"ಸೆಕ್ಸ್" ಎನ್ನುವುದೇ ಪಾತಕವಲ್ಲ
ಬ್ಲ್ಯೂ ಫಿಲ್ಮ್ ನೋಡಿದ ಸಚಿವರು ರಾಜೀನಾಮೆ ನೀಡಿದ್ದಾರೆ. ಇದು ಅತ್ಯುನ್ನತ ನೈತಿಕ ಮೌಲ್ಯಕ್ಕೆ ಮಾದರಿ ಎಂದು ಬಿಜೆಪಿ ಪಧಾನ ಕಾರ್ಯದರ್ಶಿ ಬೀಗಿದ್ದಾರೆ! ಯಾವುದು? ಸೆಕ್ಸಿ ಚಿತ್ರ ನೋಡಿದ್ದೋ ಅಥವಾ ಹಠ ಮಾಡದೇ ಒಳ್ಳೆ ಹುಡುಗರಂತೆ ರಾಜೀನಾಮೆ ನೀಡಿದ್ದೋ?
" ಸೆಕ್ಸ್" ಎನ್ನುವುದೇ ಪಾತಕವಲ್ಲ. ಕುತೂಹಲಕ್ಕೆ ಪ್ರಲೋಭನೆ ನೀಡುವ ಸೂಕ್ಷ್ಮ ಇದಾದ್ದರಿಂದ, ಮುಚ್ಚು-ಮರೆಯಲ್ಲಿ ನಡೆಯಬೇಕಾdದ್ದಾದರೂ ಇದು ಪ್ರಕೃತಿ ’ಸಹಜಕ್ರಿಯೆ’ಯೇ ಹೌದು. ಸನ್ಯಾಸಿಯೊಬ್ಬನ ಕಾಮಕೇಳಿ ನಂಬಿಕೆ ದ್ರೋಹ; ನಯವಂಚನೆ. ಆದರೆ ಸಚಿವ ಅಥವಾ ಶಾಸಕನೆಂಬ ’ಗೃಹಸ್ಥಾಶ್ರಮಿ’ಗೆ ಕಾಮ ನಿಷಿದ್ಧವಲ್ಲಾ? ಇಂಥಾ ಹದಗೆಟ್ಟ ಸನ್ನಿವೇಶಕ್ಕೆ ಕರಣವೆಂದರೆ, "ಸೆಕ್ಸ್" ಎಂಬ ತೀವ್ರಾಸಕ್ತಿಯ ವಸ್ತು ಎಲ್ಲಿ, ಯಾವ ರೂಪದಲ್ಲಿ ಸಿಕ್ಕಿದರೂ ಅದನ್ನು ಮಾರಾಟದ ಹಾಟ್ ಕೇಕ್ ಮಾಡಿಕೊಳ್ಳುವ ’ಮಾಧ್ಯಮ’, ಎಂಬ ಗತಿಗೆಟ್ಟ ವೃತ್ತಿಯ ವ್ಯಾಪಾರ ಧರ್ಮವಾಗಿರುವುದು!
ಸಚಿವರ ಅಪರಾಧ, ಸದನದಲ್ಲಿ ಸೆಕ್ಸ್ ಚಿತ್ರ ನೋಡಿದ್ದಲ್ಲವೇ ಅಲ್ಲ; ನಾಡಿನ ಜನತೆಯ ಗಂಭೀರ ಆಗು-ಹೋಗಿನ ಪ್ರಸ್ತಾವಗಳಿಗೆ ಸ್ಪಂದಿಸದೆ ತಮ್ಮ ’ಸುಖ’ದಲ್ಲಿ ಇದ್ದುಕೊಂಡಿದ್ದದ್ದು. ಇಯರ್‌ಫೋನ್ ಹಾಕಿಕೊಂಡು ಸಭ್ಯ, ಸುಮಧುರ ಚಿಟ್ಟಿಬಾಬು ವೀಣಾವಾದನ ಆಸ್ವಾದಿಸುತ್ತಿದ್ದರೂ ಅವರು ಇಷ್ಟೇ ಪಾಪಿಗಳಾಗುತ್ತಿದ್ದರು!
ಒಳರಾಜಕೀಯ ಏನಿದೆಯೋ, ಯಾರಿಗೆ ಗೊತ್ತು?! ನೀತಿ, ಸಂಸ್ಕೃತಿ, ಧರ್ಮ, ಅಧ್ಯಾತ್ಮಗಳಂತೆಯೇ ರಸಿಕತೆಯೆನ್ನುವುದೂ ಚೀಪ್ ವ್ಯಭಿಚಾರದ ವಸ್ತುವಾಗಿ ಪುಂಡ ರಾಜಕಿಸ್ಥರ ಕೈಸೇರಿರುವುದು ಸಮಾಜದ ಸರ್ವತೋಮುಖ ದುರಂತವೇ ಸರಿ!
Comments
ಉ: "ಸೆಕ್ಸ್" ಎನ್ನುವುದೇ ಪಾತಕವಲ್ಲ
In reply to ಉ: "ಸೆಕ್ಸ್" ಎನ್ನುವುದೇ ಪಾತಕವಲ್ಲ by shreekant.mishrikoti
ಉ: "ಸೆಕ್ಸ್" ಎನ್ನುವುದೇ ಪಾತಕವಲ್ಲ
In reply to ಉ: "ಸೆಕ್ಸ್" ಎನ್ನುವುದೇ ಪಾತಕವಲ್ಲ by hamsanandi
ಉ: "ಸೆಕ್ಸ್" ಎನ್ನುವುದೇ ಪಾತಕವಲ್ಲ
In reply to ಉ: "ಸೆಕ್ಸ್" ಎನ್ನುವುದೇ ಪಾತಕವಲ್ಲ by shreekant.mishrikoti
ಉ: "ಸೆಕ್ಸ್" ಎನ್ನುವುದೇ ಪಾತಕವಲ್ಲ