ನೆನಪೇ ನೆರಳು!
ನನ್ನ
ಹಿಂದೆ
ಮುಂದೆ
ಅತ್ತ
ಇತ್ತ
ಸದಾ
ನನ್ನ
ಸುತ್ತಮುತ್ತ
ಇರುವ
ನೆರಳಿನಂತೆಯೇ
ನಿನ್ನ
ನೆನಪೂ
ಒಂದರೆಗಳಿಗೆ
ಬಿಟ್ಟಿರುವುದಿಲ್ಲ
ನನ್ನನ್ನು;
ಕತ್ತಲಾವರಿಸಿದಾಗ
ಮರೆಯಾಗುವ
ಈ ನೆರಳಿನಂತೆ
ಅಹಂಕಾರದ
ಕತ್ತಲೆ
ನನ್ನ
ಮನವನ್ನು
ಆವರಿಸಿದಾಗ
ತೊರೆಯುತ್ತದೆ
ನಿನ್ನ ನೆನಪೂ
ನನ್ನನ್ನು!
*****
ಚಿತ್ರ ಕೃಪೆ: ಪ್ರಕಾಶ್ ಹೆಗಡೆ
Rating
Comments
ಉ: ನೆನಪೇ ನೆರಳು!
In reply to ಉ: ನೆನಪೇ ನೆರಳು! by venkatb83
ಉ: ನೆನಪೇ ನೆರಳು!