ಹೂವು !
ಕವನ
ನನ್ನ ಕಣ್ಗಳ ಅಂಗಳದಲ್ಲಿ
ಅರಳಿದ ಹೂವು ನೀನು
ಅದು ಸುಮ್ಮನೆ ಬಾಡುವುದನ್ನ
ನಾನ್ಹೇಗೆ ಸಹಿಸಲಿ !!
ಅಳಿದು ಹೋಗಲಿ ಹೂವು
ದುಂಬಿಗೆ ಆಹಾರವಾಗಿ
ಅದರಲ್ಲಿ ಒಂದು ಧನ್ಯತೆ ಇದೆ !
ಬಂದು ಹೋಗುವುದರಲ್ಲಿ
ಅರ್ಥವಿದೆ !
ಸೂಜಿ ಮೊನೆಯಲ್ಲಿ ನರಳಿ
ಸೇರಿ ಹೋಗಲಿ ಹೂವು
ಮಾಲೆಯಲಿ.
ಸಮಾಜದ ದೇವರಿಗೆ
ಅರ್ಪಿತವಾದ ಸಾರ್ಥಕ್ಯವಿದೆ !
ಹಾಗೆ ಬಂದು ಹೋಗುವುದರಲ್ಲಿ
ತಥ್ಯವಿದೆ !
ಇಲ್ಲಿಯೇ ಇದ್ದು
ಯಾರಿಗೂ ಸಲ್ಲದವನಾಗಬೇಡ,
ಎಲ್ಲಿಯೋ ಇದ್ದು
ಎಲ್ಲರಿಗೂ ಬೇಕಾಗು!
ಎಲ್ಲರಿಗಲ್ಲದಿದ್ದರೂ
ಕೆಲವರಿಗೆ ಬೆಳಕಾಗು
ಹೀಗೆ ಬಂದು ಹೋಗುವುದರಲ್ಲಿಯೂ
ತೃಪ್ತಿ ಇದೆ !
Comments
ಉ: ಹೂವು !
ಉ: ಹೂವು !