ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?
ಕವನ
ಒಂದೇ ಕಣ್ಣಲಿ ನಿನ್ನ ನೋಡುವೆ
ಅಷ್ಟು ಸ್ವಾರ್ಥ ನನ್ನೊಳಗೆ ,
ನಿನ್ನ ನಗುವಿಗೆ ಕಣ್ಣು ಕಳೆದರೆ
ಮತ್ತೆ ನೋಡಬಹುದಲ್ಲ ಎಂದು !
ನೀನು ಹತ್ತಿರ ಬಂದಷ್ಟು
ದೂರ ದೂರ ಹೋಗುತ್ತೇನೆ ,
ಹೃದಯ ಬಡಿತ ಕಡಿಮೆ ಮಾಡಿ
ಜೀವ ಉಳಿಸಿಕೊಳ್ಳಲೆಂದು .
ನಿನ್ನ ನೋಡಿದಾಕ್ಷಣ
ಮೂಗು ಸುರಿಸುವ ಕಂದಮ್ಮನಾಗ ಬೇಕು
ಕೃಷ್ಣ ಮೃಗಕ್ಕಿಂತ ಚಂದ
ಪರಿಮಳ ನೀನು ಕೃಷ್ಣೆ !
ನೀನು ಬಂದು ನನ್ನ ಕೈ ಹಿಡಿವ ಮುನ್ನ
ಈ ದೇಹ ದಾನ ಮಾಡಿ ಬಿಡಲೇ ?
ನಿನ್ನ ಹೃದಯ ಮಿಡಿತ ಕಂಡ ಕೂಡಲೇ
ನಿರ್ಜೀವಿಯಾಗಿ ಹೋಗುವೆ !
ಪ್ರೀತಿ ಇಂದ ,
ಪ್ರವೀಣ ಸಾಯ
Comments
ಉ: ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?
In reply to ಉ: ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ? by mmshaik
ಉ: ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?
ಉ: ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?
In reply to ಉ: ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ? by gurudutt_r
ಉ: ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?