ಕನಸೆಂಬ ಬಸಿರ ಹೊತ್ತು...

ಕನಸೆಂಬ ಬಸಿರ ಹೊತ್ತು...

ಕವನ

 

 ಇರಲಿ  ಬಿಡು, ಗೆಳೆಯಾ.....

ಜೋಡಿಸಿದ ಶಬ್ದಗಳ ಸಾಲುಗಳೆಲ್ಲಾ........

 ಸದಾ ಕಾವ್ಯವಾಗುವದಿಲ್ಲ.....!

 ಮಾತಾಡಿದವರೆಲ್ಲರೂ..

 ಮನಕ್ಕೆ ಹತ್ತಿರವಾಗುವದಿಲ್ಲ..

 ಹೃದಯದಲ್ಲಿ ಜತನವಾಗಿ   ಕಾದಿಟ್ಟ

 ಬಯಕೆಗಳೆಲ್ಲಾ..ನನಸಾಗುವದಿಲ್ಲ.

  ಕನಸುಗಳ ಬಸಿರು ಭೂಮಿಗಿಳಿಯುವ ಮೊದಲೇ

 ಬಯಕೆಯ ಬ್ರೂಣದ  ಗರ್ಭಪಾತ....!

  ಆಮೇಲೆ....ಅವು

  ಕೆಲವೊಮ್ಮೆ ಬೀದಿ ಬದಿಯ ತೊಟ್ಟಿಗಳಲ್ಲಿ..

 ಕೊರಗಿನ ನಾಯಿಗೆ ....

  ಆಹಾರವಾಗಿ ಬಿಡುತ್ತವೆ....

 ಹೊಸ ಕನಸೆಂಬ ಬಸಿರ ಹೊತ್ತು..

 ...ಬರುವ ನಾಳೆಗಳಿಗೆ

 ಅರಳಿ ಬರುವ ಬೆಳಗುಗಳಿಗೆ....

 ಬೊಗಸೆಯಷ್ಟು ಪ್ರೀತಿಯ ಹೃದಯದಲಿ ಬಚ್ಚಿಟ್ಟು...

 ತಾಳ್ಮೆಯ ಮೊಟ್ಟೆಗೆ ಕಾವು ಕೊಡುವ

 ಕೋಳಿಯಂತೆ.....ಕಾಯೋಣ.!

 

 

Comments