ಆ ದಿನಗಳನೆಂತು ಮರೆಯಲಿ ನಾನು 7

ಆ ದಿನಗಳನೆಂತು ಮರೆಯಲಿ ನಾನು 7

ಧನುರ್ಮಾಸದಿ ಚಳಿಯ ಲೆಕ್ಕಿಸದೆ ನಾವೆದ್ದು ಮಿಂದು

ಸೂರ್ಯೋದಯದಿ ಗುಡಿಯ ಗಂಟೆಯ ನಾದ ಗೈದು

ಮಂಗಳಾರತಿ ತೀರ್ಥವ ಸ್ವೀಕರಿಸಿ ಪುನೀತರಾಗಿ

ಪ್ರಸಾದವೆಂದೆನುತ ಬಿಸಿ ಬಿಸಿ ಬೆಲ್ಲಾನ್ನವ ಮೆದ್ದ

ಆ ದಿನಗಳನೆಂತು ಮರೆಯಲಿ ನಾನು

ಮಾಘಮಾಸದಿ ಅಜ್ಜಿಯೊಡನೆ ಬೇಗನೆದ್ದು

ಕೊರೆವ ಚಳಿಯಲಿ ಕೆರೆಯಲಿ ಮಿಂದೆದ್ದು

ನಡುಗಿ ನಡುಗಿ ಅಶ್ವತ್ಥವೃಕ್ಷವ ಸುತ್ತಿಬಂದು

ಅಜ್ಜಿಕೊಟ್ಟಾ ಪ್ರಸಾದವ ತಿನ್ನುತಾನಂದಿಸಿದ

ಆ ದಿನಗಳನೆಂತು ಮರೆಯಲಿ ನಾನು

ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ

ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?

ಬೇಗ ಬರಲಿ ಆ ಮಧುರ ಕ್ಷಣ

ನಾ ಮರೆಯಲಾಗದಾ ದಿನ.

Rating
No votes yet

Comments