳವತ್ತಿ ಟ್ವೀಟ್:- ನಿನ್ನನ್ನು ಕೊನೆಯ ಬಾರಿ ನೋಡಿ ಸತ್ತು ಹೋಗುತ್ತೇನೆಂದು ಫೋನ್ ಮಾಡಿದಳು.. ಅವನು ಯಾಕೆ ಹೋಗಲಿಲ್ಲ ಅಂತಾ ಅವನ ಕಣ್ಣೀರಿಗೆ ಬಿಟ್ಟು ಮತ್ಯಾರಿಗೂ ಅರ್ಥ ಆಗಲಿಲ್ಲ.

 
3) ಯಳವತ್ತಿ ಟ್ವೀಟ್:- ನಾ ಕಳುಹಿಸಿದ ಕೈಬರಹದ ಲೇಖನವನ್ನು ಬೆರಳಚ್ಚಿಸಿ, ಐದು ಪ್ರತಿಗಳಲ್ಲಿ ಮುದ್ರಿಸಿ ಕೊಡಿರೆಂದು ಟಿಪ್ಪಣಿ ಕಳುಹಿಸಿದೆ. ಮುದ್ರಣಾಲಯದವರು ನಾನು ಕಳುಹಿಸಿದ್ದನ್ನೇ ನೆರಳಚ್ಚು ಮಾಡಿಸಿ ಕಳುಹಿಸಿದ್ದಾರೆ. ಕೊನೆಗೆ, ಯಾಕ್ರೀ ಟೈಪ್ ಮಾಡಿ ಕಳಿಸಿಲ್ಲ ಅಂತಾ ಕೇಳಿದ್ರೆ, ಟೈಪ್ ಮಾಡಿ ಕಳುಹಿಸಿ ಅಂತಾ ಕನ್ನಡದಲ್ಲಿ ಮೊದಲೇ ಹೇಳೋದಲ್ವಾ ಅಂದ್ರು..

 
 
4) ಯಳವತ್ತಿ ಟ್ವೀಟ್:- ಶತ್ರುಗಳನ್ನು ಸೋಲಿಸಬೇಕೇ ಅಥವಾ ಗೆಲ್ಲಬೇಕೇ.....?


ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಅವರಿಗೆ ಸಹಾಯ ಮಾಡಿ..

 


5) ನ್ಯಾನೋ ಕಥೆ..


ಒಂದು ಸುಂದರವಾದ ಹುಡುಗಿಯ ಬಳಿ ಒಬ್ಬಳು ಚಿಕ್ಕ ಹುಡುಗಿ ಬಂದು,

ಹಾಯ್ ಆಂಟಿ.. ಎಂದು ಕರೆದಳು..

ಆ ಮುದ್ದು ಮುಖವನ್ನು ನೋಡಿ, ಎತ್ತಿಕೊಂಡು ಮುತ್ತು ಕೊಟ್ಟು ಮಾತನಾಡಿಸಿದಳು..

"ನಾನು ನಿಮಗೆ ಇಷ್ಟವಾದ್ನ ಎಂದು ಕೇಳಿತು ಪುಟ್ಟ ಹುಡುಗಿ..?

ನಿನ್ನ ಮುದ್ದು ಮುಖ ನೋಡಿದ ಕೂಡಲೇ ಇಷ್ಟವಾದೆ.. ಎಂದಳು..

ಅಲ್ಲೇ ಇವರನ್ನು ನೋಡುತ್ತಾ ನಿಂತಿದ್ದ ಸುರದ್ರೂಪಿ ಯುವನಕ ಬಳಿಗೆ ಕರೆದೊಯ್ದ ಹುಡುಗಿ,

ಆಂಟಿ.. ಇವರು ನಮ್ಮ ಅಂಕಲ್.. ಎಂದು ಪರಿಚಯಿಸುತ್ತಾ..

ಈ ಮುದ್ದು ಮುಖದ ನನ್ನ ಆಂಕಲ್ ಕೂಡಾ ಇಷ್ಟವಾದ್ರಾ? ಅಂತಾ ಕೇಳಿದಳು... ಆ ದೊಡ್ಡ ಹುಡುಗಿ ಮತ್ತು ದೊಡ್ಡ ಹುಡುಗ ಇಬ್ಬರೂ ನಾಚಿಕೊಂಡರು...



 
6) ಯಳವತ್ತಿ ಟ್ವೀಟ್:- ದೇವರು ನಮಗೆ ಎರಡನ್ನು ಕೊಡಲು ಸಾಧ್ಯವಿಲ್ಲ.


1) ಕಷ್ಟ 2) ಇತರರ ಕಣ್ಣೀರು ಒರೆಸುವ ತಾಖತ್ತು..

ಮೊದಲನೆಯದು ನಮ್ಮ ಪಾಪ ಕರ್ಮಗಳಿಂದ ಬರುವಂಥದ್ದು.. ಎರಡನೇಯದು ನಮ್ಮ ಪಾಪ ಕರ್ಮಗಳನ್ನು ಹೋಗಲಾಡಿಸುವಂಥದ್ದು..


 
 
 
7) ಒಂದೆರಡು ಸಾಲಿನ ಕಥೆ:-

"ಅಂಥಹ ದಿಲ್ಲಿಯ ಚಳಿಯೂ ಸೋತುಹೋಯಿತು.. ವಿರಹಿ ಪ್ರೇಮಿಗಳ ಬಿಸಿ ಅಪ್ಪುಗೆಯ ಮುಂದೆ..

 


 
8) ಯಳವತ್ತಿ ಟ್ವೀಟ್:- ನಕ್ಕರೆ ಮುತ್ತು ಉದುರುತ್ತವೆ ಅನ್ನೋ ಮಾತು 100% ನಿಜ.. ನನ್ನವಳನ್ನು ನಗಿಸಿದಾಗಲೆಲ್ಲಾ, ನನ್ನ ಕೆನ್ನೆ ಮೇಲೆ ಮುತ್ತು ಉದುರಿಸುತ್ತಾಳೆ.
 

 

9) ಯಳವತ್ತಿ ಟ್ವೀಟ್:- ನೀನು ಬಿಟ್ಟು ಹೋದಾಗಿನಿಂದ ನಿನ್ನ ಪ್ರತಿ ಕ್ಷಣ ನೆನಪಾಗುತ್ತೆ. ನೀನಂದು ನನ್ನ ಹೃದಯಕ್ಕೆ ಮಾಡಿದ ಗಾಯ ಇನ್ನೂ ನೋಯ್ತಾನೇ ಇದೆ..

 
10) ಒಂದೆರಡು ಸಾಲಿನ ಕಥೆ:- ಟಿಕೆಟ್ ಹಿಂದೆ ಚಿಲ್ಲರೆ ಬರೆದುಕೊಟ್ಟ ಕಂಡಕ್ಟರ್ ನೊಂದಿಗೆ ಜಗಳವಾಡಿ, ತನ್ನ ಮೂರು ರೂ. ಚಿಲ್ಲರೆ ಪಡೆದುಕೊಂಡ.. ಗದ್ದಲದಲ್ಲಿ ಅವನು ಲಂಚವಾಗಿ ತೆಗೆದುಕೊಂಡ ಹತ್ತು ಸಾವಿರ ರೂ.ಗಳನ್ನು ಯಾರೋ ಎಗರಿಸಿದ್ದರು.
 

11) ಯಳವತ್ತಿ ಟ್ವೀಟ್:- ಹೃದಯದುರಿಯ ಶಾಖ ತಾಳಲಾರದೆ ಮನಸ್ಸು, ಕಣ್ಣೀರ ಹೊರ ಹಾಕಿತ್ತು.. ಅದಕ್ಕೆ ಅದು ಬಿಸಿಯಾಗಿತ್ತು.
 
 
12) ಯಳವತ್ತಿ ಟ್ವೀಟ್-


ಕೆಟ್ಟ
ಜನರೊಡನೆ
ಹೋರಾಡಿ,
ಸೋತು ಸುಣ್ಣವಾಗಿ
ನನ್ನವಳ
ಮಡಿಲು ಸೇರಿದೆ..

ಪ್ರಪಂಚವನ್ನೇ ಗೆದ್ದ ಹಾಗಾಯ್ತು..

 
 
13) ಯಳವತ್ತಿ ಟ್ವೀಟ್:-


ಗೆಳತಿ..

ನೀನಿಲ್ಲದೇ
ನಾ
ಬದುಕಬಲ್ಲೆ..

ಒಂದರೆಕ್ಷಣದವರೆಗೆ
ಮಾತ್ರ..

 
 
14) ಯಳವತ್ತಿ ಟ್ವೀಟ್:-


ಡಿಸೆಂಬರ್ 21ಕ್ಕೇನೇ ಪ್ರಳಯ ಆಗ್ಲೇಬೇಕು ಅಂತೇನಿಲ್ಲಾ..

ಪ್ರತಿಯೊಬ್ಬರ ಲೈಫ್ ನಲ್ಲೂ ಒಂದಲ್ಲಾ ಒಂದು ದಿನ ಪ್ರಳಯ ಆಗೇ ಆಗುತ್ತೆ..

ಅದನ್ನು ಈ ನಮ್ ಜನ "ಮದುವೆ" ಅಂತಾರೆ...

Rating
No votes yet

Comments