ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

 

ಇಂಗ್ಲೀಶ್ ಭಾಷೆಯನ್ನು ಬ್ರಿಟಿಷರಿಗಿಂತ ಹೆಚ್ಚಾಗಿ ಅಮೆರಿಕನ್ನರೇ ಬೆಳೆಸಿ, ಅಂತರರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ದು ಎನ್ನಬಹುದು.

 

ಹಾಗೆಯೇ, ಕನ್ನಡ ಸಾಹಿತ್ಯಕ್ಕೆ ಕೂಡ ಕನ್ನಡೇತರರ ಕೊಡುಗೆ ಸಾಕಷ್ಟಿರುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ.

 

ಮೊನ್ನೆ ಆನ್ಲೈನ್ ಪತ್ರಿಕೆಗಳತ್ತ ಕಣ್ಣು ಹಾಯಿಸೋಣವೆಂದು ನೋಡಿದರೆ ಒಂದು ಸ್ವಾರಸ್ಯಕರ ಸಂಗತಿ ಗಮನಕ್ಕೆ ಬಂತು.

 

ಕಸ್ತೂರಿ, ತುಷಾರ  ಮಾಸಿಕಗಳು  ಆನ್ಲೈನ್ ನಲ್ಲಿ ಇಲ್ಲವೇ ಇಲ್ಲ. ತರಂಗ, ಕರ್ಮವೀರ ವಾರಪತ್ರಿಕೆಗಳೂ ಇಲ್ಲ.

 

ಸುಧಾ, ಮಯೂರಗಳು ಇವೆಯಾದರೂ, ಒಂದು ವರ್ಷಕ್ಕಿಂತ ಹಳೆಯ ಸಂಚಿಕೆಗಳು ಆರ್ಕೈವ್ಸ್ ನಲ್ಲಿ ಲಭ್ಯವಿಲ್ಲ.

 

ಈ ಪತ್ರಿಕೆಗಳೆಲ್ಲವೂ ಕನ್ನಡಿಗರ ಒಡೆತನದಲ್ಲಿರುವಂಥವು.

 

 

ಅದೇ ಚಂದಮಾಮ ಪತ್ರಿಕೆಯನ್ನು ನೋಡಿದರೆ ಅದು ತೆಲುಗುಮನೆಮಾತಿನ ನಾಗಿರೆಡ್ಡಿಯವರು ತಮಿಳು ನಾಡಿನ ಮದರಾಸಿನಿಂದ ಅರವತ್ತು ವರ್ಷ ಹಿಂದಿನಿಂದ

 

ಪ್ರಕಟಿಸುತ್ತಿದ್ದು ಆರು ವರ್ಷ ಹಿಂದೆ ಅದನ್ನು ಮುಂಬಯಿಯ ಮರಾಟಿ ಮಾಣುಸ್ ಪ್ರಶಾಂತ್ ಮುಳೇಕರ್ ಅವರು ಖರೀದಿಸಿ ಪ್ರಕಟಿಸುತ್ತಿದ್ದಾರೆ.

 

ಅಷ್ಟೇ ಅಲ್ಲ,  ೧೯೪೯ ರಿಂದ ಇವತ್ತಿನ ವರೆಗೆ ಎಲ್ಲ ಸಂಚಿಕೆಗಳೂ ಪುಕ್ಕಟೆಯಾಗಿ ಆನ್ಲೈನ್ ನಲ್ಲಿ ಲಭ್ಯ.

 

ಬಾಲ್ಯದ ಆ ಇಂಪ್ರೆಶನೆಬಲ್ ವಯಸ್ಸಿನಲ್ಲಿ ಕನ್ನಡ ಓದಿನ ಖುಷಿಯ ರುಚಿ ಹತ್ತಿಸಿದ್ದೇ ಚಂದಮಾಮದ ಕತೆಗಳು.

 

ಆಗಿನ ಕಾಲದ ಕತೆಗಳು ಬರೆಯುವ ಶೈಲಿಗಳು ಹೇಗಿದ್ದವು ಎಂಬುದಕ್ಕೆ ನೋಡಿ.

 


 

Rating
No votes yet

Comments