ಸಾಂತ್ವನ‌

ಸಾಂತ್ವನ‌

ಕವನ

 

ಸಾಂತ್ವನ

ಏಕೀ ಮೌನ
ಮೊದಲ ನೋಟಕೆ
ಅಳುವ ತುಟಿ
ಸರಿಯಲ್ಲ ನಿನ್ನಂದಕೆ.

ಹೃದಯದಲಿ ಗರ್ಭಿಸಿ
ಕಣ್ಣಿನಲಿ ಜನಿಸಿ
ಕೆನ್ನೆಯಲಿ ಬೆಳೆದು
ತುಟಿಯ ಮೇಲೆ ಸಾಯುವೆ
ನೀನು ಅಳುವುದಾದರೆ ನಿನ್ನ ಕಣ್ಣೀರಾಗಿ........

ಹೆದರಬೇಡ ಬೆದರಬೇಡ
ಒಳಗೊಳಗೇ ಕೊರಗಬೇಡ
ಹೆದರಿ ಬೆದರಿ
ಬೆವರ ಸ್ರವಿಸುವೆಯಾದರೆ
ತಣಿಸುವೆ ನಾನು ತಣ್ಣೀರಾಗಿ......
.
.
.
ಕೊನೆಗೂ
ನಗುವ ಬೀರಿ ಮೊಗವ ತೋರಿ
ಸುಂದರಿ
ತೋರಿದಳು ಸ್ವರ್ಗಕೆ ದಾರಿ

ಪ್ರೀತಿಯಿಂದ
ರವೀ

Comments