ಬೆಂದ ಮನಗಳ ದುಮ್ಮಾನ ( ಕವನ )

ಬೆಂದ ಮನಗಳ ದುಮ್ಮಾನ ( ಕವನ )

ಕವನ

 


ಅರುಣೋದು !


ಕತ್ತಲು ಬೆಳಕುಗಳ ಮಿಲನ


ಹಾಡುತಿದೆ ಬೆಳಗು


ತೋಡಿ ರಾಗ


 


ಸುಂದರ ಸಂಜೆ


ಗೋಧೂಳಿ ಸಮಯ


ಬೆಳಕು ಕತ್ತಲುಗಳ


ಪರ್ವಕಾಲ


 


ಹಾಡುತಿರುವಳು ಸಂಧ್ಯೆ


ಮಧ್ಯಮಾವರ್ತದಲಿ


ಮನಸೂರೆ ಗೊಳುವ


ಪೂರಿಯಾ ರಾಗ


 


ಸಂಜೆಯ ಕೆಮ್ಮುಗಿಲು


ಮಿನುಗುವ ತಾರೆಗಳು


ಹಾಡುತಿವೆ ಸಮೂಹದಲಿ


' ಗೌರಿರಾಗ ' ಒಲಿಸುತಿವೆ


ತಾರೆಗಳು ಮಿತಭಾಷಿಣಿ


ಅವಕುಂಠನವತಿ ಗೌರಿಯನು


ಮನದುಂಬಿ ಹಾಡಿ


 


ಪ್ರತಿಯೊದು ನಿಮಿಷ


ಗಳಿಗೆ ಯಾಮ ಎಲ್ಲವೂ


ಒಂದೊಂದು ವಿಭಿನ್ನ ರಾಗ


ಎಳೆದಷ್ಟು ರಾಗ


ಹಿಡಿದೆಷ್ಟು ಶೃತಿ


ಹೊಮ್ಮಿಸಿದಷ್ಟು ಆಲಾಪ


 


ಕಾಲಮಾನವು ಒಂದು


ನವರತ್ನ ಭರಿತ


ರಾಗಗಳ ಅಕ್ಷಯ ಎತ್ತಿಕೊ


ನಿನಗೆ ಬೇಕಾದ ರಾಗವನು


 


ನಲಿ ನಲಿಸು ಮುದಗೊಳಿಸು


ಅನವರತ ಹೊಮ್ಮಲಿ


ಕಾಲಮಾನದ ಪ್ರಕೃತಿ ಗಾನ


ಕಳೆಯಲಿ ಬೆಂದ


ಮನಗಳ ದುಮ್ಮಾನ


 

Comments