ಬರೆಯುವ ಗೀಳು.....
ಕವನ
ಬರೆಯಲೇ ಬೇಕೆಂದು ಕುಳಿತ್ತಿದ್ದೆ ರಾತ್ರೆ
ಅದೇಕೊ ಗೊತ್ತಿಲ್ಲದೆ ಕಣ್ಣು ಮುಚ್ಚಿಸಿತು ನಿದ್ರೆ
ಬರವಣಿಗೆ ಸಾಗಿತು ಆಯಾಸವಿಲ್ಲದೆ
ಪುಟ ಪುಟಗಳೆ ಉರುಳಿದವು ನನಗೂ ತಿಳಿಯದೆ
ಪ್ರೆಸ್ಸಿಗೆ ಹೋಗಿ ಅಚ್ಚಾಗಿ ಬಂದಿದೆ ಪುಸ್ತಕ
ಮಾರಾಟವಾಗಿದೆ ನಾಡಿನೆಲ್ಲೆಡೆ ನನಗೂ ಉಳಿಯದೆ
ದಿನ ಬೆಳಗಾಗುವುದರಲ್ಲಿ ಉತ್ತುಂಗಕ್ಕೇರಿತು ಹೆಸರು
ಧನ-ಕನಕದ ಹೊಳೆ ಹರಿಯಿತು ಪ್ರಯಾಸವಿಲ್ಲದೆ
ಸನ್ಮಾನ-ಸಮಾರಂಭದ ಡಂಗುರ ಕೇಳಿಸುತ್ತಿದೆ
ಗಾಡ ನಿದ್ರೆಯಿಂದ ಎಚ್ಚೆತ್ತಾಗ ನೋಡುವುದೇನು
ಪೆನ್ನು ಪುಸ್ತಕ ನೆಲದಲ್ಲಿ, ನಾನು ಹಾಸಿಗೆಯಲ್ಲಿ
ಅಂದೇ ನಿಲ್ಲಿಸಿದೆ ಈ ಹಾಳು ಬರೆಯುವ ಗೀಳು.
Comments
ಉ: ಬರೆಯುವ ಗೀಳು.....
In reply to ಉ: ಬರೆಯುವ ಗೀಳು..... by H A Patil
ಉ: ಬರೆಯುವ ಗೀಳು.....
ಉ: ಬರೆಯುವ ಗೀಳು.....
In reply to ಉ: ಬರೆಯುವ ಗೀಳು..... by venkatb83
ಉ: ಬರೆಯುವ ಗೀಳು.....
ಉ: ಬರೆಯುವ ಗೀಳು.....
In reply to ಉ: ಬರೆಯುವ ಗೀಳು..... by gurudutt_r
ಉ: ಬರೆಯುವ ಗೀಳು.....