ದೇಹವೆಂಬುವ ಬಾಡಿಗೆಯ ಮನೆ (ಶ್ರೀ ನರಸಿಂಹ 24)

ದೇಹವೆಂಬುವ ಬಾಡಿಗೆಯ ಮನೆ (ಶ್ರೀ ನರಸಿಂಹ 24)

ಬಾಡಿಗೆಯ ಮನೆಯ ತೆರದಿ  ನಾವಿರುವ ಈ ದೇಹ

ಬಿಡಬೇಕು ಇದನೊಮ್ಮೆ ಇರಿಸದಿರಿದರಲ್ಲಿ ವ್ಯಾಮೋಹ

ದೇಹವಿದು ದೇವ ನೀಡಿರುವ ಬಾಡಿಗೆಯ ಮನೆಯೂ

ಅವ ವಹಿಸಿದ ಕರ್ಮಗಳ ನಡೆಸುವುದೆ ಬಾಡಿಗೆಯೂ

 

ವಾಸಿಸುವ ಮನೆಯ ನೀ ಇರುವರೆಗೆ ಕಾಪಾಡುವಂತೆ

ದೇಹವನು ಸುಸ್ಥಿತಿಯಲಿರಿಸಿ ಸಾಧನೆ ಮಾಡಬೇಕಂತೆ

ಎಲ್ಲ ಜೀವಿಗಳಿಗಿಂತಲುತ್ತಮವು ನಮಗೆ ಸಿಕ್ಕಿಹ ಕಾಯ

ಸಾಧನೆಯಿಂದಲಿ ಪಡೆ ನೀ ಮೋಕ್ಷವೆನುವ ಮನೆಯ  

 

ತಾದತ್ಮತೆಯ ಹೊಂದದಿರು ಈ ಜಗದಲ್ಲಿ ನಿನ್ನಿರಿವು ಇಲ್ಲಿ ಕ್ಷಣಿಕ

ಚಿಂತಿಸದಿರು ಎಲ್ಲರನು ಎಲ್ಲವನು ಸಲಹುವ ಶ್ರೀನರಸಿಂಹ ಜನಕ
Rating
No votes yet

Comments